ನಿಖರ ಸಮಯಕ್ಕೆ 'ವಾಟ್ಸ್ಆಪ್' ಮೆಸೇಜ್ ಶೆಡ್ಯೂಲ್ ಮಾಡುವುದು ಹೇಗೆ?!
ನಮ್ಮ ಪ್ರೀತಿಪಾತ್ರರ ಅಥವಾ ಹತ್ತಿರದವರ ಹುಟ್ಟುಹಬ್ಬದ ಅಥವಾ ವಿವಾಹ ವಾರ್ಷಿಕೋತ್ಸವದಂತಹ ಪ್ರಮುಖ ದಿನಾಂಕಗಳನ್ನು ತಿಳಿಸುವಲ್ಲಿ 'ಫೇಸ್‌ಬುಕ್' ನೆರವಾಗುತ್ತಿದೆ ಎನ್ನಬಹುದು. ಆದರೆ, ಕೇವಲ ಪ್ರಮುಖ ದಿನಾಂಕಗಳನ್ನು ನೆನೆಸುವ ಫೇಸ್‌ಬುಕ್, ಆ ದಿನದ ಪ್ರಮುಖ ಸಮಯವನ್ನು ಮಾತ್ರ ನೆನೆಸುವುದಿಲ್ಲ. ಉದಾಹರಣೆಗೆ ನಿಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬಕ್ಕೆ ಸರಿಯಾಗಿ 12 ಗಂಟೆಗೆ ಶುಭಾಶಯ ಕೋರಬೇಕು ಎಂದುಕೊಂಡರೆ ನಿಮಗೆ ಫೇಸ್‌ಬುಕ್ ಸಹಾಯ ಮಾಡುವುದಿಲ್ಲ. ಆದರೆ, ನಾನು ನಿಮಗೆ ಸಹಾಯ ಮಾಡುತ್ತೇನೆ.

ಹೌದು, ಈ ವರೆಗೂ ನಿಮ್ಮ ಮೆಸೇಜನ್ನು ಸರಿಯಾದ ಸಮಯದಲ್ಲಿ ತಲುಪಿಸಲು ವ್ಯವಸ್ಥೆ ಸದ್ಯಕ್ಕಿಲ್ಲ. ನಾವು ಹೆಚ್ಚು ಬಳಸುವ ಫೇಸ್‌ಬುಕ್, ವಾಟ್ಸ್ಆಪ್ ಕೂಡ ನಿಮ್ಮ ಸಂದೇಶಗಳನ್ನು ನೀವು ನಿಗದಿಪಡಿಸುವ ಸಮಯಕ್ಕೆ ತಲುಪಿಸುವ ವೈಶಿಷ್ಟ್ಯವನ್ನು ನೀಡಿಲ್ಲ. ಆದರೆ, ಇಂತಹ ಸಮಸ್ಯೆಗೆ ಪರಿಹಾರವಾಗಿ ಹಲವು ಮೊಬೈಲ್ ಆಪ್‌ಗಳು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಹುಟ್ಟಿಕೊಂಡಿವೆ. ಹಾಗಾದರೆ, ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮೆಸೇಜ್‌ಗಳನ್ನು ನೀವು ನಿಗದಿಪಡಿಸುವ ಸಮಯಕ್ಕೆ ಕಳುಹಿಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಂತ 1.
ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ' SKEDit Scheduling App' ಎಂಬ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿ

ಹಂತ 2.
ಇನ್‌ಸ್ಟಾಲ್ ಮಾಡಿದ ನಂತರ ಅಪ್ಲ್ಲಿಕೇಷನನ್ನು ತೆರೆದು ಅಕೌಂಟ್ ಕ್ರಿಯೇಟ್ ಮಾಡಿ

ಹಂತ 3
ನಂತರ ಇಲ್ಲಿ ನಿಮ್ಮ ಹೆಸರು, ಇಮೇಲ್ ಮತ್ತು ಪಾಸ್‌ವರ್ಡ್ ನಮೂದಿಸಿ.

ಹಂತ 4
ಎಲ್ಲಾ ಮಾಹಿತಿ ನೀಡಿದ ನಂತರ ಈಗ Create Account ಮೇಲೆ ಕ್ಲಿಕ್ ಮಾಡಿರಿ.

ಹಂತ 5
ಅಕೌಂಟ್ ಕ್ರಿಯೇಟ್ ಆದ ನಂತರ ಪುನಃ ನೀವು ಬಳಸಿದ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿರಿ.

ಹಂತ 6
ಸೈನ್ ಇನ್ ಆದ ನಂತರ ನಿಮಗೆ WhatsApp Business, WhatsApp, SMS, Email, Call ಮತ್ತು Facebook ಕಾಣಿಸುತ್ತದೆ.

ಹಂತ 7
ಇದರಲ್ಲಿ WhatsApp ಮೇಲೆ ಕ್ಲಿಕ್ ಮಾಡಿ ಅಲ್ಲಿ To ಅನ್ನುವ ನಂತರ ಯಾರಿಗೆ ಮೆಸೇಜ್ ಕಳುಯಿಸಬೇಕೋ ಅವರ ನಂಬರ್ ಸೇರಿಸಿ.

ಹಂತ 8
ನಿಮ್ಮ ಆತ್ಮೀಯರ ನಂಬರ್ ಸೇರಿಸಿದ ನಂತರ ಏನು ಬರೆಯಬೇಕೋ ಅದನ್ನು ಇಲ್ಲಿ ಬರೆಯಿರಿ.

ಹಂತ 9
ನಿಮ್ಮ ಮೆಸೇಜ್ ಟೈಪ್ ಆದ ನಂತರ ಕೆಳಗೆ ನೋಡಿ ಯಾವಾಗ ಕಳುಯಿಸಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 10
ಇದರಲ್ಲಿ ಟೈಮ್ ಮತ್ತು ಡೇಟ್ ಆಯ್ಕೆ ಮಾಡಿದ ನಂತರ ನಿಮ್ಮ ಬಲ ಭಾಗದ ಮೇಲೆ ಕೊನೆಯಲ್ಲಿ ರೈಟ್ (✔) ಚಿನ್ಹೆಯ ಮೇಲೆ ಕ್ಲಿಕ್ ಮಾಡಿ.

ಹಂತ 11
ಈ ರೀತಿಯಲ್ಲಿ ಆತ್ಮೀಯರ ಹುಟ್ಟುಹಬ್ಬ, ಆನಿರ್ವೇರ್ಸಿರಿ ಮತ್ತು ವಿಶೇಷ ದಿನಗಳನ್ನು ಮರೆಯದೆ ಶೆಡ್ಯೂಲ್ ಮಾಡಿ. ಸೇಫ್ ಆಗಿ!


Click it and Unblock the Notifications








