ಸ್ಮಾರ್ಟ್‌ಟಿವಿಗಳು ಹ್ಯಾಕ್‌ ಆಗದಂತೆ ಎಚ್ಚರವಹಿಸಲು ಈ ಕ್ರಮ ಅನುಸರಿಸಿ!

|

ಟೆಕ್ನಾಲಜಿ ಮುಂದುವರೆದಂತೆ ಟಿವಿಗಳ ವಿನ್ಯಾಸ ಸಾಕಷ್ಟು ಬದಲಾಗಿದೆ. ಸಾಮಾನ್ಯ ಟಿವಿಗಳ ಜಾಗದಲ್ಲಿ ಸ್ಮಾರ್ಟ್‌ಟಿವಿಗಳು ಇಂದು ರಾರಾಜಿಸುತ್ತಿವೆ. ಮಲ್ಟಿ ಟಾಸ್ಕ್‌ ಫಂಕ್ಷನ್‌ ಹೊಂದಿರುವ ಈ ಸ್ಮಾರ್ಟ್‌ಟಿವಿಗಳು ಕೇವಲ ಕಾರ್ಯಕ್ರಮ ವಿಕ್ಷಣೆ ಮಾತ್ರವಲ್ಲ ಇತರೆ ಕಾರ್ಯಗಳನ್ನು ಮಾಡುತ್ತವೆ. ಇನ್ನು ಈಗಿನ ಸ್ಮಾರ್ಟ್‌ಟಿವಿಗಳು ಸ್ಮಾರ್ಟ್‌ ಅಸಿಸ್ಟೆಂಟ್‌ನಿಂದ ಹಿಡಿದು ಒಟಿಟಿ ಪ್ಲಾಟ್‌ಫಾರ್ಮ್‌ಗಳ ತನಕ ಬೆಂಬಲವನ್ನು ನೀಡಲಿವೆ. ಇಂಟರ್‌ನೆಟ್‌ ಬೆಂಬಲದೊಂದಿಗೆ ಹಲವು ಕಾರ್ಯಗಳನ್ನು ಸಹ ನಿರ್ವಹಿಸಲಿದೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿಗಳ ಮೂಲಕ ಟಿವಿ ನೋಡುವ ಕಲ್ಪನೆಯ ಬದಲಾಗಿ ಹೊಗಿದೆ. ಸ್ಮಾರ್ಟ್‌ಟಿವಿ ನಿಮಗೆ ಮನರಂಜನೆ ಮಾತ್ರವಲ್ಲ ನಿಮ್ಮ ಮನೆಯ ಕಾವಲು ಕೆಲಸವನ್ನು ಮಾಡಬಲ್ಲದು. ಗೂಗಲ್‌ ಅಸಿಸ್ಟೆಂಟ್‌ ಮೂಲಕ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸವನ್ನು ನಿರ್ವಹಿಸಬಲ್ಲದು. ಹೀಗೆ ಸ್ಮಾರ್ಟ್‌ಟಿವಿಗಳು ಸ್ಮಾರ್ಟ್‌ ಆದಂತೆ ಹ್ಯಾಕರ್‌ಗಳ ದಾಳಿಗೂ ಕೂಡ ಬಲಿಯಾಗುತ್ತಿವೆ. ಸ್ಮಾರ್ಟ್‌ಟಿವಿಗಳನ್ನು ಹ್ಯಾಕ್‌ ಮಾಡುವ ಖದೀಮರು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಟಿವಿ ಹ್ಯಾಕ್‌ ಆಗದಂತೆ ನೋಡಿಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಟಿವಿ

ಸ್ಮಾರ್ಟ್‌ಟಿವಿಗಳನ್ನು ಹ್ಯಾಕ್‌ ಮಾಡಲು ಸಾಧ್ಯವೆ? ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಿಜ ನಿಮ್ಮ ಮನೆಯ ಸ್ಮಾರ್ಟ್‌ಟಿವಿಗಳನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದು. ಈ ಮೂಲಕ ನಿಮ್ಮ ಖಾಸಗಿ ವಿಚಾರಗಳನ್ನು ಕದಿಯುವ ಪ್ರಯತ್ನ ಕೂಡ ನಡೆಯಬಹುದು. ಅದರಲ್ಲೂ NordNPN ಸಮೀಕ್ಷೆಯ ಪ್ರಕಾರ, ಸುಮಾರು 60% ಜನರು ಸ್ಮಾರ್ಟ್ ಟಿವಿಗಳನ್ನು ಹೊಂದಿದ್ದಾರೆ. ಇದರಲ್ಲಿ 4 ರಲ್ಲಿ 1 ಮಂದಿ ಸ್ಮಾರ್ಟ್‌ಟಿವಿಗಳು ಮಾಲ್‌ವೇರ್‌ ದಾಳಿಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಟಿವಿ

ಸ್ಮಾರ್ಟ್‌ಟಿವಿಗಳು ನಿಯಮಿತವಾಗಿ ಇಂಟರ್‌ನೆಟ್‌ ಸಂಪರ್ಕವನ್ನು ಹೊಂದಿರಲೇಬೇಕು. ಹೀಗೆ ಇಂಟರ್‌ನೆಟ್‌ ಕನೆಕ್ಟಿವಿಟಿ ಹೊಂದಿರುವ ನಿಮ್ಮ ಸ್ಮಾರ್ಟ್ ಟಿವಿಗಳು ಸಾಕಷ್ಟು ಖಾಸಗಿ ಡೇಟಾವನ್ನು ಸಂಗ್ರಹಿಸುತ್ತವೆ. ಇದು ವಿವಿಧ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಕಾರಣವಾಗುತ್ತದೆ. ಆದರೆ, ಇತರ ಸ್ಮಾರ್ಟ್ ಡಿವೈಸ್‌ಗಳಂತೆ ಸ್ಮಾರ್ಟ್‌ಟಿವಿಗಳು ಯಾವುದೇ ರೀತಿಯ ಸೈಬರ್ ಸೆಕ್ಯುರಿಟಿ ಸಾಫ್ಟ್‌ವೇರ್ ಹೊಂದಲು ಸಾಧ್ಯವಿಲ್ಲ. ಆದರೆ ನೀವು ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಟಿವಿ ಹ್ಯಾಕ್‌ ಆಗದಂತೆ ಕಾಪಾಡಬಹುದು.

ಕ್ಯಾಮೆರಾ

ಸ್ಮಾರ್ಟ್‌ಟಿವಿಗಳಲ್ಲಿ ಕ್ಯಾಮೆರಾ ಇಲ್ಲವೇ ಮೈಕ್ರೋಫೋನ್‌ಗಳ ಮೂಲಕ ಮಾಲ್‌ವೇರ್ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸ್ಮಾರ್ಟ್‌ಟಿವಿ ವೈಫೈಗೆ ಸಂಪರ್ಕ ಹ್ಯಾಕರ್ಗಳು ಹ್ಯಾಕ್‌ ಮಾಡಲು ಸುಲಭವಾಗಲಿದೆ. ಇನ್ನು ಸ್ಮಾರ್ಟ್‌ಟಿವಿಗಳನ್ನು ಹ್ಯಾಕರ್‌ಗಳು ಟ್ರ್ಯಾಕಿಂಗ್ ಕೂಡ ಮಾಡಬಹುದು. ಸ್ಮಾರ್ಟ್‌ಫೋನ್‌ ಮಾದರಿಯಲ್ಲಿಯೇ ಸ್ಮಾರ್ಟ್ ಟಿವಿಗಳು ಕೂಡ ಬಹಳಷ್ಟು ಟ್ರ್ಯಾಕರ್‌ಗಳನ್ನು ಬಳಸುತ್ತವೆ. ನೆಟ್‌ಫ್ಲಿಕ್ಸ್, ನಂತಹ ಸೇವೆಗಳು ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತವೆ. ಇವುಗಳನ್ನು ಹ್ಯಾಕರ್‌ಗಳು ಕದಿಯಬಹುದಾಗಿದೆ.

ಫೈರ್‌ವಾಲ್

ಇದಲ್ಲದೆ ವೆಬ್ ಬ್ರೌಸಿಂಗ್‌ಗಾಗಿ ಸ್ಮಾರ್ಟ್ ಟಿವಿಯನ್ನು ಬಳಸುತ್ತಿದ್ದರೆ, ಅದು ವಿವಿಧ ವೈರಸ್‌ಗಳಿಂದ ಕೂಡ ಸೋಂಕಿಗೆ ಒಳಗಾಗಬಹುದು. ಕಂಪ್ಯೂಟರ್‌ಗಳಂತೆ, ಸ್ಮಾರ್ಟ್ ಟಿವಿಗಳು ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ, ಆದರೆ ಇವುಗಳು ಯಾವುದೇ ರೀತಿಯ ಆಂಟಿವೈರಸ್ ಮತ್ತು ಫೈರ್‌ವಾಲ್ ವ್ಯವಸ್ಥೆಯನ್ನು ಹೊಂದಿಲ್ಲ. ಟಿವಿಗೆ ಸೋಂಕು ತಗುಲಿದ ನಂತರ, ಬ್ರೌಸಿಂಗ್ ಹಿಸ್ಟರಿ, ಪಾಸ್‌ವರ್ಡ್‌ಗಳು ಮತ್ತು ಇತರ ಖಾಸಗಿ ಡೇಟಾ ಹ್ಯಾಕರ್‌ಗಳಿಗೆ ಲಭ್ಯವಾಗುತ್ತದೆ. ಈ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವ ಸಾದ್ಯತೆ ಇದೆ.

ಪಾಸ್‌ವರ್ಡ್‌

ಇನ್ನು ನೀವು ನಿಮ್ಮ ಸ್ಮಾರ್ಟ್ ಟಿವಿಯನ್ನು ಸೆಕ್ಯುರ್‌ ಮಾಡುವುದಕ್ಕೆ ಸ್ಟ್ರಾಗ್‌ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡುವುದು ಉತ್ತಮ. ನೀವು ಸ್ಮಾರ್ಟ್‌ಟಿವಿಯಲ್ಲಿ ಬಳಸುವ ಅಪ್ಲಿಕೇಶನ್‌ಗಳಿಗೆ ಪಾಸ್‌ವರ್ಡ್‌ ಹೊಂದಿಸುವುದು ಉತ್ತಮ. ಇದಲ್ಲದೆ ನಿಮ್ಮ ಟಿವಿಯ ಸಾಫ್ಟ್‌ವೇರ್ ಅನ್ನು ಯಾವಾಗಲೂ ಅಪ್‌ಡೇಟ್ ಮಾಡುವುದು ಕೂಡ ಉತ್ತಮ ಅಭ್ಯಾಸ. ಇನ್ನು ನೀವು ನಿಮ್ಮ ರೂಟರ್ ಅನ್ನು ಸುರಕ್ಷಿತಗೊಳಿಸುವುದರಿಂದ ಹ್ಯಾಕರ್‌ಗಳು ನಿಮ್ಮನ್ನು ಹ್ಯಾಕ್‌ ಮಾಡದಂತೆ ಎಚ್ಚರ ವಹಿಸಬಹುದು. ಇದಲ್ಲದೆ ಯಾವುದೇ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ನಿಮ್ಮ ರೂಟರ್‌ಗಾಗಿ ನೀವು VPN ಅನ್ನು ಸಕ್ರಿಯಗೊಳಿಸಬಹುದು. ಇದು ಅಂತರ್ನಿರ್ಮಿತ ಕ್ಯಾಮರಾ ಆಗಿರಲಿ ಅಥವಾ ಟಿವಿಗೆ ವೈ-ಫೈ ಮೂಲಕ ಸಂಪರ್ಕಗೊಂಡಿರಲಿ, ಅದನ್ನು ಬಳಸದಿದ್ದಾಗ ಆಫ್ ಮಾಡಿದರೆ ಉತ್ತಮ.

Best Mobiles in India

English summary
Hackers can access a smart TV's camera and microphone through malware.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X