ವಾಟ್ಸಾಪ್‌ನಲ್ಲಿ ಮೆಸೇಜ್‌ ಡಿಸ್‌ಅಪಿಯರಿಂಗ್ ಫೀಚರ್ಸ್‌ ಸಕ್ರಿಯಗೊಳಿಸುವುದು ಹೇಗೆ?

|

ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್‌ ವಾಟ್ಸಾಪ್‌. ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಿರುವ ವಾಟ್ಸಾಪ್‌. ಇತ್ತೀಚಿಗಷ್ಟೇ ಮೆಸೇಜ್‌ ಡಿಸ್‌ಅಪಿಯರಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಈ ಫೀಚರ್ಸ್‌ ಎಲ್ಲಾ ಬಳಕೆದಾರರಿಗೂ ಲಭ್ಯವಿದ್ದು, ಇದರ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಮೆಸೇಜ್‌ ಡಿಸ್‌ಅಪಿಯರಿಂಗ್‌ ಫೀಚರ್ಸ್‌ ಸಕ್ರಿಯಗೊಳಿಸಿದರೆ ವಾಟ್ಸಾಪ್‌ನಲ್ಲಿ ಬರುವ ಹೊಸ ಸಂದೇಶಗಳು ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ.

ವಾಟ್ಸಾಪ್

ಹೌದು, ವಾಟ್ಸಾಪ್ ನ ಹೊಸ ಫೀಚರ್ಸ್‌ ಮೆಸೇಜ್‌ ಡಿಸ್‌ಅಪಿಯರಿಂಗ್‌ ಇದೀಗ ಎಲ್ಲರಿಗೂ ಲಭ್ಯವಿದೆ. ಇನ್ನು ಈ ಫೀಚರ್ಸ್‌ನಲ್ಲಿ ವಾಟ್ಸಾಪ್‌ನಲ್ಲಿನ ನೂತನ ಮೆಸೆಜ್‌ಗಳು ಏಳು ದಿನಗಳ ನಂತರ ಕಣ್ಮರೆಯಾಗುತ್ತದೆ(disappear). ಇನ್ನು ಈ ಆಯ್ಕೆಯು ಗ್ರೂಪ್‌ ಮೆಸೆಜ್‌ ಹಾಗೂ ವೈಯಕ್ತಿಕ ಮೆಸೆಜ್‌ ಎರಡಕ್ಕೂ ಲಭ್ಯ. ಹಾಗೆಯೇ ಆಂಡ್ರಾಯ್ಡ್‌, ಐಓಎಸ್‌, ಕೈಯೋಸ್‌ ಓಎಸ್‌ಗಳ ಆವೃತ್ತಿಯಲ್ಲಿಯೂ ಲಭ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಮೆಸೇಜ್‌ ಡಿಸ್‌ಅಪಿಯರಿಂಗ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಮೆಸೇಜ್‌ ಡಿಸ್‌ಅಪಿಯರಿಂಗ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ

ಹಂತ 2: ಈಗ, ನೀವು ಡಿಸ್‌ಅಪಿಯರಿಂಗ್ ಮೆಸೇಜ್‌ ಕಳುಹಿಸಲು ಬಯಸುವ ವೈಯಕ್ತಿಕ ಚಾಟ್ ಅನ್ನು ತೆರೆಯಿರಿ.

ಹಂತ 3: ಪರದೆಯ ಮೇಲ್ಭಾಗದಲ್ಲಿರುವ ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿ.

ಹಂತ 4: ಡಿಸ್‌ಅಪಿಯರಿಂಗ್ ಮೆಸೇಜ್‌ಗಳನ್ನು ಆಯ್ಕೆಮಾಡಿ ಮತ್ತು ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು ಆನ್ ಆಯ್ಕೆಮಾಡಿ.

ಫೀಚರ್ಸ್‌

ಇದಾದ ನಂತರ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದ ಸಂಪರ್ಕಕ್ಕೆ ನೀವು ಈಗ ಡಿಸ್‌ಅಪಿಯರಿಂಗ್ ಮೆಸೇಜ್‌ ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಡಿಸ್‌ಅಪಿಯರಿಂಗ್ ಮೆಸೇಜ್‌ಗಳನ್ನು ಗ್ರೂಪ್‌ಚಾಟ್‌ಗಳಿಗೆ ಕಳುಹಿಸಬಹುದು. ಇದನ್ನುಗ್ರೂಪ್‌ನಲ್ಲಿ ಸಕ್ರಿಯಗೊಳಿಸುವ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಆದರೆ ಗುಂಪಿನ ಕಾರ್ಯವನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು ಗ್ರೂಪ್‌ ಅಡ್ಮೀನ್‌ಗೆ ಮಾತ್ರ ಕಂಟ್ರೋಲ್‌ ಇರಲಿದೆ.

ಡಿಸ್‌ಅಪಿಯರಿಂಗ್

ಇದಲ್ಲದೆ ನೀವು ಡಿಸ್‌ಅಪಿಯರಿಂಗ್ ಮೆಸೇಜ್‌ ಕಳುಹಿಸುತ್ತಿರುವ ಸಂಪರ್ಕವು ಅವನ / ಅವಳ ಅಪ್ಲಿಕೇಶನ್‌ನಲ್ಲಿ ಈ ಕಾರ್ಯವನ್ನು ಸ್ವೀಕರಿಸದಿದ್ದರೆ ಈ ಫೀಚರ್ಸ್‌ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಇದರರ್ಥ ಸಂದೇಶವನ್ನು ಇನ್ನೂ ಕಳುಹಿಸಲಾಗುತ್ತದೆಯಾದರೂ, ಏಳು ದಿನಗಳ ನಂತರ ಅದು ಸ್ವಯಂಚಾಲಿತವಾಗಿ ಕಣ್ಮರೆಯಾಗುವುದಿಲ್ಲ. ಅಲ್ಲದೆ, ಕಣ್ಮರೆಯಾಗುತ್ತಿರುವ ಸಂದೇಶದೊಂದಿಗೆ, ರಿಸೀವರ್ ಇನ್ನೂ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು ಅಥವಾ ಮೀಡಿಯಾ ಫೈಲ್‌ಗಳನ್ನು ಲೋಕಲ್‌ ಸ್ಟೋರೇಜ್‌ನಲ್ಲಿ ಸೇವ್‌ ಮಾಡಬಹುದಾಗಿದೆ.

Most Read Articles
Best Mobiles in India

English summary
WhatsApp has finally introduced the Disappearing Messages feature, which when enabled, will remove the sent message after seven days, including any media sent.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X