Gmail: ಗೂಗಲ್ ಅಕೌಂಟ್‌ನಲ್ಲಿ ಹೆಚ್ಚುವರಿ ಭದ್ರತೆಯನ್ನು ಸೆಟ್ ಮಾಡುವುದು ಹೇಗೆ?
ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ ಜಿ-ಮೇಲ್ ಜಗತ್ತಿನಲ್ಲಿಯೇ ಅತಿ ಹೆಚ್ಚು ಬಳಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇನ್ನು ಬಳಕೆದಾರರು ತಮ್ಮ ಸಂಸ್ಥೆ, ಕಂಪೆನಿ, ಸಹದ್ಯೋಗಿಗಳೊಂದಿಗೆ ಬಹುಮುಖ್ಯವಾದ ಮಾಹಿತಿ, ಫೈಲ್, ಅನ್ನು ಶೇರ್ ಮಾಡಲು ಜಿ-ಮೇಲ್ ಅನ್ನು ಬಳಸುತ್ತಾರೆ. ಇನ್ನು ಜಿ-ಮೇಲ್ ಬಳಸುವ ಪ್ರತಿಯೊಬ್ಬ ಬಳಕೆದಾರರು ತಮ್ಮದೇ ಆದ ಪಾಸವರ್ಡ್ ಅನ್ನು ಸೆಟ್ ಮಾಡುವುದು ತುಂಬಾ ಅಗತ್ಯವಾಗಿರುತ್ತದೆ. ಆದರೆ ಸಾಕಷ್ಟು ಬಳಕೆದಾರರು ತಮ್ಮ ಜಿ-ಮೇಲ್ ಖಾತೆಗಳಿಗೆ ವೀಕ್ ಪಾಸ್‌ವರ್ಡ್ ನೀಡಿದ್ದು, ಇದು ಜಿ-ಮೇಲ್ ಖಾತೆಗಳನ್ನ ಹ್ಯಾಕ್ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಇದಕ್ಕಾಗಿ ನೀವು ಹೆಚ್ಚುವರಿ ಸೆಕ್ಯೂರ್ ಪಾಸ್‌ವರ್ಡ್‌ಗಳನ್ನ ಸೆಟ್‌ಮಾಡಬಹುದಾಗಿದೆ.

ಹೌದು, ಗೂಗಲ್ ಈ ಹಿಂದೆಯೆ ವೀಕ್ ಪಾಸ್‌ವರ್ಡ್ ಹೊಂದಿರುವ ಜಿ-ಮೇಲ್ ಅಕೌಂಟ್‌ಗಳನ್ನ ತೆಗೆದುಹಾಕುವುದಾಗಿ ಹೇಳಿಕೊಂಡಿತ್ತು. ಭದ್ರತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎನ್ನುವ ಮಾತನ್ನು ಸಹ ತಿಳಿಸಿತ್ತು. ಆದರಂತೆ ಇದೀಗ ಎಲ್ಲಾ ಜಿ-ಮೇಲ್ ಬಳಕೆದಾರರು ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನ ಸೆಟ್ ಮಾಡಿಕೊಂಡರೆ ಉತ್ತಮ. ಇನ್ನು ನೀವು ಈಗಾಲೇ Gmail ಖಾತೆಯನ್ನು ಹೊಂದಿದ್ದರೆ, ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಕೆಲಸಕ್ಕಾಗಿ ಜಿ-ಮೇಲ್ ಬಳಸುವಾಗ ಅದನ್ನು ಸೆಕ್ಯೂರ್ ಮಾಡುವುದು ಬಹುಮುಖ್ಯ ಕೆಲಸ. ಇದಕ್ಕಾಗಿ ನಿಮ್ಮ ಜಿ-ಮೇಲ್ ಖಾತೆಗಳಲ್ಲಿ ಹೆಚ್ಚುವರಿ ಸೆಕ್ಯೂರ್ ಪಾಸ್‌ವರ್ಡ್ ಸೆಟ್‌ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸಾಮಾನ್ಯವಾಗಿ ಬಳಕೆದಾರರು Gmail ಖಾತೆಗೆ ಸೈನ್ ಅಪ್ ಮಾಡಿದಾಗ, ಕ್ರಿಯೆಟ್ ಮಾಡಲಾದ ಜಿ-ಮೇಲ್ ವಿಳಾಸವನ್ನು ಮೂಲತಃ Google ನೀಡುವ ಇತರ ಸೇವೆಗಳಿಗೆ ಮತ್ತು Google ಅಕೌಂಟ್ ಸೈನ್ ಇನ್ ಮಾಡಲು ಸಹ ಬಳಸಲಾಗುತ್ತದೆ. ಅಂದರೆ Gmail ಅಕೌಂಟ್ ಅನ್ನು ಕ್ರಿಯೆಟ್ ಮಾಡುವುದು ಎಂದರೆ Googleನ ಎಲ್ಲಾ ಸೇವೆಗಳಿಗೆ ಸೈನ್ ಇನ್ ಮಾಡಲು ಅವಕಾಶ ಸಿಗುತ್ತದೆ. ಇನ್ನು ನೀವು ನಿಮ್ಮ Google ಖಾತೆಗಾಗಿ ನೀವು ಈಗಾಗಲೇ 2 ಹಂತದ ಪಾಸ್‌ವರ್ಡ್ ದೃಡೀಕರಣವನ್ನು ಹೊಂದಿಸಬೇಕಾಗಿರುತ್ತದೆ.

ಒಂದು ವೇಳೆ ನೀವು ಎರಡು ಹಂತದ ಪಾಸ್‌ವರ್ಡ್‌ಗಳನ್ನು ಸೆಟ್ ಮಾಡದಿದ್ದರೆ, ನಿಮ್ಮ ಪಾಸ್‌ವರ್ಡ್‌ಗಳನ್ನು ನಿಯಮಿತ ಅಂತರದಲ್ಲಿ ಬದಲಾಯಿಸ ಬೇಕೆಂದುಕೊಂಡಿದ್ದರೆ, ನಿಮ್ಮ ಫೋನ್ ಸಂಖ್ಯೆ ಬದಲಾಯಿಸಬೇಕೆಂದು ಕೊಂಡಿದ್ದರೆ ಇಮೇಲ್ ವಿಳಾಸವನ್ನು ನಿಯಮಿತವಾಗಿ ನವೀಕರಿಸುವುದು ಉತ್ತಮ ಅಭ್ಯಾಸ. ಇದನ್ನು ಹೇಗೆ ಆಪ್ಡೇಟ್ ಮಾಡಬೇಕು ಅನ್ನೊದನ್ನ ಹಂತಹಂತವಾಗಿ ತಿಳಿಯೋಣ ಬನ್ನಿರಿ.

Gmail: ನಿಮ್ಮ Google ಖಾತೆಯಲ್ಲಿ ಹೆಚ್ಚುವರಿ ಭದ್ರತೆಯನ್ನು ಹೊಂದಿಸುವುದು ಹೇಗೆ?
ಹಂತ 1: ನಿಮ್ಮ Gmail ಖಾತೆ> ಸೆಟ್ಟಿಂಗ್ಸ್>Manage accountsಗೆ ಬೇಟಿ ನೀಡಿ. ನಿಮ್ಮ Gmail ಖಾತೆಯನ್ನು ಟ್ಯಾಪ್ ಮಾಡಿ ಮತ್ತು Google ಖಾತೆಯನ್ನು ಸೆಲೆಕ್ಟ್ ಮಾಡಿ.
ಹಂತ 2: ನಿಮ್ಮ ಫೋನ್‌ನ ಸೆಟ್ಟಿಂಗ್ಸ್‌ಗೆ ತೆರಳಿ, ನಂತರ Google ಮೆನುಗೆ ಭೇಟಿ ನೀಡಿ> Manage your Google account.
ಹಂತ 3: ನ್ಯಾವಿಗೇಷನ್ ಪ್ಯಾನೆಲ್‌ನಲ್ಲಿ, ಸೆಕ್ಯುರ್ ಆಯ್ಕೆಯನ್ನು ಕಂಡುಹಿಡಿಯಬೇಕು.
ಹಂತ 3: ನಂತರ "Google ಗೆ ಸೈನ್ ಇನ್" ಆಗುವಾದ, 2-ಹಂತದ ಪರಿಶೀಲನೆಯನ್ನು ಆಯ್ಕೆ ಮಾಡಿ. ಇದೀಗ ಪರದೆ ಮೇಲೆ ಕಾಣುವ ಹಂತಗಳನ್ನು ಅನುಸರಿಸಿ. ಇದಾದ ನಂತರ ನಿಮ್ಮ Google ಖಾತೆಗೆ ಹೆಚ್ಚುವರಿ ಭದ್ರತೆಯನ್ನು ಸೇರಿಸಲು ನೀವು ಹಲವು ಆಯ್ಕೆಗಳನ್ನು ಕಾಣಬಹುದಾಗಿದೆ.


Click it and Unblock the Notifications








