ಕ್ರೋಮ್‌ನಲ್ಲಿ ಸೇವ್ ಆದ ಪಾಸ್‌ವರ್ಡ್‌ಗಳನ್ನು ಡಿಲೀಟ್ ಮಾಡುವುದು ಹೇಗೆ?

|

ನೀವು ಗೂಗಲ್ ಕ್ರೋಮ್ ಬಳಸುವಾಗ ಯಾವುದಾದರೂ ವೆಬ್‌ಸೈಟ್‌ಗೆ ಲಾಗಿನ್ ಆದಾಗ, ನಿಮ್ಮ ಪಾಸ್‌ವರ್ಡ್ ಸೇವ್ ಮಾಡಬೇಕೆ? ಎಂದು ಕ್ರೋಮ್ ಬ್ರೌಸರ್ ಕೇಳಿದಾಗ 'ಯೆಸ್' ಎಂದು ಪಾಸ್‌ವರ್ಡ್ ಸೇವ್ ಮಾಡುವುದು ಅಷ್ಟೇನು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಅಷ್ಟೇನು ಅಪಾಯವು ಸಹ ಕಾಣಿಸುವುದಿಲ್ಲ. ಆದರೆ, ಇದು ನಮ್ಮ ಪೂರ್ಣ ರಕ್ಷಣೆಯಲ್ಲಿ ಇದ್ದರೆ ಮಾತ್ರ.

ಕ್ರೋಮ್‌ನಲ್ಲಿ ಸೇವ್ ಆದ ಪಾಸ್‌ವರ್ಡ್‌ಗಳನ್ನು ಡಿಲೀಟ್ ಮಾಡುವುದು ಹೇಗೆ?

ಕ್ರೋಮ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡುವುದರಿಂದ ನಮ್ಮ ಸುರಕ್ಷತೆ ಗೂಗಲ್‌ಗೆ ಒಪ್ಪಿಸಿಬಿಡುತ್ತೇವೆ. ಹೀಗೆ ಮಾಡಿದಾಗ ಅದರ ಮಾಲಿಕ ನಾವೇ ಆಗಿರುತ್ತೇವೆ. ಆಕಸ್ಮಾತ್ ನೀವು ಬ್ರೌಸರ್ ಅಂಗಡಿಯಲ್ಲೋ ಅಥವಾ ಇತರರ ಡಿವೈಸ್‌ನಲ್ಲಿ ಸೇವ್ ಮಾಡಿದರೆ ಕಥೆಯೇನು?, ಆ ವೆಬ್‌ಸೈಟ್‌ನಲ್ಲಿ ನಿಮ್ಮನ್ನು ಬಿಟ್ಟು ಬೇರೆ ಯಾರಾದರೂ ಲಾಗಿನ್ ಆಗಬಹುದಾದ ಅವಕಾಶ ನೀಡಿದಂತೆ.

ನಮ್ಮದೇ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಪಾಸ್‌ವರ್ಡ್‌ ಸೇವ್ ಮಾಡಲು ಅನುಮತಿ ನೀಡುವುದನ್ನು ಬಿಟ್ಟು ಕ್ರೋಮ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಒಳ್ಳೆಯದು. ಹಾಗಾಗಿ, ಇಂದಿನ ಲೇಖನದಲ್ಲಿ ಅಕಸ್ಮಿಕವಾಗಿ ನೀವು ಕ್ರೋಮ್‌ನಲ್ಲಿ ಪಾಸ್‌ವರ್ಡ್ ಸೇವ್ ಆಗಲು ಅನುಮತಿ ನೀಡಿದರೆ ಅದನ್ನು ತೆರೆಯುವುದು ಹೇಗೆ ಎಂಬುದನ್ನು ತಿಳಿಯೋಣ.

ಹಂತ 1

ಹಂತ 1

ಕ್ರೋಮ್ ಬೌಸರ್‌ನ ಬಲಭಾಗದಲ್ಲಿ ಮೂರು ಗೆರೆಗಳುಳ್ಳ ಮೆನು ಬಟನ್ ಕ್ಲಿಕ್ ಮಾಡಿ. ನಂತರ ಕೆಳಭಾಗದಲ್ಲಿರುವ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ.

ಹಂತ 2

ಹಂತ 2

ಸೆಟ್ಟಿಂಗ್ಸ್ ತೆರೆದ ನಂತರ ಮೊದಲ ಪದರದಲ್ಲಿಯೇ ಕಾಣುವ ಪಾಸ್‌ವರ್ಡ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3

ಹಂತ 3

ನಂತರ ವೆಬ್‌ಸೈಟ್, ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಹೀಗೆ ನೀವು ಸೇವ್ ಮಾಡಿರುವ ಪಾಸ್‌ವರ್ಡ್ ಪಟ್ಟಿ ಅಲ್ಲಿ ಕಾಣಿಸಿಕೊಳ್ಳುತ್ತದೆ.

ಹಂತ 4

ಹಂತ 4

ಪಾಸ್‌ವರ್ಡ್ ಯಾವುದು ಎಂದು ನೋಡಲು ಅಲ್ಲಿ ಐಕಾನ್ ಕ್ಲಿಕ್ ಮಾಡಿ. ಐಕಾನ್ ಕ್ಲಿಕ್ ಮಾಡಿದ ಕೂಡಲೇ ಅದು ಕಂಪ್ಯೂಟರ್ ಲಾಗಿನ್ ಪಾಸ್‌ವರ್ಡ್ ಕೇಳುತ್ತದೆ.

ಹಂತ 5

ಹಂತ 5

ನೀವು ಲಾಗಿನ್ ಪಾಸ್‌ವರ್ಡ್ ನಮೂದಿಸಿದ ಕೂಡಲೇ ನೀವು ಸೇವ್ ಮಾಡಿರುವ ಪಾಸ್‌ವರ್ಡ್ ಡಿಸ್‌ಪ್ಲೇ ಆಗುತ್ತದೆ.

ಹಂತ 6

ಹಂತ 6

ಕಾಣಿಸಿಕೊಂಡ ಪಾಸ್‌ವರ್ಡ್ ಬಲಭಾಗದಲ್ಲಿ ಮೆನು ಕ್ಲಿಕ್ ಮಾಡಿ ಸೇವ್ ಆಗಿರುವ ಪಾಸ್‌ವರ್ಡ್ ರಿಮೂವ್ ಮಾಡಬಹುದು.

ಹಂತ 7

ಹಂತ 7

ನೀವು ಪಾಸ್‌ವರ್ಡ್ ಅಪ್‌ಡೇಟ್ ಮಾಡಿದಾಗ ಕ್ರೋಮ್ ಬ್ರೌಸರ್ ಪಾಸ್‌ವರ್ಡ್ ಅಪ್‌ಡೇಟ್ ಮಾಡಲೇ? ಎಂದು ಕೇಳುತ್ತದೆ. ಅಪ್‌ಡೇಟ್ ಮಾಡಿ.

ಹಂತ 8

ಹಂತ 8

ಈ ರೀತಿ ನಿಮ್ಮ ಪಾಸ್‌ವರ್ಡ್ ಸೇವ್ ಮಾಡಬೇಕೇ? ಎಂಬ ಪ್ರಶ್ನೆಯನ್ನು ಕ್ರೋಮ್ ಕೇಳುತ್ತದೆ. ನಿಮ್ಮ ಕಂಪ್ಯೂಟರ್ ಆಗಿದ್ದರೆ ಅಲ್ಲಿ ಆಫ್ ಮಾಡಿ.

Best Mobiles in India

English summary
Open the Chrome menu using the button on the far right of the browser toolbar.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X