ಸ್ಮಾರ್ಟ್‌ಫೋನ್‌ನಿಂದ ವೈರಸ್‌ ದೂರವಿಡುವುದು ಹೇಗೆ?

Posted By: Staff
ಸ್ಮಾರ್ಟ್‌ಫೋನ್‌ನಿಂದ ವೈರಸ್‌ ದೂರವಿಡುವುದು ಹೇಗೆ?

ಗ್ಯಾಡ್ಜೆಟ್‌ಗಳು ವೈರಸ್‌ಗೆ ತುತ್ತಾಯಿತೆಂದರೆ ಸಾಕು ಬಹುತೇಕ ಹಾಳಾಯಿತೆಂದೆ ಅರ್ಥ. ಅದರಲ್ಲಿಯೂ ಕಂಪ್ಯೂಟರ್‌ಗಳು ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಫೋನ್‌ಗಳು ಹೆಚ್ಚು ವೈರಸ್‌ ದಾಳಿಗೆ ಒಳಗಾಗುತ್ತವೆ ಏಕೆಂದರೆ ಈ ಎಲ್ಲಾ ಸಾಧನಗಳಲ್ಲಿ ಹೆಚ್ಚು ಅಂತರ್ಜಾಲದ ಬಳಕೆ ಮಾಡುದುದರಿಂದ ವೈರಸ್‌ ದಾಳಿಯ ಸಾಧ್ಯತೆ ಕೂಡಾ ಹೆಚ್ಚಿರುತ್ತದೆ. ಆರಂಭದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಪರೇಟಿಂಗ್‌ ಸಿಸ್ಟಂ ನೀಡಲಾಗಿರಲಿಲ್ಲ ಆದರೆ ಇದೀಗ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಮಾರುಕಟ್ಟೆಗೆ ಕಾಲಿರಿಸಿದ ಬಳಿಕೆ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳೂ ಕೂಡಾ ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿರುವುದರಿಂದ ವೈರಸ್‌ ಧಾಳಿಯ ಸಾಧ್ಯತೆಗಳೂ ಕೂಡಾ ಹೆಚ್ಚಾಗಿದೆ.

ಈಗಂತೂ ಸ್ಮಾರ್ಟ್‌ಫೋನ್‌ಗಳ ಮೂಲಕ 24 ಗಂಟೆಗಳ ಕಾಲ ಅಂತರ್ಜಾಲದಲ್ಲಿಯೇ ಕಾಲ ಕಳಿಯುತ್ತೇವೆ ಇದರಿಂದಾಗಿ ಯಾವ ಸಂದರ್ಭದಲ್ಲಿ ಬೆಕಾದರೂ ವೈರಸ್‌ ದಾಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಗಿಜ್ಬಾಟ್‌ ಇಂದು ಸ್ಮಾರ್ಟ್‌ಫೋನ್‌ಗಳನ್ನು ವೈರಸ್‌ ಧಾಳಿಯಿಂದ ಹೇಗೆ ದೂರವುಡುವುದು ಎಂಬುದರ ಕುರಿತಾಗಿ ಮಾಹಿತಿ ತಂದಿದೆ ಓದಿ ನೋಡಿ. ಈ ಸರಳ ವಿಧಾನದ ಮೂಲಕ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಅಬ=ನ್ನು ವೈರಸ್‌ ಧಾಳಿಯಿಂದ ರಕ್ಷಿಸಿ ಕೊಳ್ಳಬಹುದಾಗಿದೆ.

ಮೊಬೈಲ್‌ ರಿಸ್ಟೋರ್‌ ಮಾಡಿ: ಅಂದಹಾಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈಗಾಗಲೆ ವೈರಸ್‌ ಇದೇ ಎಂದಲ್ಲಿ ತಕ್ಷಣವೇ ರಿಸ್ಟೋರ್‌ ಮಾಡಿಬಿಡಿ. ಫೋನ್‌ ರಿಸ್ಟೋರ್‌ ಮಾಡಲು ಸೆಟ್ಟಿಂಗ್ಸಗೆ ತೆರಳಿ ಡೇಟಾ ರಿಸ್ಟೋರ್‌ ಆಪ್ಷನ್‌ ಆಯ್ಕೆ ಮಾಡಿಕೊಳ್ಳಿ, ಇದರಿಂದಾಗಿ ನಿಮ್ಮ ಫೋನ್‌ ಫ್ಯಾಕ್ಟರೀ ಸೆಟ್ಟಿಂಗ್‌ ಮೋಡ್‌ಗೆ ತಲುಪಿ ಫೋನ್‌ನಲ್ಲಿನ ಎಲ್ಲಾ ಡೇಟಾ ಹಾಗೂ ವೈರಸ್‌ಗೂ ಡಿಲೀಟ್‌ ಆಗಿ ಬಿಡುತ್ತದೆ.

ಉತ್ತಮ ಮೊಬೈಲ್‌ ಆನ್ಟಿ ವೈರಸ್‌ ಇನ್ಸಟಾಲ್‌ ಮಾಡಿಕೊಳ್ಳಿ: ನೀವೂ ಸ್ಮಾರ್ಟ್‌ಫೋನ್‌ ಬಳಕೆದಾರರಾಗಿದ್ದಲ್ಲಿ ಉತ್ತಮ ಗುಣಮಟ್ಟದ ಮೊಬೈಲ್‌ ಆನ್ಟಿ ವೈರಸ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಕೊಳ್ಳಿ. ಹಾಗೂ ಮೊಬೈಲ್‌ನಲ್ಲಿನ ಬೇಡದ ಅಪ್ಲಿಕೇಷನ್ಸ್‌ ಹಾಗೂ ಮಾಲ್ವೇರ್‌ಗಳನ್ನು ಡಿಲೀಟ್‌ ಮಾಡಿಬಿಡಿ.

ಡೌನ್ಲೋಡ್ ಮಾಡುವಾಗ ಎಚ್ಚರ ವಹಿಸಿ: ಅಂತರ್ಜಾಲದ ಮೂಲಕ ನೀವು ವಿಟಿಯೋ ಅಥವಾ ಬೇರೆ ಇನ್ನಾವ ಸಾಫ್ಟವೇರ್‌ಗಳನ್ನು ಡೌನ್ಲೋಡ್‌ ಮಾಡುವ ಮುನ್ನ ಕೊಂಚ್ಚ ಎಚ್ಚರ ವಹಿಸುವುದು ಸೂಕ್ತ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಟೋಮ್ಯಾಟಿಕ್‌ ಡೌನ್ಲೋಡ್‌ ಆಪ್ಷನ್‌ ಬದಲಾಗಿ ಡೌನ್ಲೋಡ್‌ ಪರ್ಮೀಷನ್‌ ಆಪ್ಷನ್ ಆಯ್ಕೆಮಾಡಿಕೊಳ್ಳಿ ಈ ಮೂಲಕ ಯಾವೂದೇ ಅಪ್ಲಿಕೇಷನ್‌ಗಳು ನಿಮ್ಮ ಅನುಮತಿ ಇಲ್ಲದೆ ಡೌನ್ಲೋಡ್‌ ಆಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್‌ ದಾಳಿನಡೆಸುವ ಸಾಧ್ಯತೆ ಕಡಿಮೆ ಇರುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot