Nearby Share ಮೂಲಕ ಅಪ್ಲಿಕೇಶನ್‌ಗಳನ್ನು ಶೇರ್‌ಮಾಡುವುದು ಹೇಗೆ?

|

ಗೂಗಲ್, ಕಳೆದ ವರ್ಷ ಬಳಕೆದಾರರಿಗೆ ಫೈಲ್‌ಗಳನ್ನು ಶೇರ್‌ ಮಾಡುವುದಕ್ಕೆ 'Nearby Share' ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ಡೇಟಾವನ್ನು ಸುಲಭವಾಗಿ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಸದ್ಯ ಇದೀಗ ಗೂಗಲ್‌ ತನ್ನ ಈ ಫೀಚರ್ಸ್‌ ಅನ್ನು ಇನ್ನಷ್ಟು ಉತ್ತಮಗೊಳಿಸುವುದಕ್ಕೆ ಮುಂದಾಗಿದೆ. ಇದು ಜನರೊಂದಿಗೆ ಅಪ್ಲಿಕೇಶನ್‌ಗಳನ್ನು ಹಂಚಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಗೂಗಲ್‌

ಹೌದು, ಗೂಗಲ್‌ ಫೈಲ್‌ಗಳನ್ನು ಶೇರ್‌ ಮಾಡುವುದಕ್ಕಾಗಿ Nearby Share ಅನ್ನು ಪರಿಚಯಿಸಿದೆ. Nearby Share ಅಪ್ಲಿಕೇಶನ್ ಮೂಲಕ ಅಪ್ಲಿಕೇಶನ್‌ಗಳನ್ನು ಯಾವುದೇ ವೈಫೈ, ಡೇಟಾ ಇಲ್ಲದೆ ಹಂಚಿಕೊಳ್ಳಬಹುದಾಗಿದೆ. ಸದ್ಯ ಇದು ಗೂಗಲ್ ಫೈಲ್ಸ್ ಗೋ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್-ಹಂಚಿಕೆ ಫೀಚರ್ಸ್‌ ಜೊತೆಗೆ ಕಾರ್ಯನಿರ್ವಹಿಸಲಿದೆ. ಆದ್ದರಿಂದ, ನಿಮ್ಮ ನೆಚ್ಚಿನ ಅಪ್ಲಿಕೇಶನ್‌ಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರಿಸಲು Nearby Share ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Nearby Share ಅನ್ನು ಬಳಸಿಕೊಂಡು ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಹಂಚಿಕೊಳ್ಳುವುದು ಹೇಗೆ?

Nearby Share ಅನ್ನು ಬಳಸಿಕೊಂಡು ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಹಂಚಿಕೊಳ್ಳುವುದು ಹೇಗೆ?

Nearby Share ನಲ್ಲಿ ಅಪ್ಲಿಕೇಶನ್‌ಗಳನ್ನು ಹಂಚಿಕೊಳ್ಳಲು ಅಗತ್ಯವಿರುವ ಎರಡೂ Android ಸಾಧನಗಳಲ್ಲಿ ನೀವು Nearby Share ಅನ್ನು ಸಕ್ರಿಯಗೊಳಿಸಬೇಕು. ಇದು ಗೂಗಲ್‌ನ ಸ್ಥಳೀಯ ಅಪ್ಲಿಕೇಶನ್‌ಗಳಿಗೆ ಮಾತ್ರ ಇರುವುದರಿಂದ ಅರ್ಥಪೂರ್ಣವಾಗಿದೆ. ಇದೆಲ್ಲವೂ ಮುಗಿದ ನಂತರ, ನೀವು ಮುಂದೆ ಅನುಸರಿಸಬೇಕಾದದ್ದು ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಎರಡೂ

ಹಂತ 1: ಎರಡೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ.

ಹಂತ 2: ಪ್ಲೇ ಸ್ಟೋರ್‌ನ ಮೇಲಿನ ಎಡ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನುವಿನಲ್ಲಿ ಟ್ಯಾಪ್ ಮಾಡಿ.

ಹಂತ 3: ‘My apps and games' ಆಯ್ಕೆಯನ್ನು ಆರಿಸಿ.

ಹಂತ 4: ಒಮ್ಮೆ ನೀವು ಅಪ್ಲಿಕೇಶನ್-ಶೀಟ್‌ನಲ್ಲಿದ್ದರೆ, ನೀವು ‘ಲೈಬ್ರರಿ' ಪಕ್ಕದಲ್ಲಿರುವ ‘Share' ಆಯ್ಕೆಗೆ ಹೋಗಬೇಕಾಗುತ್ತದೆ.

ಹಂತ 5: ನೀವು ಪ್ರಕ್ರಿಯೆಯನ್ನು ಪ್ರಾರಂಭಿಸುವ ವಿಭಾಗ ಇದು. ಅಪ್ಲಿಕೇಶನ್‌ಗಳನ್ನು ಕಳುಹಿಸಲು, ನೀವು ‘Send' ಆಯ್ಕೆಯನ್ನು ಆರಿಸಬೇಕಾಗುತ್ತದೆ.

ಹಂತ 6: ‘ಕಳುಹಿಸು' ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ, ನೀವು ಹಂಚಿಕೊಳ್ಳಲು ಬಯಸುವ ಅಪ್ಲಿಕೇಶನ್ ಗಳನ್ನು ಈಗ ನೀವು ಆರಿಸಬೇಕಾಗುತ್ತದೆ.

ಹಂತ 7: ಇದನ್ನು ಮಾಡಿದ ನಂತರ, ರಿಸೀವರ್ ಈಗ ಮೇಲೆ ತಿಳಿಸಿದ ಮೊದಲ ಐದು ಹಂತಗಳನ್ನು ಅನುಸರಿಸಬೇಕು ಮತ್ತು ‘Receive' ಆಯ್ಕೆಯನ್ನು ಆರಿಸಿಕೊಳ್ಳಿ.

ಹಂತ 8: ಈಗ, ಕೆಲವು ಸೆಕೆಂಡುಗಳ ಕಾಲ ಕಾಯಿರಿ, ಅದರ ನಂತರ ಎರಡೂ ಸಾಧನಗಳು ಸ್ವಯಂ-ದೃಡೀಕರಣ ಪಡೆಯುವ ಕೋಡ್ ಅನ್ನು ಸ್ವೀಕರಿಸುತ್ತವೆ.

ಹಂತ 9: ಇದರ ನಂತರ, ಸ್ವೀಕರಿಸುವವರು ಈಗ ಅಪ್ಲಿಕೇಶನ್-ಹಂಚಿಕೆಯನ್ನು ಸ್ವೀಕರಿಸಬೇಕಾಗಿದೆ, ಅದರ ನಂತರ ಕೆಲವು ಸೆಕೆಂಡುಗಳಲ್ಲಿ ಅಪ್ಲಿಕೇಶನ್ ಶೇರ್‌ ಆಗಿರುತ್ತದೆ.

ಡೌನ್‌ಲೋಡ್

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಇದರಲ್ಲಿ ಅಪ್ಲಿಕೇಶನ್‌ಗಳನ್ನು ಮಾತ್ರ ಹಂಚಿಕೊಳ್ಳಲಾಗುತ್ತದೆ ಮತ್ತು ಡೌನ್‌ಲೋಡ್ ಮಾಡಲಾಗುವುದಿಲ್ಲ. ಅಪ್ಲಿಕೇಶನ್‌ಗಳು ಸ್ವೀಕರಿಸುವ ವಿಭಾಗದಲ್ಲಿ ಕಾಣಿಸುತ್ತದೆ ಮತ್ತು ನೀವು ಬಯಸಿದರೆ, ನೀವು ಅವುಗಳನ್ನು ಇನ್‌ಸ್ಟಾಲ್‌ ಮಾಡಬಹುದು. ಇನ್ನು ಈ ಅಪ್ಲಿಕೇಶನ್ ಹಂಚಿಕೆ ಸಾಮರ್ಥ್ಯವು ಈಗ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ.

Best Mobiles in India

English summary
How to share apps on Android using Nearby Share.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X