ನೀವು ಪ್ರಯಾಣಿಸುತ್ತಿರುವ ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿದ್ದರೆ ಗೂಗಲ್ ಮ್ಯಾಪ್‌ನಲ್ಲಿ ಅಪ್ಡೇಟ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಕೇವಲ ರಸ್ತೆ ಸೂಚಕವಾಗಿ ಮಾತ್ರವಲ್ಲಿ ನೀವು ಸಂಚರಿಸುವ ರಸ್ತೆಯಲ್ಲಿ ಟ್ರಾಫಿಕ್ ಹೇಗಿದೆ ಎಂಬೆಲ್ಲಾ ಮಾಹಿತಿಯನ್ನು ಸಹ ತಿಳಿಸುತ್ತಿರುತ್ತದೆ. ಇನ್ನು ನೀವು ಕೂಡ ಸಂಚಾರ ಮಾಡುತ್ತಿರುವ ರಸ್ತೆಯಲ್ಲಿ ಏನಾದರೂ ಸಮಸ್ಯೆ ಆಗಿದ್ದರೆ ಅದನ್ನು ಗೂಗಲ್ ಮ್ಯಾಪ್‌ನಲ್ಲಿ ಅಪ್ಡೇಟ್ ಮಾಡಬಹುದು. ಇದರಿಂದ ಬೇರೆಯವರಿಗೆ ಸಹಾಯವಾಗಲಿದೆ.
ಹೌದು, ನೀವು ಪ್ರಯಾಣಿಸುತ್ತಿರುವ ರಸ್ತೆಯಲ್ಲಿ ಆಕ್ಸಿಡೆಂಟ್, ಇಲ್ಲವೇ ಬೇರೆ ಯಾವುದೋ ಕಾರಣದಿಂದ ಟ್ರಾಫಿಕ್ಸ್ ಜಾಮ್ ಆಗಿದ್ದರೆ ಕೂಡಲೇ ಅದನ್ನು ನೀವು ಗೂಗಲ್ ಮ್ಯಾಪ್‌ನಲ್ಲಿ ಅಪ್ಡೇಟ್ ಮಾಡಬಹುದು. ಇದರಿಂದ ಬೇರೆಯವರು ಆ ರಸ್ತೆಯ ಬದಲಿಗೆ ಬೇರೆ ರಸ್ತೆಯಲ್ಲಿ ಪ್ರಯಾಣಿಸುವುದಕ್ಕೆ ಮುಂದಾಗಬಹುದು. ಹಾಗಾದ್ರೆ ಗೂಗಲ್ ಮ್ಯಾಪ್‌ನಲ್ಲಿ ಆಕ್ಸಿಡೆಂಟ್, ಟ್ರಾಫಿಕ್ಸ್ ಜಾಮ್ ವಿಷಯಗಳನ್ನು ರಿಪೋರ್ಟ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು, ಮಳೆಯಿಂದ ಸೆತುವೆ ಕುಸಿತ, ಪ್ರವಾಹ ತೊಂದರೆ ಇತ್ಯಾಧಿ ಸಮಸ್ಯೆಗಳು ಎದುರಾಗುತ್ತಲೆ ಇವೆ. ಇವುಗಳನ್ನು ಗಮನಿಸಿದ ಕೆಲವರು ಪ್ರಯಾಣಕ್ಕೆ ಮುಂದಾಗುವವರಿಗೆ ಸಾಕಷ್ಟು ಸಮಸ್ಯೆಯಂತೂ ತಪ್ಪಿದ್ದಲ್ಲ. ಆದರೆ ನೀವು ಪ್ರಯಾಣಿಸುವ ರಸ್ತೆ ಹೇಗಿದೆ? ಟ್ರಾಫಿಕ್ ಜಾಮ್ ಇದೆಯಾ ಇಲ್ಲವೆ ಅನ್ನೊದನ್ನ ಗೂಗಲ್ ಮ್ಯಾಪ್‌ನಲ್ಲಿ ತಿಳಿದುಕೊಳ್ಳಬಹುದು. ಜೊತೆಗೆ ನೀವು ಸಾಗುವ ದಾರಿಯಲ್ಲಿ ಏನಾದರೂ ಆಕ್ಸಿಡೆಂಟ್ ಅಥವಾ ಯಾವುದೇ ತೊಂದರೆ ಆಗಿದ್ದರೂ ಸಹ ಅದನ್ನು ಗೂಗಲ್ ಮ್ಯಾಪ್‌ನಲ್ಲಿ ಅಪ್ಡೇಟ್ ಮಾಡಬಹುದು. ಇದರಿಂದ ಇತರರಿಗೆ ಎಚ್ಚರಿಕೆ ನೀಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡಲಿದೆ.
ಗೂಗಲ್ ಮ್ಯಾಪ್‌ನಲ್ಲಿ ಆಕ್ಸಿಡೆಂಟ್ ಬಗ್ಗೆ ರಿಪೋರ್ಟ್ ಮಾಡುವುದು ಹೇಗೆ?
ಗೂಗಲ್ ಮ್ಯಾಪ್ ಲೊಕೇಶನ್ ಬಳಕೆ ಹೆಚ್ಚಾದಂತೆ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಗೂಗಲ್ ಸೆರ್ಪಡೆ ಮಾಡಿದೆ. ಇದರಲ್ಲಿ ಗೂಗಲ್ ಮ್ಯಾಪ್‌ನಲ್ಲಿ ನೀವು ಅಪ್ಡೇಟ್ ಮಾಡುವುದಕ್ಕೆ ಅವಕಾಶ ನೀಡಿರುವುದು ಕೂಡ ಸೇರಿದೆ. ಇದರಿಂದ ರಸ್ತೆ ಮುಚ್ಚಿರುವುದು, ರಸ್ತೆ ಮಾರ್ಗ, ಸೇತುವೆ ಕುಸಿತದಂತಹ ಮಾಹಿತಿಯನ್ನು ರಿಪೋರ್ಟ್ ಮಾಡಬಹುದು. ಇದಕ್ಕಾಗಿ ನೀವು ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕಾಗುತ್ತದೆ.
* ಮೊದಲಿಗೆ ಗೂಗಲ್ ಮ್ಯಾಪ್‌ನಲ್ಲಿ ನ್ಯಾವಿಗೇಟ್ ಮಾಡುವಾಗ ಗೋಚರಿಸುವ ಕೆಳಗಿನ ಬಾರ್‌ನಿಂದ ಮೇಲಕ್ಕೆ ಸ್ವೈಪ್ ಮಾಡಿ
* ಇದರಲ್ಲಿ ನಿಮಗೆ ರಿಪೋರ್ಟ್ ಬಟನ್ ಕಾಣಲಿದೆ
* ರಿಪೋರ್ಟ್ ಬಟನ್ ಮೇಲೆ ಟ್ಯಾಪ್ ಮಾಡಿ,
* ನೀವು ರಿಪೋರ್ಟ್ ಮಾಡಲು ಬಯಸುವ ಘಟನೆಯ ಪ್ರಕಾರವನ್ನು ಆಯ್ಕೆಮಾಡಿ
ಇದು ಇದೇ ಹಾದಿಯಲ್ಲಿ ಪ್ರಯಾಣಿಸುವ ಬಳಕೆದಾರರನ್ನು ಗೂಗಲ್ ಎಚ್ಚರಿಸಲು ಅವಕಾಶ ನೀಡಲಿದೆ.

ಮ್ಯಾಪ್ಪಲ್ಸ್‌ನಲ್ಲಿ ರಿಪೋರ್ಟ್ ಸೇರಿವುದು ಹೇಗೆ?
ಗೂಗಲ್ ಮ್ಯಾಪ್ಸ್ ಮಾತ್ರವಲ್ಲ MapMyIndia ದ ನ್ಯಾವಿಗೇಷನ್ ಅಪ್ಲಿಕೇಶನ್ ಮ್ಯಾಪ್ಪಲ್ಸ್‌ನಲ್ಲಿಯೂ ಕೂಡ ರಿಪೋರ್ಟ್ ಮಾಡುವುದಕ್ಕೆ ಅವಕಾಶವಿದೆ. ಇದರಲ್ಲಿ ನೀವು ರಸ್ತೆ ಸುರಕ್ಷತೆ, ಟ್ರಾಫಿಕ್ ಜಾಮ್ ಹಾಗೂ ಎಚ್ಚರಿಕೆಗಳ ಬಗ್ಗೆ ರಿಪೋರ್ಟ್ ಮಾಡಲು ಸಾಧ್ಯವಾಗಲಿದೆ.
* ಮೊದಲಿಗೆ ನಿಮ್ಮ ಫೋನ್‌ನಲ್ಲಿ ಮ್ಯಾಪ್ಪಲ್ಸ್ ಅಪ್ಲಿಕೇಶನ್ ತೆರೆಯಿರಿ
* ಇದೀಗ ಸ್ಕ್ರೀನ್ ಕೆಳಗಿನ ಅರ್ಧಭಾಗದಲ್ಲಿ ಗೋಚರಿಸುವ 'ಕ್ವಿಕ್ ಆಕ್ಸಸ್' ವಿಭಾಗವನ್ನು ಆಯ್ಕೆಮಾಡಿ
* ಇದರಲ್ಲಿ 'ಪೋಸ್ಟ್ ಆನ್ ಮ್ಯಾಪ್' ಐಕಾನ್ ಅನ್ನು ಟ್ಯಾಪ್ ಮಾಡಿ.
* ಇದೀಗ ನೀವು ಸಂಚಾರ, ಸುರಕ್ಷತೆ ಮತ್ತು ಸಂಚಾರ ಉಲ್ಲಂಘನೆಯಂತಹ ಹಲವು ವಿಭಾಗಗಳನ್ನು ಕಾಣಬಹುದು.
* ಇದರಲ್ಲಿ ನೀವು ಯಾವ ವರ್ಗದ ಮೇಲೆ ರಿಪೋರ್ಟ್ ಮಾಡುತ್ತಿರಿ ಆ ವರ್ಗವನ್ನು ಟ್ಯಾಪ್ ಮಾಡಿ
* ನಂತರ 'Search or choose location from map' ಆಯ್ಕೆಯ ಬಲಭಾಗದಲ್ಲಿರುವ ಎಡಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
* ಇದರಲ್ಲಿ ಸ್ಥಳವನ್ನು ಆಯ್ಕೆ ಮಾಡಿ
* ರಿಪೋರ್ಟ್ ಮಾಡುವಾದ ಸ್ಥಳದಲ್ಲಿನ ಘಟನೆ ವಿವರಿಸುವ ಚಿತ್ರಗಳನ್ನು ಕೂಡ ಸೇರಿಸಬಹುದಾಗಿದೆ.
* ನೀವು ಮಾಹಿತಿಯನ್ನು ಸೇರಿಸಿದ ನಂತರ, 'ಡನ್' ಬಟನ್ ಮೇಲೆ ಟ್ಯಾಪ್ ಮಾಡಿ
ನೀವು ನೀಡಿದ ಮಾಹಿತಿಯನ್ನು ಮ್ಯಾಪ್‌ಗಳು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾದ್ಯವಾಗಲಿದೆ.


Click it and Unblock the Notifications








