Home
ಟೆಕ್ ನೌಕರಿ

'ಅಮೆಜಾನ್ ಪೇ' ಯುಪಿಐ ಬಳಸಿ 2000 ರೂ.ವರೆಗೂ ಕ್ಯಾಶ್‌ಬ್ಯಾಕ್ ಗೆಲ್ಲಿ!

ಭಾರತದಲ್ಲಿ ತನ್ನ ಯುಪಿಐ ಪಾವತಿಯನ್ನು ಉತ್ತೇಜಿಸಲು ಅಮೆಜಾನ್ ಭರ್ಜರಿ ಆಫರ್ ಮೂಲಕ ಗ್ರಾಹಕರ ಗಮನಸೆಳೆದಿದೆ. ಅಮೆಜಾನ್ ತನ್ನ ಯುಪಿಐ ಆಧಾರಿತ 'ಅಮೆಜಾನ್ ಪೇ' ಯುಪಿಐ ವರ್ಗಾವಣೆಗೆ ಕ್ಯಾಶ್‌ಬ್ಯಾಕ್ ಆಫರ್ ನೀಡಿದ್ದು, ನೀವು 'ಅಮೆಜಾನ್ ಪೇ' ಬಳಸಿದರೆ ಆಶ್ವಾಸಿತ ಕ್ಯಾಶ್ ಬ್ಯಾಕ್ ಸಿಗಲಿದೆ. ಇದರಲ್ಲಿ ನೀವು ಅಮೆಜಾನ್ ಪ್ರೈಮ್ ಬಳಕೆದಾರರಾಗಿದ್ದರೆ ನಿಮಗೆ ರೂ. 100 ರಿಂದ ರೂ. 2,000 ಕ್ಯಾಶ್‌ಬ್ಯಾಕ್ ಹಾಗೂ ನೀವು ಪ್ರೈಮ್ ಬಳಕೆದಾರರಾಗಿದ್ದರೆ ರೂ. 50 ರಿಂದ ರೂ. 2,000. ವರೆಗೆ ನಿಶ್ಚಿತ ಕ್ಯಾಶ್‌ಬ್ಯಾಕ್ ಸಿಗಲಿದೆ ಎಂದು ಕಂಪೆನಿ ತಿಳಿಸಿದೆ.

'ಅಮೆಜಾನ್ ಪೇ' ಯುಪಿಐ ಬಳಸಿ 2000 ರೂ.ವರೆಗೂ ಕ್ಯಾಶ್‌ಬ್ಯಾಕ್ ಗೆಲ್ಲಿ!

ಹೌದು, ಆಶ್ವಾಸಿತ ಕ್ಯಾಶ್‌ಬ್ಯಾಕ್ ಆಫರ್ ಅಡಿಯಲ್ಲಿ 'ಅಮೆಜಾನ್ ಪೇ' ಸೇವೆ ಬಳಸುವ ಅಮೆಜಾನ್ ಪ್ರೈಮ್ ಬಳಕೆದಾರರು ಕನಿಷ್ಠ 100 ರೂ. ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ ಮತ್ತು ಪ್ರೈಮ್ ಅಲ್ಲದ ಬಳಕೆದಾರರಿಗೆ ರೂ. 50. ನಿಶ್ಚಿತ ಕ್ಯಾಶ್‌ಬ್ಯಾಕ್ ಪಾವತಿಯಾಗಲಿದೆ. ಇನ್ನು ನೀವು ಅಮೆಜಾನ್ ಪೇ ಯುಪಿಐಗೆ ಸೇರಲು ನಿಮ್ಮ ಗೆಳೆಯರನ್ನು ಸಹ ಆಹ್ವಾನಿಸಿ ಹಣ ಗಳಿಸಬಹುದಾಗಿದೆ. ನಿಮ್ಮ ಆಹ್ವಾನದಿಂದ ಅಮೆಜಾನ್ ಪೇ ಯುಪಿಐಗೆ ಸೇರುವ ಪ್ರತಿಯೊಬ್ಬ ಬಳಕೆದಾರರಿಗೆ ಅಮೆಜಾನ್ 31 ರೂ. ಹಣವನ್ನು ಕ್ಯಾಶ್‌ಬ್ಯಾಕ್ ರೀತಿಯಲ್ಲಿ ಪಾವತಿಸಲಿದೆ.

ನೀವು ಈ ಕ್ಯಾಶ್‌ಬ್ಯಾಕ್ ಪಡೆಯಲು ಅಮೆಜಾನ್ ಪೇಗೆ ರಿಜಿಸ್ಟರ್ ಆಗಬೇಕು. ಅಮೆಜಾನ್ ಪೇ ಆಪ್‌ ತೆರೆದು ಮೆನುವಿನಲ್ಲಿ ಯುಪಿಐ ಆಯ್ಕೆ ಮಾಡಿ. ನಂತರ ಪ್ರೊಸೀಡ್ ಕ್ಲಿಕ್ ಮಾಡಿ. ಇದಾದ ನಂತರ ಡ್ರಾಪ್-ಡೌನ್ ಮೆನುವಿನಿಂದ ಬ್ಯಾಂಕ್ ಆಯ್ಕೆ ಮಾಡಿ. ನಿರ್ದಿಷ್ಟ ಯುಪಿಐ ಸಂಖ್ಯೆಗೆ ನೀವು ಈಗಾಗಲೇ ಯುಪಿಐ ಪಿನ್ ಹೊಂದಿದ್ದರೆ, ಅದೇ ಯುಪಿಐ ಪಿನ್ ಇಲ್ಲಿಯೂ ಬಳಸಬಹುದು. ಅಕೌಂಟ್ ಸೆಟಪ್ ಆದ ನಂತರ ನಿಶ್ಚಿತ ಕ್ಯಾಶ್‌ಬ್ಯಾಕ್ ಪಡೆಯಲು ನೀವು ಮತ್ತೊಂದು ಯಾವುದೇ ಖಾತೆಗೆ ಕನಿಷ್ಠ 250 ರೂ ರೂಪಾಯಿಗಳ ಹಣ ವರ್ಗಾವಣೆ ಮಾಡಬೇಕು.

'ಅಮೆಜಾನ್ ಪೇ' ಯುಪಿಐ ಬಳಸಿ 2000 ರೂ.ವರೆಗೂ ಕ್ಯಾಶ್‌ಬ್ಯಾಕ್ ಗೆಲ್ಲಿ!

'ನಾನು ಕೂಡ ಅಮೆಜಾನ್ ಪ್ರೈಮ್ ಬಳಕೆದಾರನಾಗಿದ್ದು, ಅಮೆಜಾನ್ ಪೇ ಮೂಲಕ ನಾನು ನನ್ನ ಸ್ನೇಹಿತನಿಗೆ 500 ರೂ.ಗಳ ಹಣ ವರ್ಗಾವಣೆ ನಡೆಸಿದೆ. ಇದರಲ್ಲಿ ನಾನು 111 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆದೆ' ಎಂದು ಗಿಜ್‌ಬಾಟ್ ಟೆಕ್ ಬರಹಗಾರರಾದ ವಿವೇಕ್ ಅವರು ತಿಳಿಸುತ್ತಾರೆ. ಆದರೆ, ಈ ಕ್ಯಾಶ್‌ಬ್ಯಾಕ್‌ಗಳು ಅಮೆಜಾನ್ ಪೇ ಬ್ಯಾಲೆನ್ಸ್‌ಗೆ ಅನುಗುಣವಾಗಿರುವುದರಿಂದ, ಅಮೆಜಾನ್ ಪ್ರೈಮ್ ಅಥವಾ ಅಮೆಜಾನ್.ಇನ್‌ನಂತಹ ಅಮೆಜಾನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಈ ಕ್ಯಾಶ್‌ಬ್ಯಾಕ್ ಖರ್ಚು ಮಾಡಬಹುದು ಎಂದು ಅವರು ಹೇಳುತ್ತಾರೆ.

ಭಾರತದಾದ್ಯಂತ ಹಣವನ್ನು ವರ್ಗಾಯಿಸಲು ಯುಪಿಐ ಉತ್ತಮ ಮಾರ್ಗವಾಗಿದ್ದು, ಇದು ವೆಚ್ಚವಿಲ್ಲದ ಹಾಗೂ ನಿಮಿಷಗಳಲ್ಲಿ ಹಣ ವರ್ಗಾವಣೆ ನಡೆಸುವ ವ್ಯವಸ್ಥೆಯಾಗಿದೆ. ಗೂಗಲ್ ಪೇ, ಪೇಟಿಎಂ, ಫೋನ್‌ಪೇನಂತಹ ಹೆಚ್ಚಿನ ಇ-ವ್ಯಾಲೆಟ್ ಸೇವೆಗಳು ಈಗಾಗಲೇ ಯುಪಿಐ ಪಾವತಿ ಸೇವೆಯನ್ನು ನೀಡುತ್ತಿವೆ. ಇವುಗಳ ಜೊತೆಗೆ ಪೈಪೋಟಿ ನೀಡಲು ಇ ಕಾಮರ್ಸ್ ದೈತ್ಯ ಕಂಪೆನಿ ಅಮೆಜಾನ್ ಕಾಲಿಟ್ಟಿದೆ. ಅಮೆಜಾನ್ ಪೇ ಆಯ್ಕೆಯು ದೇಶದಲ್ಲಿ ಬಳಕೆಗೆ ಬಂದಿರುವ ಇತ್ತೀಚಿನ ನಂಬಿಕಸ್ಥ ಇ-ವ್ಯಾಲೆಟ್ ಪ್ಲೇಯರ್ ಎಂದರೆ ತಪ್ಪಾಗುವುದಿಲ್ಲ.

Best Mobiles in India

English summary
How To Setup Amazon Pay UPI And Win Up To Rs. 2,000 Assured Cashback For The First Transaction. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+