ಕೋವಿಡ್ ಲಸಿಕೆ ಪಡೆಯಲು ನಿಮ್ಮ ಹೆಸರನ್ನು ನೋಂದಾಯಿಸುವುದು ಹೇಗೆ?
ಭಾರತದಲ್ಲಿ ಇಂದಿನಿಂದ ಎರಡನೇ ಹಂತದ ಕರೋನಾ ವೈರಸ್ ವ್ಯಾಕ್ಸಿನೇಷನ್ ಪ್ರಾರಭವಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಂದು ಕೊ-ವಿನ್ ವ್ಯಾಕ್ಸಿನ್ ಅನ್ನು ಚುಚ್ಚಿಸಿಕೊಳ್ಳುವ ಮೂಲಕ ಚಾಲನೆ ನಿಡಿದ್ದಾರೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನಿಡಲಾಗಿತ್ತು. ಸದ್ಯ ಕೊರೋನ ವೈರಸ್ ವ್ಯಾಕ್ಸಿನೇಷನ್ ಪ್ರಾಥಮಿಕವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಹ-ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೀಡಲು ಸರ್ಕಾರ ಮುಂದಾಗಿದೆ.

ಹೌದು, ಎರಡನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಭಾರತದಲ್ಲಿ ಪ್ರಾರಂಭವಾಗಿದೆ. ಇನ್ನು ಕೊರೊನಾ ವ್ಯಾಕ್ಸಿನೇಷನ್ ಪಡೆದುಕೊಳ್ಳುವುದಕ್ಕೆ ಕೋ-ವಿನ್ ಅಪ್ಲಿಕೇಶನ್ ಬಳಸಿ ನೀವೇ ಸ್ವಯಂ ನೋಂದಾಯಿಸಿಕೊಳ್ಳಬಹುದಾಗಿದೆ. ಸದ್ಯ ಇದೀಗ ಭಾರತ ಸರ್ಕಾರ ಮಾರ್ಚ್ 1, ಬೆಳಿಗ್ಗೆ 9 ರಂದು ಕೋ-ವಿನ್ ಆಪ್ 2.0 ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕೋ-ವಿನ್ ಅಪ್ಲಿಕೇಶನ್ ಬಳಸಿ ಕೊರೋನಾ ಲಸಿಕೆಯನ್ನು ಪಡೆಯಲು ನಿಮ್ಮ ಹೆಸರನ್ನು ರಿಜಿಸ್ಟಾರ್ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ಕೋ-ವಿನ್ ಅಪ್ಲಿಕೇಶನ್‌ನಲ್ಲಿ COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೋ-ವಿನ್ ಅಪ್ಲಿಕೇಶನ್ ಅನ್ನು ಮತ್ತೇ ಭಾರತ ಸರ್ಕಾರ ಅಪ್ಡೇಟ್ ಮಾಡಿದೆ. ಇನ್ನು ಪ್ರತ್ಯೇಕವಾಗಿ, ಲಸಿಕೆ ಐಕಾನ್ ಹೊಂದಿರುವ ಕೋ-ವಿನ್ ಎಂಬ ವಿಭಾಗವನ್ನು ಸುಲಭವಾಗಿ ಪ್ರವೇಶಿಸಲು ಕೊರೊನಾವೈರಸ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ನ ಆರೋಗಾ ಸೇತು ಅಪ್ಲಿಕೇಶನ್‌ಗೆ ಸೇರಿಸಲಾಗಿದೆ. ಇದಲ್ಲದೆ ನೀವು www.cowin.gov.in ವೆಬ್‌ಸೈಟ್‌ನಲ್ಲಿ COVID-19 ಲಸಿಕೆಗಾಗಿ ನೋಂದಾಯಿಸಲು ಸಹ ಸಾಧ್ಯವಾಗುತ್ತದೆ. ಇನ್ನು ಕೋವಿನ್ ಅಪ್ಲಿಕೇಶನ್‌ನಲ್ಲಿ ಕೋವಿಡ್-19 ಲಸಿಕೆಗಾಗಿ ನೋಂದಾಯಿಸುವುದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಕೋ-ವಿನ್ ಅಪ್ಲಿಕೇಶನ್‌ನಲ್ಲಿ COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ
ಹಂತ 1: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 2: ನಂತರ ನೀವು ಒಟಿಪಿ ಪಡೆಯುತ್ತೀರಿ, ಒಟಿಪಿ ನಮೂದಿಸಿ ಮತ್ತು "Verify" ಬಟನ್ ಕ್ಲಿಕ್ ಮಾಡಿ
ಹಂತ 3: ನಂತರ ನಿಮ್ಮನ್ನು ವ್ಯಾಕ್ಸಿನೇಷನ್ ಪುಟದ ನೋಂದಣಿಗೆ ನಿರ್ದೇಶಿಸಲಾಗುತ್ತದೆ
ಹಂತ 4: ಮುಂದೆ, ಒಂದು ಫೋಟೋ ಐಡಿ proof ಆಯ್ಕೆಮಾಡಿ
ಹಂತ 5: ನಿಮ್ಮ ಹೆಸರು, ವಯಸ್ಸು, ಲಿಂಗವನ್ನು ಭರ್ತಿ ಮಾಡಿ ಮತ್ತು ಗುರುತಿನ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಿ

ಹಂತ 6: ನೀವು ಯಾವುದೇ ಕೊಮೊರ್ಬಿಡಿಟಿಗಳನ್ನು ಹೊಂದಿದ್ದೀರಾ ಎಂದು ಪುಟವು ಕೇಳುತ್ತದೆ
ಹಂತ 7: 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಅರ್ಹರು. ನೀವು 45 ವರ್ಷ ವಯಸ್ಸಿನವರಾಗಿದ್ದರೆ + ನೀವು ವೈದ್ಯರ ಪ್ರಮಾಣಪತ್ರವನ್ನು ಕೊಮೊರ್ಬಿಡಿಟಿ ಪ್ರೂಫ್ ಆಗಿ ಅಪ್‌ಲೋಡ್ ಮಾಡಬೇಕಾಗುತ್ತದೆ.
ಹಂತ 8: Registration ಬಟನ್ ಕ್ಲಿಕ್ ಮಾಡಿ.
ಹಂತ 9: ಸಿಸ್ಟಮ್ ನಂತರ ಖಾತೆ ವಿವರಗಳನ್ನು ತೋರಿಸುತ್ತದೆ.
ಹಂತ 10: ಇನ್ನಷ್ಟು ಸೇರಿಸು ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ಒಂದೇ ಮೊಬೈಲ್ ಸಂಖ್ಯೆಯ ಅಡಿಯಲ್ಲಿ ಅನೇಕ ಜನರನ್ನು ಸೇರಿಸಲು ಪೋರ್ಟಲ್ ನಿಮಗೆ ಅನುಮತಿಸುತ್ತದೆ.

ಹಂತ 11: ವೇಳಾಪಟ್ಟಿ ನೇಮಕಾತಿಯ ಮೇಲೆ next ಕ್ಲಿಕ್ ಮಾಡಿ.
ಹಂತ 12: ನಂತರ ನೀವು ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಪಿನ್ ಕೋಡ್ ಮೂಲಕ ವ್ಯಾಕ್ಸಿನೇಷನ್ ಕೇಂದ್ರವನ್ನು ಸರ್ಚ್ ಮಾಡಿ.
ಹಂತ 13: ನಂತರ ದಿನಾಂಕ ಮತ್ತು ಲಭ್ಯತೆಯನ್ನು ತೋರಿಸಲಾಗುತ್ತದೆ, ‘Book' ಬಟನ್ ಕ್ಲಿಕ್ ಮಾಡಿ.
ಹಂತ 14: Registration ಪೂರ್ಣಗೊಂಡ ನಂತರ ನೀವು ವ್ಯಾಕ್ಸಿನೇಷನ್ ಅಪಾಯಿಂಟ್‌ಮೆಂಟ್ ಸಂದೇಶವನ್ನು ಸ್ವೀಕರಿಸುತ್ತೀರಿ.
ಹಂತ 15: ಅಲ್ಲದೆ ನೀವು ಬಯಸಿದ ಯಾವುದೇ ಸಮಯದಲ್ಲಿ ಆದರೆ ವ್ಯಾಕ್ಸಿನೇಷನ್ ದಿನದ ಮೊದಲು ಅಪಾಯಿಂಟ್ಮೆಂಟ್ ಅನ್ನು ರಿಸೆಟ್ ಮಾಡಲು ಸಹ ನಿಮಗೆ ಸಾಧ್ಯವಾಗುತ್ತದೆ.
ಮೊದಲ ಡೋಸ್ ಪಡೆದ ನಂತರ ಎರಡನೇ ಡೋಸ್ ಅನ್ನು ಸ್ವಯಂಚಾಲಿತವಾಗಿ ನಿಗದಿಪಡಿಸಲಾಗುತ್ತದೆ ಅನ್ನೊದನ್ನ ಗಮನಿಸಬಹುದಾಗಿದೆ.

COVID-19 ಲಸಿಕೆಗಾಗಿ www.cowin.gov.in ನಲ್ಲಿ ನೋಂದಾಯಿಸುವುದು ಹೇಗೆ?
Www.cowin ನಲ್ಲಿ COVID-19 ಲಸಿಕೆಗಾಗಿ ನೋಂದಾಯಿಸಲು ಮೇಲಿನ ಪ್ರಕ್ರಿಯೆಯನ್ನೇ ಅನುಸರಿಸಬೇಕಾಗುತ್ತದೆ. ನೀವು ಕೇವಲ www.cowin.gov.in ವೆಬ್‌ಸೈಟ್‌ಗೆ ಹೋಗಬಹುದು ಮತ್ತು ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ವ್ಯಾಕ್ಸಿನೇಷನ್ ಸ್ಲಾಟ್ ಅನ್ನು ಕಾಯ್ದಿರಿಸಬಹುದು. ಒಮ್ಮೆ ರಿಜಿಸ್ಟಾರ್ ಮಾಡಿದ ನಂತರ, ನೀವು ದೃಡೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.


Click it and Unblock the Notifications