ನಿಮ್ಮ ಆಪ್ತರಿಗೆ ಗೂಗಲ್ ಪಾಸ್‌ವರ್ಡ್ ಶೇರ್ ಮಾಡಬೇಕೆ? ಈ ಸುಲಭ ಟಿಪ್ಸ್ ಬಳಸಿ
ಗೂಗಲ್ (Google) ತನ್ನ ಕ್ರೋಮ್ (Chrome) ಬ್ರೌಸರ್‌ನಲ್ಲಿ ಹೊಸ ಫೀಚರ್ಸ್ ಪರಿಚಯಿಸಿರುವುದು ನಿಮಗೆ ಗೊತ್ತೇ ಇದೆ. ಇದರಿಂದ ನಿಮ್ಮ ಗೂಗಲ್ ಪಾಸ್‌ವರ್ಡ್ () ಅನ್ನು ಆಪ್ತರೊಂದಿಗೆ ಹಂಚಿಕೊಳ್ಳಬಹುದು. ನೀವು ಸಹ ಗೂಗಲ್ ಅಕೌಂಟ್ (Google Account) ಹೊಂದಿದ್ದರೆ, ಸುಲಭವಾಗಿ ಪಾಸ್‌ವರ್ಡ್ ಶೇರ್ ಮಾಡಬಹುದು. ನಿಮ್ಮ ಫ್ಯಾಮಿಲಿ ಗ್ರೂಪ್‌ನ ಸದಸ್ಯರು ಅಥವಾ ಆಪ್ತರಿಗೆ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವುದು ಹೇಗೆ? ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದೆಯೇ? ಹಾಗಿದ್ರೆ, ಈ ವಿಧಾನಗಳನ್ನು ಪಾಲಿಸಿ.
ಗೂಗಲ್ ಮ್ಯಾನೇಜರ್ Google Play ಸೇವೆಗಳ ನವೀಕರಣದ (v24.20) ಭಾಗವಾಗಿ ಪಾಸ್‌ವರ್ಡ ಶೇರ್ ಮಾಡಿಕೊಳ್ಳುವ ಈ ಹೊಸ ಫೀಚರ್ ಅನ್ನು ಘೋಷಿಸಿದೆ. ಬಳಕೆದಾರರ ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನೂ ನೀಡಿದೆ. ಇದರಿಂದ ಲಾಗಿನ್ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುವ ತೊಂದರೆಯಿಂದ ಪಾರಾಗಬಹುದು. ಸುಲಭವಾಗಿ ಗೂಗಲ್ ಅಕೌಂಟ್ ಬಳಸಬಹುದು ಮತ್ತು ಪಾಸ್‌ವರ್ಡ್ ಶೇರ್ ಮಾಡಬಹುದು. ನಿಮ್ಮ ಮೊಬೈಲ್‌ನಲ್ಲಿ ಹೇಗೆ ಪಾಸ್‌ವರ್ಡ್ ಶೇರ್ ಮಾಡಿಕೊಳ್ಳಬಹುದು ಎಂಬುದರ ಟಿಪ್ಸ್ ಇಲ್ಲಿದೆ. ಮುಂದೆ ಓದಿ.

ಪಾಸ್‌ವರ್ಡ್ ಹಂಚಿಕೊಳ್ಳಲು ಏನೇನು ಬೇಕು?
Family Group : ಈ ಫೀಚರ್ ಅನ್ನು ಬಳಸಲು ನೀವು Google ಫ್ಯಾಮಿಲಿ ಗ್ರೂಫ್‌ನ (ಒಟ್ಟು 6 ಸದಸ್ಯರವರೆಗೆ) ಭಾಗವಾಗಿರಬೇಕು (ಸದಸ್ಯರಾಗಿರಬೇಕು).
Mobile App : ಪಾಸ್‌ವರ್ಡ್‌ಗಳನ್ನು ಶೇರ್ ಮಾಡಿಕೊಳ್ಳುವುದು Google Chromeನ ಮೊಬೈಲ್‌ಗೆ ಮಾತ್ರ ಸೀಮಿತವಾಗಿದೆ.
ಪಾಸ್‌ವರ್ಡ್ ಹಂಚಿಕೊಳ್ಳಲು ವಿಧಾನಗಳು ಯಾವುವು?
- Open Chrome App:ಮೊದಲು ನಿಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಕ್ರೋಮ್ (ಗೂಗಲ್) ಅಪ್ಲಿಕೇಶನ್ ಓಪನ್ ಮಾಡಿ.
- Access Password Manager:ಕ್ರೋಮ್ ಅಪ್ಲಿಕೇಶನ್‌ನ ಮೇಲಿನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ. ಬಳಿಕ, ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಸೆಟ್ಟಿಂಗ್ಸ್‌ನಲ್ಲಿ ಸರ್ಚ್ ಬಾರ್ ಮೇಲೆ ಕ್ಲಿಕ್ ಮಾಡಿ, ಪಾಸ್‌ವರ್ಡ್ ಮೇಲೆ ಟ್ಯಾಪ್ ಮಾಡಿ.
- Find the Login Info : ನೀವು ಶೇರ್ ಮಾಡಿಕೊಳ್ಳಲು ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಲಾಗಿನ್ ಮಾಹಿತಿ ಹುಡುಕಿ
- Share Button : ಬಳಿಕ ನಿಮಗೆ ಲಾಗಿನ್ ಆಪ್ಷನ್ ಹುಡುಕಿದರೆ, ಪಕ್ಕದಲ್ಲಿ ಶೇರ್ ಬಟನ್ ಕಾಣುತ್ತದೆ. ಕೆಲವೊಮ್ಮೆ ನಿಮ್ಮ ಮೊಬೈಲ್‌ನಲ್ಲಿ ಬಟನ್‌ಗಳು ಕಾಣಿಸುವುದಿಲ್ಲ. ಆಗ, ಮೂರು ಡಾಟ್ ಕಾಣುತ್ತದೆ, ಅಲ್ಲಿ ಕ್ಲಿಕ್ ಮಾಡಿ.
- Select Family Member : ಶೇರ್ ಬಟನ್ ಟ್ಯಾಪ್ ಮಾಡಿದಾಗ ನಿಮ್ಮ ಫ್ಯಾಮಿಲಿ ಗ್ರೂಪ್‌ನಲ್ಲಿರುವ ಸದಸ್ಯರ ಪಟ್ಟಿ ಕಾಣಿಸುತ್ತದೆ. ಆಗ, ನೀವು ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಲು ಬಯಸುವ ವ್ಯಕ್ತಿಯನ್ನು ಆಯ್ಕೆ ಮಾಡಿ.
- Confirmation : ಕೂಡಲೇ ನಿಮಗೆ ದೃಢೀಕರ ಪಾಪ್-ಅಪ್ ಕಾಣಿಸುತ್ತದೆ. ಶೇರ್ ಬಟನ್ ಟ್ಯಾಪ್ ಮಾಡಿ ಖಚಿತಪಡಿಸಿಕೊಳ್ಳಿ. ಆಗ ನಿಮ್ಮ ಪಾಸ್‌ವರ್ಡ್ ನೀವು ಬಯಸಿದವರಿಗೆ ಶೇರ್ ಆಗುತ್ತದೆ.
ಈ ಮೇಲೆ ತಿಳಿಸಿರುವ 6 ವಿಧಾನಗಳನ್ನು ಬಳಸುವ ಮೂಲಕ, ಸುರಕ್ಷಿತವಾಗಿ ನಿಮ್ಮ ಗೂಗಲ್ ಪಾಸ್‌ವರ್ಡ್ ಅನ್ನು ಆಪ್ತರಿಗೆ ಶೇರ್ ಮಾಡಬಹುದು. ನೀವು ಗೂಗಲ್ ಪಾಸ್‌ವರ್ಡ್ ಅನ್ನು ಹಂಚಿಕೊಂಡಾಗ, ನಿಮ್ಮ ಆಪ್ತರು (ಕುಟುಂಬದ ಸದಸ್ಯರು) ಅದರ ನಕಲನ್ನು ತಮ್ಮ ಗೂಗಲ್ ಪಾಸ್‌ವರ್ಡ್ ಮ್ಯಾನೇಜರ್‌ನಲ್ಲಿ ಸ್ವೀಕರಿಸುತ್ತಾರೆ. ಆಗ, ನಿಮ್ಮ ಪಾಸ್‌ವರ್ಡ್ ಅವರಿಗೆ ಬಳಸಲು ರೆಡಿಯಾಗುತ್ತದೆ.
ಸಾಮಾನ್ಯವಾಗಿ ನಾವು ಸಾಕಷ್ಟು ಆನ್‌ಲೈನ್ ಅಕೌಂಟ್‌ಗಳನ್ನು ಹೊಂದಿರುತ್ತೇವೆ. ಈ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅಂತಹ ಬಳಕೆದಾರರಿಗೆ ಈ ಫೀಚರ್ ತುಂಬಾ ಹೆಲ್ಪ್ ಆಗುತ್ತದೆ. ಇನ್ನೇಕೆ ತಡ, ನೀವು ಒಮ್ಮೆ ಈ ಫೀಚರ್ ಅನ್ನು ಬಳಕೆ ಮಾಡಿ. ಇದರಿಂದ ನಿಮಗಾದ ಲಾಭ ಹಾಗೂ ಅನುಭವದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಳ್ಳಿ.


Click it and Unblock the Notifications








