ಸ್ನೇಹಿತರಿಂದ ನಿಮ್ಮ ಕಂಪ್ಯೂಟರ್ ಸೇಫ್ ಮಾಡುವುದು ಹೇಗೆ?

ಏರ್ಟೆಲ್‌ನ ಹೊಸ ಹಾಡಿನಲ್ಲಿ ಹೇಳಿರುವಂತೆ ಇಂದಿನ ಯುವ ಮಂದಿ ನನ್ನದೆಲ್ಲಾ ನಿನ್ನದು ನಿನದೆಲ್ಲಾ ನನ್ನದು ಎಂಬಂತೆಯೇ ಸ್ನೇಹಿತರ ಪ್ರತಿಯೊಂದು ವಸ್ತಗಳನ್ನು ತಮ್ಮದೇ ಎನ್ನುವಂತೆ ಸರಾಗವಾಗಿ ಬಳಸಿಬಿಡುತ್ತಾರೆ. ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಕೆಲ ಪ್ರಮುಖ ಧಾಖಲೆಗಳನ್ನು ಇಟ್ಟಿರುತ್ತೀರಿ ಎಂದುಕೊಳ್ಳಿ ಉದಾಹರಣೆಗೆ ನಿಮ್ಮ ಕೆಲ ವೈಯುಕ್ತಿಕ ಧಾಖಲೆಗಳು, ಪಾಸ್ವರ್ಡ್‌ಗಳು, ವೈಯುಕ್ತಕ ಕೋಡ್‌ವರ್ಡ್‌ಗಳನ್ನು ಸೇವ್ ಮಾಡಿರುತ್ತೀರಿ ಎಂದುಕೊಳ್ಳಿ ಹೀಗಿದ್ದ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ಇದ್ದಕ್ಕಿದಂತೆ ಬಂದು ಕಂಪ್ಯೂಟರ್ ಬಳಸಬೇಕೆಂದಾಗ ಅವರಿಗೆ ನೀವೂ ನಿರಾಕರಿಸಲು ಸಾಧ್ಯವಾಗುವುದಿಲ್ಲ ಹಾಗಿದ್ದಲ್ಲಿ ಇಂತಹ ಸಂದರ್ಭಗಳಲ್ಲಿ ಮಾಡುವುದಾದರೂ ಏನು? ಅದಕ್ಕಾಗಿಯೇ ಇಂತಹ ಸಂದರ್ಭಗಳನ್ನು ಎದುರಿಸಲು ಸಲುವಾಗಿ ನಿಮ್ಮ ಕಂಪ್ಯೂಟರ್‌ನಲ್ಲಿನ ನಿಮ್ಮ ವೈಯುಕ್ತಿಕ ವಿಚಾರಗಳನ್ನು ಸುರಕ್ಷಿತವಾಗಿಡುವ ಸಲುವಾಗಿ ಕೆಲ ಸೆಟ್ಟಿಂಗ್ಸ್‌ಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ.
ಅದಕ್ಕಾಗಿಯೇ ಗಿಜ್ಬಾಟ್ ಇಂದು ನಿಮ್ಮ ಕಂಪ್ಯೂಟರ್‌ನ ವೈಯುಕ್ತಿಕ ಧಾಕಲೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತಾಗಿ ಸರಳ ವಿಧಾಬಗಳ ಕುರಿತಾಗಿ ತಂದಿದೆ ಒಮ್ಮೆ ಓದಿ ನೋಡಿ.
ಸೆಟ್‌ಅಪ್ ಪಾಸ್ವರ್ಡ್
ಯಾವಾಗಲೂ ನಿಮ್ಮ ಅಕೌಂಟ್‌ನಲ್ಲಿ ಪಾಸ್ವರ್ಡ್ ಸೆಟ್ ಮಾಡಿ ಇಡುವುದನ್ನು ಮರೆಯ ಬೇಡಿ. ಅಂದಹಾಗೆ ನಿಮ್ಮ ಕಂಪ್ಯೂಟರ್ ಅನ್ನು ಹೆಚ್ಚು ಜನ ಬಳಸುತ್ತಾರೆ ಎಂದಲ್ಲಿ ಪ್ರೈವೆಟ್ ಫೋಲ್ಡರ್ ಮಾಡಿ ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ಅದರಲ್ಲಿಟ್ಟು ಪಾಸ್ವರ್ಡ್ ನೀಡಿ ಸುರಕ್ಷಿತವಾಗಿಡಿ.
ಜಿಪ್ ಫೋಲ್ಡರ್
ನಿಮಗೆ ಬೇಕಾದಲ್ಲಿ ಡೆಸ್ಕ್‌ಟಾಪ್‌ನ ಮೇಲೆ ಜಿಪ್ ಫೋಲ್ಡ್‌ರ್ ಮಾಡಿ ರೈಟ್ ಕ್ಲಿಕ್ ಮಾಡಿ ಅದರಲ್ಲಿ ಪಾಸ್ವರ್ಡ್ ಸೆಟ್ ಮಾಡಿಕೊಳ್ಳ ಬಹುದಾಗಿದೆ.
ಹಿಸ್ಟರಿ ಹಿಡನ್ ಮಾಡಿ ಇಡಿ.
ನಿಮ್ಮ ಕಂಪ್ಯೂಟರ್‌ನಲ್ಲಿನ ಇಂಟರ್‌ನೆಟ್ ಹಿಸ್ಟರಿ ಯಾರಾದರು ನೋಡುವುದು ನಿಮಗೆ ಇಷ್ಟ ಇಲ್ಲದೆ ಇದ್ದಲ್ಲಿ, ಇದಕ್ಕಾಗಿ ನೀವು ಎರಡು ಮಾರ್ಗ ಅನುಸರಿಸ ಬಹುದಾಗಿದೆ. ಮೊದಲನೆಯದಾಗಿ ಹಿಸ್ಟರಿ ಆಪ್ಷನ್‌ಗೆ ತೆರಳಿ ಹಿಸ್ಟರಿ ಡಿಲೀಟ್ ಮಾಡಿಬಿಡಿ ಇಲ್ಲವೆ ಮತ್ತೊಂದು ಬ್ರೌಸರ್‌ನಲ್ಲಿ ಇಂಟರ್‌ನೆಟ್‌ನಲ್ಲಿನ ಹಿಸ್ಟರಿ ಆಪ್ಷನ್ ತೆರೆದು 0 ಹಿಸ್ಟರಿ ಮಾಡಿಬಿಡಿ.


Click it and Unblock the Notifications








