ವಾಟ್ಸ್ಆಪ್‌ನಲ್ಲಿ ಬ್ಲಾಕ್ ಮಾಡಿರುವವರಿಗೆ ಮೆಸೇಜ್ ಮಾಡಲು ಸಾಧ್ಯವೇ?..ಹೌದು ಸಾಧ್ಯ!

|

ಈಗಿನ ಜಗತ್ತಿನಲ್ಲಿ ಸಂವಹನಕ್ಕಾಗಿ ಅತೀ ಹೆಚ್ಚು ಬಳಕೆ ಮಾಡುವ ವಾಟ್ಸ್ಆಪ್ ಅನ್ನು ವಿಶ್ವದ ಪ್ರಸಿದ್ಧ ಮೆಸೇಜಿಂಗ್ ಆಪ್ ಎಂದು ಹೇಳಬಹುದು. ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಗಿಂತಲೂ ಹೆಚ್ಚು ಇದನ್ನು ಬಳಕೆ ಮಾಡಲಾಗುತ್ತಿರುವ ಈ ಆಪ್‌ನಲ್ಲಿ ಮಲ್ಟಿಮೀಡಿಯಾ, ವೀಡಿಯೋ ಮತ್ತು ಆಡಿಯೋ, ಸ್ಟಿಕ್ಕರ್ಸ್ ಮತ್ತು ಡಾಕ್ಯುಮೆಂಟ್ ಗಳಾದ ವರ್ಡ್, ಪಿಡಿಎಫ್, ಮತ್ತು ಇತ್ಯಾದಿಗಳ ಹಂಚಿಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ, ಪಿಕ್ಚರ್ ಗಳನ್ನು ಡಿಸ್ಪ್ಲೇ ಮಾಡುವುದಕ್ಕೆ, ಡಿಪಿ ಮತ್ತು ಸ್ಟೇಟಸ್ ಹಾಕುವುದಕ್ಕೂ ಕೂಡ ಈ ಆಪ್ ನೆರವು ನೀಡುತ್ತದೆ.

ಕಿರಿಕಿರಿ

ಇಂತಹ ಜನಪ್ರಿಯ ಆಪ್‌ನಲ್ಲಿ ಕಿರಿಕಿರಿ ಮಾಡುವ ಕಾಂಟ್ಯಾಕ್ಟ್‌ಗಳನ್ನು ಬ್ಲಾಕ್ ಮಾಡುವುದಕ್ಕೂ ಸಾಧ್ಯವಿದೆ. ಹೀಗೆ ಬ್ಲಾಕ್ ಮಾಡಲಾದ ಕಾಂಟ್ಯಾಕ್ಟ್‌ಗಳಿಂದ ಯಾವುದೇ ಸಂವಹನ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದರೆ ಆ ಬಗ್ಗೆ ನಿಮಗೆ ಅದು ತಿಳಿಯುವುದೇ ಇಲ್ಲ. ಅಂತಹ ಆಕ್ಷನ್‌ಗಳ ಬಗ್ಗೆ ವಾಟ್ಸ್ ಆಪ್ ಅವರಿಗೆ ನೋಟಿಫಿಕೇಷನ್ ಅನ್ನು ನೀಡುವುದೇ ಇಲ್ಲ. ನೀವು ಬ್ಲಾಕ್ ಆಗಿದ್ದೀರೋ ಇಲ್ಲವೋ ಎಂಬುದನ್ನು ಕೆಲವು ಇಂಡಿಕೇಷನ್ ಗಳಿಂದ ತಿಳಿದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಬ್ಲಾಕ್ ಆಗಿದ್ದರೆ

ನೀವು ಇತರರಿಂದ ಬ್ಲಾಕ್ ಆಗಿದ್ದರೆ, ನೀವು ಲಾಸ್ಟ್ ಸೀನ್ ಅನ್ನು ನೋಡುವುದಕ್ಕೆ ಸಾಧ್ಯವಿಲ್ಲ (ಅವರು ಕೂಡ ನಿಮ್ಮ ಸ್ಟೇಟಸ್ ನೋಡಲು ಸಾಧ್ಯವಿಲ್ಲ). ಬ್ಲಾಕ್ ಮಾಡಿದ ವ್ಯಕ್ತಿಯ ಡಿಪಿ ನೋಡುವುದಕ್ಕೆ ಆಗುವುದಿಲ್ಲ.ಬ್ಲಾಕ್ ಮಾಡಿದ ವ್ಯಕ್ತಿಗೆ ಕರೆ ಮಾಡಲು ಸಾಧ್ಯವಿಲ್ಲ ಮತ್ತು ಆ ವ್ಯಕ್ತಿಯೂ ನಿಮಗೆ ಕರೆ ಮಾಡಲು ಸಾಧ್ಯವಿಲ್ಲ. ಹಾಗೆಯೇ, ಆ ವ್ಯಕ್ತಿಗೆ ಕಳುಹಿಸಿದ ಮೆಸೇಜ್ ಕೇವಲ ಒಂದೇ ಒಂದು ಬೂದು ಬಣ್ಣದ ಚೆಕ್ ಮಾರ್ಕ್ ನಿಂದ ಕಾಣಿಸುತ್ತದೆ. ಎರಡು ಚೆಕ್ ಮಾರ್ಕ್ ಗಳು ಮೆಸೇಜ್ ತಲುಪಿರುವ ಬಗ್ಗೆ ಮತ್ತು ಅವರು ಓದಿರುವ ಬಗ್ಗೆ ತಿಳಿಸುತ್ತದೆ.

ವಿಭಿನ್ನ ನಂಬರ್

ಇಂತಹ ಸಮಯದಲ್ಲಿ ನಿಮ್ಮನ್ನು ನೀವು ಅನ್ ಬ್ಲಾಕ್ ಮಾಡಿಕೊಳ್ಳಲು ಎರಡು ಹಂತಗಳಿವೆ. ವಾಟ್ಸ್ಆಪ್ ನಲ್ಲಿ ವಿಭಿನ್ನ ನಂಬರ್ ಬಳಸಿ ಗ್ರೂಪ್ ಅನ್ನು ಕ್ರಿಯೇಟ್ ಮಾಡಿ ಮತ್ತು ಆ ಗ್ರೂಪಿಗೆ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಯನ್ನು ಸೇರಿಸಿ ಅಥವಾ ನಿಮ್ಮ ಫ್ರೆಂಡ್ ಬಳಿ ಹೊಸ ಗ್ರೂಪ್ ನಿರ್ಮಿಸಲು ಕೇಳಿಕೊಳ್ಲಿ. ಇಲ್ಲಿ ನಿಮ್ಮನ್ನುಬ್ಲಾಕ್ ಮಾಡಿದ ವ್ಯಕ್ತಿಯನ್ನು ಆಡ್ ಮಾಡಿ ಅಥವಾ ಮಾಡಲು ಹೇಳಿ. ಈ ರೀತಿ ನೀವು ಗ್ರೂಪ್ ನಲ್ಲಿ ಮೆಸೇಜ್ ಕಳುಹಿಸಬಹುದು ಮತ್ತು ನಿಮ್ಮ ಬ್ಲಾಕ್ ಮಾಡಿದ ವ್ಯಕ್ತಿಯೂ ಕೂಡ ಈ ಮೆಸೇಜ್ ಗಳನ್ನು ನೋಡುವುದಕ್ಕೆ ಸಾಧ್ಯವಿದೆ.

ಮರುಸ್ಥಾಪಿಸುವ ಮೂಲಕ

ಈ ಮೇಲಿನ ವಿಧಾನ ಕೆಲಸ ಮಾಡದೇ ಇದ್ದಲ್ಲಿ ವಾಟ್ಸ್ಆಪ್ ಅನ್ನು ಮರುಸ್ಥಾಪಿಸುವ ಮೂಲಕ ನಿಮ್ಮನ್ನು ನೀವು ಅನ್ ಬ್ಲಾಕ್ ಮಾಡಿಕೊಳ್ಳಬಹುದು. ವಾಟ್ಸ್ಆಪ್ ಗೆ ತೆರಳಿ. ಸೆಟ್ಟಿಂಗ್ಸ್ ಅನ್ನು ಕ್ಲಿಕ್ಕಿಸಿ ಮತ್ತು ಅಕೌಂಟ್ ಆಯ್ಕೆಯನ್ನು ತೆರೆಯಿರಿ. ಡಿಲೀಟ್ ಮೈ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿ. ಗೂಗಲ್ ಪ್ಲೇ ಸ್ಟೋರ್ ನಿಂದ ವಾಟ್ಸ್ ಆಪ್ ಅನ್ನು ರಿ ಇನ್ಸ್ಟಾಲ್ ಮಾಡಿ. ನಂತರ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡುವುದು, ಓಟಿಪಿ ಎಂಟರ್ ಮಾಡುವುದು ಇತ್ಯಾದಿ ಪ್ರೊಸೀಜರ್ ಗಳನ್ನು ಫಾಲೋ ಮಾಡಿ.

ಅನ್ ಬ್ಲಾಕ್ ಆಗಿರುತ್ತದೆ.

ಇದಾದ ನಂತರ ನಿಮ್ಮ ವಾಟ್ಸ್ಆಪ್ ಬ್ಯಾಕ್ ಅಪ್‌ಗಳನ್ನು ಮಾತ್ರ ರಿಸ್ಟೋರ್ ಮಾಡಬೇಡಿ. ಇದೀಗ ನಿಮ್ಮ ನಂಬರ್ ಅನ್ ಬ್ಲಾಕ್ ಆಗಿರುತ್ತದೆ. ಇದೀಗ ನಿಮ್ಮನ್ನ ಬ್ಲಾಕ್ ಮಾಡಿದ ವ್ಯಕ್ತಿಗೂ ಮೆಸೇಜ್ ಕಳುಹಿಸಬಹುದು. ಆದರೆ, ನೆನಪಿರಲಿಯಾವಾಗ ನೀವು ನಿಮ್ಮ ವಾಟ್ಸ್ ಆಪ್ ಅಕೌಂಟ್ ನ್ನು ಡಿಲೀಟ್ ಮಾಡುತ್ತೀರೋ ಮತ್ತು ಪುನಃ ಇನ್ಸ್ಟಾಲ್ ಮಾಡುತ್ತೀರೋ ಆಗ ನೀವು ಆರಂಭದಿಂದ ವಾಟ್ಸ್ ಆಪ್ ನಲ್ಲಿ ಚಾಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಒಂದೇ ಒಂದು ಅನಾನುಕೂಲವೆಂದರೆ ನೀವು ವಾಟ್ಸ್ ಆಪ್ ಗ್ರೂಪ್ ಗಳಿಂದ ರಿಮೂವ್ ಆಗಿರುತ್ತೀರಿ.

Best Mobiles in India

English summary
You can no longer see a contact’s last seen or online in the chat window. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X