ಸೈಬರ್ ದಾಳಿಯಿಂದ ನಿಮ್ಮ ಡಿವೈಸ್‌ಗಳನ್ನು ಸೆಕ್ಯೂರ್‌ ಮಾಡುವುದು ಹೇಗೆ?

|

ಟೆಕ್ನಾಲಜಿ ಮುಂದುವರೆದಂತೆ ಹೆಚ್ಚಿನ ಕೆಲಸ ಕಾರ್ಯಗಳು ರಿಮೋಟ್ ವರ್ಕಿಂಗ್ ಮಾದರಿಯಲ್ಲಿ ನಡೆಯುತ್ತಿವೆ. ರಿಮೋಟ್‌ ವರ್ಕಿಂಗ್‌ಗಳು ಡೇಟಾ ಸರಪಳಿಗಳಲ್ಲಿ ಅನೇಕ ಅಂತಿಮ ಬಿಂದುಗಳನ್ನು ರಚಿಸಿವೆ. ಆದರೂ ಟೆಕ್ನಾಲಜಿ ಮುಂದುವರೆದ ಪರಿಣಾಮ ಸೈಬರ್ ದಾಳಿಕೋರರು ಕೂಡ ಸ್ಮಾರ್ಟ್‌ ಆಗುತ್ತಲೇ ಇದ್ದಾರೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸೈಬರ್‌ ಕ್ರೈಮ್‌ಗಳೇ ಸಾಕ್ಷಿ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೀಟಿ) ಪ್ರಕಾರ, ಆಗಸ್ಟ್ 2020 ರವರೆಗೆ, ಸುಮಾರು 7 ಲಕ್ಷ ಸೈಬರ್ ದಾಳಿಯನ್ನು ಭಾರತೀಯ ನಾಗರಿಕರು, ವಾಣಿಜ್ಯ ಮತ್ತು ಕಾನೂನು ಘಟಕಗಳು ಎದುರಿಸುತ್ತಿರುವುದು ಆಶ್ಚರ್ಯವೇನಿಲ್ಲ.

ಹ್ಯಾಕರ್‌

ಹೌದು, ಸೈಬರ್‌ ಹ್ಯಾಕರ್‌ಗಳು ಕೂಡ ಸಾಕಷ್ಟು ಸ್ಮಾರ್ಟ್‌ ಆಗುತ್ತಿದ್ದಾರೆ. ನಾವು ಎಷ್ಟೇ ಸುರಕ್ಷತೆ ಕ್ರಮಗಳನ್ನು ಅನುಸರಿಸಿದರೂ ಸಹ ಹ್ಯಾಕಿಂಗ್‌ ಅನ್ನೊದು ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಆಗಿ ಬಿಟ್ಟಿದೆ. ಆದರೂ ನಿಮ್ಮ ಡಿವೈಸ್‌ಗಳಲ್ಲಿ ಕೆಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಡಿವೈಸ್‌ಗಳು ಹ್ಯಾಕ್‌ ಆಗುವುದನ್ನು ತಪ್ಪಿಸಬಹುದಾಗಿದೆ. ಹಾಗಾದ್ರೆ ನಿಮ್ಮ ಡಿವೈಸ್‌ಗಳನ್ನು ಸೈಬರ್‌ ಅಟ್ಯಾಕ್‌ನಿಂದ ಕಾಪಾಡಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹ್ಯಾಕರ್‌ಗಳು

ಸೈಬರ್‌ ಹ್ಯಾಕರ್‌ಗಳು ಮತ್ತು ಸೈಬರ್-ಅಪರಾಧಿಗಳು ಯಾವಾಗಲೂ ಹ್ಯಾಕ್‌ ಮಾಡುವುದಕ್ಕೆ ಹೊಸ ವಿಧಾನಗಳನ್ನು ಹುಡುಕುತ್ತಿರುತ್ತಾರೆ. ಅವುಗಳಲ್ಲಿ ಒಂದು ಕಂಪ್ಯೂಟರ್‌ ಆಪರೇಟಿಂಗ್ ಸಿಸ್ಟಮ್‌ಗಿಂತ ಕೆಳಗಿರುತ್ತದೆ. ಕಡಿಮೆ ಮಟ್ಟದ ದಾಳಿಗಳು ಸಾಮಾನ್ಯವಾಗಿ ದುರ್ಬಲ ಸಿಸ್ಟಮ್ ಕಾನ್ಫಿಗರೇಶನ್‌ಗಳು ಮತ್ತು ಫರ್ಮ್‌ವೇರ್ ದೋಷಗಳ ಲಾಭವನ್ನು ಪಡೆದುಕೊಳ್ಳುತ್ತವೆ. ಈ ಅನೇಕ ದಾಳಿಗಳು ransomware ನಂತೆ ಸಂವೇದನಾಶೀಲವಾಗಿಲ್ಲದಿದ್ದರೂ, ಅವು ಇನ್ನಷ್ಟು ವಿನಾಶಕಾರಿಯಾಗಬಹುದು. ಆದರಿಂದ ಸೈಬರ್ ಸುರಕ್ಷತೆಗಾಗಿ ನೀವು ಅನುಸರಿಸಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ ತಿಳಿಯಿರಿ.

ಪ್ರೊಟೆಕ್ಟ್ ಡಿವೈಸ್‌ ಆಪರೇಟಿಂಗ್ ಸಿಸ್ಟಮ್ (ಓಸ್)

ಪ್ರೊಟೆಕ್ಟ್ ಡಿವೈಸ್‌ ಆಪರೇಟಿಂಗ್ ಸಿಸ್ಟಮ್ (ಓಸ್)

ಹ್ಯಾಕಿಂಗ್‌ ಬೆದರಿಕೆಗಳನ್ನು ತಡೆಗಟ್ಟಲು ಪಿಸಿ ಬಯೋಸ್ ಮಟ್ಟದಲ್ಲಿ ಓಎಸ್‌ಗಿಂತ ಕೆಳಗಿರುವ ರಕ್ಷಣೆ ಮತ್ತು ಪತ್ತೆ ಸಾಮರ್ಥ್ಯಗಳನ್ನು ಹೊಂದಿರುವ ಸಾಧನಗಳನ್ನು ಸಹ ನೀವು ಆರಿಸಬೇಕು. ಪಿಸಿ ಬಯೋಸ್ ಪಿಸಿಯ ಡೆಪ್ತ್‌ನಲ್ಲಿರುತ್ತದೆ. ಇದು ಪಿಸಿಯನ್ನು ಬೂಟ್ ಮಾಡುವಂತಹ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುತ್ತದೆ.

ಪಿಸಿಕಲ್‌ ಸೆಕ್ಯುರಿಟಿ

ಪಿಸಿಕಲ್‌ ಸೆಕ್ಯುರಿಟಿ

ಸಾಧನದ ಭೌತಿಕ ರಕ್ಷಣೆಯು ಡಿವೈಸ್‌ ಮೇಲೆ ಮತ್ತು ಒಳಗೆ ಸೈಬರ್‌ ಸುರಕ್ಷತೆಯನ್ನು ನಿಯೋಜಿಸಿದಷ್ಟೇ ಮುಖ್ಯವಾಗಿದೆ. ನೀವು ಕೆಲಸ ಮಾಡಲು ಪಬ್ಲಿಕ್‌ ಪ್ಲೆಸ್‌ಗಳನ್ನು ಬಳಸುತ್ತಿದ್ದರೆ, ಗೌಪ್ಯತೆ ಗುರಾಣಿಯನ್ನು ಬಳಸಲು ಮರೆಯದಿರಿ. ಆದ್ದರಿಂದ ನಿಮ್ಮ ಡೇಟಾವನ್ನು ಹ್ಯಾಕರ್‌ಗಳಿಂದ ರಕ್ಷಿಸಲಾಗುತ್ತದೆ. ಅಲ್ಲದೆ, ಚಾಸಿಸ್ ಒಳನುಗ್ಗುವಿಕೆ ಪತ್ತೆ ಸಾಧನಗಳನ್ನು ಸಕ್ರಿಯಗೊಳಿಸುವುದರಿಂದ ಬಳಕೆದಾರರಿಗೆ ಸೂಚಿಸಲಾಗುತ್ತದೆ. ಸಾಧನದ ಯಾವುದೇ ಭೌತಿಕ ಅವಘಡಗಳು ಸಂಭವಿಸಿದಲ್ಲಿ ಸಿಸ್ಟಮ್ ನಿರ್ವಾಹಕರಿಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ.

ಪಾಸ್ವರ್ಡ್-ಪ್ಲಸ್

ಪಾಸ್ವರ್ಡ್-ಪ್ಲಸ್

ಬಯೋಮೆಟ್ರಿಕ್ಸ್‌ನೊಂದಿಗೆ ಪಾಸ್‌ವರ್ಡ್‌ಗಳನ್ನು ಸೇರಿಸುವುದು ಉತ್ತಮ. ಮಲ್ಟಿಫ್ಯಾಕ್ಟರ್ ದೃಡೀಕರಣವನ್ನು ಕಾರ್ಯಗತಗೊಳಿಸಿ ಮತ್ತು ಬಲವಾದ ರಕ್ಷಣೆಗಾಗಿ ಡಿಜಿಟಲ್ ಪ್ರಮಾಣಪತ್ರಗಳನ್ನು ಬಳಸಿಕೊಳ್ಳಿ. ಇದರಿಂದ ಫಿಂಗರ್‌ಪ್ರಿಂಟ್ ಮತ್ತು ಮುಖದ ಗುರುತಿಸುವಿಕೆಯಂತಹ ಬಯೋಮೆಟ್ರಿಕ್‌ಗಳನ್ನು ಅಳವಡಿಸಿಕೊಳ್ಳಲು ಸುಲಭವಾಗಿಸುತ್ತದೆ. ಸ್ಟ್ರಾಂಗ್‌ ಪಾಸ್‌ವರ್ಡ್‌ಗಳನ್ನು ರಚಿಸಲು ಪಾಸ್‌ವರ್ಡ್ ಮ್ಯಾನೇಜರ್‌ ಬಳಸುವುದನ್ನು ಪರಿಗಣಿಸುವುದು ಸೂಕ್ತವಾಗಿರಲಿದೆ.

ಸ್ಮಾರ್ಟ್ ಸೆಕ್ಯುರಿಟಿ ಅಭ್ಯಾಸ

ಸ್ಮಾರ್ಟ್ ಸೆಕ್ಯುರಿಟಿ ಅಭ್ಯಾಸ

ಮನೆಯಲ್ಲಿಯೇ ಕಾರ್ಯನಿರ್ವಹಿಸುವವರಿಗೆ ಇದು ಮುಖ್ಯವಾಗಿದೆ. ವರ್ಕ ಫ್ರಂ ಹೋಮ್‌ ನೀಡಿರುವ ಸಂಸ್ಥೆಗಳು ನೌಕರರಿಗೆ ಭದ್ರತಾ ತರಬೇತಿ ಕಾರ್ಯಕ್ರಮವನ್ನು ಜಾರಿಗೊಳಿಸಿ ಮತ್ತು ನೌಕರರ ಕೌಶಲ್ಯಗಳನ್ನು ತೀಕ್ಷ್ಣವಾಗಿಡಲು ಟೆಸ್ಟ್ ಫಿಶಿಂಗ್ ಇಮೇಲ್‌ಗಳನ್ನು ಕಳುಹಿಸುವಂತಹ ನಿಯಮಿತ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇದರಿಂದ ಸೈಬರ್‌ ಹ್ಯಾಕ್‌ನಂತಹ ದಾಳಿಗಳನ್ನು ತಡೆಗಟ್ಟುವುದು ಸುಲಭವಾಗಲಿದೆ.

Best Mobiles in India

English summary
Hackers and cyber-criminals are always on the look for new methods of entry, one of which is below the PC operating system.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X