Subscribe to Gizbot

ಲ್ಯಾಪ್‌ಟಾಪ್‌ಗಳನ್ನು ನೀರಿನಿಂದ ರಕ್ಷಿಸುವುದು ಹೇಗೆ?

Posted By: Super

ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸುವಾಗ ಸಹಜವಾಗಿ ಕಾಫೀ, ಟೀ ಅಥವಾ ಇತರೆ ದ್ರವ ರೂಪದ ಪದಾರ್ಥಗಳನ್ನು ಸೇವಿಸುತ್ತೇವೆ ಅಲ್ಲವೆ. ಇಂತಹ ಸಂದರ್ಭದಲ್ಲಿ ಅಕಸ್ಮಾತ್‌ ಆಗಿ ಇಂತಹ ದ್ರವರೂಪದ ಪದಾರ್ಥಗಳು ನಿಮ್ಮ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ಮೇಲೆ ಬಿದ್ದಲ್ಲಿ ಮಾಡುವುದಾದರೂ ಏನು? ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮೇಲೆ ನೀರು ಬಿತ್ತೆಂದರೆ ಕೆಟ್ಟು ಹೋಗುತ್ತದೆ ಎಂಬುದು ಎಲ್ಲರಿಗೂ ತಿಳಿದದುರುವ ಸಂಗತಿ. ಹಾಗಿದ್ದಲ್ಲಿ ದ್ರವ ರೂಪದ ಪದಾರ್ಥ ಬಿದ್ದಾಗ ಏನು ಮಾಡಬೇಕು ಎಂಬುದಕ್ಕೆ ಗಿಜ್ಬಾಟ್‌ ಕೆಲ ಟಿಪ್ಸ್‌ಗಳನ್ನು ತಂದಿದೆ ಒಮ್ಮೆ ಓದಿ ನೋಡಿ ನಿಮ್ಮ ಲ್ಯಾಪ್‌ಟಾಪ್‌ ಹಾಗೂ ಕಂಪ್ಯೂಟ್‌ ನೀರು ಬಿದ್ದು ಹಾಳಾಗುವುದನ್ನು ತಪ್ಪಿಸಿಕೊಳ್ಳಿ.

ಲ್ಯಾಪ್‌ಟಾಪ್‌ಗಳನ್ನು ನೀರಿನಂತಹ ದ್ರವ ಪದಾರ್ಥ ಬಿದ್ದಾಗ ಹೀಗೆ ಮಾಡಿ.

1- ಮೊದಲಿಗೆ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ನ ಪ್ಲಗ್‌ಗಳನ್ನು ತೆಗೆಯಿರಿ. ನೀವು ಲ್ಯಾಪ್‌ಟಾಪ್‌ ಬಳಸುತ್ತಿದ್ದಲ್ಲಿ ಅದರ ಬ್ಯಾಟರೀ ಕೂಡ ತೆಗೆದುಬಿಡಿ. ಏಕೆಂದರೆ ನೀರು ಬಿದ್ದಾಕ್ಷಣ ಶಾರ್ಟ್‌ಸರ್ಕ್ಯೂಟ್‌ ಆಗುವ ಸಾಧ್ಯತೆಗಳಿರುತ್ತದೆ. ಲಿಕ್ವಿಡ್‌ ಎಲ್ಲಾ ಸರ್ಕ್ಯೂಟ್‌ಗಳನ್ನು ಜೋಡಿಸುವುದರಿಂದ ಮದರ್‌ಬೋರ್ಡ್‌ ಸುಟ್ಟು ಹೋಗು ಸಾಧ್ಯತೆಗಳಿರುತ್ತದೆ.

2-ಪಿಸಿ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್‌ ಕನೆಕ್ಷನ್‌ ಕೊಟ್ಟಿದ್ದಲ್ಲಿ ಅದನ್ನೂ ಕೂಡ ಬೇರ್ಪಡಿಸಿ ಇದರಿಂದ ಡಿವೈಸ್‌ ಹಾಳಾಗದಂತೆ ತಡೆಯ ಬಹುದಾಗಿದೆ.

3- ಪಿಸಿ ಆಗಲಿ ಇಲ್ಲಾ ಲ್ಯಾಪ್‌ ಟಾಪ್‌ ಆಗಲಿ ಕೀಬೋರ್ಡ್‌ ಮೇಲೆ ನೀರು ಬಿದ್ದಲ್ಲಿ ತಕ್ಷಣವೇ ಉಲ್ಟಾ ಮಾಡಿ ಇದರಿಂದ ನೀರು ಹೆಚ್ಚು ಒಳ ಪ್ರವೇಶಿಸುವುದನ್ನು ತಡೆಯ ಬಹುದಾಗಿದೆ.

4-ಲಿಕ್ವಿಡ್‌ ಒರಿಸಲು ನೈಲಾನ್‌ ಅಥವಾ ರೆಯಾನ್‌ ಬಟ್ಟೆಗಳ ಬದಲಾಗಿ ನೀರನ್ನು ಚೆನ್ನಾಗಿ ಹೀರಿಕೊಳ್ಳ ಬಲ್ಲ ಬಟ್ಟೆಯಿಂದ ಒರಿಸಿ.

5-ಈಗಂತೂ ಹಲವು ಲ್ಯಾಪ್‌ ಟಾಪ್‌ಗಳ ಕೀಪ್ಯಾಡ್‌ಗಳಲ್ಲಿ ವಾಟರ್‌ ಪ್ರೋಫ್‌ ಪ್ರೊಟೆಕ್ಷನ್‌ ನೀಡಲಾಗಿರುತ್ತದೆ ಇದರಿಂದ ನೀರಿನಂತಹ ಪದಾರ್ಥಗಳು ಡಿವೈಸ್‌ನ ಒಳ ಹೋಗಲು ಸಾಧ್ಯವಿಲ್ಲ.

6- ಅಂದಾಹಾಗೆ ಕೆಲದ್ರವ ಪದಾರ್ಥಗಳು ಒಣಗಿದ ಮೇಲೆ ಅಂಟಿಕೊಳ್ಳುತ್ತವೆ ಆದ್ದರಿಂದ ಅಂತಹ ಪದಾರ್ಥಗಳನ್ನು ಬಿದ್ದ ತಕ್ಷಣವೇ ಒರಿಸಿಬಿಡಿ ಇಲ್ಲವಾದರೆ ನಂತರ ಅದನ್ನು ಕ್ಲೀನ್‌ ಮಾಡಿವುದು ಕಷ್ಟವಾಗಿ ಬಿಡುತ್ತದೆ.

7- ಲ್ಯಾಪ್‌ಟಾಪ್‌ ಆಗಲಿ ಇಲ್ಲಾ ಪಿಸಿ ಆಗಲಿ ನೀರಿಣತಹ ದ್ರವ ಪದಾರ್ಥ ಬಿದ್ದಾಗ ನಿಮ್ಮ ಬಳಿ ವ್ಯಾಕ್ಯೂಮ್‌ ಕ್ಲೀನರ್‌ ಇದ್ದರೆ ಅದರ ಪ್ರಶರ್‌ ಅಡ್ಜಸ್ಟ್ ಮಾಡಿ ಡಿವೈಸ್‌ ಅನ್ನು ಒಣಗಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot