ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪೋಸ್ಟ್‌ ಅನ್ನು ರಿಪೋಸ್ಟ್‌ ಮಾಡುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮಿಡಿಯಾ ಪ್ಲಾಟ್‌ಫರ್ಮ್‌ಗಳಲ್ಲಿ ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ಇನ್‌ಸ್ಟಾಗ್ರಾಮ್‌ ಈಗಾಲೇ ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಕೂಡ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದರಲ್ಲಿ ಹಲವು ಫೀಚರ್ಸ್‌ಗಳನ್ನು ಹೇಗೆ ಬಳಕೆ ಮಾಡುವುದು ಅನ್ನೊದು ಕೆಲವರಿಗೆ ತಿಳಿದೇ ಇಲ್ಲ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ, ವಿಡಿಯೋ ಅಥವಾ ಇನ್‌ಸ್ಟಾಗ್ರಾಮ್ ಸ್ಟೋರಿಗಳನ್ನು ರಿಪೋಸ್ಟ್ ಮಾಡಬೇಕಾದರೆ ಅದಕ್ಕೂ ಕೂಡ ಅವಕಾಶವಿದೆ. ನೀವು ಮಾಡಿದ ಪೋಸ್ಟ್ ವಿಷಯವನ್ನು ರಿಫೋಸ್ಟ್‌ ಮಾಡುವುದಕ್ಕೆ ಇಷ್ಟಪಡುವವರಿಗೆ ಇದು ನಿರ್ಣಾಯಕವಾಗುತ್ತದೆ. ಆದರೆ, ಇದನ್ನು ಬಳಸುವುದಕ್ಕೆ ಕೆಲವು ಹಂತಗಳನ್ನು ಅನುಸರಿಸಬೇಕಾಗಿದೆ. ಹಾಗಾದ್ರೆ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ರಿಪೋಸ್ಟ್ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗಳು ಮತ್ತು ಸ್ಟೋರಿಗಳನ್ನು ರಿಪೋಸ್ಟ್‌ ಮಾಡುವುದಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ನೇರವಾಗಿ ಸಾಧ್ಯವಿಲ್ಲ. ಇದಕ್ಕಾಗಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬೇಕಾಗುತ್ತದೆ. ಅದರಲ್ಲೂ ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಲಭ್ಯವಿರುವ ‘ರಿಪೋಸ್ಟ್ ಫಾರ್ ಇನ್‌ಸ್ಟಾಗ್ರಾಮ್' ಅಪ್ಲಿಕೇಶನ್‌ ಸಾಕಷ್ಟು ಪ್ರಸಿದ್ಧವಾಗಿದೆ. ಇದನ್ನು ಬಳಸಿ ನೀವು ಇಷ್ಟಪಡುವದನ್ನು ನೀವು ಆಯ್ಕೆ ಮಾಡಬಹುದು ಮತ್ತು ರಿಪೋಸ್ಟ್‌ ಮಾಡಬಹುದು. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಬಳಸಿ ರಿಪೋಸ್ಟ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

ಇನ್‌ಸ್ಟಾಗ್ರಾಮ್‌ನಲ್ಲಿ ರಿಪೋಸ್ಟ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ರಿಪೋಸ್ಟ್ ಮಾಡುವುದು ಹೇಗೆ?

ಹಂತ 1: ನಿಮ್ಮ Android ಅಥವಾ iOS ಡಿವೈಸ್‌ನಲ್ಲಿ ‘ರಿಫೋಸ್ಟ್‌ ಫಾರ್‌ ಇನ್‌ಸ್ಟಾಗ್ರಾಮ್‌' ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಹಂತ 2: ಈಗ ನೀವು ಅಪ್ಲಿಕೇಶನ್ ಮೂಲಕ, ನಿಮ್ಮ Instagram ಪ್ರೊಫೈಲ್‌ಗೆ ಹೋಗಿ.

ಹಂತ 3: ನೀವು ರಿಪೋಸ್ಟ್ ಮಾಡಲು ಬಯಸುವ ಫೋಟೋ ಅಥವಾ ವೀಡಿಯೊಗಾಗಿ ನೋಡಿ. ಪೋಸ್ಟ್‌ನಲ್ಲಿ ಮೂರು-ಚುಕ್ಕೆಗಳ ಮೆನುವನ್ನು ಆಯ್ಕೆ ಮಾಡಿ ಮತ್ತು ನಂತರ ನಕಲು ಲಿಂಕ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಈಗ, ‘ರಿಪೋಸ್ಟ್ ಫಾರ್‌ ಇನ್‌ಸ್ಟಾಗ್ರಾಮ್‌' ಅಪ್ಲಿಕೇಶನ್‌ಗೆ ಹಿಂತಿರುಗಿ ಮತ್ತು ಲಿಂಕ್ ಅನ್ನು ಫೆಸ್ಟ್‌ ಮಾಡಿ.

ಹಂತ 5: ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಕಾಣಿಸಿಕೊಂಡ ನಂತರ, ನೀವು ಕೆಲವು ಎಡಿಟ್‌ ಅನ್ನು ಸಹ ಮಾಡಬಹುದು.

ಹಂತ 6: ನಂತರ ರಿಪೋಸ್ಟ್ ಆಯ್ಕೆಯನ್ನು ಟ್ಯಾಪ್‌ ಮಾಡಿ. ಅಪ್ಲಿಕೇಶನ್ ಅಗತ್ಯ ಅನುಮತಿಗಳನ್ನು ಕೇಳುತ್ತದೆ ಮತ್ತು ನಿಮಗಾಗಿ ಇನ್‌ಸ್ಟಾಗ್ರಾಮ್‌ ಅನ್ನು ತೆರೆಯುತ್ತದೆ.

ಹಂತ 7: ಇದಾದ ನಂತರ ನಿಮ್ಮ ಸ್ಟೋರಿ ಅಥವಾ ಫೀಡ್ ಪೋಸ್ಟ್ ಆಗಿ ರೀ ಪೋಸ್ಟ್ ಮಾಡುವ ನಡುವೆ ಆಯ್ಕೆ ಮಾಡಬಹುದಾಗಿದೆ.

ರಿಪೋಸ್ಟ್

ಇದಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ರಿಪೋಸ್ಟ್ ಮಾಡಲು ಮತ್ತೊಂದು ಪರಿಹಾರವಿದೆ. ನೀವು ರಿಪೋಸ್ಟ್ ಮಾಡಲು ಬಯಸುವ ಯಾವುದೇ ಫೋಟೋದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು. ನಂತರ, ಅಗತ್ಯ ಎಡಿಟ್‌ ಅನ್ನು ಮಾಡಿ ಇನ್‌ಸ್ಟಾಗ್ರಾಮ್ ಪೋಸ್ಟ್ ಅಥವಾ ಸ್ಟೋರಿಯಂತೆ ಪೋಸ್ಟ್ ಮಾಡಬಹುದು. ವೀಡಿಯೊಗಳನ್ನು ರಿಪೋಸ್ಟ್‌‌ ಮಾಡಲು ಸ್ಕ್ರೀನ್-ರೆಕಾರ್ಡಿಂಗ್ ಆಯ್ಕೆಯು ಸಹಾಯ ಮಾಡುತ್ತದೆ.

Best Mobiles in India

English summary
Since Instagram doesn’t come with an inbuilt ability to reshare posts and stories, there are third-party apps to do the deed.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X