ದೊಡ್ಡ ಗಾತ್ರದ ಫೈಲ್ ಅನ್ನು ವಾಟ್ಸಾಪ್‌ನಲ್ಲಿ ಸುಲಭವಾಗಿ ಶೇರ್‌ಮಾಡುವುದು ಹೇಗೆ?

|

ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ವಾಟ್ಸಾಪ್‌ ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕ್ರಿಯೆಟಿವ್‌ ಮೆಸೇಜ್‌ಗಳನ್ನು ಶೇರ್‌ ಮಾಡಿಕೊಳ್ಳಲು ಅನುವು ಮಾಡಿಕೊಡುವ ಹಲವು ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಇದಲ್ಲದೆ ಪಿಡಿಎಫ್ ಫೈಲ್‌ಗಳು ಮತ್ತು ಎಕ್ಸೆಲ್ ಶೀಟ್‌ಗಳು ಸೇರಿದಂತೆ ಮೀಡಿಯಾ ಫೈಲ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಇತರ ಬಳಕೆದಾರರೊಂದಿಗೆ ಶೇರ್‌ ಮಾಡಿಕೊಳ್ಳಲು ಸಹ ವಾಟ್ಸಾಪ್‌ ಅವಕಾಶವನ್ನ ನೀಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಜನಪ್ರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದರಲ್ಲಿ ಪಿಡಿಎಫ್‌ ಫೈಲ್‌, ಎಕ್ಸೆಲ್‌ ಶೀಟ್‌ಗಳನ್ನು ಸಹ ಹಂಚಿಕೊಳ್ಳುವ ಅವಕಾಸವನ್ನ ನಿಡಲಾಗಿದೆ. ಆದರೂ 100MB ಗಾತ್ರದ ಫೈಲ್‌ಗಳನ್ನು ಮಾತ್ರ ಹಂಚಿಕೊಳ್ಳಲು ವಾಟ್ಸಾಪ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಅಲ್ಲದೆ ವಾಟ್ಸಾಪ್ ಬಳಸಿ ರೆಕಾರ್ಡ್ ಮಾಡಿದ ವೀಡಿಯೊಗಳನ್ನ ಶೇರ್‌ ಮಾಡಿಕೊಳ್ಳಬಹುದಾಗಿದೆ ಆದರೆ ಇದರ ಮಿತಿ 16MB ಆಗಿದೆ. ಇನ್ನು 16mb ಮಿತಿಗಿಂತ ದೊಡ್ಡದಾದ ಫೈಲ್ ಅನ್ನು ಬಳಕೆದಾರರು ಕಳುಹಿಸಲು ಪ್ರಯತ್ನಿಸಿದರೆ, ವಾಟ್ಸಾಪ್‌ ತನ್ನ ಬಳಕೆದಾರರಿಗೆ error message ಎಂದು ತೋರಿಸುತ್ತದೆ. ಆದರೂ ವಾಟ್ಸಾಪ್ ಬಳಸಿ 100MB ಗಿಂತ ದೊಡ್ಡದಾದ ಫೈಲ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಡುವುದಕ್ಕೆ ಒಂದು ಅವಕಾಶವಿದೆ. ಅದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್

ವಾಟ್ಸಾಪ್‌ನಲ್ಲಿ 100mbಗಿಂತ ಹೆಚ್ಚಿನ ಗಾತ್ರದ ಯಾವುದೇ ಫೈಲ್‌ಗಳನ್ನ ಶೇರ್‌ ಮಾಡುವಾಗ ಅದು error message ಎಂದು ತೊರಿಸುತ್ತದೆ. ಆದರೂ ವಾಟ್ಸಪ್‌ನಲ್ಲಿ ಕೆಲವು ಹಂತಗಳ ಮೂಲಕ ದೊಡ್ಡ ಗಾತ್ರದ ಫೈಲ್‌ಗಳನ್ನ ಶೇರ್‌ ಮಾಡಬಹುದಾಗಿದೆ. ಆದರೂ ವಾಟ್ಸಾಪ್‌ನಲ್ಲಿ ದೊಡ್ಡ ಫೈಲ್‌ಗಳನ್ನು ಕಳುಹಿಸುವುದಕ್ಕೆ ಟ್ರಿಕ್‌ ಒಂದನ್ನು ಅನುಸರಿಸಬಹುದಾಗಿದೆ. ಅದೆನೆಂದರೆ ಈ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡುವುದು ಮತ್ತು ಆ ಲಿಂಕ್ ಅನ್ನು ವಾಟ್ಸಾಪ್‌ನಲ್ಲಿ ರಿಸೀವರ್‌ನೊಂದಿಗೆ ಶೇರ್‌ಮಾಡಿಕೊಳ್ಳುವುದು. ಇದರಿಂದ ದೊಡ್ಡಗಾತ್ರದ ಫೈಲ್‌ಗಳನ್ನ ಶೇರ್‌ ಮಾಡಬಹುದಾಗಿದೆ. ಅಷ್ಟಕ್ಕೂ ನೀವು ಅನುಸರಿಸಬೇಕಾದ ಹಂತಗಳನ್ನ ತಿಳಿಸಿಕೊಡ್ತಿವಿ ಓದಿರಿ

ವಾಟ್ಸಾಪ್ ಬಳಸಿ ಬಳಕೆದಾರರು ದೊಡ್ಡ ಗಾತ್ರದ ಫೈಲ್‌ಗಳನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್ ಬಳಸಿ ಬಳಕೆದಾರರು ದೊಡ್ಡ ಗಾತ್ರದ ಫೈಲ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಹಂತ 1: ಗೂಗಲ್ ಡ್ರೈವ್ ತೆರೆಯಿರಿ.

ಹಂತ 2: ಸ್ಕ್ರೀನ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ 3: ಅಪ್‌ಲೋಡ್ ಫೈಲ್ ಅನ್ನು ಟ್ಯಾಪ್ ಮಾಡಿ> ಓಪನ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಫೈಲ್ ಅನ್ನು ಅಪ್‌ಲೋಡ್ ಮಾಡಿದ ನಂತರ ನೀವು Google ಡ್ರೈವ್ ಅಪ್ಲಿಕೇಶನ್‌ನಲ್ಲಿ ಫೈಲ್ ಅನ್ನು ಕಾಣಬಹುದಾಗಿದೆ.

ಹಂತ 5: ಫೈಲ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.

ವಾಟ್ಸಾಪ್

ಹಂತ 6: ಕಾಪಿ ಲಿಂಕ್ ಆಯ್ಕೆಯನ್ನು ಟ್ಯಾಪ್ ಮಾಡಿ. ಹಾಗೆ ಮಾಡುವುದರಿಂದ ನಿಮ್ಮ ಫೋನ್‌ನ ಕ್ಲಿಪ್‌ಬೋರ್ಡ್‌ನಲ್ಲಿ ಫೈಲ್‌ನ ಹಂಚಿಕೊಳ್ಳಬಹುದಾದ ಲಿಂಕ್‌ನ ನಕಲನ್ನು ಉಳಿಸುತ್ತದೆ.

ಹಂತ 7: ವಾಟ್ಸಾಪ್ ತೆರೆಯಿರಿ> ನೀವು ಲಿಂಕ್ ಹಂಚಿಕೊಳ್ಳಲು ಬಯಸುವ ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿ.

ಹಂತ 8: ದೀರ್ಘವಾಗಿ ಒತ್ತಿ ನಂತರ ಪೇಸ್ಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 9: ಮೆಸೇಜ್‌ ಬಾಕ್ಸ್‌ ನಲ್ಲಿ ನೀವು Google ಡ್ರೈವ್ ಫೈಲ್‌ನ ಹಂಚಿಕೊಳ್ಳಬಹುದಾದ ಲಿಂಕ್ ಅನ್ನು ನೋಡುತ್ತೀರಿ. ಕಳುಹಿಸಲು ಟ್ಯಾಪ್ ಮಾಡಿ!

ಹೀಗೆ ಮಾಡುವುದರಿಂದ 100mbಗಿಂತ ಗಾತ್ರದಲ್ಲಿ ದೊಡ್ಡದಾದ ಫೈಲ್‌ಗಳನ್ನು ವಾಟ್ಸಾಪ್‌ ಮೂಲಕ ನಿಮ್ಮ ಸ್ನೇಹಿತರಿಗೆ ಇಲ್ಲವೇ ಯಾರಿಗೆ ಸಂಬಂದಿಸಿದೆಯೋ ಅವರಿಗೆ ಕಳುಹಿಸಬಹುದಾಗಿದೆ.

Best Mobiles in India

Read more about:
English summary
The trick to sending large files on WhatsApp lies in uploading these files on Google Drive and then sharing that link with the receiver on WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X