ಫೋನ್ ಸ್ಕ್ರೀನ್ ಆಫ್ ಮಾಡಿ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?
ನಿಮ್ಮ ಫೋನ್ ಪರದೆಯನ್ನು ಆಫ್ ಮಾಡಿ ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸುವುದು ಎಂದರೆ ಕೊಂಚ ಕಷ್ಟವೇ ಅಲ್ಲವೇ? ನಿಮ್ಮ ಸ್ಕ್ರೀನ್ ಸ್ವಿಚ್ ಆಫ್ ಆದ ಕೂಡಲೇ ನೀವು ವೀಕ್ಷಿಸುತ್ತಿರುವುದನ್ನು ಯೂಟ್ಯೂಬ್ ಪಾಸ್ ಮಾಡುತ್ತದೆ, ಇದರಿಂದಾಗಿ ನಿಮ್ಮ ಫೋನ್‌ನಲ್ಲಿ ವೀಡಿಯೊಗಳನ್ನು ನೋಡಲಾಗುವುದಿಲ್ಲ. ಯೂಟ್ಯೂಬ್ ಅಪ್ಲಿಕೇಶನ್ ಅನ್ನು ಡೀಫಾಲ್ಟ್ ಆಗಿ ಇರಿಸಿಕೊಳ್ಳಲು ಯಾವುದೇ ಸೆಟ್ಟಿಂಗ್ ಇಲ್ಲ. ಆದರೆ ಸ್ಕ್ರೀನ್ ಆಫ್ ಮಾಡಿ ಯೂಟ್ಯೂಬ್ ವೀಡಿಯೊಗಳನ್ನು ನೋಡಬಹುದಾದ ಕೆಲವು ವಿಧಾನಗಳನ್ನು ಇಂದು ತಿಳಿಸುತ್ತಿದ್ದೇವೆ.

#1
ಉಚಿತ ಮೊಜೈಲಾ ಫೈರ್‌ಫಾಕ್ಸ್ ಬ್ರೌಸರ್ ಅಪ್ಲಿಕೇಶನ್ ಬಳಸಿಕೊಂಡು ಈ ವಿಧಾನವನ್ನು ಅನುಸರಿಸಬಹುದಾಗಿದೆ. ಎಲ್ಲಾ ಡಿವೈಸ್‌ಗಳಲ್ಲಿ ಕೂಡ ಇದು ಕಾರ್ಯನಿರ್ವಹಿಸುತ್ತದೆ.

#2
ನಿಮ್ಮ ಫೋನ್‌ನಲ್ಲಿ ಮೊಜೈಲಾ ಫೈರ್‌ಫಾಕ್ಸ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಬ್ರೌಸರ್‌ನೊಳಗೆಯೇ ಯೂಟ್ಯೂಬ್ ವೆಬ್‌ಸೈಟ್‌ಗೆ ಹೋಗಿ, ಪುಟದ ಬಲ ಮೇಲ್ಭಾಗದಲ್ಲಿರುವ ಸೆಟ್ಟಿಂಗ್ಸ್ ಬಟನ್ ಸ್ಪರ್ಶಿಸಿ ಹಾಗೂ ರಿಕ್ವೆಸ್ಟ್ ಡೆಸ್ಕ್‌ಟಾಪ್ ಸೈಟ್ ಟಿಕ್ ಮಾಡಿ.

#3
ಮೇಲಿನ ಹಂತಗಳನ್ನು ಒಮ್ಮೆ ನೀವು ಸಂಪೂರ್ಣಗೊಳಿಸಿದಿರಿ ಎಂದಾದಲ್ಲಿ, ವೀಡಿಯೊ ಪ್ಲೇ ಮಾಡಲು ಅದನ್ನು ಸ್ಪರ್ಶಿಸಿ, ನಿಮ್ಮ ಫೋನ್ ಲಾಕ್ ಆದರೂ ಯೂಟ್ಯೂಬ್ ಪ್ಲೇಯಾಗುತ್ತಿರುತ್ತದೆ.

#4
ಸೋನಿ ಎಕ್ಸ್‌ಪೀರಿಯಾ ಡಿವೈಸ್‌ಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಪ್ಲೇ ಸ್ಟೋರ್‌ನಿಂದ ಮೀಡಿಯಾ ವ್ಯೂವರ್ ಸ್ಮಾಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಅದನ್ನು ಇನ್‌ಸ್ಟಾಲ್ ಮಾಡಿ.

#5
ಇತ್ತೀಚಿನ ಆಪ್ಸ್ ಬಟನ್ ಅನ್ನು ಸ್ಪರ್ಶಿಸುವ ಮೂಲಕ ಸ್ಮಾಲ್ ಆಪ್ಸ್ ಅನ್ನು ಪ್ರವೇಶಿಸಿ ಹಾಗೂ ಕೆಳಎಡಭಾಗದಲ್ಲಿ ಮೇಲ್ಮುಖ ಬಾಣದ ಗುರುತನ್ನು ಸ್ಪರ್ಶಿಸಿ. ಇಲ್ಲಿಂದ ನೀವು ವೆಬ್ ವೀಡಿಯೊಗಳ ಅಪ್ಲಿಕೇಶನ್ ಅನ್ನು ಪ್ರವೇಶಿಸಬಹುದು.

#6
ವೆಬ್ ವೀಡಿಯೊಗಳ ಅಪ್ಲಿಕೇಶನ್ ಸ್ಪರ್ಶಿಸಿ ಹಾಗೂ ಹೊಸ ವಿಂಡೊ ಇಲ್ಲಿ ಪಾಪ್ ಅಪ್ ಆಗುತ್ತದೆ. ಇಲ್ಲಿ ನಿಮಗೆ ವೀಡಿಯೊಗಳನ್ನು ಹುಡುಕಾಡಬಹುದು ಮತ್ತು ಸ್ಕ್ರೀನ್ ಆಫ್ ಆದ ಸಂದರ್ಭದಲ್ಲಿ ಅದನ್ನು ಪ್ಲೇ ಮಾಡಡಬಹುದು. ಇದು ಸೀಮಿತವಾಗಿದ್ದು, ಯೂಟ್ಯೂಬ್‌ನ ನಿಯಮಿತ ಫೀಚರ್‌ಗಳನ್ನು ಪ್ರವೇಶಿಸಲಾಗುವುದಿಲ್ಲ, ಅದರೆ ಫೋನ್ ಲಾಕ್ ಆಗಿದ್ದಾಗ ವೀಡಿಯೊ ಪ್ಲೇಯಾಗಲು ಸಣ್ಣ ಪಾವತಿಯನ್ನು ನೀವು ಮಾಡಬೇಕಾಗುತ್ತದೆ.

#7
ಯೂಟ್ಯೂಬ್ ಮ್ಯೂಸಿಕ್ ಕೀ ಚಂದಾದಾರಿಕೆ ಸೇವೆಯು ವಿಷಯದ ಆಫ್‌ಲೈನ್ ಮತ್ತು ಹಿನ್ನಲೆ ಪ್ರವೇಶವನ್ನು ನಿಮಗೆ ಒದಗಿಸುತ್ತದೆ. ಮಾಸಿಕ ಪಾವತಿಯನ್ನು ನೀವು ಮಾಡಬೇಕಾಗುತ್ತದೆ ಅಂತೆಯೇ ಜಾಹೀರಾತು ರಹಿತ ಯೂಟ್ಯೂಬ್ ಅನುಭವವನ್ನು ನಿಮಗಿಲ್ಲಿ ಪಡೆದುಕೊಳ್ಳಬಹುದಾಗಿದೆ.

#8
ಚಂದಾದಾರಿಕೆಯನ್ನು ಒಮ್ಮೆ ನೀವು ಹೊಂದಿಸಿಕೊಂಡ ನಂತರ, ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್‌ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ, ನಂತರ ಬ್ಯಾಕ್‌ಗ್ರೌಂಡ್ ಏಂಡ್ ಆಫ್‌ಲೈನ್‌ಗೆ ಹೋಗಿ, ಪ್ಲೇಬ್ಯಾಕ್ ಅನ್ನು ಯಾವಾಗಲೂ ಆನ್ ಆಗಿ ಹೊಂದಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.


Click it and Unblock the Notifications








