Home
ಟೆಕ್ ನೌಕರಿ

ಒಂದೇ ಕ್ಲಿಕ್! ರೀಚಾರ್ಜ್‌ ಮಾತ್ರವಲ್ಲ.. ವಿದ್ಯುತ್ ಬಿಲ್ ಕೂಡ ಪಾವತಿಸಬಹುದು.. ಇಲ್ಲಿದೆ ಸಿಂಪಲ್ ಟ್ರಿಕ್

ಜಿಯೋ ತನ್ನ ಬಳಕೆದಾರರಿಗೆ ಒಳ್ಳೆಯ ಸುದ್ದಿ ನೀಡಿದೆ. ನೀವು ಮೈ ಜಿಯೋ (MyJio) ಆಪ್ ಬಳಸುತ್ತಿದ್ದರೆ, ಈ ಸ್ಟೋರಿ ತಪ್ಪದೇ ಓದಿ. ಹೌದು, ಮೈ ಜಿಯೋ ಆಪ್ ಇನ್ಮುಂದೆ ಬರೀ ಮೊಬೈಲ್ ರೀಚಾರ್ಜ್​ಗೆ ಮಾತ್ರವಲ್ಲ, ವಿದ್ಯುತ್ ಬಿಲ್​ ಪಾವತಿಗೂ (MyJio App Bill Payment) ಸಹಕಾರಿಯಾಗಲಿದೆ. ನೀವು ಇದೇ ಅಪ್ಲಿಕೇಶನ್ ಮೂಲಕ ಇನ್ಮುಂದೆ ಯುಟಿಲಿಟಿ ಬಿಲ್‌ ಕೂಡ ಕಟ್ಟಬಹುದು. ಅಂದರೆ, ಮೈ ಜಿಯೋ ಅಪ್ಲಿಕೇಶನ್ ಮೂಲಕ ಮನೆಯಲ್ಲೇ ಕುಳಿತು ನೀವು ಕರೆಂಟ್ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬಹುದು. ನೀವು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದರೆ, ಇದು ನಿಮಗೆ ಅಗತ್ಯವಿಲ್ಲ.

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್‌ಗಳಲ್ಲಿ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ಜಿಯೋ ಸಂಸ್ಥೆಯು ಕೈಗೆಟುಕುವ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲಾನ್‌ಗಳಿಗೆ ಹೆಸರುವಾಸಿಯಾಗಿದೆ. ಈ ಯೋಜನೆಗಳಲ್ಲಿ ಅನ್​ಲಿಮಿಟೆಡ್ ಧ್ವನಿ ಕರೆ​ (ವಾಯ್ಸ್​ ಕಾಲ್), ಹೈ ಸ್ಪೀಡ್ ಇಂಟರ್‍ನೆಟ್ ಡೇಟಾ ಮತ್ತು ಹಲವು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆಯಬಹುದು. ಅದರಂತೆ, ಮೈ ಜಿಯೋ ಆಪ್ ನಿಮ್ಮ ಜಿಯೋ ಮೊಬೈಲ್ ನಂಬರ್ ಅನ್ನು ರೀಚಾರ್ಜ್ ಮಾಡಲು ಸೂಕ್ತವಾದ ವೇದಿಕೆಯಾಗಿದೆ. ಇದೀಗ, ರೀಚಾರ್ಜ್ ಜೊತೆಗೆ ಕರೆಂಟ್ ಬಿಲ್ ಸಹ ಪಾವತಿಸಬಹುದು.

ಒಂದೇ ಕ್ಲಿಕ್! ರೀಚಾರ್ಜ್‌ ಮಾತ್ರವಲ್ಲ.. ವಿದ್ಯುತ್ ಬಿಲ್ ಸಹ ಪಾವತಿಸಬಹುದು; ಹೇಗೆ?

ಜಿಯೋ ಮನಿ ಅಪ್ಲಿಕೇಶನ್ ಅಲಭ್ಯ

ಜಿಯೋ ಮನಿ (JioMoney) ಅಪ್ಲಿಕೇಶನ್ ಇನ್ಮುಂದೆ ಲಭ್ಯವಿರುವುದಿಲ್ಲ. ನೀವು ಆನ್‌ಲೈನ್ ಬಿಲ್ ಪಾವತಿಗಳಿಗಾಗಿ ಈ ಆಪ್ ಬಳಸಲು ಸಾಧ್ಯವಿಲ್ಲ. ಯಾಕೆಂದರೆ, ಜಿಯೋ ಈ ಅಪ್ಲಿಕೇಶನ್ ಅನ್ನು ಆಪಲ್ ಮತ್ತು ಗೂಗಲ್ ಸ್ಟೋರ್‌ಗಳಿಂದ ತೆಗೆದುಹಾಕಿದೆ. ಆದಾಗ್ಯೂ ಈ ಜಿಯೋ ಮನಿ ಆಪ್‌ನಲ್ಲಿರುವ (JioMoney) ಇದೇ ಫೀಚರ್ ಇತರೆ ವೇದಿಕೆಗಳಲ್ಲಿ ಸಹ ಲಭ್ಯವಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ, ಮೈ ಜಿಯೋ ಆಪ್ ಮೂಲಕ ಬಿಲ್‌ಗಳನ್ನು ಕಟ್ಟಬಹುದು. ಇದು ಆನ್‌ಲೈನ್ ಬಿಲ್ ಪಾವತಿಗಳನ್ನು ಹೆಚ್ಚು ಸುಲಭಗೊಳಿಸುತ್ತದೆ.

ಮೈ ಜಿಯೋ ಆಪ್‌ನಲ್ಲಿ ಕರೆಂಟ್ ಬಿಲ್ ಕಟ್ಟಲು ಈ ವಿಧಾನ ಬಳಸಿ!

ಹಂತ 1: ಮೊದಲು ಗೂಗಲ್ ಪ್ಲೇ ಸ್ಟೋರ್‌ (ಆಪಲ್‌ನ ಆ್ಯಪ್ ಸ್ಟೋರ್) ಓಪನ್ ಮಾಡಿ. 'MyJio' ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು

ಹಂತ 2: ಬಳಿಕ ಮೈ ಜಿಯೋ ಆಪ್‌ ಇನ್​ಸ್ಟಾಲ್​ ಮಾಡಿಕೊಳ್ಳಿ. ಆಫ್‌ ಅನ್ನು ಓಪನ್ ಮಾಡಿ.

ಹಂತ 4: ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮತ್ತು ಲಾಗಿನ್ ಆಗಬೇಕು.

ಹಂತ 5: ಬಳಿಕ ನಿಮ್ಮ ಮೊಬೈಲ್ ಸ್ಕ್ರೀನ್​ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಬೇಕು. ಕೆಳಭಾಗದಲ್ಲಿ Finance ಸೆಕ್ಷನ್​ ಕಾಣುತ್ತದೆ. ಅಲ್ಲಿರುವ Bills ಆಯ್ಕೆಯನ್ನು ಟ್ಯಾಪ್ ಮಾಡಬೇಕು.

ಹಂತ 6: ನಂತರ ಅಲ್ಲಿ ಗೋಚರಿಸುವ Electricity ಆಯ್ಕೆಯ ಮೇಲೆ ಕ್ಲಿಕ್ಕಿಸಿ. ಬಳಿಕ ಅದು ನಿಮಗೆ ಬೆಂಬಲಿತ ವಿದ್ಯುತ್ ಆಪರೇಟರ್‌ಗಳ ಪಟ್ಟಿ ತೋರಿಸುತ್ತದೆ.

ಹಂತ 7: ಆಗ ನಿಮ್ಮ ವಿದ್ಯುತ್ ಆಪರೇಟರ್ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ಹೆಸರನ್ನು ಪರಿಶೀಲಿಸಿ. ಅದನ್ನು ಆಯ್ಕೆ ಮಾಡಿ.

ಹಂತ 8: ಬಳಿಕ ನಿಮ್ಮ ಕಸ್ಟಮರ್​ ಐಡಿ ನಮೂದಿಸಿ ಮತ್ತು Proceed ಬಟನ್ ಕ್ಲಿಕ್ಕಿಸಿ.

ಹಂತ 9: ಇಷ್ಟು ಮಾಡಿದ ಬಳಿಕ ನೀವು ವಿದ್ಯುತ್ ಬಿಲ್ ನಮೂದಿಸಬಹುದು. ಬಳಿಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಕರೆಂಟ್ ಬಿಲ್ ಪಾವತಿಸಬಹುದು.

ಒಟ್ಟಾರೆ, ಮನೆಯಲ್ಲಿಯೇ ಕುಳಿತು ವಿದ್ಯುತ್ ಬಿಲ್ ಪಾವತಿಸಲು ಬಯಸುವರಿಗೆ ಮೈ ಜಿಯೋ ಆಪ್ ಸಹಕಾರಿಯಾಗಲಿದೆ. ನೀವು ಮೊಬೈಲ್ ರೀಚಾರ್ಜ್ ಮಾದರಿಯಲ್ಲೇ ಕರೆಂಟ್ ಬಿಲ್ ​ಕಟ್ಟಬಹುದು. ಜೊತೆಗೆ ಇನ್ಮುಂದೆ ಯುಟಿಲಿಟಿ ಬಿಲ್‌ ಸಹ ಪಾವತಿಸಬಹುದು. ವಿಶೇಷವೆಂದರೆ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಇದರ ಅಗತ್ಯವಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+