Home
ಟೆಕ್ ನೌಕರಿ

ಗೂಗಲ್‌ ಕ್ರೋಮ್‌ನಲ್ಲಿ Incognito ಮೋಡ್‌ ಟ್ಯಾಬ್‌ಗಳನ್ನು ಲಾಕ್‌ ಮಾಡೋದು ಹೇಗೆ?

ಗೂಗಲ್‌ ಕ್ರೋಮ್‌ನಲ್ಲಿ ಸರ್ಚ್‌ ಮಾಡುವಾಗ ಕೆಲವೊಮ್ಮೆ ಗೌಪ್ಯತೆ ದೃಷ್ಟಿಯಿಂದ incognito ಮೋಡ್‌ ಬಳಸುವುದು ಸಾಮಾನ್ಯವಾಗಿದೆ. incognito ಬಳಸಿ ತೆರೆಯುವ ಟ್ಯಾಬ್‌ಗಳನ್ನು ಬೇರೆಯವರು ಟ್ರ್ಯಾಕ್‌ ಮಾಡಲು ಸಾದ್ಯವಿರುವುದಿಲ್ಲ. ಗೂಗಲ್‌ ಕ್ರೋಮ್‌ ನೀಡಿರುವ ಈ ಆಯ್ಕೆಯು ಸಾಕಷ್ಟು ಅನುಕೂಲಕರವಾಗಿದೆ. ಇದಲ್ಲದೆ ನೀವು incognito ಮೋಡ್‌ ಬಳಸಿ ತೆರೆದಿರುವ ಟ್ಯಾಬ್‌ಗಳನ್ನು ನೀವು ಫಿಂಗರ್‌ಪ್ರಿಂಟ್‌ ಇಲ್ಲವೇ ಫೇಸ್‌ಐಡಿ ಮೂಲಕ ಲಾಕ್‌ ಮಾಡುವುದಕ್ಕೆ ಕೂಡ ಅವಕಾಶವಿದೆ.

ಗೂಗಲ್‌ ಕ್ರೋಮ್‌ನಲ್ಲಿ Incognito ಮೋಡ್‌ ಟ್ಯಾಬ್‌ಗಳನ್ನು ಲಾಕ್‌ ಮಾಡೋದು ಹೇಗೆ?

ಹೌದು, ಗೌಪ್ಯತೆಯ ದೃಷ್ಟಿಯಿಂದ ನೀವು ಬಳಸುವ incognito ಮೋಡ್‌ ಅನ್ನು ಲಾಕ್‌ ಮಾಡಬಹುದು ಅನ್ನೊ ವಿಚಾರ ಎಷ್ಟೋ ಮಂದಿಗೆ ತಿಳಿದೆ ಇಲ್ಲ. ನೀವು ಸರ್ಚ್‌ ಮಾಡಿದ ಟ್ಯಾಬ್‌ಗಳನ್ನು ಕ್ರೋಮ್‌ ಕ್ಲೋಸ್‌ ಮಾಡಿದಾಗ ಫಿಂಗರ್‌ ಪ್ರಿಂಟ್‌ ಮೂಲಕ ಲಾಕ್‌ ಮಾಡಬಹುದು. ಇದರಿಂದ ನಿಮ್ಮ ಗೌಪ್ಯತೆಯನ್ನು ಕಾಪಾಡಬಹುದಾಗಿದೆ. ಹಾಗಾದ್ರೆ Incognito ಮೋಡ್‌ ಟ್ಯಾಬ್‌ಗಳನ್ನು ಲಾಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಕ್ರೋಮ್‌ನಲ್ಲಿ Incognito ಮೋಡ್‌ ಟ್ಯಾಬ್‌ಗಳನ್ನು ಲಾಕ್‌ ಮಾಡೋದು ಹೇಗೆ?

ಗೂಗಲ್‌ ಕ್ರೋಮ್‌ನಲ್ಲಿ ಅಜ್ಞಾತ ಟ್ಯಾಬ್‌ (Incognito ಮೋಡ್‌) ನ್ನು ಲಾಕ್ ಮಾಡುವುದು ಹೇಗೆ?

ಗೂಗಲ್‌ ಕ್ರೋಮ್‌ನ Incognito ಮೋಡ್‌ ಟ್ಯಾಬ್‌ಗಳನ್ನು ಫೇಶಿಯಲ್‌ ಅಥವಾ ಫಿಂಗರ್‌ಪ್ರಿಂಟ್‌ ಲಾಕ್‌ ಮಾಡುವ ಮುನ್ನ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ನೀವು ಅನುಸರಿಸಬೇಕಾದ ಹಂತಗಳ ವಿವರ ಈ ಕೆಳಗಿನಂತಿದೆ.
ಹಂತ:1 ಮೊದಲಿಗೆ ನೀವು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್‌ ಕ್ರೋಮ್‌ ತೆರೆಯಿರಿ.
ಹಂತ:2 ನಂತರ chrome://flags ಎಂಬ ಯುಆರ್‌ಎಲ್‌ ಅನ್ನು ನಮೂದಿಸಿ
ಹಂತ:3 ಇದೀಗ ಸರ್ಚ್‌ ಬಾರ್‌ನಲ್ಲಿ Incognitoಗಾಗಿ ಮರುದೃಢೀಕರಣವನ್ನು ಸರ್ಚ್‌ ಮಾಡಿ
ಹಂತ:4 ನೀವು ಮರು ದೃಡೀಕರಣವನ್ನು ಸಕ್ರಿಯಗೊಳಿಸಿ ಕಾಣಿಸಿದ ನಂತರ ಡೀಫಾಲ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಇದೀಗ ಆಯ್ಕೆಗಳ ಪಟ್ಟಿಯಿಂದ ಸಕ್ರಿಯಗೊಳಿಸಲಾಗಿದೆ ಎಂಬುದನ್ನು ಆಯ್ಕೆಮಾಡಿ ಮತ್ತು ಆ್ಯಪ್‌ ಅನ್ನು ಮತ್ತೆ ಪ್ರಾರಂಭಿಸಿ
ಹಂತ:6 ನಂತರ, ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ
ಹಂತ:7 ಇದಾದ ನಂತರ ಸೆಟ್ಟಿಂಗ್ಸ್‌ ಮೇಲೆ ಟ್ಯಾಪ್ ಮಾಡಿ
ಹಂತ:8 ಕ್ರೋಮ್‌ನಲ್ಲಿ ಪ್ರೈವೆಸಿ ಮತ್ತು ಸೆಕ್ಯುರಿಟಿ ಟ್ಯಾಬ್‌ ತೆರೆಯಿರಿ
ಹಂತ:9 ನಂತರ 'ನೀವು ಕ್ರೋಮ್‌ ಅನ್ನು ತೊರೆದಾಗ Incognito ಟ್ಯಾಬ್‌ಗಳನ್ನು ಲಾಕ್ ಮಾಡಿ' ಆಯ್ಕೆಯನ್ನು ಆನ್ ಮಾಡಿ

ಈ ಮೂಲಕ ನೀವು Incognito ಮೋಡ್‌ನಲ್ಲಿ ಬ್ರೌಸಿಂಗ್‌ ಮಾಡುವ ಆ್ಯಪ್‌ ಅನ್ನು ಕ್ಲೋಸ್‌ ಮಾಡಿದಾಗ Incognito ಮೋಡ್‌ ಟ್ಯಾಬ್‌ಗಳನ್ನು ಫಿಂಗರ್‌ಪ್ರಿಂಟ್‌ ಮೂಲಕ ಲಾಕ್‌ ಮಾಡಲಾಗಿರುತ್ತದೆ.

ಗೂಗಲ್‌ ಕ್ರೋಮ್‌ನಲ್ಲಿ Incognito ಮೋಡ್‌ ಟ್ಯಾಬ್‌ಗಳನ್ನು ಲಾಕ್‌ ಮಾಡೋದು ಹೇಗೆ?

ಐಒಎಸ್ ಡಿವೈಸ್‌ನಲ್ಲಿ Incognito ಮೋಡ್‌ ಅನ್ನು ಲಾಕ್‌ ಮಾಡಲು ಹೀಗೆ ಮಾಡಿ!

ಹಂತ:1 ಮೊದಲಿಗೆ ನಿಮ್ಮ ಐಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ತೆರೆಯಿರಿ.
ಹಂತ:2 ನಂತರ ಕೆಳಗಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
ಹಂತ:3 ಇದೀಗ ಸೆಟ್ಟಿಂಗ್ಸ್‌ ಮೇಲೆ ಟ್ಯಾಪ್ ಮಾಡಿ.
ಹಂತ:4 ನಂತರ ಪ್ರೈವೆಸಿ ಮತ್ತು ಸೆಕ್ಯುರಿಟಿ ಟ್ಯಾಬ್‌ ಅನ್ನು ತೆರೆಯಿರಿ.
ಹಂತ:5 ಇದಾದ ಮೇಲೆ ನೀವು ಕ್ರೋಮ್‌ ಅನ್ನು ಕ್ಲೋಸ್‌ ಮಾಡಿದಾಗ Incognito ಟ್ಯಾಬ್‌ಗಳನ್ನು ಲಾಕ್ ಮಾಡಿ ಆಯ್ಕೆಯನ್ನು ಆನ್ ಮಾಡಿ.

ಈ ಆಯ್ಕೆಯನ್ನು ಟ್ಯಾಪ್‌ ಮಾಡಿದ ನಂತರ ನಿಮ್ಮ Incognito ಟ್ಯಾಬ್‌ಗಳನ್ನು ಫೇಸ್‌ ಐಡಿಯೊಂದಿಗೆ ಲಾಕ್‌ ಮಾಡಲಾಗುತ್ತದೆ.ಈಗ, ನಿಮ್ಮ ಅಜ್ಞಾತ ಟ್ಯಾಬ್‌ಗಳನ್ನು ಫೇಸ್ ಐಡಿಯೊಂದಿಗೆ ಲಾಕ್ ಮಾಡಲಾಗುತ್ತದೆ. ಈ ಮೂಲಕ ಗೂಗಲ್‌ ಕ್ರೋಮ್‌ನಲ್ಲಿ ನಿಮ್ಮ Incognito ಮೋಡ್‌ಗಳನ್ನು ಸುಲಭವಾಗಿ ಲಾಕ್‌ ಮಾಡಬಹುದಾಗಿದೆ.

Best Mobiles in India

English summary
With the help of fingerprint/facial lock, you can secure your private searches.know more details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+