ಕೇವಲ15 ನಿಮಿಷದಲ್ಲಿ ಮೊಬೈಲ್ ಚಾರ್ಜ್ ಮಾಡುವುದು ಹೇಗೆ?

|

ಮೊಬೈಲ್ ಬ್ಯಾಟರಿ ಬಹುಬೇಗ ಖಾಲಿಯಾಗುವ ಸಮಸ್ಯೆ ನಿಮ್ಮೊಬ್ಬರಿಗೆ ಮಾತ್ರವಲ್ಲ ಎಲ್ಲರಿಗೂ ತಟ್ಟುತ್ತದೆ. ಆದರೆ, ಇಂತಹ ಸಮಸ್ಯೆಯನ್ನು ಕೆಲವರು ಮಾತ್ರ ಅನುಭವಿಸುವುದಿಲ್ಲ ಎನ್ನಬಹುದು. ಏಕೆಂದರೆ, ಕೆಲ ಮೊಬೈಲ್ ಬಳಕೆದಾರರು ಸ್ಮಾರ್ಟ್‌ಫೋನ್ ಅನ್ನು ಬಹುಬೇಗ ಚಾರ್ಜ್ ಮಾಡುವುದು ಹೇಗೆ ಎಂದು ತಿಳಿದಿರುತ್ತಾರೆ. ಇದನ್ನು ಅವರು ತಿಳಿದಿರುವುದರಿಂದ ಅವರಿಗೆ ಮೊಬೈಲ್ ಬ್ಯಾಟರಿ ಬಹುಬೇಗ ಖಾಲಿಯಾಗುವ ಸಮಸ್ಯೆ ಬಾಧಿಸುವುದಿಲ್ಲ ಎನ್ನಬಹುದು.

ಕೇವಲ15 ನಿಮಿಷದಲ್ಲಿ ಮೊಬೈಲ್ ಚಾರ್ಜ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್ ಅನ್ನು ಬಹುಬೇಗ ಚಾರ್ಜ್ ಮಾಡುವುದು ನಮ್ಮ ಕೈಯಲ್ಲೇ ಇದೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಫಾಸ್ಟ್ ಚಾರ್ಜರ್ ಬಳಸದೇ ಕೇವಲ 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಮ್ಮ ಫೋನ್ ಬ್ಯಾಟರಿ ಚಾರ್ಜ್ ಮಾಡಲು ಖಂಡಿತವಾಗಿಯೂ ಹಲವು ಮಾರ್ಗಗಳಿವೆ. ಅದಕ್ಕಾಗಿ, ಸ್ಮಾರ್ಟ್‌ಫೋನ್ ಬಳಕೆದಾರರು ಮೊಬೈಲ್ ಚಾರ್ಜ್ ಮಾಡುವಾಗ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದಕ್ಕಾಗಿ ಇಂದಿನ ಲೇಖನವನ್ನು ಪ್ರಸ್ತುತಪಡಿಸಿದ್ದೇವೆ.

10% ಚಾರ್ಜ್ ತೋರಿಸಿದಾಗ

10% ಚಾರ್ಜ್ ತೋರಿಸಿದಾಗ

ನೀವು ಮನೆಯಿಂದ ಹೊರಗೆ ಹೋರಡುವ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ 10% ಚಾರ್ಜ್ ತೋರಿಸಿದಾಗ ಎಷ್ಟು ಕೆಟ್ಟ ಅನುಭವ ನಿಮಗಾಗಿರಬಹುದು ಅಲ್ಲವೇ.? ಇಂತಹ ಅನುಭವ ಎಲ್ಲರಿಗೂ ಆಗಿರುತ್ತದೆ. ಇಂತಹ ಸಮಯದಲ್ಲಿ ಕೇಲವೇ ನಿಮಿಷಗಳಲ್ಲಿ ಫೋನ್ ಬ್ಯಾಟರಿ ಹೆಚ್ಚು ಚಾರ್ಜ್ ಆಗುವಂತೆ ಮಾಡಿ. ಇದಕ್ಕಾಗಿ ಈ ಕೆಳಗಿನ ಟಿಪ್ಸ್‌ಗಳನ್ನು ಅನುಸರಿಸಿ.

ಏರೋಪ್ಲೇನ್ ಮೋಡ್

ಏರೋಪ್ಲೇನ್ ಮೋಡ್

ಮೊಬೈಲ್ ಅಧಿಸೂಚನೆ ಬಾರ್‌ನಲ್ಲಿ ಕಾಣಿಸುವ ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ. ಹೀಗೆ ಚಾರ್ಜ್ ಮಾಡಿದರೆ ನಿಮ್ಮ ಫೋನ್ ಬ್ಯಾಟರಿ ಚಾರ್ಜಿಂಗ್ ವೇಗ ಶೇ.30 ಪರ್ಸೆಂಟ್ ಹೆಚ್ಚಿರುತ್ತದೆ. ಏಕೆಂದರೆ, ಏರೋಪ್ಲೇನ್ ಮೋಡ್ ಆನ್ ಮಾಡಿದ್ದಾಗ ನೆಟ್‌ವರ್ಕ್ ವ್ಯವಸ್ಥೆ ಕಟ್ ಆಗಿರುವುದರಿಂದ ಹಿನ್ನಲೇ ಬ್ಯಾಟರಿ ಸವಕಳಿ ತಪ್ಪಿ ಫೋನ್ ಬಹುಬೇಗ ಚಾರ್ಜ್ ಆಗುತ್ತದೆ.

ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ

ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ

ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿದರೆ ಸ್ಮಾರ್ಟ್‌ಪೋನ್ ಬಹುಬೇಗ ಚಾರ್ಜ್ ಆಗುತ್ತದೆ ಎಂಬುದು ಈಗಾಗಲೇ ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರಿಗಲೆಲ್ಲಾ ತಿಳಿದಿದೆ. ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡುವುದರಿಂದ ಶೇ. 30 ಪರ್ಸೆಂಟ್‌ಗೂ ಅಧಿಕ ವೇಗದಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ. ಏಕೆಂದರೆ, ಇಲ್ಲೂ ಕೂಡ ಹಿನ್ನಲೆ ಬ್ಯಾಟರಿ ಸವಕಳಿ ತಪ್ಪಿರುತ್ತದೆ.

ಬ್ರೌಸಿಂಗ್ ಮಾಡಲೇಬೇಡಿ

ಬ್ರೌಸಿಂಗ್ ಮಾಡಲೇಬೇಡಿ

ಏರೋಪ್ಲೇ ಮೋಡ್ ಆನ್ ಆಫ್ ಮಾಡದಿದ್ದರೂ ಪರವಾಗಿಲ್ಲ. ಆದರೆ, ಯಾವುದೇ ಕಾರಣಕೂ ಸಹ ಚಾರ್ಜಿಂಗ್ ವೇಳೆ ಬ್ರೌಸಿಂಗ್ ಮಾಡಲೇಬೇಡಿ. ಏಕೆಂದರೆ ಬ್ಯಾಟರಿ ಚಾರ್ಜ್ ಆಗುತ್ತಿರುವ ಸಮಯದಲ್ಲಿ ಇಂಟರ್‌ನೆಟ್ ಬಳಕೆ ಮಾಡಿದರೆ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ. ಇದರಿಂದ ವೇಗವಾಗಿ ಮೊಬೈಲ್ ಚಾರ್ಜ್ ಮಾಡಲು ಸಾಧ್ಯವವಾಗುವುದಿಲ್ಲ.

ಲ್ಯಾಪ್‌ಟಾಪ್‌ನಲ್ಲಿ ಚಾರ್ಜ್ ಬೇಡ

ಲ್ಯಾಪ್‌ಟಾಪ್‌ನಲ್ಲಿ ಚಾರ್ಜ್ ಬೇಡ

ಹೆಚ್ಚು ಜನರು ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ, ಗೋಡೆಯ ವಿದ್ಯುತ್ ಸ್ಲಾಟ್‌ಗಳಿಂದ ಬ್ಯಾಟರಿ ವೇಗವಾಗಿ ಚಾರ್ಜ್ ಆದಷ್ಟು ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಆಗುವುದಿಲ್ಲ. ಏಕೆಂದರೆ, ಲ್ಯಾಪ್‌ಟಾಪ್ ಮೊಬೈಲ್‌ಗೆ ಬೇಕಾದಷ್ಟು ಪ್ರಮಾಣದಲ್ಲಿ ಶಕ್ತಿಯನ್ನು ಬಿಡುವುದಿಲ್ಲ. ಜತೆಗೆ ಲ್ಯಾಪ್‌ಟಾಪ್‌ನಲ್ಲಿ ಚಾರ್ಜ್ ಮಾಡುವುದು ಉತ್ತಮವೂ ಅಲ್ಲ.

ಮೊಬೈಲ್‌ನದ್ದೇ ಚಾರ್ಜರ್!

ಮೊಬೈಲ್‌ನದ್ದೇ ಚಾರ್ಜರ್!

ಮೊಬೈಲ್ ಅನ್ನು ಬಹುಬೇಗ ಚಾರ್ಜ್ ಮಾಡುವುದಕ್ಕಾಗಿ ಫಾಸ್ಟ್ ಚಾರ್ಜರ್ ಮೊರೆಹೋಗುವವರನ್ನು ನೋಡಿದ್ದೇವೆ. ಆದರೆ, ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ ಮತ್ತು ಮೊಬೈಲ್ ಕೂಡ ಹಾಳಾಗುತ್ತದೆ. ಹಾಗಾಗಿ, ನೀವು ಫೋನ್ ಖರೀದಿಸಿದಾಗ ನೀಡಿದ ಚಾರ್ಜರ್‌ನಲ್ಲೇ ಫೋನನ್ನು ಚಾರ್ಜ್ ಮಾಡುವುದು ಉತ್ತಮ.

Best Mobiles in India

English summary
It's likely that you charge your smartphone every day. But we don't want to be waiting long before we use it again. Here are some tips so that you can charge your phone faster. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X