Home
ಟೆಕ್ ನೌಕರಿ

Instagram ಪಾಸ್‌ವರ್ಡ್ ಮರೆತಿರುವಿರಾ? ಚಿಂತಿಸಬೇಕಾಗಿಲ್ಲ, ಈ ಟಿಪ್ಸ್‌ ಬಳಸಿ ಪುನಃ ಪಡೆಯಿರಿ

ಇಂದು ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಮೊಬೈಲ್‌ ಇಲ್ಲದೇ ಯಾವುದೇ ಕೆಲಸ ಆಗುವುದಿಲ್ಲ. ಮೊಬೈಲ್‌ನ ಬಳಕೆ ಹೇಗೆ ಹೆಚ್ಚಾಗಿದೆಯೋ, ಅದೇ ರೀತಿ ಸೋಷಿಯಲ್‌ ಮೀಡಿಯಾ ಬಳಕೆಯೂ ಹೆಚ್ಚುತ್ತಲೇ ಇದೆ.

ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಯೂಟ್ಯೂಬ್‌, ಎಕ್ಸ್‌ (ಟ್ವಿಟರ್) ಸೇರಿದಂತೆ ಇನ್ನಿತರ ಸೋಷಿಯಲ್‌ ಮೀಡಿಯಾ ಬಳಕೆ ಮಾಡದ ಜನರಿಲ್ಲ! ಈ ಸೋಷಿಯಲ್‌ ಮೀಡಿಯಾಗಳು ಜನರನ್ನು ಬೇಗನೆ ತನ್ನತ್ತ ಆಕರ್ಷಿಸುತ್ತವೆ. ಕೆಲವೊಮ್ಮೆ ಇವು ಬಂದ್ ಆದ್ರೆ ನಿಮ್ಮ ಪರಿಸ್ಥಿತಿ ಏನಾಗಬೇಡ?

Instagram ಪಾಸ್‌ವರ್ಡ್ ಮರೆತಿರುವಿರಾ? ಚಿಂತಿಸಬೇಕಾಗಿಲ್ಲ, ಈ ಟಿಪ್ಸ್‌ ಬಳಸಿ

ಹೌದು, ಎಷ್ಟೇ ಒತ್ತಡದ ಜೀವನ ಇದ್ದರೂ ನೀವು ಸೋಷಿಯಲ್ ಮೀಡಿಯಾ ಬಳಕೆಗೆ ಟೈಮ್ ಕೊಡುತ್ತೀರಿ. ಕೆಲವೊಮ್ಮೆ ತಮಗೆ ಅರಿವಿಲ್ಲದೆಯೇ ಅಥವಾ ಜಸ್ಟ್‌ ಒಂದು ಕ್ಲಿಕ್‌ನಲ್ಲಿ ನಮ್ಮ ಅಕೌಂಟ್‌ಗಳು ಲಾಗ್‌ಔಟ್‌ ಆಗುತ್ತವೆ. ಆಗ ನಿಮ್ಮಲ್ಲಿ ಏನನ್ನೋ ಕಳೆದುಕೊಂಡ ಭಾವನೆ ಮೂಡುತ್ತದೆ. ಆಗ ನೀವು ಆತಂಕಕ್ಕೆ ಒಳಗಾಗಬೇಡಿ. ನಿಮ್ಮಲ್ಲಿ ಈ ರೀತಿ ಆತಂಕ ಇದ್ದರೆ ಅದಕ್ಕೆ ಇಲ್ಲಿದೆ ಪರಿಹಾರ.

ನಾವಿಲ್ಲಿ ಇಂದು ಇನ್‌ಸ್ಟಾಗ್ರಾಂ ಪಾಸ್‌ವರ್ಡ್ ಮರು ಪಡೆಯುವ ಬಗ್ಗೆ ತಿಳಿಸಿಕೊಡುತ್ತೇವೆ. ಯಾಕೆಂದರೆ ಇಂದು ಇನ್‌ಸ್ಟಾಗ್ರಾಮ್ ಬಳಕೆ ಹೆಚ್ಚಾಗಿದೆ. ಸದಾ ಇನ್‌ಸ್ಟಾದಲ್ಲೇ ತಲ್ಲೀನರಾಗುವವರೂ ಇದ್ದಾರೆ. ಯಾವುದೋ ಒತ್ತಡ ಅಥವಾ ಒಂದು ಸಣ್ಣ ತಪ್ಪಿನಿಂದ ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಲಾಗ್​ಔಟ್ ಆಗಿಬಿಡುತ್ತದೆ. ಈ ಅನುಭವ ಹಲವರಿಗೆ ಆಗಿರುತ್ತದೆ ಬಿಡಿ. ಇದರಿಂದ ಗೊಂದಲಕ್ಕೆ ಒಳಗಾಗಬೇಕಿಲ್ಲ. ಇನ್‌ಸ್ಟಾ ಪಾಸ್‌ವರ್ಡ್ ಅನ್ನು ಮರೆತಿದ್ದರೂ ಸಹ ಪುನಃ ನೀವು, ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಮರಳಿ ಪಡೆಯಬಹುದು.

ನೀವು ಮರೆತಿರುವ ಇನ್‌ಸ್ಟಾಗ್ರಾಮ್ ಪಾಸ್‌ವರ್ಡ್ ಅನ್ನು ಮತ್ತೆ ಪಡೆಯುವುದು ತುಂಬಾನೇ ಸುಲಭ. ನಾವು ಹೇಳುವ ಕೆಲವು ಸರಳ ಟಿಪ್ಸ್‌ (ವಿಧಾನ) ಗಳನ್ನು ಬಳಸಿ, ನಿಮ್ಮ ಇನ್‌ಸ್ಟಾಗ್ರಾಮ್ ಪಾಸ್‌ವರ್ಡ್ ಅನ್ನು ಸುಲಭವಾಗಿ ಮರಳಿ ಪಡೆಯಬಹುದು. ಹಾಗಿದ್ರೆ, ಆ ಟಿಪ್ಸ್‌ ಯಾವುದು ಅಂತೀರಾ? ಮುಂದೆ ಓದಿ.

ಪಾಸ್‌ವರ್ಡ್ ಪಡೆಯಲು ಜಸ್ಟ್ ಈ ಟಿಪ್ಸ್‌ ಬಳಸಿ

  1. ಫಸ್ಟ್ ನಿಮ್ಮ ಮೊಬೈಲ್ (ಸ್ಮಾರ್ಟ್‌ಫೋನ್‌) ಆನ್‌ ಮಾಡಿ.
  2. ನಿಮ್ಮ ಮೊಬೈಲ್‌ನಲ್ಲಿರುವ ಇನ್‌ಸ್ಟಾಗ್ರಾಮ್ ಓಪನ್ ಮಾಡಿ ಅಥವಾ ಲ್ಯಾಪ್‌ಟಾಪ್‌, ಕಂಪ್ಯೂಟರ್‌ನಲ್ಲಿ ಗೂಗಲ್‌ ಓಪನ್ ಮಾಡಿ.
  3. ಬಳಿಕ ಸರ್ಚ್‌ ಬಾರ್‌ನಲ್ಲಿ https://www.instagram.com/ ಎಂದು ಟೈಪ್ ಮಾಡಿ, ಒಂದು ಪುಟ ತೆರೆದುಕೊಳ್ಳುತ್ತದೆ.
  4. ಕೂಡಲೇ ಮೊಬೈಲ್‌ನಲ್ಲಿ ಲಾಗ್ ಇನ್ (Log In) ಬಟನ್‌ನ ಕೆಳಗೆ ಇರುವ ಗೆಟ್ ಹೆಲ್ಪ್ ಲಾಗ್ ಇನ್ (Get help logging in) ಒಕೆ ಮಾಡಿ.
  5. ಅಥವಾ ವೆಬ್‌ನಲ್ಲಿ 'ಫರ್ಗಾಟ್ ಪಾಸ್‌ವರ್ಡ್? (Forgot password) ಅನ್ನು ಟ್ಯಾಪ್ ಮಾಡಿ.
  6. ನಂತರ ನಿಮ್ಮ ಇನ್‌ಸ್ಟಾಗ್ರಾಮ್‌ನಲ್ಲಿರುವ ಹೆಸರು, ಇ ಮೇಲ್ ಅಥವಾ ಮೊಬೈಲ್ ನಂಬರ್‌ ಅನ್ನು ಟೈಪ್ ಮಾಡಿ.
  7. ಇದಾದ ಕೂಡಲೇ ನೆಕ್ಸ್ಟ್ (Next) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಅಲ್ಲಿರುವ ಸೂಚನೆಗಳನ್ನು ಪಾಲಿಸಿ.

ಈ ಹಂತ ಮುಗಿದ ಮೇಲೆ ಏನು ಮಾಡಬೇಕು?

ನಾವು ತಿಳಿಸಿರುವ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ, ನೀವು ಪಾಸ್‌ವರ್ಡ್ ಮರು ಪಡೆಯುವ ಅಂತಿಮ ವಿಧಾನಕ್ಕೆ ತಲುಪುತ್ತೀರಿ. ಆಗ ಏನು ಮಾಡಬೇಕು? ಯಾವ ವಿಧಾನ ಬಳಸಬೇಕು? ಎಂಬುವುದನ್ನು ನಾವಿಲ್ಲಿ ತಿಳಿಸಿಕೊಡುತ್ತೇವೆ. ಮುಂದೆ ಓದಿ.

ಇನ್‌ಸ್ಟಾಗ್ರಾಮ್ ನಿಮ್ಮ ಇ ಮೇಲ್ ವಿಳಾಸಕ್ಕೆ ಲಿಂಕ್ (ಪಾಸ್‌ವರ್ಡ್ ಅನ್ನು ಪುನಃ ನೀಡುವ ಲಿಂಕ್) ಒಂದನ್ನು ಸೆಂಡ್ ಮಾಡುತ್ತದೆ. ಆಗ ಇ ಮೇಲ್ ಓಪನ್ ಮಾಡಿ. ಹೊಸ ಪಾಸ್‌ವರ್ಡ್ ಕ್ರಿಯೇಟ್ ಮಾಡಲು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡುವುದರಿಂದ ಪುನಃ ನೀವು ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ ಅನ್ನು ಸುಲಭವಾಗಿ ಮರಳಿ ಪಡೆಯಬಹುದು.

ಇ-ಮೇಲ್‌ ಇಲ್ಲದಿದ್ದರೆ ಹೀಗೆ ಮಾಡಿ

ಇ-ಮೇಲ್ ಹೊರತಾಗಿ ಮೊಬೈಲ್ ನಂಬರ್ ಹಾಗೂ ಫೇಸ್‌ಬುಕ್ ಮೂಲಕವೂ ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಮತ್ತೆ ಪಡೆಯಬಹುದು. ನಿಮ್ಮ ಮೊಬೈಲ್‌ ನಂಬರ್‌ಗೆ ಒಂದು ಮೆಸೇಜ್ ಬರುತ್ತದೆ. ನೀವು ಪಡೆದ ಕೋಡ್‌ ಅನ್ನು ಈಗ ಹೊಸ ಪಾಸ್‌ವರ್ಡ್ ಕ್ರಿಯೇಟ್ ಮಾಡಲು, ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ನಮೂದಿಸಿ. ಇದರಂತೆಯೇ ಪೇಸ್‌ಬುಕ್ ಲಿಂಕ್ ಮಾಡಿದರೆ, ನೀವು ರಿಸೆಟ್ ಯೂಸಿಂಗ್ ಫೇಸ್‌ಬುಕ್ ಎಂಬ ಆಯ್ಕೆಯನ್ನು ಬಳಸಿಕೊಂಡು ಇನ್‌ಸ್ಟಾ ಪಾಸ್‌ವರ್ಡ್ ಅನ್ನು ಮರು ಪಡೆಯಬಹುದು.

ಸಾಮಾನ್ಯವಾಗಿ ಬಹುತೇಕರು ಇನ್‌ಸ್ಟಾಗ್ರಾಮ್ ಲಾಗ್‌ಔಟ್‌ ಮಾಡಿ ಪಜೀತಿ ಅನುಭವಿಸಿರುತ್ತೀರಿ. ಅವರು ಈ ಸರಳ ಟಿಪ್ಸ್‌ ಬಳಸಿ ಪಾಸ್‌ವರ್ಡ್‌ ಪಡೆಯಬಹುದು. ಕೆಲವರು, ಅನೇಕ ದಿನಗಳಿಂದ (ವರ್ಷಗಳಿಂದ) ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಲಾಗಿನ್ ಆಗದೆ ಪಾಸ್‌ವರ್ಡ್‌ ಅನ್ನು ಮರೆತಿರುತ್ತಾರೆ. ಅವರೂ ಸಹ ಈ ವಿಧಾನಗಳನ್ನು ಬಳಸಿ, ಮರಳಿ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಪಡೆಯಬಹುದಾಗಿದೆ.

Best Mobiles in India

English summary
Recover Your Instagram Account Password Easily By Following On-Screen Instructions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+