ಆಂಡ್ರಾಯ್ಡ್ ಫೋನ್‌ನಲ್ಲಿ ಹೊಸ ಎಸ್‌ಡಿಕಾರ್ಡ್ ಸೆಟಪ್ ಮಾಡುವುದು ಹೇಗೆ?

By Shwetha
|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಪೇಸ್ ಕಡಿಮೆ ಇದೆಯೇ? ನಿಮ್ಮ ಫೋನ್ ಎಸ್‌ಡಿ ಕಾರ್ಡ್ ಹೊಂದಿದ್ದು, ನಿಮ್ಮ ಸ್ಪೇಸ್ ಅನ್ನು ಇದನ್ನು ಬಳಸಿ ಹೆಚ್ಚಿಸಿಕೊಳ್ಳಬಹುದಾಗಿದೆ ಅಂದರೆ ಹಾಡುಗಳು, ಚಲನಚಿತ್ರಗಳು ಅಂತೆಯೇ ಅಪ್ಲಿಕೇಶನ್‌ಗಳನ್ನು ಇದರಲ್ಲಿ ಸೇರಿಸಿಕೊಳ್ಳಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಎಸ್‌ಡಿ ಕಾರ್ಡ್ ಬಳಸಲು ಎರಡು ವಿಧಾನಗಳಿವೆ. ಎಲ್ಲಾ ಎಸ್‌ಡಿ ಕಾರ್ಡ್‌ಗಳನ್ನು ಪೋರ್ಟೇಬಲ್ ಸ್ಟೋರೇಜ್‌ನಂತೆ ಬಳಸಿಕೊಳ್ಳುವುದು ಇನ್ನೊಂದು ವಿಧಾನ ಎಸ್‌ಡಿ ಕಾರ್ಡ್ ಅನ್ನು ಇಂಟರ್ನಲ್ ಸ್ಟೋರೇಜ್‌ನಂತೆ ಬಳಸಿಕೊಳ್ಳುವುದು

ಮೊದಲಿಗೆ ಪೋರ್ಟೇಬಲ್ ಸ್ಟೋರೇಜ್‌ನಂತೆ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

#1

#1

ನಿಮ್ಮ ಡಿವೈಸ್‌ನಲ್ಲಿ ಮೈಕ್ರೋ ಎಸ್‌ಡಿ ಸ್ಲಾಟ್‌ಗೆ ಕಾರ್ಡ್ ಇನ್‌ಸರ್ಟ್ ಮಾಡಿ. ಆಗ ನಿಮ್ಮ ಎಸ್‌ಡಿ ಕಾರ್ಡ್ ಪತ್ತೆಹಚ್ಚಲಾಗಿದೆ ಎಂಬ ಸಂದೇಶ ಬರುತ್ತದೆ. ಇದು ಎಸ್‌ಡಿ ಕಾರ್ಡ್ ಆಗಿದ್ದಲ್ಲಿ, ನಿಮಗೆ ಸೆಟಪ್ ಬಟನ್ ಕಂಡುಬರುತ್ತದೆ.

#2

#2

ಯುಸ್ ಏಸ್ ಪೋರ್ಟೇಬಲ್ ಸ್ಟೋರೇಜ್ ಎಂಬಂತೆ ಇದನ್ನು ಆರಿಸಿಕೊಳ್ಳಬಹುದು ಹೀಗೆ ನಿಮ್ಮೆಲ್ಲಾ ಫೈಲ್‌ಗಳನ್ನು ನಿಮ್ಮ ಡಿವೈಸ್‌ನಲ್ಲಿ ಇರಿಸಿಕೊಳ್ಳಬಹುದು.

#3

#3

ಇಂಟರ್ನಲ್ ಸ್ಟೋರೇಜ್‌ಗೆ ಎಸ್‌ಡಿ ಕಾರ್ಡ್ ಇನ್‌ಸರ್ಟ್ ಮಾಡುವ ಯೋಜನೆ ನಿಮ್ಮದಾಗಿದೆ ಎಂದಾದಲ್ಲಿ ನೀವು ಸ್ಪೀಡಿ ಎಸ್‌ಡಿ ಕಾರ್ಡ್ ಅನ್ನು ಬಳಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#4

#4

ಎಸ್‌ಡಿ ಕಾರ್ಡ್ ಅಡಾಪ್ಟ್ ಮಾಡುತ್ತಿರುವಾಗ, ಆಂಡ್ರಾಯ್ಡ್ ಇದರ ವೇಗವನ್ನು ಪರೀಕ್ಷಿಸುತ್ತದೆ ಮತ್ತು ಇದು ಸ್ಲೋ ಆಗಿದ್ದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಇದು ಹಾನಿಕರ ಎಂದು ಎಚ್ಚರಿಕೆಯನ್ನು ನೀಡುತ್ತದೆ.

#5

#5

ಇದನ್ನು ನಿರ್ವಹಿಸಲು, ಎಸ್‌ಡಿ ಕಾರ್ಡ್ ಇನ್‌ಸರ್ಟ್ ಮಾಡಿ ಮತ್ತು ಸೆಟಪ್ ಆಯ್ಕೆಮಾಡಿ. "ಯೂಸ್ ಏಸ್ ಇಂಟರ್ನಲ್ ಸ್ಟೋರೇಜ್" ಆರಿಸಿ.

#6

#6

ಆಂಡ್ರಾಯ್ಡ್ ವಿಷಯಗಳನ್ನು ಅಳಿಸಿ ಹಾಕುತ್ತದೆ. ಆದ್ದರಿಂದ ನೀವು ಎಲ್ಲಾ ಡಾಟಾವನ್ನು ಬ್ಯಾಕಪ್ ಮಾಡಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#7

#7

ಮೂವ್ ಫೋಟೋಸ್ ಆರಿಸಿಕೊಳ್ಳಬಹುದು, ಇದರ ಜೊತೆಗೆ ಇತರೆ ಫೈಲ್‌ಗಳು ಮತ್ತು ಕೆಲವೊಂದು ಅಪ್ಲಿಕೇಶನ್‌ಗಳನ್ನು ಹೊಸ ಡಿವೈಸ್‌ಗೆ ಸೇರ್ಪಡಿಸಿಕೊಳ್ಳಬಹುದು.

#8

#8

ಸೆಟ್ಟಿಂಗ್ಸ್ ಅಪ್ಲಿಕೇಶನ್‌ನಲ್ಲಿ ಸ್ಟೋರೇಜ್ ಡಿವೈಸ್ ಅನ್ನು ನಿಮಗೆ ಕಾಣಬಹುದು. ಸೆಟ್ಟಿಂಗ್ಸ್ ಆಪ್ ತೆರೆಯಿರಿ ಸ್ಟೋರೇಜ್ ಏಂಡ್ ಯುಎಸ್‌ಬಿ ಆಪ್ಶನ್ ಅನ್ನು ಸ್ಪರ್ಶಿಸಿ. ಡಿವೈಸ್ ಹೆಸರು ಸ್ಪರ್ಶಿಸಿ ಮತ್ತು ಮೆನು ಬಟನ್ ತಟ್ಟಿರಿ ನಂತರ "ಫಾರ್ಮ್ಯಾಟ್ ಏಸ್ ಪೋರ್ಟೇಬಲ್" ಚೂಸ್ ಮಾಡಿ.

Best Mobiles in India

English summary
microSD card internal storage will allow you to gain some more internal storage. This comes at the cost of flexibility and possibly slower speed, if the card is slower than your device’s internal storage...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X