ಆಂಡ್ರಾಯ್ಡ್ ಫೋನ್‌ನಲ್ಲಿ ಫೋಟೋ ಡಿಲೀಟ್ ಆಗಿದೆಯೇ? ಇಲ್ಲಿದೆ ಟಿಪ್ಸ್
ನಮ್ಮ ಬಳಿ ಇರುವ ಫೋನ್‌ಗಳಲ್ಲಿ ಇದೀಗ ಅತ್ಯುತ್ತಮ ಕ್ಯಾಮೆರಾ ವ್ಯವಸ್ಥೆಗಳು ಬರುತ್ತಿರುವುದರಿಂದ ಫೋಟೋ ತೆಗೆಯಲು ನಾವು ಕ್ಯಾಮೆರಾವನ್ನು ಕೈಗೆತ್ತಿಕೊಳ್ಳಬೇಕಿಲ್ಲ. ಉತ್ತಮ ಫೋಟೋಗಳನ್ನು ನಮ್ಮಷ್ಟಕ್ಕೆ ನಾವೇ ತೆಗೆದುಕೊಳ್ಳಬಹುದಾಗಿದೆ.ಆದರೆ ಈ ಫೋಟೋಗಳು ನಮಗೆ ಹೆಚ್ಚು ಪ್ರಮುಖವಾಗಿದ್ದು ಅವುಗಳನ್ನು ಅಮೂಲ್ಯ ನಿಧಿಯಂತೆ ನಾವು ಕಾಪಾಡಿಕೊಂಡು ಬರುತ್ತೇವೆ.
ಆದರೆ ದುರಾದೃಷ್ಟವಶಾತ್ ಈ ಫೋಟೋಗಳು ನಮ್ಮ ಕೈಬಿಟ್ಟು ಹೋದಲ್ಲಿ ಅಥವಾ ಅಳಿಸಿ ಹೋದಲ್ಲಿ ಆ ದುಃಖ ಮಾತ್ರ ಭರಿಸಲಾಗದೇ ಇರುವಂಥದ್ದು. ಹಾಗಿದ್ದರೆ ಈ ಫೋಟೋಗಳನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬ ಟಿಪ್ಸ್ ಅನ್ನೇ ಇಂದಿನ ಲೇಖನದಲ್ಲಿ ನಾವು ನೀಡಲಿದ್ದೇವೆ.

#1
ಆಂಡ್ರಾಯ್ಡ್ ಡೇಟಾ ರಿಕವರಿಯ ಫ್ರಿ ಟ್ರಯಲ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಕಳೆದು ಹೋದ ಫೋಟೋಗಳನ್ನು ಮರಳಿ ಪಡೆದುಕೊಳ್ಳಲು ಇದು ಸಹಾಯಕವಾಗಲಿದೆ.

#2
ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಬ್ಯಾಟರಿ ಇದೆ ಎಂಬದನ್ನು ಕಂಡುಕೊಳ್ಳಿ. ಈ ಪ್ರಕ್ರಿಯೆಯನ್ನು ನಿರ್ವಹಿಸಲು ನಿಮ್ಮ ಡಿವೈಸ್‌ನಲ್ಲಿ 20% ದಷ್ಟು ಬ್ಯಾಟರಿ ಇರಬೇಕು.

#3
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ನಂತರ, ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಿ ಮತ್ತು ಚಾಲನೆ ಮಾಡಿ. ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಸಂಪರ್ಕಪಡಿಸಿ

#4
ಕಂಪ್ಯೂಟರ್ ಡ್ರೈವರ್ ಅಪ್ಲಿಕೇಶನ್ ಚಾಲನೆ ಮಾಡಲು ನಿಮ್ಮ ಕಂಪ್ಯೂಟರ್‌ನಲ್ಲಿ ಡ್ರೈವರ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಇದು ಫೋನ್ ಅನ್ನು ಪತ್ತೆಹಚ್ಚುವುದಿಲ್ಲ.

#5
ನಿಮ್ಮ ಫೋನ್ ಸಾಫ್ಟ್‌ವೇರ್ ಅನ್ನು ಪತ್ತೆಹಚ್ಚಿದ ನಂತರ ನೀವು ಸ್ಕ್ಯಾನ್ ಮಾಡಬೇಕೆಂದಿರುವ ಫೈಲ್ ಅನ್ನು ಆರಿಸಿ. ಗ್ಯಾಲರಿ ಆಪ್ಶನ್‌ಗೆ ಕ್ಲಿಕ್ ಮಾಡಿ. ಸ್ಟ್ಯಾಂಡರ್ಡ್ ಅಥವಾ ಅಡ್ವಾನ್ಸ್‌ಡ್ ಮೋಡ್ ಅನ್ನು ಆಯ್ಕೆಮಾಡುವ ಮೂಲಕ ಫೋನ್ ಅನ್ನು ಸ್ಕ್ಯಾನ್ ಮಾಡಿ. ನಿಮ್ಮ ಫೋನ್‌ಗೆ ಸ್ಕ್ಯಾನ್ ಅನ್ನು ನೀವು ಆರಿಸಿಕೊಂಡ ನಂತರ, ನಿಮ್ಮ ಫೋನ್ ಕಳೆದು ಹೋದ ಡೇಟಾವನ್ನು ಸ್ಕ್ಯಾನ್ ಮಾಡಲು ಪ್ರೊಗ್ರಾಮ್‌ಗೆ ಅನುಮತಿಯನ್ನು ನೀಡಿ.

#6
ಸ್ಕ್ಯಾನ್ ಮಾಡಿದ ಡೇಟಾವನ್ನು ವಿಂಡೊ ತೋರಿಸಿದ ನಂತರ, ರಿಕವರಿ ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರಿವ್ಯೂ ಮತ್ತು ಕಳೆದು ಹೋದ ಡೇಟಾವನ್ನು ರೀಸ್ಟೋರ್ ಮಾಡಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್ ಲೇಖನಗಳು
ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ


Click it and Unblock the Notifications








