ವಾಟ್ಸಾಪ್‌ನಲ್ಲಿ Independence Day ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?
ಆಗಸ್ಟ್ 15 ಬಂದರೆ ಸಾಕು ನಮ್ಮ ದೇಶದೆಲ್ಲೆಡೆ ಸಂಭ್ರಮ ಸಡಗರ ಜೋರಾಗಿ ನಡೆಯುತ್ತೆ. ಎಲ್ಲೆಡೆ ಸ್ವಾತಂತ್ರೋತ್ಸವದ ಸಂಭ್ರಮ ಮುಗಿಲು ಮುಟ್ಟುತ್ತೆ. ನಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾನ್ ನಾಯಕರ ಸ್ಮರಣೆ ಮಾಡಲಾಗುತ್ತೆ. ಇದೀಗ ಇದೇ ಆಗಸ್ಟ್ 15 ರಂದು ನಾವು 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದ್ದೇವೆ . ಈ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ, ಸ್ನೇಹಿತರಿಗೆ ಸ್ವಾತಂತ್ರೋತ್ಸವದ ಶುಭಾಶಯಗಳನ್ನ ವಿನಿಮಯ ಮಾಡಿಕೊಳ್ಳುತ್ತೇವೆ. ಇದೀಗ ಶುಭಾಶಯ ವಿನಿಮಯವೂ ಕೂಡ ಬದಲಾಗಿದ್ದು ವಾಟ್ಸಾಪ್ ಸ್ಟಿಕ್ಕರಗಲಲ್ಲಿಯೂ ಶುಭಾಶಯ ವಿನಿಮಯ ಮಾಡಲಾಗುತ್ತೆ.

ಹೌದು, ಆಗಸ್ಟ್ 15 ರ ಸ್ವಾತಂತ್ರೋತ್ಸವದ ಪ್ರಯುಕ್ತ ಪರಸ್ಪರ ಸ್ನೇಹಿತರು ಬಂದು ಭಾಂಧವರು ಹಾಗೈಊ ನಾಡಿನ ಎಲ್ಲ ಜನರು ಶುಭಾಶಯ ಕೋರುತ್ತಾರೆ. ಕೆಲವರು ಟೆಕ್ಸ್ಟ್ ಮೆಸೇಜ್ ಮೂಲಕ ಶುಭಾಶಯ ಕೋರಿದರೆ, ಇನ್ನು ಕೆಲವರು ಮಹಾನ್ ನಾಯಕರ ಪೋಟೋ ಕ್ಯಾಪ್ಸನ್‌ಗಳನ್ನ ವಿನಿಮಯ ಮಾಡುತ್ತಾರೆ. ಇನ್ನು ಕೆಲವರು ವಾಟ್ಸಾಪ್‌ನಲ್ಲಿ ವಾಟ್ಸಾಪ್ ಸ್ಟಿಕ್ಕರ್‌ಗಳ ಮೂಲಕ ಶುಭಾಶಯ ವಿನಿಮಯ ಮಾಡುತ್ತಾರೆ. ಸದ್ಯ ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಭಾವನೆಗಳನ್ನ ವ್ಯಕ್ತಪಡಿಸುವ ಸಾಕಷ್ಟು ಸ್ಟಿಕ್ಕರ್‌ಗಳು ಲಬ್ಯವಿವೆ. ಇದೀಗ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಸ್ಟಿಕ್ಕರ್‌ಗಳ ಮೂಲಕ ಕೋರಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಇಂಡಿಪೆಂಡೆನ್ಸ್‌ಡೇ ಪ್ರಯುಕ್ತ ಸ್ಟಿಕ್ಕರ್‌ಗಳನ್ನ ಕಳುಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯ ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆ ಸಂಭ್ರಮ ಮುಗಿಲು ಮುಟ್ಟುತ್ತೆ ನಿಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಈ ಸಂದರ್ಭದಲ್ಲಿ ಎಲ್ಲರೂ ಮನೆಗಳಲ್ಲಿಯೇ ಇಂಡಿಪೆಂಡೆನ್ಸ್‌ಡೇ ಆಚರಣೆ ಮಾಡಬೇಕಾಗಿದೆ. ಆದಾಗ್ಯೂ, ನಾವೆಲ್ಲರೂ ನಮ್ಮ ಎಲ್ಲ ಪ್ರೀತಿಪಾತ್ರರಿಗೆ ವಾಟ್ಸಾಪ್ ಮತ್ತು ಜಿಯೋಚಾಟ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಶುಭಾಶಯಗಳನ್ನು ಕಳುಹಿಸಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ? ಅನ್ನೊದನ್ನ ಹಂತ ಹಂತ ವಾಗಿ ತಿಳಿದುಕೊಳ್ಳೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?
ಹಂತ:1 ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ, ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು ಸ್ವಾತಂತ್ರ್ಯ ದಿನ ವಾಟ್ಸಾಪ್ ಸ್ಟಿಕ್ಕರ್‌ಗಳಿಗಾಗಿ ಹುಡುಕಿ.
ಹಂತ:2 ನಂತರ ಪ್ಲೇ ಸ್ಟೋರ್‌ನಲ್ಲಿ ಇಂಡಿಪೆಂಡೆನ್ಸ್‌ಡೇ ಸ್ಟಿಕ್ಕರ್‌ಗಳ ಗ್ಯಾಲರಿಯನ್ನು ನೀಡುವ ಕೆಲವು ಅಪ್ಲಿಕೇಶನ್‌ಗಳು ಕಾಣಲಿವೆ. ಇದರಲ್ಲಿ ಯಾವುದಾದರೂ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿರಿ.
ಹಂತ:3 ಡೌನ್‌ಲೋಡ್ ಮಾಡಿದ ಸ್ಟಿಕ್ಕರ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ವಾಟ್ಸಾಪ್‌ನಲ್ಲಿ ಸೇರಿಸಲು ಬಯಸುವ ಸ್ಟಿಕ್ಕರ್ ಪ್ಯಾಕ್ ಅನ್ನು ಆರಿಸಿ.
ಹಂತ:4 ಈಗ, ‘Add to WhatsApp' ಆಯ್ಕೆಯನ್ನು ಟ್ಯಾಪ್ ಮಾಡಿ. ಇದು ಇದು ಸ್ಟಿಕ್ಕರ್ ಪ್ಯಾಕ್ ಅನ್ನು ವಾಟ್ಸಾಪ್‌ಗೆ ತರಲಿದೆ.
ಹಂತ:5 ವಾಟ್ಸಾಪ್‌ಗೆ ಹೋಗಿ ನಂತರ ನಿಮ್ಮ ಯಾವುದೇ ಸ್ನೇಹಿತರು ಅಥವಾ ಗುಂಪುಗಳ ಚಾಟ್ ಡಿಸ್‌ಪ್ಲೇಯನ್ನು ತೆರೆಯಿರಿ.
ಹಂತ:6 ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಕೆಳಗಿನ ಸಾಲಿನಿಂದ ಸ್ಟಿಕ್ಕರ್‌ಗಳನ್ನು ಆಯ್ಕೆ ಮಾಡಿ. ಇಲ್ಲಿ, ಹೊಸದಾಗಿ ಇನ್‌ಸ್ಟಾಲ್ ಮಾಡಲಾದ ಯಾವುದೇ ಸ್ಟಿಕ್ಕರ್‌ಗಳನ್ನು ಆಯ್ಕೆಮಾಡಿ ಮತ್ತು ಅದನ್ನು ಆಟೋಮ್ಯಾಟಿಕ್ ಆಗಿ ಕಳುಹಿಸಲಾಗುತ್ತದೆ.

ಜಿಯೋಚಾಟ್‌ನಲ್ಲಿ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?
ಪ್ರಸ್ತುತದಲ್ಲಿ ಜಿಯೋ ಚಾಟ್ ಬಳಕೆದಾರರಿಗೆ ಇಂಡಿಪೆಂಡೆನ್ಸ್ ಡೇ ಸ್ಟಿಕ್ಕರ್‌ಗಳು ಲಭ್ಯವಿಲ್ಲ. ಆದಾಗ್ಯೂ, ಅವು ಲಭ್ಯವಾದ ನಂತರ, ನಿಮ್ಮ ಸ್ಟಿಕ್ಕರ್ ಲೈಬ್ರರಿಗೆ ಸೇರಿಸಲು ನೀವು ಈ ಹಂತಗಳನ್ನು ಅನುಸರಿಸಬಹುದು.
ಹಂತ:1 ನಿಮ್ಮ Android ಅಥವಾ iPhone ನಲ್ಲಿ JioChat ಅಪ್ಲಿಕೇಶನ್ ತೆರೆಯಿರಿ.
ಹಂತ:2 ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ‘more' ವಿಭಾಗಕ್ಕೆ ಹೋಗಿ.
ಹಂತ:3 ಈಗ, ಕಂಪನಿಯು ನೀಡುವ ಸ್ಟಿಕ್ಕರ್‌ಗಳನ್ನು ಅನ್ವೇಷಿಸಲು ‘ಸ್ಟಿಕರ್ ಸ್ಟೋರ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇಲ್ಲಿ, ‘independence day' ಸ್ಟಿಕ್ಕರ್ ಪ್ಯಾಕ್‌ಗಾಗಿ ನೋಡಿ.
ಹಂತ:5 ಸ್ಟಿಕ್ಕರ್ ಪ್ಯಾಕ್ ಆಯ್ಕೆಮಾಡಿ ಮತ್ತು ‘ಡೌನ್‌ಲೋಡ್' ಆಯ್ಕೆಯನ್ನು ಒತ್ತಿರಿ.
ಹಂತ:6 ಈಗ, ಯಾವುದೇ ಚಾಟ್ ಪರದೆಯತ್ತ ಹೋಗಿ.
ಹಂತ:7 ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡಿ ನಂತರ ‘ಸ್ಟಿಕ್ಕರ್‌ಗಳು' ಆಯ್ಕೆಯನ್ನು ಆರಿಸಿ.
ಹಂತ:8 ಇದೀಗ ನಿಮ್ಮ ಸ್ನೇಹಿತರಿಗೆ ಕಳುಹಿಸಲು ಯಾವುದೇ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿ.


Click it and Unblock the Notifications








