India

ಗೂಗಲ್‌ ಪೇ, ಫೋನ್‌ಪೇ ಮೂಲಕ ಫಾಸ್ಟ್ಯಾಗ್‌ ಅನ್ನು ರೀಚಾರ್ಜ್‌ ಮಾಡಿಸುವುದು ಹೇಗೆ?

|

ಈಗಾಗಲೇ ಕೇಂದ್ರ ಸರ್ಕಾರವು ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್‌ಗಳಲ್ಲಿ ಚಾಲಕರಿಗೆ ಸರದಿಯಲ್ಲಿ ಕಾಯದೆ ತಕ್ಷಣ ಹಣವನ್ನು ಪಾವತಿಸಲು ಫಾಸ್ಟ್ಯಾಗ್‌ ಅನ್ನು ಪರಿಚಯಿಸಿದೆ. ಈ ಮೂಲಕ ತನ್ನ ಡಿಜಿಟಲೀಕರಣ ವ್ಯವಸ್ಥೆಯನ್ನ ಟೋಲ್‌ ಗೇಟ್‌ಗಳಲ್ಲೂ ಪರಿಚಯಿಸಿದೆ. ಆದರೂ ಇನ್ನು ಕೂಡ ಕೆಲವು ವಾಹನ ಚಾಲಕರು ಫಸ್ಟ್ಯಾಗ್‌ ಅನ್ನು ಬಳಸುತ್ತಿಲ್ಲ. ಇದೇ ಕಾರಣಕ್ಕೆ ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ 2021 ರ ಜನವರಿ 1 ರ ಒಳಗೆ ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್‌ ಅನ್ನು ಹೊಂದಿರಬೇಕು ಎಂದು ಘೋಷಿಸಿದ್ದಾರೆ.

ಫಾಸ್ಟ್ಯಾಗ್

ಹೌದು, ಕೇಂದ್ರ ಸರ್ಕಾರ ಜನವರಿ 1, 2021 ರಿಂದು ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್‌ ಹೊಂದಿರಬೇಕು ಎಂದು ಘೋಷಿಸಿದೆ. ಇದೀಗ ನೀವು ಕಡ್ಡಾಯವಾಗಿ ಫಾಸ್ಟ್ಯಾಗ್ ಅನ್ನು ಪಡೆಯಲೇಬೇಕಾಗಿದೆ. ನೀವು ಫಾಸ್ಟ್ಯಾಗ್ ಅನ್ನು ಪಡೆದು ನಿಮ್ಮ ವಾಹನದ ವಿಂಡ್ ಸ್ಕ್ರೀನ್‌ಗೆ ಅಂಟಿಸಿದ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಗೇಟ್‌ಗಳಲ್ಲಿ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಸಾಧ್ಯವಾಗುತ್ತದೆ. ದ್ವಿಚಕ್ರ ಹೊರತುಪಡಿಸಿ ತ್ರಿಚಕ್ರ, ಕಾರ್‌, ಲಾರಿ ಸೇರಿ ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಅಳವಡಿಕೆ ಮಾಡಬೇಕಿದೆ. ಈಗಾಗಲೇ, ಫಾಸ್ಟ್ಯಾಗ್ 20 ಕ್ಕೂ ಹೆಚ್ಚು ಬ್ಯಾಂಕುಗಳೊಂದಿಗೆ ಕೈಜೋಡಿಸಿದೆ. ಇದನ್ನು ಬ್ಯಾಂಕುಗಳು, ಯುಪಿಐ ಅಥವಾ ಇ-ವ್ಯಾಲೆಟ್‌ಗಳ ಮೂಲಕ ಮಾಡಬಹುದು. Google Pay, PhonePe, ಮತ್ತು BHIM UPI ಯಿಂದ FASTag ಅನ್ನು ರೀಚಾರ್ಜ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಾಸ್ಟ್ಯಾಗ್

ಟೋಲ್ ಪ್ಲಾಜಾಗಳಲ್ಲಿನ ಚಾಲಕರಿಗೆ ಸರದಿಯಲ್ಲಿ ಕಾಯದೆ ತಕ್ಷಣ ಹಣವನ್ನು ಪಾವತಿಸಲು ಫಾಸ್ಟ್ಯಾಗ್ ಸಹಾಯ ಮಾಡುತ್ತದೆ. ಅವರು ನೇರವಾಗಿ ಬ್ಯಾಂಕಿನಿಂದ ಹಣವನ್ನು ಪಾವತಿಸುವ ಮೂಲಕ ಇದನ್ನು ಮಾಡಬಹುದು. ಯಾವುದೇ ವಾಹನದ ಮಾಲಿಕ ತನ್ನ ಬ್ಯಾಂಕ್‌ ಖಾತೆ ಇರುವುದಕ್ಕೆ ಫಾಸ್ಟ್ಯಾಗ್ ಲಿಂಕ್‌ ಮಾಡಿಸಬಹುದಾಗಿದೆ. ಇಲ್ಲವೇ ಪ್ರತ್ಯೇಕ ಹಣ ಜಮೆ ಮಾಡಿಕೊಳ್ಳಬಹುದು. ಅಲ್ಲದೆ Google Pay, PhonePe, ಮತ್ತು BHIM UPI ಮೂಲಕ FASTag ಅನ್ನು ರೀಚಾರ್ಜ್‌ ಮಾಡಬಹುದಾಗಿದ್ದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಸಿರಿ.

PhonePe ಬಳಸಿ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

PhonePe ಬಳಸಿ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

ಹಂತ:1 PhonePe ಅಪ್ಲಿಕೇಶನ್ ತೆರೆಯಿರಿ ಮತ್ತು FASTag ಐಕಾನ್ ಕ್ಲಿಕ್ ಮಾಡಿ.
ಹಂತ:2 ವಿತರಿಸುವ ಬ್ಯಾಂಕುಗಳ ಪಟ್ಟಿಯಿಂದ, ನಿಮ್ಮ ಫಾಸ್ಟ್ಯಾಗ್ ನೀಡುವ ಬ್ಯಾಂಕ್ ಅನ್ನು ಆರಿಸಿ.
ಹಂತ:3 ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ.
ಹಂತ:4 ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ಪಾವತಿ ಮಾಡಿ.

Google Pay ಬಳಸಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

Google Pay ಬಳಸಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

ಹಂತ:1 Google Pay ತೆರೆಯಿರಿ ಮತ್ತು ಹೊಸದನ್ನು ಆರಿಸಿ.
ಹಂತ:2 ಮೆನುವಿನಿಂದ, ಇನ್ನಷ್ಟು ಕ್ಲಿಕ್ ಮಾಡಿ ಮತ್ತು ಫಾಸ್ಟ್ಯಾಗ್ ರೀಚಾರ್ಜ್ ಆಯ್ಕೆಮಾಡಿ.
ಹಂತ:3 ನಿಮ್ಮ ಫಾಸ್ಟ್ಯಾಗ್ ನೀಡುವ ಬ್ಯಾಂಕ್ ಅನ್ನು ಆರಿಸಿ.
ಹಂತ:4 ಎಲ್ಲಾ ವಿವರಗಳನ್ನು ಒದಗಿಸುವ ಮೂಲಕ ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಿ ಮತ್ತು ಪಾವತಿ ಮಾಡಿ.

BHIM ಬಳಸಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

BHIM ಬಳಸಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

ಹಂತ:1 BHIM ಅಪ್ಲಿಕೇಶನ್ ತೆರೆಯಿರಿ ಮತ್ತು ಮುಖಪುಟ ಪರದೆಯಿಂದ ಕಳುಹಿಸು ಆಯ್ಕೆಮಾಡಿ.
ಹಂತ:2 NETC FASTag UPI ID ಅನ್ನು ನಮೂದಿಸಿ.
ಹಂತ:3 ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ರೀಚಾರ್ಜ್ ಮೊತ್ತ ಮತ್ತು ಪಿನ್ ಅನ್ನು ನಮೂದಿಸಿ.

ಈ ಎಲ್ಲಾ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಫಾಸ್ಟ್‌ಟ್ಯಾಗ್ ಅನ್ನು ತಕ್ಷಣ ರೀಚಾರ್ಜ್ ಮಾಡಬಹುದು ಮತ್ತು ಟೋಲ್ ಪ್ಲಾಜಾಗಳ ಮೂಲಕ ಅನುಕೂಲಕರವಾಗಿ ಪ್ರಯಾಣಿಸಬಹುದು.

Most Read Articles
Best Mobiles in India

English summary
Union transport minister Nitin Gadkari announced that all vehicles in India should have FASTags from January 1, 2021 onwards.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X