ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?

By Suneel

    3G, 4G ಇಂಟರ್ನೆಟ್‌ ನೆಟ್‌ವರ್ಕ್‌ ಇದ್ರು ಸಹ ಈ ಯೂಟ್ಯೂಬ್‌ನಲ್ಲಿ ಮಾತ್ರ ವೀಡಿಯೋ ಸ್ಪೀಡ್‌ ಆಗಿ ನೋಡಲು ಆಗಲ್ಲ. ವೀಡಿಯೋ 1 ನಿಮಿಷ ಬರುತ್ತೆ 2 ನಿಮಿಷ ಬಫರ್‌ ತಗಳುತ್ತೆ. ಯೂಟ್ಯೂಬ್‌ನಲ್ಲಿ ವೀಡಿಯೋ ನೋಡೋಕೆ ಬೇಜಾರು. ಇಂತಹ ಬೇಸರ 4G ಇಂಟರ್ನೆಟ್‌ ವೇಗ ಇರುವವರಿಗೂ ಸಹ ಇದೆ.

    ಹೌದು, ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವಾಗ ಬಫರಿಂಗ್‌ ಸಮಸ್ಯೆ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರಿಗೂ ಸಹ ಇದ್ದದ್ದೇ. ಆದ್ದರಿಂದ ಇಂದಿನ ಲೇಖನದಲ್ಲಿ ಯೂಟ್ಯೂಬ್‌ ಪ್ರಿಯರಿಗೆ ಬಫರಿಂಗ್‌ ಆಗದೇ ನೇರವಾಗಿ ವೇಗದಲ್ಲಿ ವೀಡಿಯೋ ನೋಡುವುದು ಹೇಗೆ ಎಂಬುದನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ನೀಡುತ್ತಿದೆ.

    ಓದಿರಿ:ಗೂಗಲ್‌ನಿಂದ ಜಿಮೇಲ್‌ ಬಳಸದವರಿಗಾಗಿ ಅಚ್ಚರಿ 'Gmailify' ಫೀಚರ್

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಬಫರ್‌ ಆಗದೇ ವೀಡಿಯೋ ವೇಗ ಹೇಗೆ?

    ಪ್ರಥಮವಾಗಿ ನೀವು ನಿಮ್ಮ ಗೂಗಲ್‌ ಕ್ರೋಮ ಅಥವಾ ಮೊಜಿಲ್ಲಾ ಫೈಯರ್‌ಫಾಕ್ಸ್‌ಗೆ "SmartVideo for YouTube" ವಿಸ್ತರಣೆಯನ್ನು ಡೌನ್‌ಲೊಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ಇನ್‌ಸಾಲ್‌ ಮಾಡಲು ಲಿಂಕ್‌ ಅನ್ನು ಕೊನೆಯ ಸ್ಲೈಡರ್‌ನಲ್ಲಿ ನೀಡಲಾಗಿದೆ. ಅದನ್ನು ಕ್ಲಿಕ್‌ ಮಾಡಿದಾಗ ನಿಮಗೆ ಚಿತ್ರದಲ್ಲಿರುವಂತೆ ವೆಬ್‌ ಪೇಜ್‌ ಓಪನ್ ಆಗುತ್ತದೆ. ವೆಬ್‌ಪೇಜ್‌ನಲ್ಲಿ ಹಸಿರು ಬಟನ್‌ನಲ್ಲಿ ಕಾಣುವ ADDED TO CHROME ಎಂಬಲ್ಲಿ ಕ್ಲಿಕ್‌ ಮಾಡಿ.

    ಬಫರ್‌ ಆಗದೇ ವೀಡಿಯೋ ವೇಗ ಹೇಗೆ?

    "SmartVideo for YouTube" ಇನ್‌ಸ್ಟಾಲ್‌ ಮಾಡಿದ ನಂತರ ಯೂಟ್ಯೂಬ್‌ನಲ್ಲಿ ಯಾವುದಾದರೂ ಒಂದು ವೀಡಿಯೋವನ್ನು ಪ್ಲೇ ಮಾಡಿ. ವೀಡಿಯೋ ಪ್ಲೇ ಮಾಡಿದ ನಂತರ ವೀಡಿಯೋ ಕೆಳಗೆ ಕೆಲವು ಹೊಸ ಆಯ್ಕೆಗಳು ಕಾಣುತ್ತದೆ. ಮೌಸ್‌ ಅನ್ನು ನಿಮ್ಮ ಯೂಟ್ಯೂಬ್‌ ವೀಡಿಯೋ ಮೇಲಿಂದ ಕೆಳಗೆ ಇಳಿಸಿದಾಗ ಆಯ್ಕೆಗಳ ಬಾಕ್ಸ್‌ ಬರುತ್ತದೆ.

    ಬಫರ್‌ ಆಗದೇ ವೀಡಿಯೋ ವೇಗ ಹೇಗೆ?

    ಈ ಹಂತದಲ್ಲಿ ಬಲಭಾಗದಲ್ಲಿ Global Prefereces ಎಂಬಲ್ಲಿ ಕ್ಲಿಕ್ ಮಾಡಿ. ನಂತರ Smart Buffer ಎಂಬ ಆಯ್ಕೆ ಕಾಣುತ್ತದೆ. ಅದನ್ನು ರೈಟ್‌ ಮಾರ್ಕ್‌ ಮಾಡಿ.

    ಬಫರ್‌ ಆಗದೇ ವೀಡಿಯೋ ವೇಗ ಹೇಗೆ?

    ಈಗ ನೀವು ಬಳಸುವ ಯೂಟ್ಯೂಬ್‌ ವೀಡಿಯೋಗಳ ಬಫರ್‌ ಅತಿವೇಗಗೊಳ್ಳುತ್ತದೆ. ಯೂಟ್ಯೂಬ್‌ ಸ್ಟ್ರೀಮಿಂಗ್ ಅತಿವೇಗವಾಗಿ ನೀವು ವೀಡಿಯೋವನ್ನು ಬಫರ್‌ ಇಲ್ಲದಂತೆ ವೇಗವಾಗಿ ನೋಡಬಹುದಾಗಿದೆ.

    SmartVideo for YouTube ವಿಸ್ತರಣೆಗಾಗಿ ಲಿಂಕ್‌

    * ಗೂಗಲ್‌ ಕ್ರೋಮ್‌ ಬಳಸುವವರು SmartVideo for YouTube ವಿಸ್ತರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ
    * ಮೊಜಿಲ್ಲಾ ಫೈಯರ್‌ಫಾಕ್ಸ್‌ ಬಳಸುವವರು SmartVideo for YouTube ವಿಸ್ತರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    How to Play YouTube Videos Faster Without Buffering. Read more about this in kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more