Home
ಟೆಕ್ ನೌಕರಿ

WhatsApp ಫೋಟೋಗಳನ್ನು ಯಾವಾಗಲೂ HD ಯಲ್ಲಿ ಡೀಫಾಲ್ಟ್ ಆಗಿ ಕಳುಹಿಸುವುದು ಹೇಗೆ?

WhatsApp ಅನ್ನು ಬಳಕೆದಾರರು ಸಂದೇಶಗಳೊಂದಿಗೆ ಮಾತ್ರವಲ್ಲದೆ, ಫೋಟೋಗಳು, ವೀಡಿಯೊಗಳು, ಆಡಿಯೋ ಮತ್ತು ಇತರ ಮಾಧ್ಯಮಗಳನ್ನು ಹಂಚಿಕೊಳ್ಳಲು ಬಳಸುತ್ತಾರೆ. ಆದರೆ, ಫೋಟೋಗಳನ್ನು ಹಂಚುವಾಗ, ಅವುಗಳ ಮೂಲ ಗುಣಮಟ್ಟ ಕಣ್ಮರೆಯಾಗುತ್ತದೆ. ಇದಕ್ಕೆ ಕಾರಣವೆಂದರೆ, WhatsApp ವೇಗವಾಗಿ ಹಂಚಿಕೊಳ್ಳಲು ಮತ್ತು ಡೇಟಾ ಉಳಿತಾಯಕ್ಕಾಗಿ ಇಮೇಜ್‌ಗಳನ್ನು ಸಂಕುಚಿತಗೊಳಿಸುತ್ತದೆ. ಆದರೆ, ಈ ಸಮಸ್ಯೆಯನ್ನು ಇದೀಗ ನೀವು ಸುಲಭವಾಗಿ ಪರಿಹರಿಸಬಹುದು. WhatsApp ನಲ್ಲಿ ನಿಮ್ಮ ಫೋಟೋ ಅಥವಾ ವೀಡಿಯೊದ ಗುಣಮಟ್ಟದ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಶೇಷ ಕ್ಷಣಗಳನ್ನು ಹೈ ಡೆಫಿನಿಷನ್‌ನಲ್ಲಿ (HD ಕ್ವಾಲಿಟಿ) ಹಂಚಿಕೊಳ್ಳಬಹುದು.

ದೈನಂದಿನ ಕ್ಷಣಗಳು ಅಥವಾ ವಿಶೇಷ ಸಂದರ್ಭಗಳನ್ನು ಹೆಚ್ಚಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು HD ಕ್ವಾಲಿಟಿಯಲ್ಲಿ ಹಂಚಿಕೊಳ್ಳಲು ನಿಮ್ಮ WhatsApp ನಲ್ಲಿ ನೀವು ಒಂದು ಸೆಟ್ಟಿಂಗ್ ಬದಲಾಯಿಸಿದರೆ ಸಾಕು. ಅಥವಾ ನಾವು ಆರಿಸಿದ ಫೋಟೊ ಅಥವಾ ವೀಡಿಯೊವನ್ನು ಮಾತ್ರ HD ಕ್ವಾಲಿಟಿಯಲ್ಲಿ ಹಂಚಿಕೊಳ್ಳಬೇಕು ಎಂದರೆ ಅದಕ್ಕೆ ನೇರವಾದ ಒಂದು ಮಾರ್ಗವಿದೆ. ಹಾಗಾಗಿ, ಇಂದಿನ ಲೇಖನದಲ್ಲಿ WhatsApp ಫೋಟೋಗಳು ಹೆಚ್ಚು ಸಂಕುಚಿತವಾಗದಂತೆ ಮತ್ತು ನೀವು ಪ್ರತಿ ಬಾರಿ ಕಳುಹಿಸಿದಾಗಲೂ HD ಗುಣಮಟ್ಟದ ಫೋಟೋಗಳನ್ನು ಪೂರ್ವನಿಯೋಜಿತವಾಗಿ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ. ಈ ಕೆಳಗೆ ಒದಗಿಸಲಾಗಿರುವ ಎರಡು ಮಾರ್ಗಗಳು ನಿಮ್ಮ ಈ ಸಮಸ್ಯೆಯನ್ನು ಪರಿಹರಿಸುತ್ತವೆ.

WhatsApp ಫೋಟೋಗಳನ್ನು ಯಾವಾಗಲೂ HD ಯಲ್ಲಿ ಡೀಫಾಲ್ಟ್ ಆಗಿ ಕಳುಹಿಸುವುದು ಹೇಗೆ?

ಆಯ್ಕೆ 1: WhatsApp ನಲ್ಲಿ ಡೀಫಾಲ್ಟ್ ಆಗಿ HD ಕ್ವಾಲಿಟಿ ಫೋಟೊ ಹಂಚಿಕೊಳ್ಳಲು ಹೀಗೆ ಮಾಡಿ. WhatsApp ನಲ್ಲಿ ಸೆಟ್ಟಿಂಗ್‌ಗಳು ಆಯ್ಕೆಯನ್ನು ತೆರೆಯಿರಿ. ಅಲ್ಲಿ ಕಾಣಿಸುವ ಸಂಗ್ರಹಣೆ ಮತ್ತು ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಮಾಧ್ಯಮ ಅಪ್‌ಲೋಡ್ ಗುಣಮಟ್ಟವನ್ನು ತೆರೆಯಿರಿ. ಇಲ್ಲಿ. HD ಗುಣಮಟ್ಟವನ್ನು ಆಯ್ಕೆಮಾಡಿ. (Open WhatsApp Settings > Storage and data > Media upload quality. Select HD quality.)

ಆಯ್ಕೆ 2: ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ. ಕಳುಹಿಸಲು ಫೋಟೋ ಅಥವಾ ವೀಡಿಯೊವನ್ನು ಆಯ್ಕೆಮಾಡಿ ಟ್ಯಾಪ್ ಮಾಡಿ. ಇದೀಗ ನೀವು ಸೆಲಕ್ಟ್ ಮಾಡಿದ ಪ್ರತಿ ಫೈಲ್‌ನ ಮೇಲ್ಭಾಗದಲ್ಲಿ ಸ್ಟಾಂಡರ್ಡ್ ಗುಣಮಟ್ಟ ಅಥವಾ HD ಗುಣಮಟ್ಟ ಎಂದು ಇರುತ್ತದೆ. ಇದರಲ್ಲಿ HD ಬಟನ್ ಅನ್ನು ಟ್ಯಾಪ್ ಮಾಡಿ. ನಿಮ್ಮ ಸೆಲ್ಯುಲಾರ್ ನೆಟ್‌ವರ್ಕ್ ಬಳಸಿ HD ಮಾಧ್ಯಮವನ್ನು ಹಂಚಿಕೊಳ್ಳಲು ನೀವು ಬಯಸಿದರೆ ಮುಂದುವರಿಸಿ ಆಯ್ಕೆಯನ್ನು ಟ್ಯಾಪ್ ಮಾಡಿ.

ಗಮನಿಸಿ:
ನಿಮ್ಮ ಸೆಲ್ಯುಲಾರ್ ನೆಟ್‌ವರ್ಕ್ ಬದಲಿಗೆ ವೈಫೈ ಬಳಸುವಾಗ HD ಮಾಧ್ಯಮವನ್ನು ಕಳುಹಿಸುವುದು ವೇಗವಾಗಿರುತ್ತದೆ.
ನೀವು ಕಳುಹಿಸಿದ ಫೋಟೋದ ಗುಣಮಟ್ಟವನ್ನು ನೀವು ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ.ಆದರೆ ನೀವು ಅದರ ಸಾಮರ್ಥ್ಯದಷ್ಟು HD ಗುಣಮಟ್ಟದಲ್ಲಿ ಕಳುಹಿಸಬಹುದು.
ಮಾಧ್ಯಮವನ್ನು HD ಗುಣಮಟ್ಟದಲ್ಲಿ ಕಳುಹಿಸಿದರೂ ಸಹ, ಇಂಟರ್ನೆಟ್ ಸಂಪರ್ಕವು ಕಳುಹಿಸುವ ಮತ್ತು ಸ್ವೀಕರಿಸುವ ಮಾಧ್ಯಮದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಈ ಸೆಟ್ಟಿಂಗ್ಸ್ ಬದಲಾಯಿಸಿದ ನಂತರವು ನೀವು ಪ್ರತಿ ಬಾರಿ ಮಾಧ್ಯಮ ಕಳುಹಿಸುವಾಗ ಸ್ಟಾಂಡರ್ಡ್ ಗುಣಮಟ್ಟದ ಆಯ್ಕೆಯನ್ನು ಸಹ ಬಳಕೆ ಮಾಡಬಹುದು.
ಸ್ಟೇಟಸ್ ಅಪ್‌ಡೇಟ್ ಅಥವಾ ಪ್ರೊಫೈಲ್ ಚಿತ್ರಗಳಿಗೆ HD ಮಾಧ್ಯಮ ಸೇವೆ ಪ್ರಸ್ತುತ ಲಭ್ಯವಿಲ್ಲ.

Best Mobiles in India

English summary
To automatically send photos in HD on WhatsApp, you can adjust the media upload quality to HD in your settings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+