Home
ಟೆಕ್ ನೌಕರಿ

Photos: ನಿಮ್ಮ ಮೊಬೈಲ್‌ನಲ್ಲಿ ಡಿಲೀಟ್‌ ಆಗಿರುವ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಯಾವುದೇ ಸ್ಥಳಕ್ಕೆ ಬೇಟಿ ನೀಡಿದರೂ ಅಲ್ಲೊಂದು ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ ಆಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಬೇರೆಲ್ಲಾ ವಿಷಯಗಳಿಗಿಂತ ಹೆಚ್ಚಿನ ಪಾಲು ಫೋಟೋಗಳಿಂದಲೇ ಕೂಡಿರುತ್ತದೆ. ಇವುಗಳಲ್ಲಿ ಕೆಲವು ಫೋಟೋಗಳು ನಿಮ್ಮ ನೆನಪಿನ ಕನ್ನಡಿಯಾಗಿರುತ್ತವೆ. ಆದರೆ ಅಂತಹ ಫೋಟೋಗಳು ಆಕಸ್ಮಿಕವಾಗಿ ಡಿಲೀಟ್‌ ಆಗಿ ಹೋದರೆ ಏನಾಗಬೇಡ.

ಹೌದು, ಸ್ಮಾರ್ಟ್‌ಫೋನ್‌ನಲ್ಲಿರುವ ಫೋಟೋಗಳು(photos) ಆಕಸ್ಮಿಕವಾಗಿ ಡಿಲೀಟ್‌ ಆದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಅದರಲ್ಲೂ ಕೆಲವು ಪ್ರಮುಖ ಫೋಟೋಗಳು ಡಿಲೀಟ್‌ ಆಗಿ ಹೋದಾಗ ಅದನ್ನು ಮರಳಿಪಡೆಯಲು ಅವಕಾಶವಿದೆಯಾ ಅಂತಾ ಚಿಂತಿಸುವವರನ್ನು ಸಹ ನೋಡಬಹುದು. ಹಾಗಂತ ಡಿಲೀಟ್‌ ಆಗಿರುವ ಫೋಟೋಗಳನ್ನು ಮರಳಿ ಪಡೆಯುವುದಕ್ಕೆ ಸಾಧ್ಯವಿದೆಯಾ? ಯಾಕಿಲ್ಲ ಈ ಟೆಕ್ನಾಲಜಿ ಜಮಾನದಲ್ಲಿ ಡಿಲೀಟ್‌ ಆಗಿರುವ ನಿಮ್ಮ ಫೋಟೋ ಮರಳಿ ಪಡೆಯುವುದಕ್ಕೆ ಕೂಡ ಅವಕಾಶವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಮೊಬೈಲ್‌ನಲ್ಲಿ ಡಿಲೀಟ್‌ ಆಗಿರುವ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ನೀವು ಸಾಕಷ್ಟು ದಿನಗಳಿಂದ ಜೋಪಾನವಾಗಿ ಸೇವ್‌ ಮಾಡಿಟ್ಟುಕೊಂಡಿರುವ ಫೋಟೋಗಳು ಡಿಲೀಟ್‌ ಆಗಿ ಹೋದಾಗ ಅಯ್ಯೋ ಅಂತಾ ಚಿಂತಿಸುತ್ತಾ ಕೂರಬೇಡಿ. ಅದರ ಬದಲು ಡಿಲೀಟ್‌ ಆಗಿರುವ ಫೋಟೋಗಳನ್ನು ಮರಳಿ ಪಡೆಯಲು ಇರುವ ಅವಕಾಶಗಳನ್ನು ಬಳಸುವ ಪ್ರಯತ್ನ ಮಾಡಿರಿ. ಒಂದು ವೇಳೆ ನಿಮ್ಮ ಫೋಟೋಸ್‌ಗಳನ್ನು ನೀಡು ಕ್ಲೌಡ್ ಸ್ಟೋರೇಜ್‌ ನಲ್ಲಿ ಸೇವ್‌ ಮಾಡಿದ್ದರೆ ಮೊಬೈಲ್‌ನಲ್ಲಿ ಡಿಲೀಟ್‌ ಆಗಿದ್ದರೂ ಕ್ಲೌಡ್‌ ಸ್ಟೋರೇಜ್‌ನಲ್ಲಿರುತ್ತದೆ. ಒಂದು ವೇಲೆ ಅಲ್ಲಿಯೂ ಸಹ ಇರದಿದ್ದರೆ ನೀವು ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿದೆ.

ಡಿಲೀಟ್‌ ಆಗಿರುವ ಫೋಟೋಗಳನ್ನು ರಿಸ್ಟೋರ್‌ ಮಾಡಲು ಹೀಗೆ ಮಾಡಿ
ನೀವು ಐಫೋನ್‌ ಬಳಕೆದಾರರಾಗಿದ್ದು, ನಿಮ್ಮ ಫೋಟೋಗಳು ಡಿಲೀಟ್‌ ಆಗಿದ್ದರೆ, ಮೊದಲು ಫೋಟೋಸ್‌ ಅಪ್ಲಿಕೇಶನ್‌ಗೆ ಹೋಗಬೇಕಾಗುತ್ತದೆ. ಇದರಲ್ಲಿ ನೀವು ಆಲ್ಬಮ್ ಟ್ಯಾಬ್‌ ತರೆಯಿರಿ, ನಂತರ 'Recently Deleted' ಆಲ್ಬಮ್ ವಿಭಾಗವನ್ನು ಫೈಲ್ ಮಾಡಲು ಕೆಳಗೆ ಸ್ಕ್ರಾಲ್ ಮಾಡುವ ಮೂಲಕ ರಿ ಸ್ಟೋರ್‌ ಮಾಡಲು ಬಯಸುವ ಫೋಟೋಗಳನ್ನು ಆಯ್ಕೆ ಮಾಡಿರಿ. ಇದೀಗ ರಿಕವರ್ ಕ್ಲಿಕ್ ಮಾಡಿದರೆ ಡಿಲೀಟ್‌ ಆಗಿರುವ ಫೋಟೋಗಳು ರಿಸ್ಟೋರ್‌ ಆಗಲಿದೆ.

ನಿಮ್ಮ ಮೊಬೈಲ್‌ನಲ್ಲಿ ಡಿಲೀಟ್‌ ಆಗಿರುವ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ನೀವು ಐಕ್ಲೌಡ್‌ ಮೂಲಕ ಫೋಟೋಗಳನ್ನು ರಿಸ್ಟೋರ್‌ ಮಾಡಲು ಬಯಸಿದರೆ iCloud.com/Photos ಗೆ ಸರ್ಚ್‌ ಮಾಡಿ. ನೀವು ಐಕ್ಲೌಡ್ ಫೋಟೋಸ್‌ಗಳಿಗೆ Apple ID ಯೊಂದಿಗೆ ಲಾಗಿನ್ ಮಾಡಿದರೆ ನಿಮಗೆ ಸೈಡ್‌ಬಾರ್ ಕಾಣಲಿದೆ. ಇದರಲ್ಲಿ ನೀವು 'Recently Deleted' ಫೋಲ್ಡರ್ ಅನ್ನು ಕಾಣಬಹುದು. ಇದನ್ನು ತರೆದೆರೆ, ಡೇಟ್‌ ವೈಸ್‌ ಪ್ರಕಾರ ಮೀಡಿಯಾ ಫೈಲ್‌ಗಳು ಕಾಣಲಿದೆ. ಇದರಲ್ಲಿ ನೀವು ಬಯಸುವ ಫೋಟೋಗಳನ್ನು ಆಯ್ಕೆ ಮಾಡಿಕೊಂಡು ರಿಸ್ಟೋರ್‌ ಮಾಡಬಹುದು.

ನಿಮ್ಮ ಮೊಬೈಲ್‌ನಲ್ಲಿ ಡಿಲೀಟ್‌ ಆಗಿರುವ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಗೂಗಲ್‌ ಫೋಟೋಸ್‌ನಲ್ಲಿ ಫೋಟೋ ಡಿಲೀಟ್‌ ಆಗಿದ್ದರೆ ರಿ ಸ್ಟೋರ್‌ ಮಾಡಲು ಹೀಗೆ ಮಾಡಿ!
ಗೂಗಲ್‌ ಫೋಟೋಸ್‌ನಲ್ಲಿರುವ ನಿಮ್ಮ ಫೋಟೋಗಳು ಡಿಲೀಟ್‌ ಆಗಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ಇದಕ್ಕಾಗಿ ಮೊದಲು ನೀವು ಗೂಗಲ್‌ ಫೋಟೋಸ್‌ ಅನ್ನು ತೆರೆಯಿರಿ. ಇದರಲ್ಲಿ ಮೇನ್‌ ಪೇಜ್‌ನ ಕೆಳಗಿನ ಬಲಭಾಗದಲ್ಲಿ 'ಲೈಬ್ರರಿ' ಬಟನ್ ಕಾಣಲಿದೆ. ಇದನ್ನು ಟ್ಯಾಪ್‌ ಮಾಡಿದರೆ 'ಟ್ರಾಶ್‌' ಎಂಬ ಆಯ್ಕೆ ಬರಲಿದೆ. ಇದರಲ್ಲಿ ಇತ್ತೀಚಿಗೆ ಡಿಲೀಟ್‌ ಆಗಿರುವ ನಿಮ್ಮ ಎಲ್ಲಾ ಫೋಟೋ, ವೀಡಿಯೋಗಳೆಲ್ಲಾ ಕಾಣಲಿದೆ. ನಿಮಗೆ ಬೇಕಾದ ಫೋಟೋ ಮೇಲೆ ಲಾಂಗ್‌ ಪ್ರೆಸ್‌ ಮಾಡಿದರೆ ರಿಸ್ಟೋರ್‌ ಬಟನ್‌ ಕಾಣಲಿದೆ. ನೀವು ರಿಸ್ಟೋರ್‌ ಬಟನ್‌ ಟ್ಯಾಪ್‌ ಮಾಡಿದರೆ ಸುಲಭವಾಗಿ ಡಿಲೀಟ್‌ ಆಗಿರುವ ಫೋಟೋಗಳನ್ನು ರಿಸ್ಟೋರ್‌ ಮಾಡಬಹುದು.

ಇಲ್ಲಿ ಗಮನಿಸಬೇಕಾದ ವಿಚಾರವೆನೆಂದರೆ ಗೂಗಲ್‌ ಫೋಟೋಸ್‌ ನಿಮ್ಮ ಟ್ರಾಶ್‌ ಫೋಲ್ಡರ್‌ನಲ್ಲಿ 1.5GB ವರೆಗೆ ಡೇಟಾವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಫೈಲ್‌ ಬಂದು ಸೇರಿದರೆ ಫೈಲ್‌ಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡಲಿದೆ. ಆದರಿಂದ ನೀವು ಆಗಾಗ ಗೂಗಲ್‌ ಫೋಟೋಸ್‌ ಟ್ರಾಶ್‌ ಅನ್ನು ಕ್ಲಿಯರ್‌ ಮಾಡುವುದು ಸೂಕ್ತವಾಗಿದೆ.

Best Mobiles in India

English summary
How to recover deleted Photos in your Smartphone: Complete Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+