ವಿಂಡೋಸ್ 10 ನಲ್ಲಿ ಮಲ್ಟಿಪ್ಲೇಯರ್ ಗೇಮ್ ಗೆ ವೈಫೈ ರೂಟರ್ ಬಳಕೆ ಹೇಗೆ?
ಕಳೆದ ಕೆಲವು ಸಮಯದಿಂದ ಭಾರತದ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳಿಗೆ LAN ಗೇಮಿಂಗ್ ಒಂದು ಕ್ರೇಝ್ ಆಗಿ ಪರಿಣಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಟಲ್ ರಾಯಲ್ ಗೇಮ್ ಗಳಾಗಿರುವ ಪಿಯುಬಿಜಿ ಮತ್ತು ಫೋರ್ಟ್ ನೈಟ್ ಗಳು ಪ್ರಸಿದ್ಧಿಯಾಗಿರುವ ಬೆನ್ನಲ್ಲೇ ಇದು ಕೂಡ ಚಾಲ್ತಿಯಲ್ಲಿದೆ ಮತ್ತು ಇದು ಮೈಕ್ರೋ ಸಾಫ್ಟ್ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ನಿಂದ ಸುಲಭದಲ್ಲಿ ಸಾಧ್ಯವಾಗುತ್ತದೆ. ಒಬ್ಬ ಪ್ಲೇಯರ್ ಗೆ ಅಗತ್ಯವಿರುವುದೇನೆಂದರೆ ವಯರ್ ಲೆಸ್ ಆಡ್ ಹಾಕ್ ನೆಟ್ ವರ್ಕ್ ಜೊತೆಗೆ ಸೀಕ್ರೆಟ್ ಕೀ( ಕೆಲವೊಮ್ಮೆ ಕೀ ಇಲ್ಲದೆಯೂ ಇರಬಹುದು) .

ಅದು ಎಲ್ಲರೂ ಸೇರುವುದಕ್ಕಾಗಿ ಮತ್ತು ಗೇಮ್ ನ್ನು ಒಟ್ಟಿಗೆ ಪ್ರಾರಂಭಿಸುವುದಕ್ಕಾಗಿ ಅಗತ್ಯವಿರುತ್ತದೆ. ಆದರೆ ಹೊಸ ವಿಂಡೋಸ್ ವರ್ಷನ್ ಆಡ್ ಹಾಕ್ ನ್ನು ಕ್ರಿಯೇಟ್ ಮಾಡುವುದಕ್ಕೆ ನೇರವಾಗಿ ಆಯ್ಕೆಯನ್ನು ನೀಡುವುದಿಲ್ಲ. ಹಲವಾರು ಟ್ವೀಕ್ಸ್ ಗಳನ್ನು ಮಾಡುವ ಅಗತ್ಯತೆ ಇದ್ದು ಇದು ಎಲ್ಲಾ ಸಮಯದಲ್ಲೂ ಕಾರ್ಯ ನಿರ್ವಹಿಸುವುದಿಲ್ಲ. ಈ ಲೇಖನದಲ್ಲಿ ನಾವು ಎರಡು ವಿಂಡೋಸ್ 10 ಲ್ಯಾಪ್ ಟಾಪ್ ಅಥವಾ ಅದಕ್ಕಿಂತ ಹೆಚ್ಚನ್ನು ಸ್ನೇಹಿತರೊಂದಿಗೆ ಗೇಮಿಂಗ್ ಗಾಗಿ ಕನೆಕ್ಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ. ಇದು ಆನ್ ಲೈನ್ ಗೇಮಿಂಗ್ ಬಗ್ಗೆ ಅಲ್ಲ ಈ ಲೇಖನ ಎಂಬುದು ನಿಮಗೆ ನೆನಪಿನಲ್ಲಿ ಇರಲಿ.
ಈ ಕೆಳಗಿನ ಹಂತಗಳು ಹಳೆಯ ಗೇಮಿಂಗ್ ಸೆಷನ್ ಗಳಿಗಾಗಿ ಹೇಳಲಾಗುತ್ತಿದ್ದು ಒಂದು ವೇಳೆ ಸ್ನೇಹಿತರೆಲ್ಲರೂ ಒಂದೇ ಜಾಗದಲ್ಲಿ ಸೇರಿದ್ದಾಗ ಅಥವಾ ಒಂದು ಸಾಮಾನ್ಯ ಸ್ಥಳದಲ್ಲಿ ಎಲ್ಲರೂ ಮೀಟ್ ಮಾಡಿದ್ದಾಗ ವೈಫೈ ರೂಟರ್ ಬಳಸಿ ಇಂಟರ್ನೆಟ್ ಕನೆಕ್ಷನ್ ಬಳಸಿ ಹೇಗೆ ಗೇಮ್ ಆಡುವುದು ಎಂಬ ಬಗ್ಗೆತಿಳಿಸಿಕೊಡುತ್ತದೆ. ಅದಕ್ಕಾಗಿ ನಿಮಗೆ ವಿಂಡೋಸ್ 10 ಪಿಸಿ ಜೊತೆಗೆ ಚಾರ್ಜರ್ ನ ಅಗತ್ಯವಿದೆ ಮತ್ತು ವೈಫೈ ರೂಟರ್ ಮತ್ತು ನಿರಂತರ ಪವರ್ ಸಪ್ಲೈ ಬೇಕಾಗುತ್ತದೆ. ಈ ಹಂತವು ಕೆಲವರ ಬಳಿ ವಿಂಡೋಸ್ 10 ಇದ್ದು ಇನ್ನೂ ಕೆಲವರ ಬಳಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಇದ್ದಾಗಲೂ ಕೂಡ ಕೆಲಸ ಮಾಡುತ್ತದೆ.ಹಾಗಾದ್ರೆ ಆ ಹಂತಗಳು ಯಾವುವು ಎಂಬ ಬಗ್ಗೆ ಈ ಕೆಳಗೆ ಗಮನಿಸಿ.
1.ಎಲ್ಲರೂ ಕೂಡ ತಮ್ಮ ಲ್ಯಾಪ್ ಟಾಪ್ ನ್ನು ವೈಫೈ ಇಂಟರ್ ನೆಟ್ ಗೆ ಕನೆಕ್ಟ್ ಮಾಡಬೇಕು.
2.ಯಾರು ಗೇಮ್ ನ್ನು ಹೋಸ್ಟ್ ಮಾಡಲಿದ್ದಾರೋ ( ಆತ/ಆಕೆಯ ಬಳಿ ವಿಂಡೋಸ್ 10 ಲ್ಯಾಪ್ ಟಾಪ್ ಇರಲೇಬೇಕು)ಟಾಸ್ಕ್ ಬಾರ್ ನಲ್ಲಿರುವ ವೈಫೈ ಆಯ್ಕೆಯನ್ನು ರೈಟ್ ಕ್ಲಿಕ್ ಮಾಡಿ ಮತ್ತು 'Open Network & Internet settings'ನ್ನು ಕ್ಲಿಕ್ಕಿಸಿ.
3.'Mobile Hotspot' ಗೆ ತೆರಳಿ.
4.'Network and Sharing Center'ನ್ನು ಕ್ಲಿಕ್ಕಿಸಿ.
5.ನಿಮ್ಮ ಆಕ್ಟೀವ್ ಇಂಟರ್ನೆಟ್ ಮುಂದಿನ ವಿಂಡೋದಲ್ಲಿ ಕಾಣಿಸಿ ತೆರೆದುಕೊಳ್ಳುತ್ತದೆ. ವೈಫೈ ಇಂಟರ್ನೆಟ್ ಜೊತೆಗಿರುವುದನ್ನು ಲೆಫ್ಟ್ ಕ್ಲಿಕ್ ಮಾಡಿ.
6.'Properties'ನ್ನು ಕ್ಲಿಕ್ಕಿಸಿ.
7.'Sharing' ಗೆ ತೆರಳಿ.
8.'Allow other users to connect with this computer's Internet connection' ಇದನ್ನು ಟಿಕ್ ಮಾಡಿ. ಈ ಆಯ್ಕೆಯನ್ನು ಟಿಕ್ ಮಾಡುವ ಮೂಲಕ ನೀವು ಇತರೆ ಎಲ್ಲರಿಗೂ ನಿಮ್ಮ ಕಂಪ್ಯೂಟರ್ ಇಂಟರ್ ನೆಟ್ ಕನೆಕ್ಷನ್ ಗೆ ಕನೆಕ್ಟ್ ಆಗುವುದಕ್ಕೆ ಅನುಮತಿ ನೀಡಿದಂತಾಗುತ್ತದೆ.
9.ನೀವು ಆಟವಾಡಲು ತೆರಳಲಿರುವ ಮಲ್ಟಿಲೇಯರ್ ಗೇಮ್ ನ್ನು ತೆರೆಯಿರಿ ಮತ್ತು ಹೊಸ LAN ಗೇಮ್ ನ್ನು ಹೋಸ್ಟ್ ಮಾಡಿ.
10.ಇತರೆ ಎಲ್ಲರೂ ಕೂಡ ಗೇಮ್ ನ್ನು ಲಾಂಚ್ ಮಾಡಬೇಕು ಮತ್ತು ಸೇಮ್ ನೆಟ್ ವರ್ಕ್ ನಲ್ಲಿ ಜಾಯಿನ್ ಆಗಲು ಮಲ್ಟಿಪ್ಲೇಯರ್ ನಲ್ಲಿ ಹೋಸ್ಟ್ ಆಗಿರುವ ಗೇಮ್ ನ್ನು ಚೆಕ್ ಮಾಡಿ.
11.ಹೊಸ್ಟ್ ಆಗಿರುವ ಗೇಮ್ ಕಾಣಿಸಿಕೊಂಡಾಗ ಜಾಯಿನ್ ಆಗಿ.
12.ಇದೀಗ ನೀವು ನಿಮ್ಮ ಸ್ನೇಹಿತರ ಜೊತೆಗೆ ಗೇಮಿಂಗ್ ಸೆಷನ್ ಆರಂಭಿಸಬಹುದು!


Click it and Unblock the Notifications





