ಡಿಲೀಟ್‌ ಮಾಡಿದ ಫೈಲ್ಸ್‌ಗಳನ್ನು ಮರು ಪಡೆಯುವುದು ಹೇಗೆ?

Posted By: Staff
ಡಿಲೀಟ್‌ ಮಾಡಿದ ಫೈಲ್ಸ್‌ಗಳನ್ನು ಮರು ಪಡೆಯುವುದು ಹೇಗೆ?

ಕಂಪ್ಯೂಟರ್‌ ಬಳಸುವುದು ಎಷ್ಟು ಸುಲಭವೋ ಅಷ್ಟೇ ಕಷ್ಟಕೂಡ. ಇದೇನಪ್ಪಾ ಇದ್ರಲ್ಲೇನ್‌ ಅಂತಾ ಮಹಾ ಕಷ್ಟ ಇರೋದ್‌ ಇದೆ ಅಂತಾ ಅನ್ಕೋತಾ ಇದ್ದೀರಾ, ಅಂದಹಾಗೆ ನಿಮ್ಮ ಕಂಪ್ಯೂಟರ್‌ನಲ್ಲಿ ಅಂತರ್ಜಾಲ ಸಂಪರ್ಕವಿದ್ದು ಅದನ್ನು ನೀವು ಸುಲಭವಾಗಿಯೇ ಬಳಸುತ್ತೀರಿ ಆದರೆ ವೈರಸ್‌ ಕಂಡುಬಂದಲ್ಲಿ ಅದನ್ನು ಡಿಲೀಟ್‌ ಮಾಡಲು ಪರದಾಡುತ್ತೀರ ಅಲ್ವಾ.

ಹೀಗೆಯೇ ಕೆಲಮಂದಿ ತಮಗೆ ಬೇಕಾದ ಫೈಲ್ಸ್‌ಗಳನ್ನು ತಮ್ಮ ಸಿಸ್ಟಂನಿಂದ ಡಿಲೀಟ್‌ ಮಾಡಿಬಿಡುತ್ತಾರೆ ನಂತರ ಅದು ತುಂಬಾ ಮುಖ್ಯವಾದ ಫೈಲ್‌ ಎಂದು ತಿಳಿದ ಕೂಡಲೇ ಗಾಬರಿಗೊಳ್ಳುತ್ತಾರೆ. ಅಂದಹಾಗೆ ಇದರಲ್ಲಿ ಗಾಬರಿಗೊಳ್ಳುವ ಅಗತ್ಯವೇನಿಲ್ಲಾ ಡಿಲೀಟ್‌ ಆದಂತಹ ಫೈಲ್‌ಗಳನ್ನು ಮತ್ತೇ ಪಡೆಯುಬಹುದಾಗಿದೆ. ಅದು ಹೇಗೆ ಎಂಬುದನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಓದಿ ನೋಡಿ.

ಅಂತರ್ಜಾಲದಲ್ಲಿ ಇಂದು ಹಲವು ಫ್ರೀ ಫೈಲ್‌ ರಿಕವರಿ ಸಾಫ್ಟ್‌ವೇರ್‌ಗಳು ಲಭ್ಯವಿದ್ದು ಉಚಿತವಾಗಿ ಬಳಸಬಹುದಾಗಿದೆ. ಆದರಲ್ಲಿ ರಿಕೂವಾ(Recuva) ಹೆಸರಿನ ಸಾಫ್ಟ್‌ವೇರ್‌ ಮೂಲಕ ನೀವು ನಿಮ್ಮ ಡಿಲೀಟ್‌ ಆದಂತಹ ಎಲ್ಲಾ ಫೈಲ್‌ಗಳನ್ನು ಮರುಪಡೆಯ ಬಹುದಾಗಿದೆ. ರಿಕೂವಾ ಇಂಟರ್‌ನೆಟ್‌ 32 ಹಾಗೂ 64 ಬಿಟ್‌ ಮಾದರಿಗಳಲ್ಲಿ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot