ಜಿ-ಮೇಲ್‌ನಲ್ಲಿ ಇಮೇಲ್‌ಗೆ ಪಾಸ್‌ಕೋಡ್ ಅನ್ನು ಸೆಟ್‌ ಮಾಡುವುದು ಹೇಗೆ?

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಜಿ-ಮೇಲ್‌ ಸೇವೆ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಜಿ-ಮೇಲ್‌ ಐಡಿಯನ್ನು ನಮೂದಿಸುವ ಪರಿಪಾಠ ಶುರುವಾಗಿದೆ. ಇದಲ್ಲದೆ ಹೆಚ್ಚಿನ ಜನರು ಸೂಕ್ಷ್ಮ ಮಾಹಿತಿ ಹಾಗೂ ಅಗತ್ಯ ಫೈಲ್‌ಗಳನ್ನು ಸಂಬಂಧಿಸಿದವರಿಗೆ ಮೇಲ್‌ ಮೂಲಕ ಕಳುಹಿಸುತ್ತಾರೆ. ಇನ್ನು ನೀವು ಕೂಡ ಆಗಾಗ್ಗೆ ಜಿ-ಮೇಲ್‌ನಲ್ಲಿ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಯನ್ನು ಕಳುಹಿಸುತ್ತಿದ್ದರೆ, ಆ ಮೇಲ್ ಬೇರೊಬ್ಬರಿಗೆ ಸೋರಿಕೆಯಾಗದಂತೆ ತಡೆಗಟ್ಟುವುದಕ್ಕೆ ಜಿ-ಮೇಲ್‌ನಲ್ಲಿ ಅವಕಾಶವಿದೆ. ಇದಕ್ಕೆ ಜಿ-ಮೇಲ್‌ನ Confidential mode ನಿಮಗೆ ಅತ್ಯಗತ್ಯವಾಗಿದೆ.

ಮೇಲ್‌

ಹೌದು, ನೀವು ದಿನನಿತ್ಯ ಜಿ-ಮೇಲ್‌ ಬಳಸುತ್ತಿದ್ದು, ನೀವು ಕಳುಹಿಸುವ ಮೇಲ್‌ ಬೇರೆ ಇನ್ಯಾರಿಗೋ ರವಾನೆಯಾಗುವುದನ್ನು ತಡೆಗಟ್ಟಬಹುದಾಗಿದೆ. ಬೇರೆಯವರು ನಿಮ್ಮ ಮೇಲ್ ಮತ್ತು ಅದರ ಲಗತ್ತುಗಳನ್ನು ಡೌನ್‌ಲೋಡ್ ಮಾಡುವುದು, ಮುದ್ರಿಸುವುದು, ಕಾಪಿ-ಪೇಸ್ಟ್‌ ಮತ್ತು ಫಾರ್ವರ್ಡ್ ಮಾಡುವುದನ್ನು ನಿರ್ಬಂಧಿಸಲು ಇದು ನಿಮ್ಮನ್ನು ಶಕ್ತಗೊಳಿಸುತ್ತದೆ. ಇದಕ್ಕಾಗಿ ಜಿ-ಮೇಲ್‌ ಮೇಲ್‌ನಲ್ಲಿ ಎಡಿಂಗ್‌ ಡೇಟ್‌ ಅನ್ನು ಸೆಟ್‌ ಮಾಡಲು ಈ ಫೀಚರ್ಸ್‌ ಅವಕಾಶ ನೀಡಿದೆ. ಹಾಗಾದ್ರೆ ನಿಮ್ಮ ಮೇಲ್‌ ಅನ್ನು ಬೇರೆಯವರು ಕಾಪಿ ಮಾಡದಂತೆ ತಡೆಗಟ್ಟುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೇಲ್‌

ನೀವು ಕಳುಹಿಸುವ ಮೇಲ್‌ ಅನ್ನು ಇನ್ಯಾರೋ ಕಟ್‌ ಆಂಡ್‌ ಪೇಸ್ಟ್‌ ಮಾಡಿ ಬೇರೆಯವರಿಗೆ ರವಾನಿಸುವ ಸಾಧ್ಯತೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಲೇ ಇದೆ. ಇದೆ ಕಾರಣಕ್ಕೆ ಹೆಚ್ಚಿನ ಜನರು ತಾವು ಮಾಡುವ ಮೇಲ್‌ಗಳಿಗೆ ಎಂಡಿಂಗ್‌ ಡೇಟ್‌ ಅನ್ನು ಸೆಟ್‌ ಮಾಡುತ್ತಾರೆ. ಇದರಿಂದ ನೀವು ನಮೂದಿಸಿದ ದಿನಾಂಕದಂದು ನೀವು ಮಾಡಿದ ಪೋಸ್ಟ್‌ನ ಇಮೇಲ್ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಇದರಿಂದ ನಿಮ್ಮ ಮೇಲ್‌ ರಿಸೀವರ್ ಅದನ್ನು ಮತ್ತೊಮ್ಮೆ ತೆಗೆದು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ, ನಿಮ್ಮ ಸೂಕ್ಷ್ಮ ಇಮೇಲ್‌ಗಳನ್ನು ಲಾಕ್ ಮಾಡಲು ನೀವು ಆಯ್ಕೆ ಮಾಡಬಹುದು ಮತ್ತು ಸ್ವೀಕರಿಸುವವರು ಪಾಸ್‌ಕೋಡ್ ಅನ್ನು ನಮೂದಿಸಿದಾಗ ಮಾತ್ರ ಸಂದೇಶಗಳನ್ನು ಪ್ರವೇಶಿಸಲು ಅವರಿಗೆ ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಕಳುಹಿಸಬಹುದು.

ಫೋನ್‌ನಲ್ಲಿ ಜಿ-ಮೇಲ್‌ನ ಇಮೇಲ್‌ಗೆ ಎಂಡಿಂಗ್‌ ಡೇಟ್‌ ಅಥವಾ ಪಾಸ್‌ಕೋಡ್ ಅನ್ನು ಸೆಟ್‌ ಮಾಡುವುದು ಹೇಗೆ?

ಫೋನ್‌ನಲ್ಲಿ ಜಿ-ಮೇಲ್‌ನ ಇಮೇಲ್‌ಗೆ ಎಂಡಿಂಗ್‌ ಡೇಟ್‌ ಅಥವಾ ಪಾಸ್‌ಕೋಡ್ ಅನ್ನು ಸೆಟ್‌ ಮಾಡುವುದು ಹೇಗೆ?

ಹಂತ: 1 ನಿಮ್ಮ Android ಫೋನ್ ಅಥವಾ ಐಫೋನ್‌ನಲ್ಲಿ, Gmail ಅಪ್ಲಿಕೇಶನ್ ತೆರೆಯಿರಿ

ಹಂತ: 2 ಕಂಪೋಸ್‌ ಟ್ಯಾಪ್ ಮಾಡಿ, ಮತ್ತು ಮೇಲಿನ ಬಲ ಮೂಲೆಯಲ್ಲಿ Confidential mode ಅನ್ನು ಟ್ಯಾಪ್ ಮಾಡಿ. ನೀವು ಈಗಾಗಲೇ Confidential mode ಅನ್ನು ಸಕ್ರಿಯಗೊಳಿಸಿದ್ದರೆ, ನೀವು ಇಮೇಲ್‌ನ ಕೆಳಭಾಗಕ್ಕೆ ಹೋಗಬಹುದು, ನಂತರ ಎಡಿಟ್‌ ಟ್ಯಾಪ್ ಮಾಡಿ.

ಹಂತ: 3 ಈಗ, Confidential mode ಅನ್ನು ಆನ್ ಮಾಡಿ. ನೀವು ಈಗ ಈ ಮೇಲ್‌ಗಾಗಿ ಎಂಡಿಂಗ್‌ ಡೇಟ್‌ ಅನ್ನು 1 ದಿನ, ಒಂದು ವಾರ, ಒಂದು ತಿಂಗಳು ಮತ್ತು 5 ವರ್ಷಗಳವರೆಗೆ ಸೆಟ್‌ ಮಾಡಬಹುದು.

ಹಂತ: 4 ನೀವು "ನೋ ಎಸ್‌ಎಂಎಸ್‌ ಪಾಸ್ಕೋಡ್ " ಅನ್ನು ಆರಿಸಿದರೆ, Gmail ಅಪ್ಲಿಕೇಶನ್ ಬಳಸುವ ಸ್ವೀಕರಿಸುವವರು ಮೇಲ್ ಅನ್ನು ನೇರವಾಗಿ ತೆರೆಯಲು ಸಾಧ್ಯವಾಗುತ್ತದೆ. ಆದರೆ, ರಿಸೀವರ್ ತಮ್ಮ ಗುರುತನ್ನು ಪರಿಶೀಲಿಸಲು ಮೇಲ್ ಓದುವ ಮೊದಲು ಪಾಸ್‌ಕೋಡ್ ಅನ್ನು ನಮೂದಿಸಲು ನೀವು ಬಯಸಿದರೆ, ನೀವು ಪಾಸ್‌ಕೋಡ್ ಸೇರಿಸುವ ಅಗತ್ಯವಿದೆ. ಇದಕ್ಕಾಗಿ SMS ಪಾಸ್‌ಕೋಡ್ ಆಯ್ಕೆ ಮಾಡಬಹುದು.

ಕಂಪ್ಯೂಟರ್‌ನಲ್ಲಿ ಜಿ-ಮೇಲ್‌ನ ಇಮೇಲ್‌ಗೆ ಎಂಡಿಂಗ್‌ ಡೇಟ್‌ ಅಥವಾ ಪಾಸ್‌ಕೋಡ್ ಅನ್ನು ಸೆಟ್‌ ಮಾಡುವುದು ಹೇಗೆ?

ಕಂಪ್ಯೂಟರ್‌ನಲ್ಲಿ ಜಿ-ಮೇಲ್‌ನ ಇಮೇಲ್‌ಗೆ ಎಂಡಿಂಗ್‌ ಡೇಟ್‌ ಅಥವಾ ಪಾಸ್‌ಕೋಡ್ ಅನ್ನು ಸೆಟ್‌ ಮಾಡುವುದು ಹೇಗೆ?

ಹಂತ: 1 ಜಿ-ಮೇಲ್‌ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ, ಕಂಪೋಸ್‌ ಕ್ಲಿಕ್ ಮಾಡಿ.

ಹಂತ: 2 ವಿಂಡೋದ ಕೆಳಗಿನ ಬಲಭಾಗದಲ್ಲಿ, Confidential mode ಆನ್ ಮಾಡಿ ಕ್ಲಿಕ್ ಮಾಡಿ. ಆದರೆ, ನೀವು ಅದನ್ನು ಈಗಾಗಲೇ ಇಮೇಲ್‌ಗಾಗಿ ಸಕ್ರಿಯಗೊಳಿಸಿದ್ದರೆ, ನಂತರ ಇಮೇಲ್‌ನ ಕೆಳಭಾಗಕ್ಕೆ ಹೋಗಿ, ನಂತರ ಎಡಿಟ್‌ ಕ್ಲಿಕ್ ಮಾಡಿ.

ಹಂತ: 3 ಈಗ, ಎಡಿಂಗ್‌ ಡೇಟ್‌ ಮತ್ತು ಪಾಸ್‌ಕೋಡ್ ಅನ್ನು ಸೆಟ್‌ ಮಾಡಲು, "SMS ಪಾಸ್‌ಕೋಡ್ ** ಅನ್ನು ಆರಿಸಿ ಮತ್ತು ಸ್ವೀಕರಿಸುವವರು ಪಠ್ಯ ಸಂದೇಶದ ಮೂಲಕ ಪಾಸ್‌ಕೋಡ್ ಪಡೆಯುತ್ತಾರೆ.

ಹಂತ: 4 ನಂತರ ಸೇವ್‌ ಕ್ಲಿಕ್ ಮಾಡಿ.

Most Read Articles
Best Mobiles in India

English summary
How to set an expiry date or passcode to an email on Gmail.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X