ಟೆಲಿಗ್ರಾಮ್‌ನಲ್ಲಿ ನೀವು ಚಾಟ್ ಮತ್ತು ಮೆಸೇಜ್‌ ಅನ್ನು ಪಿನ್ ಮಾಡುವುದು ಹೇಗೆ?

|

ಟೆಲಿಗ್ರಾಮ್ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಹಲವು ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ. ಅದರಲ್ಲೂ ವಾಟ್ಸಾಪ್‌ನ ಸೇವಾ ನಿಯಮ ವಿವಾದದ ನಂತರ ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸದ್ಯ ಬಳಕೆದಾರರಿಗೆ ಪರಸ್ಪರ ಸಂವಹನ ನಡೆಸುವುದಕ್ಕೆ ಟೆಲಿಗ್ರಾಮ್‌ ಸೂಕ್ತವಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ತನ್ನ ಹೊಸ ಮಾದರಿಯ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಇದರಲ್ಲಿ ಸೀಕ್ರೆಟ್ ಚಾಟ್ ಫೀಚರ್ಸ್‌ ಕೂಡ ಸೇರಿದೆ. ಇನ್ನು ಟೆಲಿಗ್ರಾಮ್‌ನಲ್ಲಿ ಚಾಟ್‌ಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿವೆ. ಈ ಚಾಟ್‌ಗಳಿಗೆ ಬಳಕೆದಾರರು ಸ್ವಯಂ ಡಿಸ್ಟ್ರೆಟ್ ಟೈಮರ್ ಅನ್ನು ಸಹ ಸೆಟ್‌ ಮಾಡಬಹುದು. ಇದರ ಜೊತೆಗೆ ಟೆಲಿಗ್ರಾಮ್‌ನಲ್ಲಿ ನಿರ್ದಿಷ್ಟ ಚಾಟ್‌ಗಳನ್ನು ಪಿನ್ ಮಾಡಲು ಸಹ ಅವಕಾಶವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ

ಅಪ್ಲಿಕೇಶನ್‌ನಲ್ಲಿ

ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್‌ನಂತೆಯೇ ನಿರ್ದಿಷ್ಟ ಸಂದೇಶಗಳು ಅಥವಾ ಚಾಟ್‌ಗಳನ್ನು ಪಿನ್ ಮಾಡಲು ಬಳಕೆದಾರರಿಗೆ ಅವಕಾಶವನ್ನು ನೀಡಿದೆ. ಈ ಮೂಲಕ ನೀವು ಬಯಸುವ ಚಾಟ್‌ಗಳನ್ನು ಪಿನ್‌ ಮಾಡಬಹುದು. ಸ್ವಯಂ ಡಿಸ್ಟ್ರೆಟ್ ಟೈಮರ್‌ ಅನ್ನು ಸಹ ಸೆಟ್‌ ಮಾಡಬಹುದು. ಇನ್ನು ಟೆಲಿಗ್ರಾಮ್‌ನಲ್ಲಿ ನೀವು ಚಾಟ್ ಅನ್ನು ಪಿನ್ ಮಾಡವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಟೆಲಿಗ್ರಾಮ್‌ನಲ್ಲಿ ನೀವು ಚಾಟ್ ಅನ್ನು ಪಿನ್ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ನೀವು ಚಾಟ್ ಅನ್ನು ಪಿನ್ ಮಾಡುವುದು ಹೇಗೆ?

ಹಂತ 1: ಟೆಲಿಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ.

ಹಂತ 2: ನೀವು ಪಿನ್ ಮಾಡಲು ಬಯಸುವ ಚಾಟ್‌ನಲ್ಲಿ ಲಾಂಗ್‌ ಪ್ರೆಸ್‌ ಮಾಡಿ.

ಹಂತ 3: ಪಿನ್ ಬಟನ್ ಟ್ಯಾಪ್ ಮಾಡಿ. ಈಗ ನಿಮ್ಮ ಚಾಟ್‌ ಪಿನ್‌ ಆಗಿರಲಿದೆ.

ಟೆಲಿಗ್ರಾಮ್‌ನಲ್ಲಿ ನೀವು ಸಂದೇಶವನ್ನು ಪಿನ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ನೀವು ಸಂದೇಶವನ್ನು ಪಿನ್‌ ಮಾಡುವುದು ಹೇಗೆ?

ಹಂತ 1: ಟೆಲಿಗ್ರಾಮ್‌ನಲ್ಲಿ ನೀವು ಸಂದೇಶವನ್ನು ಪಿನ್ ಮಾಡಲು ಬಯಸುವ ಚಾಟ್ ತೆರೆಯಿರಿ.

ಹಂತ 2: ನೀವು ಪಿನ್ ಮಾಡಲು ಬಯಸುವ ಸಂದೇಶಕ್ಕೆ ಹೋಗಿ.

ಹಂತ 3: ನೀವು ಪಿನ್ ಮಾಡಲು ಬಯಸುವ ಸಂದೇಶವನ್ನು ಲಾಂಗ್‌ ಪ್ರೆಸ್‌ ಮಾಡಿರಿ.

ಹಂತ 4: ಪಿನ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 5: ಸಂದೇಶವನ್ನು ನಿಮಗಾಗಿ ಪಿನ್ ಮಾಡಲು ನೀವು ಬಯಸಿದರೆ ‘ಪಿನ್ ಫಾರ್‌ ಮಿ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 6: ನಿಮಗಾಗಿ ಮತ್ತು ನಿಮ್ಮ ಸ್ನೇಹಿತರಿಗಾಗಿ ಸಂದೇಶವನ್ನು ಪಿನ್ ಮಾಡಲು ಬಯಸಿದರೆ 'ಪಿನ್ ಫಾರ್‌ ಮಿ ಮತ್ತು ಸಂಪರ್ಕ ಹೆಸರು' ಆಯ್ಕೆಯನ್ನು ಟ್ಯಾಪ್ ಮಾಡಿ.

ಈ ಮೂಲಕ ನೀವು ಬಯಸುವ ಸಂದೇಶವನ್ನು ಪಿನ್‌ ಮಾಡಬಹುದಾಗಿದೆ.

Most Read Articles
Best Mobiles in India

English summary
Well, if you are new to the app or if you haven’t explored the app much, here’s how you can pin a chat in Telegram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X