Home
ಟೆಕ್ ನೌಕರಿ

ಈಗ ನೀವು ಇಂಟರ್ನೆಟ್ ಇಲ್ಲದಿದ್ದರೂ WhatsAppನಲ್ಲಿ ಮೆಸೇಜ್ ಕಳುಹಿಸಬಹುದು: ಇಲ್ಲಿದೆ ಸುಲಭ ಟ್ರಿಕ್

ನೀವು ಮೊಬೈಲ್‌ (Smartphone) ಹೊಂದಿದ್ದರೆ, ಮೆಸೇಜ್ ಕಳುಹಿಸಲು ನೀವು ಖಂಡಿತವಾಗಿಯೂ WhatsApp ಅಪ್ಲಿಕೇಶನ್ ಅನ್ನು ಬಳಸುತ್ತೀರಿ. ಆದರೆ, ಇಂಟರ್ನೆಟ್ (internet) ಇಲ್ಲದಿದ್ದರೂ ವಾಟ್ಸಪ್‌ನಲ್ಲಿ ಮೆಸೇಜ್‌ಗಳನ್ನು (WhatsApp messages) ಕಳುಹಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಅನೇಕ ಜನರಿಗೆ ಇದರ ಬಗ್ಗೆ ತಿಳಿದಿಲ್ಲದಿರಬಹುದು. ಅರೆ, ಇಂಟರ್ನೆಟ್ ಇಲ್ಲದಿದ್ದರೂ (without internet) ವಾಟ್ಸಪ್ ಮೆಸೇಜ್ ಕಳುಹಿಸಬಹುದೇ? ಎಂಬ ಕುತೂಹಲ ನಿಮ್ಮಲ್ಲಿರಬಹುದು. ಆದರೆ, ಇದು ನಿಜವಾಗಿಯೂ ಸಾಧ್ಯ!

ಹೌದು, ಇಂದು ನಾವು ನಿಮಗೆ WhatsAppನ ಸೀಕ್ರೆಟ್ ಟ್ರಿಕ್ ಬಗ್ಗೆ ತಿಳಿಸುತ್ತೇವೆ. ಇದರ ಸಹಾಯದಿಂದ ನೀವು ಇಂಟರ್ನೆಟ್ ಇಲ್ಲದೆಯೂ ಸುಲಭವಾಗಿ ವಾಟ್ಸಪ್ (WhatsApp) ಅನ್ನು ಬಳಸಬಹುದು. ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫ್ರೀಯಾಗಿ ಮೆಸೇಜ್‌ಗಳನ್ನು ಕಳುಹಿಸಬಹುದು. ಬಹುತೇಕ ವಾಟ್ಸಪ್ (WhatsApp) ಬಳಕೆದಾರರಿಗೆ ಮೆಟಾದ (Meta) ಈ ಫೀಚರ್‌ ಬಗ್ಗೆ ತಿಳಿದಿಲ್ಲ. ಹಾಗಿದ್ರೆ, ಯಾವುದು ಈ ಟ್ರಿಕ್? ಈ ಫೀಚರ್ ಬಳಸುವುದು ಹೇಗೆ? ಅಂತ ತಿಳಿಯೋಣ ಬನ್ನಿ.

WhatsApp: ಇಂಟರ್ನೆಟ್ ಇಲ್ಲದಿದ್ದರೂ ಮೆಸೇಜ್ ಕಳುಹಿಸಬಹುದು!

ಇಂಟರ್ನೆಟ್ ಇಲ್ಲದೆ ಮೆಸೇಜ್ ಹೇಗೆ ಮಾಡಬಹುದು?

WhatsApp ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಪ್ರಾಕ್ಸಿ ಫೀಚರ್ (Proxy feature) ಅನ್ನು ಒದಗಿಸುತ್ತದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕಳೆದ ವರ್ಷ ಈ ಫೀಚರ್ ಅನ್ನು ಪ್ರಾರಂಭಿಸಿದರು. ಈ ಫೀಚರ್‌ನ (ವೈಶಿಷ್ಟ್ಯ) ಮೂಲಕ ನೀವು ಇಂಟರ್ನೆಟ್ ಇಲ್ಲದೆಯೂ WhatsApp ಮೆಸೇಜ್‌ಗಳನ್ನು ಕಳುಹಿಸಬಹುದು. ನೀವು ಇದರ ಲಾಭ ಪಡೆಯಲು, ನಿಮ್ಮ ಮೊಬೈಲ್‌ನಲ್ಲಿ ಪ್ರಾಕ್ಸಿ ಫೀಚರ್‌ ಅನ್ನು ಸಕ್ರಿಯಗೊಳಿಸಬೇಕು.

ಪ್ರಾಕ್ಸಿ ಫೀಚರ್ ಸಕ್ರಿಯಗೊಳಿಸುವುದು ಹೇಗೆ?

  • ಮೊದಲು ನಿಮ್ಮ ಮೊಬೈಲ್‌ನಲ್ಲಿ WhatsApp ಅನ್ನು ಓಪನ್ ಮಾಡಿ. (ನೆನಪಿರಲಿ, ನಿಮ್ಮ ಮೊಬೈಲ್‌ನಲ್ಲಿರುವ WhatsApp ಇತ್ತೀಚಿನ ಆವೃತ್ತಿಯಾಗಿರಬೇಕು).
  • ಈಗ ನಿಮಗೆ WhatsApp ಅಪ್ಲಿಕೇಶನ್‌ನ ಬಲಭಾಗದಲ್ಲಿರುವ ಮೂರು ಚುಕ್ಕೆಗಳು ಕಾಣುತ್ತವೆ. ಅದರ ಮೇಲೆ ಕ್ಲಿಕ್ ಮಾಡಿ.
  • ಇದರ ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.
  • ಇಲ್ಲಿ ನೀವು ಸ್ಟೋರೇಜ್ ಮತ್ತು ಡೇಟಾವನ್ನು ಆಯ್ಕೆ ಮಾಡಬೇಕು.
  • ಬಳಿಕ ಇಲ್ಲಿ ನೀವು ಪ್ರಾಕ್ಸಿ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ
  • ಇದರ ನಂತರ ನಿಮ್ಮ ಪ್ರಾಕ್ಸಿ ವಿಳಾಸವನ್ನು ನಮೂದಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
  • ಪ್ರಾಕ್ಸಿ ವಿಳಾಸವನ್ನು ಉಳಿಸಿದ ನಂತರ, ನಿಮಗೆ ಗ್ರೀನ್ (ಹಸಿರು) ಮಾರ್ಕ್ ಕಾಣಿಸುತ್ತದೆ. ಇದರರ್ಥ ಪ್ರಾಕ್ಸಿ ವಿಳಾಸವನ್ನು ಸೇರಿಸಲಾಗಿದೆ. ಇಷ್ಟು ಮಾಡಿದ್ರೆ ಸಾಕು.

ಈ ಬಗ್ಗೆ ವಿಶೇಷ ಗಮನ ಕೊಡಿ

ಪ್ರಾಕ್ಸಿ ಫೀಚರ್‌ ಅನ್ನು ಸಕ್ರಿಯಗೊಳಿಸಿದ ನಂತರವೂ ನಿಮಗೆ ಕಾಲ್‌ಗಳು ಅಥವಾ ಮೆಸೇಜ್‌ಗಳನ್ನು ಮಾಡಲು ಸಾಧ್ಯವಾಗದಿದ್ದರೆ, ನಂತರ ನೀವು ಲಾಂಗ್‌ ಪ್ರೆಸ್‌ ಮಾಡಿ ಪ್ರಾಕ್ಸಿ ವಿಳಾಸವನ್ನು ತೆಗೆದುಹಾಕಬಹುದು. ಹೊಸ ಪ್ರಾಕ್ಸಿ ಅಡ್ರೆಸ್‌ ಸೇರಿಸಬಹುದು. ನೀವು ಪ್ರಾಕ್ಸಿ ವಿಳಾಸವನ್ನು ಅಧಿಕೃತ ಮೂಲದಿಂದ ಮಾತ್ರ ಸೇರಿಸಬೇಕು ಎಂಬುದನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಿ. ವಾಸ್ತವವಾಗಿ, ಪ್ರಾಕ್ಸಿ ನೆಟ್‌ವರ್ಕ್‌ನಲ್ಲಿ ನೀವು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಅಥವಾ ಸರ್ಚ್ ಇಂಜಿನ್‌ಗಳ ಸಹಾಯದಿಂದ ಇಂಟರ್ನೆಟ್ ಇಲ್ಲದೆಯೇ ಮೆಸೇಜ್ ಅಥವಾ ಕಾಲ್ ಮಾಡಬಹುದು.

ಈ ಫೀಚರ್‌ ಸುರಕ್ಷಿತವಾಗಿದೆಯೇ?

ಈ ಫೀಚರ್‌ ಬಗ್ಗೆ ಬಹುತೇಕರ ಮನಸ್ಸಿನಲ್ಲಿ ಪ್ರಶ್ನೆಯೊಂದು ಉದ್ಭವಿಸಿದೆ. ಅದೇನೆಂದರೆ, ಈ ಫೀಚರ್‌ ಸುರಕ್ಷಿತವಾಗಿದೆಯೇ? ಅಥವಾ ಇಲ್ಲವೇ? ಅನ್ನೋದು. ಮೆಟಾ ಈ ಫೀಚರ್‌ ಬಗ್ಗೆ ಸ್ಪಷ್ಟಪಡಿಸಿದ್ದು, ವಾಟ್ಸಪ್‌ ಬಳಕೆದಾರರಿಗೆ ಈ ಫೀಚರ್‌ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದೆ. ಈ ಫೀಚರ್‌ ಮೂಲಕ ಯಾವುದೇ ಅನ್ಯವ್ಯಕ್ತಿಗಳು ನಿಮ್ಮ ಕಾಲ್ ಅಥವಾ ಮೆಸೇಜ್‌ಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದೂ ಖಚಿತಪಡಿಸಿದೆ. ನೀವೇನಾದರೂ ಇಂಟರ್ನೆಟ್ ಇಲ್ಲದೆಯೇ ಮೆಸೇಜ್‌ ಕಳುಹಿಸಲು ಬಯಸಿದರೆ ಇಂದೇ ಇದರ ಲಾಭ ಪಡೆಯಬಹುದು.

Best Mobiles in India

English summary
You can send messages even without internet with the help of proxy feature in WhatsApp. Many WhatsApp users don't know about this feature of Meta. For you to avail this, you need to enable proxy feature on your mobile.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+