ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಪರ್ಸ್‌ನಲ್‌ ಡೇಟಾವನ್ನು ರಕ್ಷಿಸುವುದು ಹೇಗೆ ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ಡೇಟಾ ಸುರಕ್ಷತೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ನಲ್ಲಿ ಅಡಕವಾಗಿರುವ ನಿಮ್ಮ ವೈಯುಕ್ತಿಕ ಡೇಟಾವನ್ನು ಸುರಕ್ಷಿತವಾಗಿ ಇಡುವುದು ಹೇಗೆ ಅನ್ನೊ ಗೊಂದಲ ಎಲ್ಲರಿಗೂ ಇದ್ದೆ ಇದೆ. ಅದರಲ್ಲು ಟೆಕ್ನಾಲಜಿ ಮುಂದುವರೆದಂತೆ ಹ್ಯಾಕರ್ಸ್‌ಗಳು ಕೂಡ ಸುಲಭವಾಗಿ ಬಳಕೆದಾರರ ಡೇಟಾ ಮಾಹಿತಿಯನ್ನ ಕದಿಯುವಲ್ಲಿ ಹೊಸ ಮಾರ್ಗಗಳನ್ನ ಅನುಸರಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಹೆಚ್ಚು ಸ್ಪ್ಯಾಮ್‌ಗೆ ಒಳಗಾದ ಐದನೇ ದೇಶ ಎಂದು ಹೇಳಲಾಗ್ತಿದೆ. ಅದರಲ್ಲೂ ಒಟ್ಟು ಸ್ಪ್ಯಾಮ್ ಕರೆಗಳಲ್ಲಿ 15% ವಂಚನೆಯ ಕರೆಗಳೇ ಕೂಡಿವೆ ಅನ್ನೊದು ಶಾಕಿಂಗ್‌ ಸತ್ಯವಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಜಮಾನ ವಿಸ್ತಾರವಾದಷ್ಟು ಹ್ಯಾಕರ್ಸ್‌ಗಳ ದಾಳಿ ಕೂಡ ವಿಸ್ತಾರವಾಗುತ್ತಲೇ ಇದೆ. ಹೊಸ ಮಾಗರ್ಗಗಳ ಮೂಲಕ ಹ್ಯಾಕರ್ಸ್‌ಗಳು ತಮ್ಮ ಸ್ಪ್ಯಾಮ್‌ ದಾಳಿಗಳನ್ನ ಮಾಡುತ್ತಲೇ ಇದ್ದಾರೆ. ಸದ್ಯ ಇಂತಹ ಹ್ಯಾಕರ್ಸ್‌ಗಳಿಂದ ನಿಮ್ಮ ಡೇಟಾ ಸುರಕ್ಷತೆ ಮಾಡಿಕೊಳ್ಳುವುದು ಅತಿ ದೊಡ್ಡ ಸವಾಲಾಗಿದೆ. ಆದರೂ ಕೂಡ ಡೇಟಾ ಸುರಕ್ಷತೆಯನ್ನ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಇದೇ ಕಾರಣಕ್ಕೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ನಿಮ್ಮ ವೈಯುಕ್ತಿಕ ಡೇಟಾ ಮಾಹಿತಿಯನ್ನ ರಕ್ಷಣೆ ಮಾಡಲು ಕೆಲವು ನಿಯಮಗಳನ್ನ ಅನುಸರಿಬೇಕಿದೆ. ಅವುಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ವೈಯಕ್ತಿಕ ಡೇಟಾ

ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದ ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಸವಾಲುಗಳನ್ನ ಎದುರಿಸುತ್ತಿದ್ದಾರೆ. ಅದರಲ್ಲೂ ಸ್ಪ್ಯಾಮ್ ಕರೆಗಳು, ಜಿಯೋಲೋಕಲೈಸೇಶನ್ ಟ್ರ್ಯಾಕಿಂಗ್, ಬಳಕೆದಾರರ ಡಿಜಿಟಲ್ ಮತ್ತು ಭೌತಿಕ ಗುರುತುಗಳ ನಡುವಿನ ಸಹ-ಸಂಬಂಧ, ಕ್ಯಾಮೆರಾ ಮತ್ತು ಮೈಕ್ರೊಫೋನ್ ಪ್ರವೇಶಗಳು ಮತ್ತು ಸಂಪರ್ಕ ಪುಸ್ತಕ ಸ್ನೂಪಿಂಗ್ ಕೆಲವು ಸ್ಮಾರ್ಟ್ಫೋನ್ ಬಳಕೆದಾರರು ಇಂದು ಎದುರಿಸುತ್ತಿರುವ ದೊಡ್ಡ ಸವಾಲುಗಳಾಗಿವೆ. ಅದರಲ್ಲೂ ನಮ್ಮ ವೈಯಕ್ತಿಕ ಡೇಟಾವನ್ನು ನಮ್ಮ ದೈನಂದಿನ ಚಟುವಟಿಕೆಗಳಿಗೆ ಲಿಂಕ್ ಮಾಡುವ ಕೆಲವು ವೆಬ್‌ಸೈಟ್‌ಗಳು ಕೂಡ ನಮ್ಮ ಡೇಟಾ ಮಾಹಿತಿ ಸೋರಿಕೆಗೆ ಕಾರಣವಾಗಿವೆ.

ಸ್ಮಾರ್ಟ್‌ಫೋನ್

ಆದರೆ ಸ್ಮಾರ್ಟ್‌ಫೋನ್ ಬಳಕೆದಾರರು ಅವರ ವೈಯಕ್ತಿಕ ಡೇಟಾವನ್ನು ರಕ್ಷಿಸಲು ಎರಡು ಅಂಶಗಳ ದೃಡೀಕರಣವನ್ನು ಸೆಟ್‌ ಮಾಡುವುದು.ವಿಭಿನ್ನ ಸೈಟ್‌ಗಳಿಗೆ ಸಂಕೀರ್ಣ ಪಾಸ್‌ವರ್ಡ್‌ಗಳನ್ನು ಬಳಸುವುದು, ಅಪರಿಚಿತ ಮೂಲಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು, ಅಪ್ಲಿಕೇಶನ್‌ಗಳಿಗೆ ಅಗತ್ಯವಾದ ಪ್ರವೇಶಗಳನ್ನು ಮಾತ್ರ ನೀಡುವುದು. ಪ್ಲೇಸ್‌ ಟ್ರ್ಯಾಕಿಂಗ್ ಅನ್ನು ಆಫ್ ಮಾಡುವುದು ಮತ್ತು ಅಗತ್ಯವಿದ್ದಾಗ ಮಾತ್ರ ಫೋನ್ ಸಂಖ್ಯೆಯನ್ನು ಒದಗಿಸುವುದು. ಅಲ್ಲದೆ ಕಚೇರಿಗಾಗಿಯೇ ಪ್ರತ್ಯೇಕ ಫೋನ್ ಸಂಖ್ಯೆಗಳನ್ನು ಹೊಂದುವುದು ಸಹ ಡೇಟಾ ಸೋರಿಕೆಯನ್ನು ತಪ್ಪಿಸುವ ಪ್ರಮುಖ ತಂತ್ರಗಳಲ್ಲಿ ಒಂದಾಗಿದೆ.

ಪಾಸ್‌ವರ್ಡ್

ಇವುಗಳ ಜೊತೆಗೆ, ಕ್ರೆಡಿಟ್ ಕಾರ್ಡ್‌ಗಳು ಅಥವಾ ಇ-ವ್ಯಾಲೆಟ್‌ಗಳಂತಹ ತೃತೀಯ ಸೇವೆಗಳನ್ನು ಬಳಸುವಾಗ ಪಾಸ್‌ವರ್ಡ್‌ಗಳನ್ನ ಬಳಸುವುದು ಕೂಡ ಸೂಕ್ತವಾಗಿದೆ ನಿಮ್ಮ ಬ್ಯಾಂಕಿಂಗ್ ರುಜುವಾತುಗಳನ್ನು ಅಪ್ಲಿಕೇಶನ್‌ಗಳಲ್ಲಿ ಉಳಿಸದಿರುವುದು ಯಾವಾಗಲೂ ಉತ್ತಮ. ಯಾವುದೇ ಅಪರಿಚಿತ ಅಪ್ಲಿಕೇಶನ್‌ನ ಗಳನ್ನು ತಕ್ಷಣ ಡೌನ್‌ಲೋಡ್ ಮಾಡಬೇಡಿ. ಆನ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡುವ ಮೊದಲು, ಎಲ್ಲವೂ ಸರಿ ಇದೆಯಾ ಅನ್ನೊದನ್ನ, ಹಾಗೀಊ ನಿವು ಪಾವತಿ ಮಾಡುತ್ತಿರುವ ವೆಬ್‌ಸೈಟ್‌ ವಿಶ್ವಾಸಾರ್ಹವಾಗಿದೆಯ ಅನ್ನೊದನ್ನ ಮೊದಲು ಖಚಿತಪಡಿಸಿಕೊಳ್ಳಬೇಕು. ಈ ಮೂಲಕ ಡೇಟಾ ಸುರಕ್ಷತೆಯ ಬಗ್ಗೆ ಎಚ್ಚರಿಕೆಯನ್ನ ವಹಿಸಬಹುದಾಗಿದೆ.

Most Read Articles
Best Mobiles in India

English summary
Deploying two-factor authentication, not clicking links from unknown sources, giving apps only the required accesses.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X