Subscribe to Gizbot

ಒಂದೇ ಬ್ರೌಸರ್‌ನಲ್ಲಿ ಎರಡು ಮೇಲ್‌ ಖಾತೆ ತೆರೆಯುವುದು ಹೇಗೆ?

Posted By: Super
ಒಂದೇ ಬ್ರೌಸರ್‌ನಲ್ಲಿ ಎರಡು ಮೇಲ್‌ ಖಾತೆ ತೆರೆಯುವುದು ಹೇಗೆ?
ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಮೇಲ್‌ ಖಾತೆ ತೆರೆದು ನಂತರ ಅದೇ ಬ್ರೌಸರ್‌ನಲ್ಲಿ ಮತ್ತೊಂದು ಮೇಲ್‌ ಖಾತೆ ತೆರೆಯ ಬೇಕಾದರೆ ತುಂಬಾ ಕಷ್ಟ ಪಡಬೇಕಾಗುತ್ತದೆ. ಇದರಿಂದಾಗಿ ನೀವು ಮೊದಲು ಓಪನನ ಮಾಡಿರುವ ಖಾತೆ ಲಾಗ್‌ ಔಟ್‌ ಮಾಡಿ ನಂತರ ಮತ್ತೊಂದನ್ನು ತೆರೆದುಕೊಳ್ಳ ಬೇಕಾಗುತ್ತದೆ. ಅದಕ್ಕಾಗಿಯೇ ಇಂತಹ ಸಮಸ್ಯೆಗೆ ಪರಿಹಾರವಾಗಿ ಗಿಜ್ಬಾಟ್‌ ಉಪಾಯವೊಂದನ್ನು ಹುಡುಕಿದ್ದು ಅದರಂತೆ ಮಾಡಿದಲ್ಲಿ ನೀವು ಒಂದೇ ಬ್ರೌಸರ್‌ನಲ್ಲಿ ಎರಡು ಮೇಲ್‌ ಖಾತೆಗಳನ್ನು ಓಪನ್‌ ಮಾಡಬಹುದಾಗಿದೆ.

ಪ್ರೈವೇಟ್‌ ಬ್ರೌಸರ್‌ ಆನ್‌ ಮಾಡಿಕೊಳ್ಳಿ

ಒಂದೇ ಬ್ರೌಸರ್‌ನಲ್ಲಿ ಎರಡು ಜಿ-ಮೇಲ್‌ ಖಾತೆ ಓಪನ್‌ ಮಾಡಬೇಕಿದ್ದಲ್ಲಿ ಮೊದಲಿಗೆ ಬ್ರೌಸರ್‌ ಸೆಟ್ಟಿಂಗ್‌ಗೆ ತೆರಳಿ ಪ್ರೈವೇಟ್‌ ಬ್ರೌಸಿಂಗ್‌ ಆನ್‌ ಮಾಡಿಕೊಳ್ಳಿ. ಹೀಗೆ ಮಾಡಿದ ನಂತರ ನಿಮ್ಮ ಬ್ರೌಸರ್‌ನಲ್ಲಿ ಕುಕೀಜ್‌ ಸೌಲಭ್ಯ ಇಲ್ಲದಂತಾಗಿ ಒಂದೇ ಬ್ರೌಸರ್‌ನಲ್ಲಿ ಎರಡು ಮೇಲ್‌ ಖಾತೆಗಳು ತೆರದುಕೊಳ್ಳುತ್ತದೆ.

  • ಗೂಗಲ್‌ ಕ್ರೋಮ್‌ನಲ್ಲಿ ಮೆನ್ಯು ಆಪ್ಷನ್ಸ್‌ ಕ್ಲಿಕ್‌ ಮಾಡಿ ಹಾಗೂ New Incognito Window ಆಪ್ಷನ್‌ ಮೇಲೆ ಕ್ಲಿಕ್ ಮಾಡಿ.
  • ಫೈರ್‌ಫಾಕ್ಸ್‌ ಬ್ರೌಸರ್‌ನಲ್ಲಿ ಪ್ರೈವೇಟ್‌ ಬ್ರೌಸಿಂಗ್ ಮಾಡ ಬೇಕಿದ್ದಲ್ಲಿ ಸ್ಟಾರ್ಟ್‌ ಪ್ರೈವೇಟ್‌ ಬ್ರೌಸಿಂಗ್‌ ಆಪ್ಷನ್‌ ಮೇಲೆ ಕ್ಲಿಕ್‌ ಮಾಡಬೇಕಾಗುತ್ತದೆ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot