Telegram: ಆನ್‌ಲೈನ್‌ನಲ್ಲಿ ಇದ್ದರೂ ಬೇರೆಯವರಿಗೆ ತಿಳಿಯದಂತೆ ಮಾಡುವುದು ಹೇಗೆ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್ ಕೂಡ ಒಂದಾಗಿದೆ. ಸದ್ಯ ವಾಟ್ಸಾಪ್‌ನ ಹೊಸ ಸೇವಾ ನಿಯಮ ವಿವಾದದ ನಂತರ ಟೆಲಿಗ್ರಾಮ್‌ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತಿದೆ. ಇನ್ನು ಟೆಲಿಗ್ರಾಮ್‌ ಕೂಡ ವಾಟ್ಸಾಪ್‌ನ ಮಾದರಿಯಲ್ಲಿಯೇ ಅನೇಕ ಫೀಚರ್ಸ್‌ಗಳನ್ನು ಹೊಂದಿದೆ. ಇದು ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಇನ್ನು ಟೆಲಿಗ್ರಾಮ್‌ನಲ್ಲಿ ಥೀಮ್‌ಗಳು, ಫಾಂಟ್‌ನ ಗಾತ್ರ ಇತ್ಯಾದಿಗಳನ್ನು ಕಸ್ಟಮೈಸ್ ಮಾಡುವ ಮೂಲಕ ಪ್ಲಾಟ್‌ಫಾರ್ಮ್‌ನ ಸೌಂದರ್ಯವನ್ನು ಆಯ್ಕೆ ಮಾಡಲು ಹೆಚ್ಚಿನ ಅವಕಾಶವನ್ನು ಸಹ ನೀಡಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ವಿಶೇಷ ಫೀಚರ್ಸ್‌ಗಳ ಗುಂಪನ್ನೇ ಹೊಂದಿದ್ದು, ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ ಒಳಗೊಂಡಿದೆ. ಇನ್ನು ಟೆಲಿಗ್ರಾಮ್‌ನಲ್ಲಿ ಭವಿಷ್ಯದಲ್ಲಿ ಸಂದೇಶಗಳನ್ನು ಕಳುಹಿಸಲು ಟೆಲಿಗ್ರಾಮ್ ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ನಿರ್ದಿಷ್ಟ ಸಮಯದಲ್ಲಿ ಸಂದೇಶವನ್ನು ಕಳುಹಿಸುವುದನ್ನು ನೆನಪಿಸಲಾಗುತ್ತದೆ. ಆಂದರೆ ಮುಂಚಿತವಾಗಿಯೇ ನೀವು ಸಂದೇಶ ಕಳುಹಿಸ ಬಯಸುವ ಸ್ನೇಹಿತರಿಗೆ ಸಂದೇಶವನ್ನು ಶೆಡ್ಯೂಲ್‌ ಮಾಡಬಹುದಾಗಿದೆ. ಹಾಗಾದ್ರೆ ಶೆಡ್ಯೂಲ್‌ ಮೆಸೇಜ್‌, ಲಾಸ್ಟ್‌ ಸೀನ್‌ ಹೈಡ್‌, ಕಸ್ಟಮ್‌ ಥೀಮ್‌ ಅನ್ನು ಟೆಲಿಗ್ರಾಮ್‌ನಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌ನಲ್ಲಿ ಮೆಸೇಜ್‌ ಶೇಡ್ಯೂಲ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ಮೆಸೇಜ್‌ ಶೇಡ್ಯೂಲ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ಮೆಸೇಜ್‌ ಅನ್ನು ಶೇಡ್ಯೂಲ್‌ ಮಾಡಲು, ಬಳಕೆದಾರರು ಯಾವುದೇ ಚಾಟ್‌ನಲ್ಲಿ ಸೆಂಡ್‌ ಬಟನ್‌ ಅನ್ನು ಹೋಲ್ಡ್‌ ಮಾಡಬೇಕು. ನಂತರ ಭವಿಷ್ಯದಲ್ಲಿ ನಿಗದಿತ ಸಮಯದಲ್ಲಿ ಸ್ವಯಂಚಾಲಿತವಾಗಿ ಸಂದೇಶ ಕಳುಹಿಸಲು ‘ಶೆಡ್ಯೂಲ್‌‌ ಮೆಸೇಜ್‌' ಆಯ್ಕೆಮಾಡಿ. ಇದಾದ ನಂತರ ಸಂದೇಶವನ್ನು ಕಳುಹಿಸಬೇಕಾದ ದಿನಾಂಕ ಮತ್ತು ಸಮಯವನ್ನು ಆರಿಸಬೇಕಾಗುತ್ತದೆ. ಇದಲ್ಲದೆ ಟೆಲಿಗ್ರಾಮ್ ಬಳಕೆದಾರರು ತಮ್ಮ ಸಂದೇಶಗಳನ್ನು ಶಬ್ದವಿಲ್ಲದೆ ಕಳುಹಿಸುವ ಆಯ್ಕೆಯನ್ನು ಸಹ ಪಡೆಯುತ್ತಾರೆ. ಅಧಿಸೂಚನೆ ಇಲ್ಲದೆ ಸಂದೇಶವನ್ನು ಕಳುಹಿಸಬಹುದಾಗಿದೆ. ಇದಕ್ಕಾಗಿ ಟೆಲಿಗ್ರಾಮ್ ತೆರೆಯಿರಿ> ನೀವು ಸಂದೇಶವನ್ನು ಕಳುಹಿಸಲು ಬಯಸುವವರಿಗೆ ಸಂಪರ್ಕವನ್ನು ಆಯ್ಕೆಮಾಡಿ> ಸೆಂಡ್‌ ಬಟನ್ ಮೇಲೆ ಲಾಂಗ್‌ ಪ್ರೆಸ್‌ ಮಾಡಿ> Without Sound ಸೆಂಡ್‌ ಟ್ಯಾಪ್ ಮಾಡಿ.

ಟೆಲಿಗ್ರಾಮ್‌ನಲ್ಲಿ ಆನ್‌ಲೈನ್‌ನಲ್ಲಿ ಇದ್ದರೂ ಬೇರೆಯವರಿಗೆ ತಿಳಿಯದಂತೆ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ಆನ್‌ಲೈನ್‌ನಲ್ಲಿ ಇದ್ದರೂ ಬೇರೆಯವರಿಗೆ ತಿಳಿಯದಂತೆ ಮಾಡುವುದು ಹೇಗೆ?

ಇದಲ್ಲದೆ ಟೆಲಿಗ್ರಾಮ್‌ ಬಳಕೆದಾರರು ಆನ್‌ಲೈನ್‌ನಲ್ಲಿ ಇದ್ದರೂ ಬೇರೆಯವರಿಗೆ ಕಾಣದಂತೆ ಮಾಡಲು ಸಹ ಅವಕಾಶವಿದೆ. ಅಷ್ಟೇ ಅಲ್ಲ ಲಾಸ್ಟ್‌ ಸೀನ್‌ ಮರೆಮಾಡುವುದರಿಂದ ಬಳಕೆದಾರರು ಕೊನೆಯದಾಗಿ ನೋಡುವುದನ್ನು ಸಹ ನಿಷ್ಕ್ರಿಯಗೊಳಿಸುತ್ತದೆ. ಕೊನೆಯದಾಗಿ ನೋಡಿದ್ದನ್ನು ಮರೆಮಾಡಲು ಈ ಕೆಳಗನ ಹಂತಗಳನ್ನು ಅನುಸರಿಸಿ.

ಹಂತ:1 ಟೆಲಿಗ್ರಾಮ್ ತೆರೆಯಿರಿ.

ಹಂತ:2 ಮೇಲಿನ ಎಡಭಾಗದಲ್ಲಿರುವ ಮೂರು ಸಾಲುಗಳನ್ನು ಒತ್ತಿರಿ.

ಹಂತ:3 ಗೌಪ್ಯತೆ ಮತ್ತು ಸುರಕ್ಷತೆಯನ್ನು ಆಯ್ಕೆಮಾಡಿ.

ಹಂತ:4 ಲಾಸ್ಟ್‌ ಸೀನ್‌ ಮತ್ತು ಆನ್‌ಲೈನ್ ಆಯ್ಕೆಮಾಡಿ.

ಹಂತ:5 Nobody ಆಯ್ಕೆ ಮಾಡಬೇಕಾಗುತ್ತದೆ.

ಟೆಲಿಗ್ರಾಮ್‌ನಲ್ಲಿ ಎರಡು ಹಂತದ ಪರಿಶೀಲನೆ ಸೆಟ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ಎರಡು ಹಂತದ ಪರಿಶೀಲನೆ ಸೆಟ್‌ ಮಾಡುವುದು ಹೇಗೆ?

ಇನ್ನು ಭದ್ರತೆಗೆ ಹೋಗುವ ಮೂಲಕ ಬಳಕೆದಾರರು ನಿಮ್ಮ ಎರಡು ಹಂತದ ಪರಿಶೀಲನಾ ಕೋಡ್‌ಗಳನ್ನು ಸಹ ಸೆಟ್‌ ಮಾಡಬಹುದು. ನಿಮ್ಮ ಖಾತೆಯನ್ನು ಬೇರೆ ಡಿವೈಸ್‌ನಿಂದ ಪ್ರವೇಶಿಸಲು ನೀವು ಪ್ರಯತ್ನಿಸಿದಾಗ ನಿಮ್ಮ ಖಾತೆಗೆ ಪ್ರವೇಶವನ್ನು ಪಡೆಯಲು ಎರಡು ಹಂತದ ಪರಿಶೀಲನೆಗಳು ನಿಮಗೆ ಸಹಾಯ ಮಾಡುತ್ತವೆ, ಇದು ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವುದನ್ನು ತಡೆಯುತ್ತದೆ. ಹಾಗಾದ್ರೆ ಟೆಲಿಗ್ರಾಮ್‌ ನಲ್ಲಿ ಎರಡು ಹಂತದ ಪರಿಶೀಲನೆಯನ್ನು ಸೆಟ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ತಿಳಿಯಿರಿ.

ಹಂತ:1 ಟೆಲಿಗ್ರಾಮ್‌ನಲ್ಲಿ ಸೆಕ್ಯುರ್‌ ವಿಭಾಗಕ್ಕೆ ಹೋಗಿ

ಹಂತ:2 ಎರಡು ಹಂತದ ಪರಿಶೀಲನೆಯನ್ನು ಆಯ್ಕೆಮಾಡಿ

ಹಂತ:3 ಪಾಸ್ವರ್ಡ್ ಸೆಟ್‌ ಮಾಡಿ.

ಹಂತ:4 ಪಾಸ್ವರ್ಡ್ ದೃಢೀಕರಿಸಿ

ಹಂತ:5 ಬ್ಯಾಕಪ್ ಆಯ್ಕೆಯಾಗಿ ಇಮೇಲ್ ID ಅನ್ನು ನಮೂದಿಸಿ

ಹಂತ:6 ಆ ಇಮೇಲ್ ID ಯಲ್ಲಿ ನೀವು ಸ್ವೀಕರಿಸುವ ಕೋಡ್ ಅನ್ನು ದೃಡೀಕರಿಸಿ

ಟೆಲಿಗ್ರಾಮ್‌ ನಲ್ಲಿ ಥೀಮ್‌ ಚೇಂಜ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ ನಲ್ಲಿ ಥೀಮ್‌ ಚೇಂಜ್‌ ಮಾಡುವುದು ಹೇಗೆ?

ಹಂತ:1 ಓಪನ್ ಟೆಲಿಗ್ರಾಮ್

ಹಂತ:2 ಮೆನು ಅಥವಾ ಎಡಭಾಗದಲ್ಲಿ ಮೂರು ಸಾಲುಗಳನ್ನು ಟ್ಯಾಪ್ ಮಾಡಿ

ಹಂತ:3 ಸೆಟ್ಟಿಂಗ್‌ಗಳಿಗೆ ಹೋಗಿ

ಹಂತ:4 ಚಾಟ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ. ಇಲ್ಲಿಂದ, ನಿಮ್ಮ ಸಂದೇಶ ಪಠ್ಯ, ಬಣ್ಣ ವಿಷಯಗಳು, ಸಂದೇಶ ಮೂಲೆಗಳು, ಚಾಟ್ ಪಟ್ಟಿ ವೀಕ್ಷಣೆ ಇತ್ಯಾದಿಗಳ ಗಾತ್ರವನ್ನು ನೀವು ಕಸ್ಟಮೈಸ್‌ ಮಾಡಬಹುದು. ನೀವು ಆಯ್ಕೆ ಮಾಡಬಹುದಾದ ಕ್ಲಾಸಿಕ್, ಹಗಲು, dark ಮತ್ತು ರಾತ್ರಿ ವಿಷಯಗಳಿವೆ. ನಿಮ್ಮ ಹಿನ್ನೆಲೆಯ ಬಣ್ಣ ಮತ್ತು ನಿಮ್ಮ ಚಾಟ್‌ಗಳ ಬಣ್ಣವನ್ನೂ ಸಹ ನೀವು ಕಸ್ಟಮೈಸ್‌ ಮಾಡಬಹುದು.

Best Mobiles in India

English summary
how to schedule messages and hide last seen status on Telegram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X