Home
ಟೆಕ್ ನೌಕರಿ

Instagram ನಲ್ಲಿ ಡಿಸ್‌ಅಪಿಯರಿಂಗ್‌ ಇಮೇಜ್‌‌ ಮತ್ತು ವೀಡಿಯೊಗಳನ್ನು ಕಳುಹಿಸುವುದು ಹೇಗೆ?

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ಇನ್‌ಸ್ಟಾಗ್ರಾಮ್‌ ಈಗಾಗಲೇ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರನ್ನು ಆಕರ್ಷಿಸಿದೆ. ಇನ್ನು ಫೋಟೋ-ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಅಪ್ಲಿಕೇಶನ್‌ನ ಒಂದು ಭಾಗವಾಗಿರುವ ಮೀಸಲಾದ ಮೆಸೇಜಿಂಗ್ ಫೀಚರ್ಸ್‌ ಮೂಲಕ ಇಮೇಜ್‌ಗಳನ್ನು ಮತ್ತು ವೀಡಿಯೊಗಳನ್ನು ತಮ್ಮ ಅನುಯಾಯಿಗಳಿಗೆ ಕಳುಹಿಸುವ ಆಯ್ಕೆಯನ್ನು ನೀಡುತ್ತದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಹಲವು ಆಯ್ಕೆಗಳನ್ನು ನೀಡಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ನೇರ ಸಂದೇಶಗಳು (ಡಿಎಂ) ಫೀಚರ್ಸ್‌ ಅನ್ನು ಬಳಸಿಕೊಂಡು ವಿಷಯವನ್ನು ಹಂಚಿಕೊಳ್ಳುತ್ತಾರೆ. ಆದಾಗ್ಯೂ, ಬಳಕೆದಾರರು ತಮ್ಮ ವಿಷಯವನ್ನು ಒಂದಕ್ಕಿಂತ ಹೆಚ್ಚು ಬಾರಿ ನೋಡಬೇಕೆಂದು ಬಯಸುವುದಿಲ್ಲ ಅಥವಾ ನಿರ್ದಿಷ್ಟ ಸಂಖ್ಯೆಯ ಬಾರಿ ಮಾತ್ರ ನೋಡಬೇಕೆಂದು ಇನ್‌ಸ್ಟಾಗ್ರಾಮ್ ತನ್ನ ಡಿಎಂನಲ್ಲಿ ‘exploding messages ' ಆಯ್ಕೆಯನ್ನು ನೀಡುತ್ತದೆ. ಇದಲ್ಲದೆ ಡಿಸ್‌ಅಪಿಯರಿಂಗ್‌ ಫೀಚರ್ಸ್‌ ಅನ್ನು ಬಳಸುಬಹುದು. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಡಿಸ್‌ಅಪಿಯರಿಂಗ್‌ ಇಮೇಜ್ ಕಳುಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕಪಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್

ಇನ್‌ಸ್ಟಾಗ್ರಾಮ್‌ ‘exploding messages' ಜೊತೆಗೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಗ್ಯಾಲರಿಯಿಂದ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಕಳುಹಿಸುವುದಕ್ಕೆ ಅವಕಾಶ ನೀಡಿದೆ. ಅಲ್ಲದೆ ಸ್ವೀಕರಿಸುವವರ ಇನ್‌ಬಾಕ್ಸ್‌ನಿಂದ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ಇದರಿಂದಾಗಿ ಡಿಸ್‌ಅಪಿಯರಿಂಗ್‌ ಇಮೇಜಸ್‌ ಫೀಚರ್ಸ್‌ ಇಂದು ಸಕಾಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಒಂದು ಬಾರಿ ನೀವು ಕಳುಹಿಸಿದ ಇಮೇಜ್‌ ನಿರ್ಧಿಷ್ಟ ಸಮಯದ ನಂತರ ತಾನಾಗಿಯೇ ಕಣ್ಮರೆಯಾಗುವುದು ಇದರ ವಿಶೇಷತೆ. ಈ ಮಾದರಿಯ ಇಮೇಜ್‌ ಹಾಗೂ ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

Instagram ನಲ್ಲಿ ಡಿಸ್‌ಅಪಿಯರಿಂಗ್‌ ಇಮೇಜ್‌‌ ಮತ್ತು ವೀಡಿಯೊಗಳನ್ನು ಕಳುಹಿಸುವುದು ಹೇಗೆ?

Instagram ನಲ್ಲಿ ಡಿಸ್‌ಅಪಿಯರಿಂಗ್‌ ಇಮೇಜ್‌‌ ಮತ್ತು ವೀಡಿಯೊಗಳನ್ನು ಕಳುಹಿಸುವುದು ಹೇಗೆ?

ಹಂತ 1: ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿರುವ ಸಂದೇಶಗಳ ಆಯ್ಕೆಗೆ ಹೋಗಿ.

ಹಂತ 2: ಡಿಸ್‌ಅಪಿಯರಿಂಗ್‌ ಇಮೇಜ್‌/ ವೀಡಿಯೊವನ್ನು ನೀವು ಕಳುಹಿಸಲು ಬಯಸುವ ಬಳಕೆದಾರರನ್ನು ಆಯ್ಕೆಮಾಡಿ. ನೀವು ಬಹು ಬಳಕೆದಾರರಿಗೆ ಸಂದೇಶವನ್ನು ಕಳುಹಿಸಬಹುದು.

ಹಂತ 3: ಸಂದೇಶ ಪೆಟ್ಟಿಗೆಯ ಎಡಭಾಗದಲ್ಲಿರುವ ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ 4: ನೀವು ಹಂಚಿಕೊಳ್ಳಲು ಬಯಸುವ ಇಮೇಜ್‌ / ವೀಡಿಯೊ ಆಯ್ಕೆಮಾಡಿ. ಕ್ಯಾಮೆರಾ ಶಟರ್ ಐಕಾನ್ ಬಳಸಿ ನೀವು ಚಿತ್ರವನ್ನು ಕ್ಲಿಕ್ ಮಾಡಬಹುದು.

ಹಂತ 5: ಮುಂದೆ, ನೀವು ‘ಸೆಂಡ್‌' ಎಂದು ಓದುವ ಬಬಲ್‌ ಅನ್ನು ನೋಡುತ್ತೀರಿ ಮತ್ತು ಅದರ ಕೆಳಗೆ, ‘ view once' ಆಯ್ಕೆಯನ್ನು ನೀವು ನೋಡುತ್ತೀರಿ. ಇದರರ್ಥ ಚಿತ್ರದ ಸ್ವೀಕರಿಸುವವರಿಗೆ ಚಿತ್ರವನ್ನು ಒಮ್ಮೆ ಮಾತ್ರ ನೋಡಲು ಸಾಧ್ಯವಾಗುತ್ತದೆ. ಆ ವ್ಯಕ್ತಿಯು ಚಿತ್ರವನ್ನು ಒತ್ತುವ ತನಕ ಚಿತ್ರವನ್ನು ವೀಕ್ಷಿಸಬಹುದು ಅಥವಾ ಚಿತ್ರ ಅಥವಾ ಪರದೆಯ ಸಮಯವನ್ನು ಸ್ವಯಂಚಾಲಿತವಾಗಿ ಹಿಡಿದಿಟ್ಟುಕೊಳ್ಳಬಹುದು.

ಹಂತ 6: ಸಣ್ಣ ಬಾಂಬ್‌ ಐಕಾನ್‌ನೊಂದಿಗೆ exploding ಸಂದೇಶವನ್ನು ಕಳುಹಿಸಲಾಗುತ್ತದೆ. ವೀಕ್ಷಕರಿಗೆ ವಿಷಯವನ್ನು ಒಂದಕ್ಕಿಂತ ಹೆಚ್ಚು ಬಾರಿ ನೋಡಲು ಅವಕಾಶ ಮಾಡಿಕೊಡಲು ಮತ್ತು ಕ್ರಮವಾಗಿ ಅವರ ಚಾಟ್‌ನಲ್ಲಿ ಇರಿಸಿಕೊಳ್ಳಲು ನೀವು ‘ALLOW REPLAY' ಮತ್ತು ‘KEEP IN CHAT' ಆಯ್ಕೆಯನ್ನು ಸಹ ಆಯ್ಕೆ ಮಾಡಬಹುದು.

ವ್ಯಕ್ತಿಯು ಸ್ಕ್ರೀನ್‌ಶಾಟ್ ತೆಗೆದುಕೊಂಡರೆ ಏನು ಮಾಡುವುದು?

ವ್ಯಕ್ತಿಯು ಸ್ಕ್ರೀನ್‌ಶಾಟ್ ತೆಗೆದುಕೊಂಡರೆ ಏನು ಮಾಡುವುದು?

ನೀವು ಕಳುಹಿಸಿದ ಚಿತ್ರದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ಇನ್ನೊಂದು ತುದಿಯಲ್ಲಿರುವ ವ್ಯಕ್ತಿಯನ್ನು ತಡೆಯಲು ನಿಮಗೆ ಯಾವುದೇ ಮಾರ್ಗವಿಲ್ಲ, ಆದಾಗ್ಯೂ, ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ. ನೀವು ಕಳುಹಿಸಿದ ಚಿತ್ರದ ಪಕ್ಕದಲ್ಲಿ ಸೂರ್ಯನಂತಹ ಐಕಾನ್ ಕಂಡರೆ ನಿಮ್ಮ ಚಿತ್ರವನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡಿದೆ ಎಂದು ಸೂಚಿಸುತ್ತದೆ.

Best Mobiles in India

English summary
how to send disappearing messages and photos on instagram.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+