ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗಿರುವ ವೈಫೈ ಪಾಸ್‌ವರ್ಡ್ ತಿಳಿಯುವುದು ಹೇಗೆ?!
ನೀವು ಈ ಮೊದಲು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಿಂದ ಕನೆಕ್ಟ್ ಮಾಡಿರುವ ವೈಫೈಗಳ ಪಾಸ್ವರ್ಡ್ಗಳನ್ನು ತಿಳಿಯಲು 'ವೈಫೈ ಪಾಸ್ವರ್ಡ್ ವ್ಯೂವರ್ (ರೂಟ್)' ಆಪ್ ಅನ್ನು ಇನ್ಸ್ಟಾಲ್ ಮಾಡಿ. ಇದು ಕೇವಲ ರೂಟೆಡ್ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಕೆಲಸ ಮಾಡುತ್ತದ
ಕಳೆದ ಕೆಲವು ವರ್ಷಗಳಿಂದ ಇಂಟರ್ನೆಟ್ ಜಗತ್ತಿನ ಮೂಲೆ ಮೂಲೆಗಳನ್ನೂ ತಲುಪಿದ್ದು ಎಲ್ಲರಿಗೂ ದೊರಕುವಂತಾಗಿದೆ. ಒಂದು ದಿನದ ಇಂಟರ್ನೆಟ್ ಪ್ಯಾಕ್ ಇರಬಹುದು,ಒಂದು ತಿಂಗಳ ಅಗ್ಗವಾದ ಪ್ಯಾಕ್ ಇರಬಹುದು, ಸಾರ್ವಜನಿಕ ಸ್ಥಳಗಳಲ್ಲಿರುವ ಉಚಿತ ವೈಫೈ ಇರಬಹುದು ಅಥವ ನಮ್ಮ ಮನೆಗಳಲ್ಲಿರುವ ಇಂಟರ್ನೆಟ್ ಸಂಪರ್ಕವಿರಬಹುದು, ಇವೆಲ್ಲವೂ ಇಂಟರ್ನೆಟ್ ಅನ್ನು ಎಲ್ಲರ ಕೈಗೆಟಕುವಂತೆ ಮಾಡಿದೆ.

ನಾವು ಹೆಚ್ಚಾಗಿ ಭೀಟಿಮಾಡುವ ಕೆಫೆ ಅಥವ ಹೊಟೇಲ್ ಅಥವ ಇನ್ನ್ಯಾವುದೇ ಸ್ಥಳಗಳಲ್ಲಿ ಉಚಿತ ವೈಫೈ ವ್ಯವಸ್ಥೆ ಇದ್ದು ನಿಮಗೆ ಪದೇ ಪದೇ ವೈಫೈ ಪಾಸ್ವರ್ಡ್ ಕೇಳುವುದು ಮುಜುಗರವೆನಿಸಬಹುದು. ನೀವು ನಿಮ್ಮ ಮೊಬೈಲ್ನಿಂದ ಈಗಾಗಲೇ ಕನೆಕ್ಟ್ ಮಾಡಿರುವ ವೈಫೈಗಳ ಪಾಸ್ವರ್ಡ್ ಗಳನ್ನು ತಿಳಿದಿರುವುದು ಇಂಥ ಸಂದರ್ಭಗಳಲ್ಲಿ ಒಳ್ಳೆಯದು ಎನಿಸುತ್ತದೆ.
ನಿಮ್ಮ ಮೊಬೈಲ್ನಿಂದ ಈಗಾಗಲೇ ಕನೆಕ್ಟ್ ಮಾಡಿರುವ ವೈಫೈಗಳ ಪಾಸ್ವರ್ಡ್ ಗಳನ್ನು ತಿಳಿಯಲು ನೀವೇನು ಮಾಡಬೇಕು ಎಂಬುದನ್ನು ನಾವಿಲ್ಲಿ ತಿಳಿಸಿದ್ದೇವೆ.ಆದರೆ ಇಲ್ಲಿ ನೀವು ಗಮನಸಬೇಕಾದ ಅಂಶವೇನೆಂದರೆ ಇದು ಕೆಲಸಮಾಡವುದು ಕೇವಲ ರೂಟೆಡ್ ಆಂಡ್ರಾಯ್ಡ್ ಸಾಧನಗಳಲ್ಲಿ ಮಾತ್ರ. ಎಡ್ಮಿನ್ ಆಕ್ಸೆಸ್ ಇಲ್ಲದೆ ನಿಮ್ಮ ಡಿವೈಸ್ನಲ್ಲಿ ಸಿಸ್ಟಮ್ ಫೋಲ್ಡರ್ ನಲ್ಲಿ ಸೇವ್ ಆಗಿರುವ ಪಾಸ್ವರ್ಡ್ ಗಳನ್ನು ಆಕ್ಸೆಸ್ ಮಾಡುವುದು ಸಾಧ್ಯವಿಲ್ಲ.
ನಿಮ್ಮ ರೂಟೆಡ್ ಆಂಡ್ರಾಯ್ಡ್ ಡಿವೈಸ್ನಿಂದ ಕನೆಕ್ಟ್ ಮಾಡಿರುವ ವೈಫೈಗಳ ಪಾಸ್ವರ್ಡ್ ಗಳನ್ನು ತಿಳಿಯಲು ಹೀಗೆ ಮಾಡಿ

ಹಂತ 1: ಮೊದಲಿಗೆ ಗೂಗಲ್ ಪ್ಲೇಸ್ಟೋರ್ ನಿಂದ 'ವೈಫೈ ಪಾಸ್ವರ್ಡ್ ವ್ಯೂವರ್ (ರೂಟ್)' ಆನ್ನು ಇನ್ಸ್ಟಾಲ್ ಮಾಡಿ

ಹಂತ 2: ಮೇಲೆ ಹೇಳಿದ ಆಪ್ ಅನ್ನು ಇನ್ಸ್ಟಾಲ್ ಮಾಡಿದ ನಂತರ ಅದು ಕೇಳಿದ ಎಲ್ಲಾ ಪರ್ಮಿಶನ್ ಗಳನ್ನು ನೀಡಿ. ಇದು ಆಪ್ ಗೆ ನಿಮ್ಮ ಎಲ್ಲಾ ವೈಫೈ ಪಾಸ್ವರ್ಡ್ ಗಳು ಸೇವ್ ಆಗಿರುವ ಫೈಲ್ ಆನ್ನು ಓದಲು ಬೇಕಾದ ಪರ್ಮಿಶನ್ ಗಳನ್ನು ಕೊಡುತ್ತದೆ.

ಹಂತ 3: ಮೇಲೆ ಹೇಳಿದಂತೆ ಎಲ್ಲಾ ಪರ್ಮಿಶನ್ಗಳನ್ನು ನೀಡಿದ ನಂತರ ಆಪ್ ನಿಮ್ಮ ಮೊಬೈಲ್ನಿಂದ ಕನೆಕ್ಟ್ ಮಾಡಿದ ಎಲ್ಲಾ ನೆಟ್ವರ್ಕ್ ಗಳ ಪಾಸ್ವರ್ಡ್ಗಳ ಲಿಸ್ಟ್ ಆನ್ನು ನಿಮಗೆ ನೀಡುತ್ತದೆ.

ಹಂತ 4:ನೀವು ಈ ಲಿಸ್ಟ್ ನಿಂದ ಯಾವುದಾದರು ಪಾಸ್ವರ್ಡ್ ಆನ್ನು ನಿಮ್ಮ ಗೆಳೆಯರೊಂದಿಗೆ ಹಂಚಲು ಬಯಸಿದರೆ , ಲಿಸ್ಟ್ನಿಂದ ಅದನ್ನು ಆಯ್ಕ ಮಾಡಿ ಅದನ್ನು ಕ್ಲಿಪ್ಬೋರ್ಡ್ ಗೆ ಕಾಪಿ ಮಾಡಿ ಅಥವ ಬೇರೆ ಆಪ್ ಮೂಲಕ ಅದನ್ನು ಶೇರ್ ಮಾಡಿ. ಈ ಪಾಸ್ವರ್ಡ್ ನ QR ಕೋಡ್ ಅನ್ನು ಕೂಡ ನೀವು ಜನರೇಟ್ ಮಾಡಬಹುದು.
ಸಧ್ಯಕ್ಕೆ ಈ ಮೇಲಿನ ಆಪ್ ಕೇವಲ ರೂಟೆಡ್ ಆಂಡ್ರಾಯ್ಡ್ ಡಿವೈಸ್ಗಳಲ್ಲಿ ಕೆಲಸ ಮಾಡುತ್ತದೆ. ನಾನ್ ರೂಟೆಡ್ ಡಿವೈಸ್ಗಳಿಗೆ ಇಂತಹ ಹ್ಯಾಕ್ ಸಧ್ಯಕ್ಕೆ ಲಭ್ಯವಿಲ್ಲ. ಮುಂದೆ ನಾನ್ ರೂಟೆಡ್ ಡಿವೈಸ್ಗಳಿಗೆ ಇಂತಹ ಹ್ಯಾಕ್ ನಮಗೆ ತಿಳಿದರೆ ನಿಮ್ಮೊಂದಿಗೆ ಅದನ್ನು ಖಂಡಿತ ಹಂಚಿಕೊಳ್ಳುತ್ತೇವೆ.


Click it and Unblock the Notifications








