ವಾಟ್ಸಾಪ್‌ನಲ್ಲಿ ಕಸ್ಟಮ್ ವಾಟ್ಸಾಪ್ ವಾಲ್‌ಪೇಪರ್ ಅನ್ನು ಸೆಟ್‌ ಮಾಡುವುದು ಹೇಗೆ?

|

ವಾಟ್ಸಾಪ್‌ ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಆಪ್‌ ಆಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ವಾಟ್ಸಾಪ್, ಕೆಲ ದಿನಗಳ ಹಿಂದೆಯಷ್ಟೇ ವಾಟ್ಸಾಪ್ ವಾಲ್‌ಪೇಪರ್‌ ಆಪ್ಡೇಟ್‌, ಸ್ಟಿಕ್ಕರ್‌ ಸರ್ಚ್‌ ಫೀಚರ್ಸ್‌ ಮತ್ತು ಹೊಸ ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ ಅನ್ನು ಪರಿಚಯಿಸಿತ್ತು. ಇದರಲ್ಲಿ ವಾಲ್‌ಪೇಪರ್‌ ಅಪ್ಡೇಟ್ ಫೀಚರ್ಸ್‌ ಬಳಕೆದಾರರಿಗೆ ವಿಶೇಷ ಸಂಪರ್ಕಕ್ಕಾಗಿ ಕಸ್ಟಮ್ ವಾಟ್ಸಾಪ್ ವಾಲ್‌ಪೇಪರ್ ಅನ್ನು ಹೊಂದಿಸಲು ಅನುವು ಮಾಡಿಕೊಡಲಿದೆ. ಜೊತೆಗೆ ಬಳಕೆದಾರರಿಗೆ ಡಾರ್ಕ್ ಮತ್ತು ಲೈಟ್ ಮೋಡ್‌ನಲ್ಲಿ ಪ್ರತ್ಯೇಕ ವಾಲ್‌ಪೇಪರ್ ಹೊಂದಿಸಲು ವಾಟ್ಸಾಪ್ ಸುಲಭವಾದ ಮಾರ್ಗವನ್ನು ಸಹ ಸಕ್ರಿಯಗೊಳಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಕಸ್ಟಮ್‌ ವಾಟ್ಸಾಪ್‌ ವಾಲ್‌ಪೇಪರ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಪ್ರಮುಖ ಚಾಟ್‌ಗಳು ಅಥವಾ ನೆಚ್ಚಿನ ಸಂಪರ್ಕಗಳಿಗಾಗಿ ಕಸ್ಟಮ್ ವಾಲ್‌ಪೇಪರ್ ಬಳಸುವ ಮೂಲಕ ಚಾಟ್‌ಗಳನ್ನು ವೈಯಕ್ತಿಕ ಮತ್ತು ಪ್ರತ್ಯೇಕಿಸಲು ಅನುಮತಿಸುತ್ತದೆ. ಹಾಗಾದ್ರೆ ವೈಯಕ್ತಿಕ ವಾಟ್ಸಾಪ್ ಚಾಟ್‌ಗಾಗಿ ನೀವು ವಿಶೇಷ ವಾಲ್‌ಪೇಪರ್ ಅನ್ನು ಹೇಗೆ ಹೊಂದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಪರಿಚಯಿಸಿರುವ ಹೊಸ ಕಸ್ಟಮ್‌ ವಾಲ್‌ ಪೇಪರ್‌ ಅನ್ನು ಹೇಗೆ ಹೊಂದಿಸುತ್ತೀರಿ ಎಂಬುದರಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಆದರೆ ಅದಕ್ಕೂ ಮೊದಲು ನೀವು ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಇತ್ತೀಚಿನ ಹೊಸ ಆಪ್ಡೇಟ್‌ಗೆ ನವೀಕರಿಸಲು ಖಚಿತಪಡಿಸಿಕೊಳ್ಳಿ. ಹೊಸ ವಾಲ್‌ಪೇಪರ್ ಫೀಚರ್ಸ್‌ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿರುತ್ತದೆ. ಈಗ ನಿಮ್ಮ ವಾಟ್ಸಾಪ್‌ನಲ್ಲಿ ಕಸ್ಟಮ್‌ ವಾಲ್‌ ಪೇಪರ್‌ ಅನ್ನು ವೈಯುಕ್ತಿಕ ಚಾಟ್‌ಗಳಿಗೆ ಹೊಂದಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ವೈಯಕ್ತಿಕ ಚಾಟ್‌ಗಳಿಗಾಗಿ ಕಸ್ಟಮ್ ವಾಟ್ಸಾಪ್ ವಾಲ್‌ಪೇಪರ್ ಅನ್ನು ಸೆಟ್‌ ಮಾಡುವುದು ಹೇಗೆ?

ವೈಯಕ್ತಿಕ ಚಾಟ್‌ಗಳಿಗಾಗಿ ಕಸ್ಟಮ್ ವಾಟ್ಸಾಪ್ ವಾಲ್‌ಪೇಪರ್ ಅನ್ನು ಸೆಟ್‌ ಮಾಡುವುದು ಹೇಗೆ?

ಹಂತ 1: ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ಗೆ ಹೋಗುವ ಮೂಲಕ ವಾಟ್ಸಾಪ್ ಅಪ್ಲಿಕೇಶನ್ ಅನ್ನು ನವೀಕರಿಸಿ.

ಹಂತ 2: ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ನೀವು ವಿಶೇಷ ವಾಲ್‌ಪೇಪರ್ ಹೊಂದಿಸಲು ಬಯಸುವ ಕಂಟ್ಯಾಕ್ಟ್‌ ತೆರೆಯಿರಿ.

ಹಂತ 3: ನಂತರ ಸಂಪರ್ಕದ ಖಾತೆ ವಿವರಗಳ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ವಾಲ್‌ಪೇಪರ್ ಮತ್ತು ವಾಯ್ಸ್‌ ಆಯ್ಕೆಗೆ ಕ್ಲಿಕ್ ಮಾಡಿ.

ಹಂತ 4: ಇದಾದ ನಂತರ ಸಂಪರ್ಕಕ್ಕಾಗಿ ಇತ್ತೀಚಿನ ವಾಲ್‌ಪೇಪರ್ ಅನ್ನು ತೋರಿಸುತ್ತದೆ. ಆ ವೈಯಕ್ತಿಕ ಚಾಟ್‌ಗಾಗಿ ವಾಲ್‌ಪೇಪರ್ ಬದಲಾಯಿಸಲು ‘Choose a New Wallpaper' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 5: ವಾಟ್ಸಾಪ್ ಬ್ರೈಟ್, ಡಾರ್ಕ್ ಮತ್ತು ಸಾಲಿಡ್ ಕಲರ್ಸ್ ಸೇರಿದಂತೆ ಮೂರು ರೀತಿಯ ವಾಲ್‌ಪೇಪರ್‌ಗಳನ್ನು ತೋರಿಸುತ್ತದೆ. ನಿಮಗೆ ಸೂಕ್ತವಾದ ಯಾವುದನ್ನಾದರೂ ನೀವು ಆಯ್ಕೆ ಮಾಡಬಹುದು.

ಹಂತ 6: ಅಲ್ಲದೆ, ವಾಟ್ಸಾಪ್ ಗ್ಯಾಲರಿಯಿಂದ ಫೋಟೋವನ್ನು ನಿಮ್ಮ ವಾಲ್‌ಪೇಪರ್‌ನಂತೆ ಹೊಂದಿಸಲು ಸಹ ಅನುಮತಿಸುತ್ತದೆ. ಹಾಗೆ ಮಾಡಲು, ಒಂದೇ ಪರದೆಯಲ್ಲಿ ಪ್ರದರ್ಶಿಸಲಾದ ಫೋಟೋಗಳ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 7: ನಂತರ ನೀವು ಬಳಸಬೇಕಾದ ವಾಲ್‌ಪೇಪರ್ ಅನ್ನು ನೀವು ಆಯ್ಕೆ ಮಾಡಬಹುದು, ಮತ್ತು SET ಕ್ಲಿಕ್ ಮಾಡಿ.

ಹಂತ 8: ವಾಲ್‌ಪೇಪರ್ ಎಷ್ಟು ಬ್ರೈಟ್‌ನೆಶ್‌ ಅಥವಾ ಡಾರ್ಕ್‌ ಆಗಿ ಇರಬೇಕೆಂಬುದನ್ನು ಹೊಂದಿಸಲು ಸಹ ವಾಟ್ಸಾಪ್ ನಿಮಗೆ ಅವಕಾಶ ನೀಡುತ್ತದೆ.

ಹಂತ 9: ನಿಮಗೆ ಬೇಕಾದಾಗ ಕಸ್ಟಮ್ ವಾಲ್‌ಪೇಪರ್ ಅನ್ನು ತೆಗೆದುಹಾಕುವ ಅವಕಾಶ ಸಹ ಇದ್ದು, ‘Remove Custom Wallpaper' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ವಾಟ್ಸಾಪ್‌

ಈ ಮೂಲಕ ನೀವು ನಿಮ್ಮ ವಾಟ್ಸಾಪ್‌ ಖಾತೆಯಲ್ಲಿ ಕಸ್ಟಮ್‌ ವಾಟ್ಸಾಪ್‌ ವಾಲ್‌ಪೇಪರ್‌ ಫೀಚರ್ಸ್‌ ಅನ್ನು ವೈಯುಕ್ತಿಕ ಚಾಟ್‌ನಲ್ಲಿ ಬಳಸಬಹುದಾಗಿದೆ. ಹಾಗೇ ನೋಡುವುದಾದರೆ ಕಸ್ಟಮ್ ಚಾಟ್ ವಾಲ್‌ಪೇಪರ್‌ ಲೈಬ್ರರಿಯಲ್ಲಿ ಪ್ರಪಂಚದಾದ್ಯಂತದ ಪ್ರಕೃತಿ ಮತ್ತು ವಾಸ್ತುಶಿಲ್ಪದ ಹೊಸ ಚಿತ್ರಗಳನ್ನು ಸೇರಿಸಿದೆ.

Most Read Articles
Best Mobiles in India

English summary
Starting earlier this week, the Facebook-owned messaging platform WhatsApp allows users to set a custom WhatsApp wallpaper for a special contact.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X