Home
ಟೆಕ್ ನೌಕರಿ

ಫೋನ್‌ಪೇ ಮೂಲಕ ನಿಮಗೆ ವಂಚನೆ ಆಗಿದ್ದರೆ ತಕ್ಷಣವೇ ಈ ಕೆಲಸ ಮಾಡಿ!

ಯುಪಿಐ ಪಾವತಿ ವ್ಯವಸ್ಥೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಂತೆ ಆನ್‌ಲೈನ್‌ ವಂಚನೆಗಳ ಪ್ರಮಾಣ ಕೂಡ ಹೆಚ್ಚಿದೆ. ಯುಪಿಐ ಪಾವತಿ ವ್ಯವಸ್ಥೆ ಸಾಕಷ್ಟು ಸುರಕ್ಷತೆಯನ್ನು ಹೊಂದಿದ್ದರೂ ಕೂಡ ವಂಚಕರು ಯುಪಿಐ ಮೂಲಕ ಕೂಡ ವಂಚನೆ ಮಾಡುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ. ಒಂದು ವೇಳೆ ನೀವು ಯುಪಿಐ ಪಾವತಿಯಲ್ಲಿ ವಂಚನೆಗೆ ಒಳಗಾದರೆ ಏನು ಮಾಡುವುದು ಅನ್ನೊದಕ್ಕೆ ಬಹಳಷ್ಟು ಜನರ ಬಳಿ ಉತ್ತರವೇ ಸಿಗುವುದಿಲ್ಲ.

ಹೌದು, UPI ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ವಹಿವಾಟುಗಳಲ್ಲಿಯೂ ಕೂಡ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಟೆಕ್ನಾಲಜಿ ಮುಂದುವರೆದಷ್ಟು ವಂಚಕರು ಕೂಡ ಸಾಕಷ್ಟು ಸ್ಮಾರ್ಟ್‌ ಆಗುತ್ತಿದ್ದು, ವಂಚನೆ ಮಾಡುವುದಕ್ಕಾಗಿಯೇ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಾಗಾದ್ರೆ ಆನ್‌ಲೈನ್‌ ಬ್ಯಾಂಕಿಂಗ್‌ ಅಥವಾ ಯುಪಿಐ ಪಾವತಿಯಲ್ಲಿ ನೀವು ವಂಚನೆಗೆ ಒಳಗಾಗಿ ಹಣ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇ ಮೂಲಕ ನಿಮಗೆ ವಂಚನೆ ಆಗಿದ್ದರೆ ತಕ್ಷಣವೇ ಈ ಕೆಲಸ ಮಾಡಿ!

UPI ಮೂಲಕ ವಂಚನೆಗೆ ಬಲಿಯಾಗಿದ್ದರೆ ಹಣ ಮರಳಿ ಪಡೆಯುವುದು ಹೇಗೆ?
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ನೀವು ವಂಚನೆಗೆ ಒಳಗಾಗಿದ್ದರೆ ನೀವು ಈ ಕೆಳಕಂಡ ಅಂಶಗಳನ್ನು ಅನುಸರಿಸಬೇಕಾಗುತ್ತದೆ.
* UPI ಸೇವಾ ಪೂರೈಕೆದಾರರಿಗೆ ವರದಿ ಮಾಡುವುದು
ಯುಪಿಐ ಪಾವತಿ ಮೂಲಕ ನೀವು ವಂಚನೆಗೆ ಒಳಗಾದರೆ ನೀವು ಬಳಸುತ್ತಿರುವ ಯುಪೀಯ ಅಪ್ಲಿಕೇಶನ್‌ ಅಂದರೆ ಫೋನ್‌ಪೇ, ಗೂಗಲ್‌ ಪೇ ಸೇವಾ ಪೂರೈಕೆದಾರರಿಗೆ ವರದಿ ಮಾಡಬೇಕಾಗುತ್ತದೆ. ನಿಮಗೆ ವಂಚನೆ ಆಗಿರುವ ವಹಿವಾಟನ್ನು ಫ್ಲ್ಯಾಗ್ ಮಾಡಿ ಮತ್ತು ಸೇವಾ ಪೂರೈಕೆದಾರರ ಬೆಂಬಲ ಕಾರ್ಯವಿಧಾನಗಳ ಮೂಲಕ ಮರುಪಾವತಿಗೆ ರಿಕ್ವೆಸ್ಟ್‌ ಮಾಡಬೇಕಾಗುತ್ತದೆ.

* NPCI ಕಂಪ್ಲೇಟ್‌ ಪೋರ್ಟಲ್
ಒಂದು ವೇಳೆ ನಿಮ್ಮ UPI ಸೇವಾ ಪೂರೈಕೆದಾರರು ನಿಮ್ಮ ಮನವಿಗೆ ಸ್ಪಂದಿಸದಿದ್ದರೆ, npci.org.in ಮೂಲಕ NPCI ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ. ಅಲ್ಲದೆ ಪಾವತಿ ಸೇವೆ ಒದಗಿಸುವವರು (PSP) ಬ್ಯಾಂಕ್ ಮತ್ತು ನಿಮ್ಮ ಖಾತೆಯನ್ನು ನಿರ್ವಹಿಸುವ ಬ್ಯಾಂಕ್‌ನಲ್ಲಿಯೂ ಸಹ ದೂರು ಸಲ್ಲಿಸಬೇಕಾಗುತ್ತದೆ.

ಫೋನ್‌ಪೇ ಮೂಲಕ ನಿಮಗೆ ವಂಚನೆ ಆಗಿದ್ದರೆ ತಕ್ಷಣವೇ ಈ ಕೆಲಸ ಮಾಡಿ!

* ಬ್ಯಾಂಕಿಂಗ್ ಒಂಬುಡ್ಸ್‌ಮನ್ ಮತ್ತು ಡಿಜಿಟಲ್ ದೂರು
ನೀವು ದೂರು ನೀಡಿದ್ದರೂ ನಿಮ್ಮ ಸಮಸ್ಯೆಯು 30 ದಿನಗಳ ಕಳೆದ ನಂತರವು ಬಗೆ ಹರಿಯದಿದ್ದರೆ, ಡಿಜಿಟಲ್ ದೂರುಗಳಿಗಾಗಿ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಅಥವಾ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಓಂಬುಡ್ಸ್‌ಮನ್‌ಗೆ ಅಧಿಕೃತ ದೂರನ್ನು ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ cms.rbi.org.in ನಲ್ಲಿ ಮಾಡಬಹುದಾಗಿದೆ.

ಫೋನ್‌ಪೇ ಮೂಲಕ ನಿಮಗೆ ವಂಚನೆ ಆಗಿದ್ದರೆ ತಕ್ಷಣವೇ ಈ ಕೆಲಸ ಮಾಡಿ!

ಬ್ಯಾಂಕಿಂಗ್ ಮೂಲಕ ವಂಚನೆ ಆಗಿದ್ದರೆ ಏನು ಮಾಡಬೇಕು?
ನೀವು ಬ್ಯಾಂಕಿಂಗ್ ಮೂಲಕ ವಂಚನೆಗೆ ಒಳಗಾಗಿದ್ದರೆ ಈ ಕೆಳಕಂಡ ನಿಯಮಗಳನ್ನು ಅನುಸರಿಸಿ.
* ಬ್ಯಾಂಕ್‌ಗೆ ತಕ್ಷಣದ ವರದಿ ಮಾಡಿ
ನಿಮ್ಮ ಅರಿವಿಗೆ ಬಾರದೆ ಬ್ಯಾಂಕ್‌ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದಿದ್ದರೆ ಮೊದಲಿಗೆ ನಿಮ್ಮ ಬ್ಯಾಂಕ್‌ ಅನ್ನು ಸಂಪರ್ಕಿಸಿ. ಅದರಲ್ಲೂ 25,000 ರೂ.ವರೆಗಿನ ವಂಚನೆಗೆ ಒಳಗಾಗಿದ್ದರೆ ಮೂರು ದಿನಗಳ ಒಳಗೆ ನಿಮ್ಮ ವರದಿಯನ್ನು ಸಲ್ಲಿಸಿ.

ಸೈಬರ್ ಕ್ರೈಂ ಪೋರ್ಟಲ್
ವಂಚಕರು ಆನ್‌ಲೈನ್‌ ಮೂಲಕ ನಿಮಗೆ ವಂಚನೆ ಮಾಡಿದ್ದರೆ ಸೈಬರ್‌ ಕ್ರೈ ಪೋರ್ಟಲ್‌ ಮೂಲಕ ದೂರು ನೀಡಬಹುದು. ಸ್ಥಳೀಯ ಪೊಲೀಸರಿಗೆ ವಂಚನೆಯನ್ನು ವರದಿ ಮಾಡಲು ಅಥವಾ cybercrime.gov.in ಮೂಲಕ ಕರೆ ಮಾಡುವ (ಸಹಾಯ ಸಂಖ್ಯೆ - 1930) ದೂರು ದಾಖಲಿಸಲು ನಿಮಗೆ ಆಯ್ಕೆ ಇದೆ.

ಇದೇನೆ ಇದ್ದರೂ ಸಹ ಆನ್‌ಲೈನ್‌ ವಂಚನೆಗಳಿಂದ ದೂರವಾಗಿರಬೇಕೆಂದರೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

Best Mobiles in India

English summary
How To recovery money lost in UPI or banking fraud: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+