ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಅದ್ಯತೆ ಭಾಷೆಯ ಸಬ್‌ ಟೈಟಲ್‌ ಸೇರಿಸುವುದು ಹೇಗೆ?

|

ಇಂದಿನ ದಿನಗಳಲ್ಲಿ ಭಾರತದಲ್ಲಿ ಲಭ್ಯವಿರುವ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇನ್ನು ನೆಟ್‌ಫ್ಲಿಕ್ಸ್‌ ಕೂಡ ತನ್ನ ಬಳಕೆದಾರರಿಗೆ ಹಲವು ರೀತಿಯ ಚಂದಾದಾರಿಕೆಗಳನ್ನು ಪರಿಚಯಿಸಿದೆ. ನೆಟ್‌ಫ್ಲಿಕ್ಸ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ವೆಬ್‌ ಸಿರೀಸ್‌, ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಲಿಸ್ಟ್‌ ಒಳಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಆಯ್ಕೆಯ ಭಾಷೆಯಲ್ಲಿ ಲಭ್ಯವಿರುವುದಿಲ್ಲ. ಆದರೆ ಬಳಕೆದಾರರು ತಮ್ಮ ಆದ್ಯತೆಯ ಪ್ರದರ್ಶನಗಳ ಭಾಷೆಯನ್ನು ಬದಲಾಯಿಸಲು ಅನುಮತಿಸುತ್ತದೆ. ಬಳಕೆದಾರರು ಬಯಸಿದಲ್ಲಿ ಸಬ್‌ ಟೈಟಲ್‌ಗಳನ್ನು ಕೂಡ ಸೇರಿಸಬಹುದು.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಹಲವು ಭಾಷೆಯ ವೆಬ್‌ ಸಿರೀಸ್‌ಗಳು, ಚಲನಚಿತ್ರಗಳನ್ನು ಸ್ಟ್ರೀಮಿಂಗ್‌ ಮಾಡಲು ಅವಕಾಶ ನೀಡಿದೆ. ನಿಮಗೆ ಬೇರೆ ಭಾಷೆಯ ಸಿನಿಮಾ ನೋಡುವುದಕ್ಕೆ ಭಾಷೆ ಸಮಸ್ಯೆ ಎದುರಾದಲ್ಲಿ ನಿಮ್ಮ ಆಯ್ಕೆಯ ಭಾಷೆಯ ಸಬ್‌ ಟೈಟಲ್‌ ಅನ್ನು ಸೇರಿಸಬಹುದಾಗಿದೆ. ಹಾಗಂತ ಎಲ್ಲಾ ಚಲನಚಿತ್ರಗಳಿಗೂ ಎಲ್ಲಾ ಭಾಷೆಯಲ್ಲೂ ಸಬ್‌ಟೈಟಲ್‌ ಸೇರಿಸುವ ಅವಕಾಶವನ್ನು ನೀಡಲಾಗಿಲ್ಲ. ಹಾಗಾದ್ರೆ ಬಳಕೆದಾರರು ನೆಟ್‌ಫ್ಲಿಕ್ಸ್‌ನಲ್ಲಿ ತಮ್ಮ ಆದ್ಯತೆಯ ಭಾಷೆಯನ್ನು ಸಬ್‌ಟೈಟಲ್‌ನಲ್ಲಿ ಸೇರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಅದ್ಯತೆಯ ಭಾಷೆಯನ್ನು ಬದಲಾಯಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಅದ್ಯತೆಯ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ Netflix.com ಗೆ ಸೈನ್ ಇನ್ ಮಾಡಿ.
ಹಂತ:2 ನಂತರ ನಿಮ್ಮ ಅಕೌಂಟ್‌ ಅನ್ನು ಆಯ್ಕೆ ಮಾಡಿ.
ಹಂತ:3 ಇದರಲ್ಲಿ ನಿಮ್ಮ ಪ್ರೊಫೈಲ್ ಆಯ್ಕೆಮಾಡಿ.
ಹಂತ:4 ನಿಮ್ಮ ಅಧ್ಯತೆಯ ಭಾಷೆಯನ್ನು ಆಯ್ಕೆಮಾಡಿ.
ಹಂತ:5 ನಂತರ ಪ್ರದರ್ಶನ ಭಾಷೆಯನ್ನು ಆಯ್ಕೆಮಾಡಿ.
ಹಂತ:6 ಈಗ ಸೇವ್‌ ಆಯ್ಕೆ ಮಾಡಿ.

ಒಂದು ವೇಳೆ ನಿಮ್ಮ ಡಿವೈಸ್‌ನಲ್ಲಿ ಭಾಷೆಯ ಬದಲಾವಣೆಯನ್ನು ನೀವು ನೋಡದಿದ್ದರೆ, ನೀವು ಸೈನ್ ಔಟ್ ಮತ್ತು ನಂತರ ಮತ್ತೆ ಸೈನ್ ಇನ್ ಮಾಡಬೇಕಾಗುತ್ತದೆ. ಇದರಲ್ಲಿ ನಿಮ್ಮ ಸ್ಥಳ ಮತ್ತು ಭಾಷೆಯ ಸೆಟ್ಟಿಂಗ್‌ಗಳ ಆಧಾರದ ಮೇಲೆ ನೆಟ್‌ಫ್ಲಿಕ್ಸ್ 5-7 ಅತ್ಯಂತ ಸೂಕ್ತ ಭಾಷೆಗಳನ್ನು ತೋರಿಸುತ್ತದೆ.

ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರಗಳ ಭಾಷೆ ಬದಲಾಯಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರಗಳ ಭಾಷೆ ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ, Netflix.com ಗೆ ಸೈನ್ ಇನ್ ಮಾಡಿ.
ಹಂತ:2 ನಿಮ್ಮ ಅಕೌಂಟ್‌ ಅನ್ನು ಆಯ್ಕೆ ಮಾಡಿ.
ಹಂತ:3 ನಂತರ ನಿಮ್ಮ ಪ್ರೊಫೈಲ್ ಆಯ್ಕೆಮಾಡಿ
ಹಂತ:4 ನಿಮ್ಮ ಪ್ರೊಫೈಲ್‌ನಲ್ಲಿ ಭಾಷೆಯನ್ನು ಆಯ್ಕೆಮಾಡಿ.
ಹಂತ:5 ಚಲನಚಿತ್ರಗಳ ಭಾಷೆಗಳಿಂದ ಆದ್ಯತೆಯ ಭಾಷೆಗಳನ್ನು ಆಯ್ಕೆಮಾಡಿ.
ಹಂತ:6 ಸೇವ್‌ ಆಯ್ಕೆಮಾಡಿ.

ಸಬ್‌ ಟೈಟಲ್‌, ಕ್ಯಾಪ್ಶನ್‌ ಮತ್ತು ಪರ್ಯಾಯ ಆಡಿಯೋ ಬಳಸುವುದು ಹೇಗೆ?

ಸಬ್‌ ಟೈಟಲ್‌, ಕ್ಯಾಪ್ಶನ್‌ ಮತ್ತು ಪರ್ಯಾಯ ಆಡಿಯೋ ಬಳಸುವುದು ಹೇಗೆ?

ಹಂತ:1 ನೆಟ್ಫ್ಲಿಕ್ಸ್ ತೆರೆಯಿರಿ.
ಹಂತ:2 ಟಿವಿ ಕಾರ್ಯಕ್ರಮ ಅಥವಾ ಚಲನಚಿತ್ರವನ್ನು ಆಯ್ಕೆ ಮಾಡಿ.
ಹಂತ:3 ಪ್ಲೇ ಮಾಡಿ ಮತ್ತು ನಿಮ್ಮ ಡಿವೈಸ್‌ನಲ್ಲಿ ಪಟ್ಟಿ ಮಾಡಲಾದ ಕ್ರಮವನ್ನು ತೆಗೆದುಕೊಳ್ಳಿ
ಹಂತ:4 ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿರಿ.
ಹಂತ:5 ಈಗ, ಪರದೆಯ ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ, ಡೈಲಾಗ್ ಅಥವಾ ಸಂವಾದ ಪೆಟ್ಟಿಗೆಯಂತೆ ಕಾಣುವ ಐಕಾನ್ ಅನ್ನು ಆಯ್ಕೆ ಮಾಡಿ.
ಹಂತ:6 ನಂತರ ಆಡಿಯೋ ಅಥವಾ ಸಬ್‌ಟೈಟಲ್‌ ಆಯ್ಕೆಗಳನ್ನು ಬದಲಾಯಿಸಿ.

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಮೊಬೈಲ್‌ನಲ್ಲಿ Netflix.com ಗೆ ಭೇಟಿ ನೀಡಿ.
ಹಂತ 2: ನಂತರ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
ಹಂತ 3: ಸೈನ್ ಇನ್ ಮಾಡಿದ ನಂತರ, ನಿಮ್ಮ ಅಕೌಂಟ್‌ ಮೇಲೆ ಟ್ಯಾಪ್ ಮಾಡಿ.
ಹಂತ 4: ನಂತರ ಪ್ರೊಫೈಲ್ ಮತ್ತು ಪೇರೇಂಟ್ಸ್‌ ಕಂಟ್ರೋಲ್‌ ಅನ್ನು ಸ್ಕ್ರಾಲ್ ಮಾಡಿ, ಇದರಲ್ಲಿ ನಿಮ್ಮ ಪ್ರೊಫೈಲ್ ಪಕ್ಕದಲ್ಲಿರುವ ಡ್ರಾಪ್-ಡೌನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹಂತ 5: ಇದರಲ್ಲಿ ಲ್ಯಾಗ್ವೇಂಜ್‌ ಪಕ್ಕದಲ್ಲಿ ಇರುವ ಚೇಂಜ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 6: ಹೊಸ ಪೇಜ್‌ನಲ್ಲಿ ಸ್ಮಾಲ್‌ ಸರ್ಕಲ್‌ ಟ್ಯಾಪ್‌ ಮಾಡಿ ಮತ್ತು ನಿಮ್ಮ ಲ್ಯಾಗ್ವೇಂಜ್‌ ಅನ್ನು ಆಯ್ಕೆ ಮಾಡಿ.
ಹಂತ 7: ಭಾಷೆಯನ್ನು ಆಯ್ಕೆ ಮಾಡಿದ ನಂತರ, ಪೇಜ್‌ ಅನ್ನು ಸ್ಕ್ರೋಲ್ ಮಾಡುವ ಮೂಲಕ ಮತ್ತು ಸೇವ್‌ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಲ್ಯಾಗ್ವೇಂಜ್‌ ಬದಲಾಗಲಿದೆ.

Best Mobiles in India

Read more about:
English summary
Netflix allows users to change the language or the subtitles of the shows or the movies they are watching.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X