Home
ಟೆಕ್ ನೌಕರಿ

Android Apps: ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಂದ ವಂಚನೆ ತಡೆಯುವುದು ಹೇಗೆ; ಇಲ್ಲಿದೆ ಹಂತ-ಹಂತದ ವಿವರಣೆ

ಇಂದಿನ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ ಪ್ರತಿಯೊಂದಕ್ಕೂ ಅಗತ್ಯವಾದ ಸಾಧನವಾಗಿದೆ ಮತ್ತು ವೇಗದ ಇಂಟರ್ನೆಟ್ ಸಂಪರ್ಕಗಳು ನಮ್ಮ ಜೀವನವನ್ನು ಸುಲಭಗೊಳಿಸುತ್ತಿವೆ. ಈ ಅನುಕೂಲಗಳು ಹೊರತಾಗಿ ನಮ್ಮ ವೈಯಕ್ತಿಕ ಡೇಟಾವನ್ನು ಕದಿಯಲು ಸೈಬರ್ ಕಳ್ಳರಿಗೆ ಅವಕಾಶಗಳನ್ನು ನೀಡುತ್ತಿವೆ. ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದ್ದು, ನಮ್ಮ ಹಣಕಾಸಿನ ಮಾಹಿತಿ ಸೇರಿದಂತೆ ನಮ್ಮ ಡಿಜಿಟಲ್ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ನಿಮ್ಮ ಡಿವೈಸ್‌ನಲ್ಲಿರುವ ಅಪ್ಲಿಕೇಶನ್‌ಗಳಿಗೆ ನೀವು ನೀಡುವ ಅನುಮತಿಗಳನ್ನು ಸಮರ್ಪಕವಾಗಿ ನಿಭಾಯಿಸುವುದು ನಿಮ್ಮ ಗೌಪ್ಯತೆಯನ್ನು ಕಾಪಾಡಲು ಇರುವ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಇದರರ್ಥ ನಿಮ್ಮ ಕ್ಯಾಮರಾ, ಸ್ಥಳ ಮತ್ತು ಮೈಕ್ರೊಫೋನ್‌ನಂತಹ ಸೂಕ್ಷ್ಮ ವೈಶಿಷ್ಟ್ಯಗಳನ್ನು ಅಪ್ಲಿಕೇಶನ್‌ಗಳು ಹೇಗೆ ಮತ್ತು ಯಾವಾಗ ಪ್ರವೇಶಿಸಬಹುದು ಎಂಬುದನ್ನು ನಿಯಂತ್ರಿಸುವುದು.

ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಂದ ಆನ್‌ಲೈನ್ ವಂಚನೆ ತಡೆಯುವುದು ಹೇಗೆ

ಡಿಜಿಟಲ್ ಗೌಪ್ಯತೆ ಕಾಪಾಡಲು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು (Android Apps) ಅನುಮತಿ ಕೇಳುವುದು ಕಡ್ಡಾಯ:

ನಿಮ್ಮ ಡಿವೈಸ್‌ನಲ್ಲಿ ಅಪ್ಲಿಕೇಶನ್‌ಗಳಿಗೆ ನೀವು ನೀಡುವ ಅನುಮತಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಗೌಪ್ಯತೆ ಕಾಪಾಡುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಅಂದರೆ ನಿಮ್ಮ ಕ್ಯಾಮರಾ, ಲೊಕೇಶನ್ ಮತ್ತು ಮೈಕ್ರೊಫೋನ್‌ನಂತಹ ಸೂಕ್ಷ್ಮ ವೈಶಿಷ್ಟ್ಯಗಳನ್ನು ಅಪ್ಲಿಕೇಶನ್‌ಗಳು ಹೇಗೆ ಮತ್ತು ಯಾವಾಗ ಪ್ರವೇಶಿಸಬಹುದು ಎಂಬುದನ್ನು ನಿಯಂತ್ರಿಸುವುದಾಗಿದೆ.

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಅಪ್ಲಿಕೇಶನ್ ಅನುಮತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಮಾಹಿತಿ:

*ಅಪ್ಲಿಕೇಶನ್ ಬಳಸುವಾಗ ಮಾತ್ರ ಅನುಮತಿ ನೀಡುವುದು: ಕೆಲವು ಅಪ್ಲಿಕೇಶನ್‌ಗಳನ್ನು ನೀವು ಬಳಸುವಾಗ ಮಾತ್ರ ಸೆಟ್ಟಿಂಗ್‌ ನಲ್ಲಿ ನಿಮ್ಮ ಲೊಕೇಶನ್, ಕ್ಯಾಮೆರಾ ಮತ್ತು ಮೈಕ್ರೋಫೋನ್ ಪ್ರವೇಶಿಸಲು ಅನುಮತಿ ಕೇಳುವಂತೆ ನಿರ್ವಹಿಸಬೇಕು. ಆಗ ನೀವು ಸಕ್ರೀಯಾಗಿ ಅಪ್ಲಿಕೇಶನ್‌ ಬಳಸುವಾಗ ಮಾತ್ರ ಅನುಮತಿ ನೀಡುತ್ತವೆ.

ಪ್ರತಿ ಬಾರಿಯೂ ಕೇಳಿ: ನಿಮ್ಮ ಲೊಕೇಶನ್, ಕ್ಯಾಮರಾ ಅಥವಾ ಮೈಕ್ರೊಫೋನ್ ಪ್ರವೇಶಿಸಲು ಅಪ್ಲಿಕೇಶನ್ ಪ್ರತೀ ಬಾರಿ ಅನುಮತಿಗಾಗಿ ನಿಮ್ಮನ್ನು ಕೇಳುವಂತೆ ಸೆಟಿಂಗ್‌ ಮಾಡಿಕೊಳ್ಳಬೇಕು. ಹಾಗೂ ಅಪ್ಲಿಕೇಶನ್ ಬಳಸುವಾಗ ಮಾತ್ರ ಅವುಗಳನ್ನು ಮಾನ್ಯ ಮಾಡಬೇಕು.

ಅನುಮತಿಸಬೇಡಿ: ನಿಮ್ಮ ಲೊಕೇಶನ್, ಕ್ಯಾಮೆರಾ ಮತ್ತು ಮೈಕ್ರೋಫೋನ್ ಗಳನ್ನು ನೀವು ಬಳಸುತ್ತಿರುವಾಗಲೂ ಸಹ ಎಲ್ಲಾ ಸಮಯದಲ್ಲೂ ಅಪ್ಲಿಕೇಶನ್ ಪ್ರವೇಶವನ್ನು ನಿರಾಕರಿಸಬೇಕು. ಈ ಆಯ್ಕೆಗಳು ನಿಮ್ಮ ಗೌಪ್ಯತೆಯನ್ನು ಖಾತ್ರಿಪಡಿಸುವ ಮೂಲಕ ಸೂಕ್ಷ್ಮ ವೈಶಿಷ್ಟ್ಯಗಳನ್ನು ಅಪ್ಲಿಕೇಶನ್‌ಗಳು ಹೇಗೆ ಮತ್ತು ಯಾವಾಗ ಬಳಸಬಹುದು ಎಂಬುದನ್ನು ನಿರ್ಧರಿಸುವ ಶಕ್ತಿಯನ್ನು ನಿಮಗೆ ನೀಡುತ್ತದೆ.

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಅಪ್ಲಿಕೇಶನ್ ಅನುಮತಿಗಳನ್ನು ಬದಲಾಯಿಸುವುದು ಹೇಗೆ ?

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸೆಟ್ಟಿಂಗ್ಸ್ ಅಪ್ಲಿಕೇಶನ್ ಹುಡುಕಿ ಮತ್ತು ತೆರೆಯುವುದು. ನಿಮ್ಮ ಮೊಬೈಲ್‌ನಲ್ಲಿ ಅಪ್ಲಿಕೇಶನ್‌ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಮತ್ತು ನೀವು ಪರ್ಮಿಷನ್ ಹೊಂದಿಸಲು ಬಯಸುವ ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿ. ಅಪ್ಲಿಕೇಶನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಅನುಮತಿಗಳು ಆಯ್ಕೆ ಮಾಡಿ.

ಕ್ಯಾಮೆರಾ, ಕಾಂಟ್ಯಾಕ್ಟ್‌, ಲೊಕೇಶನ್ ಮತ್ತು ಮೈಕ್ರೊಫೋನ್‌ನಂತಹ ಅನುಮತಿ ಪ್ರಕಾರಗಳ ಪಟ್ಟಿಗೆ ಹೋಗಿ ನೀವು ಅಪ್‌ಡೇಟ್ ಮಾಡಲು ಬಯಸುವ ಅನುಮತಿಯನ್ನು ಆಯ್ಕೆ ಮಾಡಿ. ಅದರಲ್ಲಿ ಅಪ್ಲಿಕೇಶನ್ ಬಳಸುವಾಗ ಮಾತ್ರ ಅನುಮತಿಸಿ ಸೆಲೆಕ್ಟ್ ಮಾಡಿ, ಅನುಮತಿ ನೀಡಬೇಡಿ ಮತ್ತು ಪ್ರತಿ ಬಾರಿ ಕೇಳು ಇವುಗಳನ್ನು ಆಯ್ಕೆ ಮಾಡಿ.

ಅಪ್ಲಿಕೇಶನ್ ಪ್ರಕಾರವನ್ನು ಆಧರಿಸಿ ಅನುಮತಿಗಳನ್ನು ಬದಲಾಯಿಸುವುದು ಹೇಗೆ: ಅಪ್ಲಿಕೇಶನ್‌ಗಿಂತ ಅನುಮತಿಯ ಪ್ರಕಾರಗಳನ್ನು ಆಧರಿಸಿ ನೀವು ಅನುಮತಿಗಳನ್ನು ಸರಿ ಹೊಂದಿಸಿಕೊಳ್ಳಬಹುದು.

ಸೆಟ್ಟಿಂಗ್‌ ಅಪ್ಲಿಕೇಶನ್ ತೆರೆಯಿರಿ: ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ ಅಪ್ಲಿಕೇಶನ್ ತೆರೆಯಿರಿ.

ಗೌಪ್ಯತೆ ಸೆಟ್ಟಿಂಗ್‌ ನ್ಯಾವಿಗೇಟ್ ಮಾಡಿ: ನಿಮ್ಮ ಡಿವೈಸ್‌ನಲ್ಲಿ 'ಭದ್ರತೆ ಮತ್ತು ಗೌಪ್ಯತೆ' ಅಥವಾ ಗೌಪ್ಯತೆ ಸೆಲೆಕ್ಟ್ ಮಾಡಿ.

ಅನುಮತಿ ನಿರ್ವಾಹಕ: 'ಅನುಮತಿ ನಿರ್ವಾಹಕ' ಅಥವಾ 'ಅಪ್ಲಿಕೇಶನ್ ಅನುಮತಿಗಳು' ಆಯ್ಕೆಯನ್ನು ಟ್ಯಾಪ್ ಮಾಡಿ.

ಅನುಮತಿ ಪ್ರಕಾರವನ್ನು ಆಯ್ಕೆ ಮಾಡಿ: ನೀವು ನಿರ್ವಹಿಸಲು ಬಯಸುವ ಅನುಮತಿಯ ಪ್ರಕಾರಗಳನ್ನು (ಕ್ಯಾಮೆರಾ, ಸ್ಥಳ ಅಥವಾ ಮೈಕ್ರೊಫೋನ್) ಆಯ್ಕೆ ಮಾಡಿ.

ವೈಯಕ್ತಿಕ ಅಪ್ಲಿಕೇಶನ್‌ಗಳನ್ನು ಹೊಂದಿಸಿ: ಪ್ರಸ್ತುತ ಅನುಮತಿ ಸೆಟ್ಟಿಂಗ್‌ಗಳನ್ನು ವೀಕ್ಷಿಸಲು ಮತ್ತು ಮಾರ್ಪಡಿಸಲು ಅಪ್ಲಿಕೇಶನ್ ಆಯ್ಕೆ ಮಾಡಿ. 'ಅಪ್ಲಿಕೇಶನ್ ಬಳಸುವಾಗ ಮಾತ್ರ ಅನುಮತಿಸಿ', 'ಅನುಮತಿ ನೀಡಬೇಡಿ' ಮತ್ತು 'ಪ್ರತಿ ಬಾರಿ ಕೇಳು' ಇವುಗಳನ್ನು ಆಯ್ಕೆ ಮಾಡಿ.

ಅಪ್ಲಿಕೇಶನ್‌ನಲ್ಲಿ ಪರ್ಮಿಶನ್ ನಿರ್ವಹಿಸುವುದು ಏಕೆ ಮುಖ್ಯ:

ನಿಮ್ಮ ಡಿಜಿಟಲ್ ಗೌಪ್ಯತೆ ಕಾಪಾಡಿಕೊಳ್ಳಲು ಮತ್ತು ಅಕ್ರಮ ಪ್ರವೇಶದಿಂದ ನಿಮ್ಮ ವೈಯಕ್ತಿಕ ಮಾಹಿತಿ ರಕ್ಷಿಸಲು ಅಪ್ಲಿಕೇಶನ್ ಅನುಮತಿ ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಅಪ್ಲಿಕೇಶನ್‌ಗಳು ಹೇಗೆ ಮತ್ತು ಯಾವಾಗ ಸೂಕ್ಷ್ಮ ವೈಶಿಷ್ಟ್ಯಗಳನ್ನು ಪ್ರವೇಶಿಸಬಹುದು ಎಂಬುದನ್ನು ನಿಯಂತ್ರಿಸುವ ಮೂಲಕ ನೀವು ಆನ್‌ಲೈನ್ ಸ್ಕ್ಯಾಮ್‌ಗಳು ಮತ್ತು ಡೇಟಾ ಉಲ್ಲಂಘನೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಾಧನವು ಸುರಕ್ಷಿತವಾಗಿ ಉಳಿಯುತ್ತದೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರಲಿದೆ. ನೆನಪಿಡಿ ನಿಮ್ಮ ಡಿಜಿಟಲ್ ಗೌಪ್ಯತೆಗಳನ್ನು ರಕ್ಷಿಸುವುದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಅನುಮತಿಗಳನ್ನು ನಿಯಂತ್ರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

Best Mobiles in India

English summary
Adequately managing the permissions you give to Android apps on your device is one of the most effective tools you can use to protect your privacy. This means controlling how and when apps can access sensitive features like your camera, location, and microphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+