ವಾಟ್ಸಾಪ್‌ನಲ್ಲಿ ಫೇಕ್ ಲೊಕೇಶನ್ ಶೇರ್ ಮಾಡಬೇಕೆ? ಈ ರೀತಿ ಮಾಡಿ ಸಾಕು!
ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಲೊಕೇಶನ್ ಶೇರ್ ಫೀಚರ್ಸ್ ಕೂಡ ಒಂದಾಗಿದೆ. ಇದರಿಂದ ನಿಮ್ಮ ಸ್ನೇಹಿತರನ್ನು ಬೇಟಿ ಮಾಡುವಾಗ, ಇಲ್ಲವೇ ನಿಮ್ಮ ಸ್ನೇಹಿತರಿಗೆ ನೀವಿರುವ ಸ್ಥಳದ ಮಾಹಿತಿ ನೀಡಲು ಅನುಕೂಲವಾಗಿದೆ. ಇದರಿಂದ ನೀವು ಎಲ್ಲಿದ್ದೀರಾ ಅನ್ನೋದು ಸುಲಭವಾಗಿ ತಿಳಿಯಲಿದೆ.
ಹೌದು, ವಾಟ್ಸಾಪ್‌ನಲ್ಲಿ ಲೊಕೇಶನ್ ಶೇರ್ ಮಾಡುವ ಆಯ್ಕೆ ಸಾಕಷ್ಟು ಉಪಯುಕ್ತವಾಗಿದೆ. ಆದರೆ ಕೆಲವೊಮ್ಮೆ ನಿಮಗೆ ನೀವಿರುವ ಸ್ಥಳವನ್ನು ಮರೆ ಮಾಚಿ ಫೇಕ್ ಲೊಕೇಶನ್ ಶೇರ್ ಮಾಡಬೇಕು ಅನಿಸಬಹುದು. ಇಲ್ಲವೇ ನಿಮ್ಮ ಸ್ನೇಹಿತರನ್ನು ಯಾಮಾರಿಸಲು ಫೇಕ್ ಲೊಕೇಶನ್ ಶೇರ್ ಮಾಡಬಹುದಾದ ಅನಿವಾರ್ಯತೆ ಎದುರಾಗಬಹುದು.

ಹಾಗಂತ ವಾಟ್ಸಾಪ್‌ನಲ್ಲಿ ಫೇಕ್ ಲೊಕೇಶನ್ ಶೇರ್ ಆಯ್ಕೆಯಿಲ್ಲ. ಆದರೆ ಫೇಕ್ ಲೊಕೇಶನ್ ಶೇರ್ ಮಾಡುವುದಕ್ಕೆ ನೀವು ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡಬೇಕಾಗುತ್ತದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಫೇಕ್ ಲೊಕೇಶನ್ ಶೇರ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಇಂದಿನ ದಿನಗಳಲ್ಲಿ ನೀವಿರುವ ಸ್ಥಳ ಒಂದು ಕಡೆಯಾದರೆ, ನಿಮ್ಮ ಸ್ನೇಹಿತರಿಗೆ ಹೇಳುವ ಲೊಕೇಶನ್ ಬೇರೆಯಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ಸ್ನೇಹಿತ ಏನಾದರೂ ಸರಿ ನೀ ಇರುವ ಲೊಕೇಶನ್ ಶೇರ್ ಮಾಡು ಎಂದರೆ ಏನು ಮಾಡೋದು. ಇಂತಹ ಸನ್ನಿವೇಶದಲ್ಲಿ ನೀವು ಫೇಕ್ ಲೊಕೇಶನ್ ಶೇರ್ ಮಾಡಬಹುದಾಗಿದೆ. ಆದರೆ ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ mock location app ಅನ್ನು ಬಳಸಬೇಕಾಗುತ್ತದೆ.
ನೀವು mock location app ಬಳಸಿಕೊಂಡು ಫೇಕ್ ಲೊಕೇಶನ್ ಶೇರ್ ಮಾಡಬಹುದಾಗಿದೆ. ಈ ಆ್ಯಪ್ ಅನ್ನು ನೀವು ಡೌನ್‌ಲೋಡ್ ಮಾಡಿದ ನಂತರ ವಾಟ್ಸಾಪ್‌ನಲ್ಲಿ ಫೇಕ್ ಲೈವ್ ಲೊಕೇಶನ್ ಶೇರ್ ಮಾಡಬಹುದು. ಇದರ ಮೂಲಕ ನೀವು ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದ ಲೊಕೇಶನ್ ಹೆಸರನ್ನು ಟೈಪ್ ಮಾಡಿ ಫೇಕ್ ಲೊಕೇಶನ್ ಶೇರ್ ಮಾಡಬಹುದಾಗಿದೆ.
ವಾಟ್ಸಾಪ್‌ನಲ್ಲಿ ಫೇಕ್ ಲೊಕೇಶನ್ ಶೇರ್ ಮಾಡುವುದಕ್ಕೆ ಈ ಕ್ರಮಗಳನ್ನು ಅನುಸರಿಸಿ
* ಮೊದಲಿಗೆ "mock location app'' ಆಯ್ಕೆ ತೆರೆಯಿರಿ
* ನಂತರ ಸರ್ಚ್ ಬಾರ್‌ನಲ್ಲಿ ನಿಮ್ಮ ಫೇಕ್ ಲೊಕೇಶನ್ ಹೆಸರನ್ನು ಟೈಪ್ ಮಾಡಿ
* ಇದೀಗ ಕೆಳಭಾಗದಲ್ಲಿರುವ ಗ್ರೀನ್ ಬಟನ್ ಮೇಲೆ ಟ್ಯಾಪ್ ಮಾಡಿರಿ
* ಇದರ ಮೂಲಕ GPS ಎಮ್ಯುಲೇಟರ್ ಅನ್ನು ಆನ್ ಮಾಡಿರಿ
* ನಂತರ ವಾಟ್ಸಾಪ್‌ನಲ್ಲಿ ಚಾಟ್ ತೆರೆಯಿರಿ
* ವಾಟ್ಸಾಪ್ ಚಾಟ್‌ನಲ್ಲಿ ಲೊಕೇಶನ್ ಮೇಲೆ ಟ್ಯಾಪ್ ಮಾಡಿ, ಲೈವ್ ಲೊಕೇಶನ್ ಅನ್ನು ಶೇರ್ ಮಾಡಿ.
* ಈಗಾಗಲೇ mock location appನಲ್ಲಿ ಫೇಕ್ ಲೊಕೇಶನ್ ಆಯ್ಕೆ ಮಾಡಿರುವುದರಿಂದ ಫೇಕ್ ಲೊಕೇಶನ್ ಶೇರ್ ಆಗಲಿದೆ
ವಾಟ್ಸಾಪ್‌ನಲ್ಲಿ ಲೈವ್ ಲೊಕೇಶನ್ ಶೇರ್ ಮಾಡುವುದು ಹೇಗೆ?
* ನಿಮ್ಮ ಮೊಬೈಲ್ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
* ನೀವು ಯಾರಿಗೆ ಲೊಕೇಶನ್ ಶೇರ್ ಮಾಡಬೇಕೋ ಆ ಚಾಟ್ ತೆರಯಿರಿ.
* ಲೊಕೇಶನ್ ಚಿಹ್ನೆ ಮೇಲೆ ಟ್ಯಾಪ್ ಮಾಡಿ
* ಇದೀಗ ನೀವು ನಿಮ್ಮ ಲೈವ್ ಲೊಕೇಶನ್ ಶೇರ್ ಮಾಡಲು ಬಯಸುವ ಟೈಂ ಆಯ್ಕೆ ಮಾಡಿ
* ನಂತರ ಸೆಂಡ್ ಟ್ಯಾಪ್ ಮಾಡಿ.
ವಾಟ್ಸಾಪ್ ಬಳಕೆದಾರರಿಗೆ ಅನುಕೂಲಕರ ಫೀಚರ್ಸ್‌ಗಳ ಜೊತೆಗೆ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಸೆಕ್ಯುರಿಟಿ ನೀಡಿದೆ. ಆದರಿಂದ ನಿಮಗೆ ಅತಿ ಅಗತ್ಯ ಎನಿಸಿದರೆ ಮಾತ್ರ ಫೇಕ್ ಲೊಕೇಶನ್ ಶೇರ್ ಮಾಡಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿರಿ. ಯಾಕಂದ್ರೆ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ವಾಟ್ಸಾಪ್‌ನಲ್ಲಿ ನಿಮ್ಮ ಡೇಟಾ ಕದಿಯುವ ಸಾಧ್ಯತೆ ಇರಲಿದೆ.


Click it and Unblock the Notifications








