ಅಮೆಜಾನ್‌ ಪೇ ಬಳಸಿ ನಿಮ್ಮ ಮೊಬೈಲ್‌ ರೀಚಾರ್ಜ್‌ ಮಾಡುವುದು ಹೇಗೆ ಗೊತ್ತಾ?

|

ಭಾರತದಲ್ಲಿ ಆನ್‌ಲೈನ್‌ ಮಾರುಕಟ್ಟೆಯಾಗಿ ಪ್ರವೇಶ ನೀಡಿದ್ದ ಅಮೆಜಾನ್‌ ಇಂದು ಹಲವು ಸೇವೆಗಳನ್ನು ನೀಡುತ್ತಿದೆ. ಜನಪ್ರಿಯ ಇ-ಕಾಮರ್ಸ್‌ ಸೈಟ್‌ ಆಗಿ ಗುರುತಿಸಿಕೊಂಡಿರುವ ಅಮೆಜಾನ್‌, ವೀಡಿಯೊ ಸ್ಟ್ರೀಮಿಂಗ್‌ ಸೇವೆಯನ್ನು ಸಹ ನೀಡುತ್ತಿದೆ. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಅಮೆಜಾನ್‌ ಆನ್‌ಲೈನ್‌ ಫುಡ್‌ ಡೆಲಿವರಿ ಸೇವೆಯನ್ನು ಸಹ ನೀಡಲು ಪ್ರಾರಂಭಿಸಿದೆ. ಇದರ ಜೊತೆಗೆ ಈಗಾಗಲೇ ಭಾರತದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಯುಪಿಐ ಪಾವತಿಯನ್ನು ಸಹ ನೀಡುವುದಕ್ಕಾಗಿ ಅಮೆಜಾನ್‌ ಪೇ ಪರಿಚಯಿಸಿದೆ.

ಅಮೆಜಾನ್

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್‌ ಈಗ ಹಲವಾರು ಸೇವೆಗಳನ್ನು ಒದಗಿಸುತ್ತದೆ. ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು, ಫ್ಲೈಟ್ ಟಿಕೆಟ್‌ಗಳನ್ನು ಕಾಯ್ದಿರಿಸಲು, ಚಲನಚಿತ್ರ ಟಿಕೆಟ್‌ಗಳನ್ನು ಖರೀದಿಸಲು, ಗೋಲ್ಡ್‌ ಖರೀದಿಸಲು ಮತ್ತು ಮಾರಾಟ ಮಾಡಲು ಮತ್ತು ವಾಹನ ವಿಮೆಯನ್ನು ಖರೀದಿಸಲು ಸಹ ಇದು ನಿಮಗೆ ಅವಕಾಶ ನೀಡಲಿದೆ. ಇದಲ್ಲದೆ ಬಳಕೆದಾರರು ಅಮೆಜಾನ್ ಅಪ್ಲಿಕೇಶನ್‌ನಲ್ಲಿ ಅಮೆಜಾನ್ ಪೇ ಮೂಲಕ ಮೊಬೈಲ್‌ ರೀಚಾರ್ಜ್‌ ಮಾಡಬಹುದು. ಹಾಗಾದ್ರೆ ಅಮೆಜಾನ್‌ ಪೇ ನಲ್ಲಿ ಮೊಬೈಲ್‌ ರೀಚಾರ್ಜ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಪ್ಲಿಕೇಶನ್

ಇ-ಕಾಮರ್ಸ್ ಅಪ್ಲಿಕೇಶನ್ ಅಮೆಜಾನ್‌ ದೇಶದ ಎಲ್ಲಾ ಪ್ರಮುಖ ಟೆಲಿಕಾಂಗಳಿಂದ ಯೋಜನೆಗಳು ಮತ್ತು ಸೇವೆಗಳನ್ನು ರೀಚಾರ್ಜ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಏರ್‌ಟೆಲ್, ಬಿಎಸ್‌ಎನ್‌ಎಲ್, ಜಿಯೋ, ಎಂಟಿಎನ್‌ಎಲ್, ಮತ್ತು ವಿ (ವೊಡಾಫೋನ್ ಐಡಿಯಾ) ಚಂದಾದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಮೆಜಾನ್ ಮೂಲಕ ರೀಚಾರ್ಜ್ ಮಾಡಬಹುದು. ಅಮೆಜಾನ್‌ ಪೇ ನಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮೂಲಕ ಮೊಬೈಲ್ ರೀಚಾರ್ಜ್‌ಗಳನ್ನು ಸಹ ಮಾಡಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಯುಪಿಐ ಮೂಲಕ ಅಮೆಜಾನ್ ಅಪ್ಲಿಕೇಶನ್‌ನಲ್ಲಿ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ?

ಯುಪಿಐ ಮೂಲಕ ಅಮೆಜಾನ್ ಅಪ್ಲಿಕೇಶನ್‌ನಲ್ಲಿ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ?

ಹಂತ:1 ಅಮೆಜಾನ್ ಪೇ ಆಯ್ಕೆಮಾಡಿ. ವಿಭಾಗದ ಒಳಗೆ, ನೀವು ಮುಖ್ಯ ಪರದೆಯಲ್ಲಿ ಮೊಬೈಲ್ ರೀಚಾರ್ಜ್ ಆಯ್ಕೆಯನ್ನು ತೆರೆಯಿರಿ
ಹಂತ:2 ಮೊಬೈಲ್ ರೀಚಾರ್ಜ್> ಮೊಬೈಲ್ ಸಂಖ್ಯೆಯನ್ನು ನಮೂದಿಸಿ> ಆಪರೇಟರ್> ಯೋಜನೆ ಮೊತ್ತವನ್ನು ಆಯ್ಕೆಮಾಡಿ.
ಹಂತ:3 ನೀವು ರೀಚಾರ್ಜ್ ಮಾಡಲು ಬಯಸುವ ಯೋಜನೆಯನ್ನು ನೀವು ಆಯ್ಕೆ ಮಾಡಿದ ನಂತರ, ಕಂಟಿನ್ಯೂ ಕ್ಲಿಕ್ ಮಾಡಿ.
ಹಂತ:4 ಪಾವತಿ ವಿಧಾನಗಳಾಗಿ ಆಯ್ಕೆ ಮಾಡಲು ಅಮೆಜಾನ್ ನಿಮಗೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ನಿಮ್ಮ ಆದ್ಯತೆಯ ವಿಧಾನವಾಗಿ ಯುಪಿಐ / ನೆಟ್‌ಬ್ಯಾಂಕಿಂಗ್ ಆಯ್ಕೆಮಾಡಿ.
ಹಂತ:5 ನೀವು ಅಮೆಜಾನ್ ಪೇ ಯುಪಿಐ ಅನ್ನು ಬಳಸಲು ಪ್ರಾರಂಭಿಸಲು ಬಯಸಿದರೆ, ನಿಮ್ಮ ಬ್ಯಾಂಕ್ ಅನ್ನು ಕ್ಲಿಕ್ ಮಾಡಿ. ಅಮೆಜಾನ್ ನಂತರ ಒಟಿಪಿ ಕಳುಹಿಸುವ ಮೂಲಕ ನಿಮ್ಮ ನೋಂದಾಯಿತ ಸಂಖ್ಯೆಯನ್ನು ಪರಿಶೀಲಿಸುತ್ತದೆ. ಹಂತ:6 ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನಾಲ್ಕು-ಅಂಕಿಯ ಯುಪಿಐ ಕೋಡ್ ಅನ್ನು ರಚಿಸಲು ನಿಮ್ಮನ್ನು ಕೇಳಲಾಗುತ್ತದೆ.
ಹಂತ:7 ನಿಮ್ಮ ಆಯ್ಕೆಯ ಕೋಡ್ ಅನ್ನು ಆರಿಸಿ ಮತ್ತು ಅಮೆಜಾನ್ ನಿಮ್ಮ ಬ್ಯಾಂಕ್ ಖಾತೆಯನ್ನು ಅಮೆಜಾನ್ ಪೇ ಯುಪಿಐನೊಂದಿಗೆ ಸ್ವಯಂಚಾಲಿತವಾಗಿ ಲಿಂಕ್ ಮಾಡುತ್ತದೆ.

ಯುಪಿಐ

ಇನ್ನು ನೀವು ಯುಪಿಐ ವಿಧಾನವನ್ನು ಬಳಸುವುದರಿಂದ ಪ್ರತಿ ಬಾರಿಯೂ ಸಿವಿವಿ ಅಥವಾ ಒಟಿಪಿ ಸೇರಿಸುವ ಅಗತ್ಯ ಇರುವುದಿಲ್ಲ. ನಿಮ್ಮ ವ್ಯವಹಾರವನ್ನು ಪೂರ್ಣಗೊಳಿಸಲು ಯುಪಿಐ ಕೋಡ್ ಸಾಕಾಗುತ್ತದೆ. ಯುಪಿಐ ಕೋಡ್ ಅನ್ನು ನಮೂದಿಸಿ, ಮತ್ತು ನಿಮ್ಮ ಪಾವತಿಯನ್ನು ನಿಮ್ಮ ಇಚ್ಛೆಯಂತೆ ಪೂರ್ಣಗೊಳಿಸಬಹುದು. ಭವಿಷ್ಯದ ವಹಿವಾಟುಗಳಿಗೆ ಅಮೆಜಾನ್ ಪೇ ಯುಪಿಐ ಅನ್ನು ಬಳಸಬಹುದು. ನಿಮ್ಮ ರೀಚಾರ್ಜ್ ಮಾಡಬೇಕು ಮತ್ತು ನಿಮ್ಮ ಆಪರೇಟರ್‌ನಿಂದ ಸಂಬಂಧಿಸಿದ ಸಂದೇಶವು ರೀಚಾರ್ಜ್ ವಿವರಗಳೊಂದಿಗೆ ನಿಮ್ಮ ಫೋನ್‌ನಲ್ಲಿ ಬರಲಿದೆ.

Best Mobiles in India

English summary
Amazon allows users to do a mobile recharge via its Amazon Pay service. The process is fairly simple and straightforward.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X