Home
ಟೆಕ್ ನೌಕರಿ

ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕಾಲ್‌ ಮಾಡಲು ಹೀಗೆ ಮಾಡಿ?

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಜಿಮೇಲ್‌ ಕೂಡ ಒಂದಾಗಿದೆ. ಇಂದಿನ ದಿನಗಳಲ್ಲಿ ಜಿ-ಮೇಲ್‌ ಸೇವೆಯನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಅದರಲ್ಲೂ ತಮ್ಮ ಗೌಪ್ಯ ಮಾಹಿತಿ, ದಾಖಲೆಗಳನ್ನು ಹೆಚ್ಚಿನ ಜನರು ಜಿ-ಮೇಲ್‌ ಮುಖಾಂತರ ವಿನಿಮಯ ಮಾಡಿಕೊಳ್ಳುತ್ತಾರೆ. ಜಿ-ಮೇಲ್‌ನಲ್ಲಿ ನಿಮ್ಮ ಮೇಲ್‌ ಅನ್ನು ನೀವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬಹುದು. ಇದಿಷ್ಟೇ ಅಲ್ಲ ಜಿ-ಮೇಲ್‌ ಮೂಲಕ ಕಾಲ್‌ ಕೂಡ ಮಾಡಬಹುದಾಗಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಜಿ-ಮೇಲ್‌ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಕಾಲಿಂಗ್‌ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದೆ. ಗೂಗಲ್‌ನ ಎಲ್ಲಾ ಬಳಕೆದಾರರು ಈ ಕಾಲಿಂಗ್‌ ಫೀಚರ್ಸ್‌ ಅನ್ನು ಬಳಸುಬಹುದಾಗಿದೆ. ಈ ಹಿಂದೆ ಹ್ಯಾಂಗ್‌ಔಟ್ಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಿದ್ದ ಕಾರಣ ಗೂಗಲ್‌ಗೆ ಇದೇನು ಹೊಸತಲ್ಲ. ಸದ್ಯ ಗೂಗಲ್‌ನ ಜಿ-ಮೇಲ್‌ನಲ್ಲಿ ಕಾಲ್‌ ಮಾಡಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಜಿ-ಮೇಲ್‌ ಮೂಲಕ ಕಾಲ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಜಿ-ಮೇಲ್‌ ಅಕೌಂಟ್‌ ತೆರೆಯಿರಿ.
ಹಂತ:2 ನಂತರ ಜಿ-ಮೇಲ್‌ ಟಾಸ್ಕ್ ಬಾರ್‌ನಲ್ಲಿರುವ "ಮೀಟ್" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ "ನ್ಯೂ ಮೀಟ್‌" ಬಟನ್ ಮೇಲೆ ಟ್ಯಾಪ್ ಮಾಡಿ. ಮೀಟಿಂಗ್ ಲಿಂಕ್ ಅನ್ನು ಹಂಚಿಕೊಳ್ಳಲು ಆಯ್ಕೆಗಳನ್ನು ಕಂಡು ಬರಲಿದೆ.
ಹಂತ:4 ನೀವು ತ್ವರಿತ ಸಭೆಗೆ ಸೇರಲು ಆಯ್ಕೆಮಾಡಿದರೆ, ನಿಮ್ಮ ಕಾಲರ್ ಜೊತೆಗೆ ಲಿಂಕ್ ಅನ್ನು ಹಂಚಿಕೊಳ್ಳಲು "ಇನ್ವೈಟ್‌ ಲಿಂಕ್‌ ಶೇರ್‌" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:5 ನೀವು ಲಿಂಕ್ ಅನ್ನು ಟ್ಯಾಪ್ ಮಾಡಿದರೆ, ಸ್ವಯಂಚಾಲಿತವಾಗಿ ಮೀಟಿಂಗ್ ಸ್ಪೇಸ್‌ಗೆ ಸೇರಬಹುದು.
ಹಂತ:6 ನಂತರ ಜಿ-ಮೇಲ್‌ ತೆರೆಯಿರಿ ಮತ್ತು "ಚಾಟ್" ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:7 ನಿಮ್ಮ ಚಾರ್ ವಿಂಡೋವನ್ನು ಆಯ್ಕೆಮಾಡಿ ಮತ್ತು ಅದನ್ನು ತೆರೆಯಿರಿ.
ಹಂತ:8 ಈಗ "+" ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು "ಮೀಟ್ ಲಿಂಕ್" ಆಯ್ಕೆಮಾಡಿ.
ಹಂತ:9 ಲಿಂಕ್‌ ಅನ್ನು ನಿಮ್ಮ ಸಭೆಗೆ ಭಾಗವಹಿಸುವವರಿಗೆ ಕಳುಹಿಸಬೇಕಾಗುತ್ತದೆ.
ಹಂತ:10 ಈಗ ನೀವು ಮತ್ತು ನಿಮ್ಮ ಸಂಪರ್ಕದ ಇಬ್ಬರೂ ಸಭೆಯನ್ನು ಪ್ರಾರಂಭಿಸಲು ಲಿಂಕ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

PC ಯಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

PC ಯಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

ಹಂತ:1 ಲ್ಯಾಪ್‌ಟಾಪ್‌ನಲ್ಲಿ ಜಿ-ಮೇಲ್‌ ಕರೆ ಮಾಡಲು ನಿಮ್ಮ ವೆಬ್ ಬ್ರೌಸರ್‌ನಲ್ಲಿ Gmail ತೆರೆಯಿರಿ.
ಹಂತ:2 ನಂತರ ಎಡಭಾಗದ ಬಾರ್‌ನಲ್ಲಿ, "ಮೀಟ್" ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಹೊಸ ಸಭೆ" ಕ್ಲಿಕ್ ಮಾಡಿ.
ಹಂತ:3 ಇನ್ವೈಟ್‌ ಲಿಂಕ್‌ನೊಂದಿಗೆ ಹೊಸ ವಿಂಡೋ ಪಾಪ್ ಅಪ್ ಆಗುತ್ತದೆ.
ಹಂತ:4 ಈ ಲಿಂಕ್‌ ಅನ್ನು ನಿಮ್ಮ ಕರೆ ಮಾಡುವವರಿಗೆ ಇಮೇಲ್ ಮೂಲಕ ಕಳುಹಿಸಬಹುದು.
ಹಂತ:5 ನಂತರ, "ಈಗ ಸೇರಿಕೊಳ್ಳಿ" ಬಟನ್ ಅನ್ನು ಕ್ಲಿಕ್ ಮಾಡಿ. ಅದೇ ಲಿಂಕ್ ಮೂಲಕ ಇತರ ವ್ಯಕ್ತಿಯು ಸೇರುವವರೆಗೆ ಕಾಯಿರಿ.
ಹೀಗೆ ಮಾಡುವ ಮೂಲಕ ಜಿ-ಮೇಲ್‌ ಕರೆಯಲ್ಲಿ ಭಾಗವಹಿಸಬಹುದು.

ಜಿ-ಮೇಲ್‌ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ಮಾಡುವುದು ಹೇಗೆ?

ಜಿ-ಮೇಲ್‌ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ಮಾಡುವುದು ಹೇಗೆ?

ಹಂತ:1 ಮೊದಲನೇಯದಾಗಿ ನಿಮ್ಮ ಡಿವೈಸ್‌ನಲ್ಲಿ ಜಿ-ಮೇಲ್‌ ಅಪ್ಲಿಕೇಶನ್‌ ಇತ್ತೀಚಿನ ಆವೃತ್ತಿಗೆ ಅಪ್ಡೇಟ್‌ ಮಾಡಿ
ಹಂತ:2 ನಂತರ, ನೀವು ಜಿ-ಮೇಲ್‌ ಅನ್ನು ತೆರೆಯಬೇಕು ಮತ್ತು "ಚಾಟ್‌ಗಳು" ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. Google Workspace ಬಳಕೆದಾರರಿಗೆ, ಇದನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ. ನಿಯಮಿತ ಬಳಕೆದಾರರು ಸೆಟ್ಟಿಂಗ್‌ಗಳಿಂದ ಚಾಟ್ಸ್ ಆಯ್ಕೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.
ಹಂತ:3 ಚಾಟ್‌ಗಳ ವಿಭಾಗದ ಅಡಿಯಲ್ಲಿ, ಪಟ್ಟಿ ಮಾಡಲಾದ ಎಲ್ಲಾ ಸಂಭಾಷಣೆಗಳನ್ನು ನೀವು ನೋಡುತ್ತೀರಿ. ಇದರಲ್ಲಿ ಒಂದನ್ನು ಟ್ಯಾಪ್ ಮಾಡಿ.
ಹಂತ:4 ನಂತರ ಮೇಲಿನ ಮೂಲೆಯಿಂದ, ನೀವು ಕ್ರಮವಾಗಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಫೋನ್ ಅಥವಾ ವೀಡಿಯೊ ಐಕಾನ್‌ಗಳನ್ನು ಟ್ಯಾಪ್ ಮಾಡಬಹುದು.
ಹಂತ:5 ನೀವು ಜಿ-ಮೇಲ್‌ ಮೂಲಕ ಕರೆಯನ್ನು ಸ್ವೀಕರಿಸಿದಾಗ, ಸಾಮಾನ್ಯ ಫೋನ್ ಕರೆಗಳಂತೆಯೇ ಕಾಲ್‌ ನೋಟಿಫಿಕೇಶನ್ ಕಾಣಬಹುದಾಗಿದೆ.

Best Mobiles in India

English summary
How to make Gmail calls on Android and iPhone devices.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+