Home
ಟೆಕ್ ನೌಕರಿ

ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ

By Shwetha

ನಿಮ್ಮ ಸ್ಮಾರ್ಟ್‌ಫೋನ್ ಎಷ್ಟೇ ದುಬಾರಿಯಾಗಿದ್ದರೂ ಒಂದಿಲ್ಲೊಂದು ಸಮಸ್ಯೆಗಳನ್ನು ಅದು ಎದುರಿಸುತ್ತಲೇ ಇರುತ್ತದೆ. ಅದೊಂದು ಮುಗಿಯದ ಸರಮಾಲೆಯಂತಾಗಿದೆ. ಬ್ಯಾಟರಿ ಸಮಸ್ಯೆ, ಕ್ಯಾಮೆರಾ ಸಮಸ್ಯೆ ಹೀಗೆ ಒಂದಿಲ್ಲೊಂದು ಮೊಬೈಲ್ ದೋಷಗಳು ಇದ್ದೇ ಇರುತ್ತದೆ. ಈಗ ಇದಕ್ಕೆ ಪೂರಕವಾಗಿ ಹುಟ್ಟಿಕೊಂಡಿರುವುದೇ ಹ್ಯಾಂಗಿಂಗ್ ಸಮಸ್ಯೆಯಾಗಿದೆ.

ಹಾಗಿದ್ದರೆ ಇದಕ್ಕೆ ಪೂರ್ಣ ಪ್ರಮಾಣದ ಅಂತ್ಯವನ್ನು ಹಾಡಲಾಗದೇ ಇದ್ದರೂ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ಹ್ಯಾಂಗಿಂಗ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಹೊಸ ನೆಟ್‌ವರ್ಕ್‌ಗೆ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ? ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಪರಿಹಾರಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳೋಣ.

#1

#1

ಚಾರ್ಜರ್‌ಗೆ ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿ ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಇಲ್ಲದೇ ಫೋನ್ ಹ್ಯಾಂಗ್ ಸಮಸ್ಯೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಕೂಡ ಇದ್ದಿರಬಹುದು. ನಿಮ್ಮ ಫೋನ್ ಅನ್ನು ಕೆಲವು ನಿಮಿಷಗಳವರೆಗೆ ಪ್ಲಗಿನ್ ಮಾಡಿ.

#2

#2

ನಿಮ್ಮ ಫೋನ್ ಆಫ್ ಮಾಡಿ ಪವರ್ ಮೆನು ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿ ಹಿಡಿಯಿರಿ.

#3

#3

ಫೋನ್ ರೀಸ್ಟಾರ್ಟ್ ಮಾಡಿ ನಿಮ್ಮ ಪವರ್ ಬಟನ್ ಅಥವಾ ಸ್ಕ್ರೀನ್ ಟ್ಯಾಪ್ಸ್‌ಗೆ ನಿಮ್ಮ ಫೋನ್ ಪ್ರಕ್ರಿಯಿಸುತ್ತಿಲ್ಲ ಎಂದಾದಲ್ಲಿ, ನೀವು ಹೆಚ್ಚು ಫೋರ್ಸ್ ಮಾಡಿ ಫೋನ್ ಅನ್ನು ರೀಸ್ಟಾರ್ಟ್ ಮಾಡಬೇಕಾಗುತ್ತದೆ.

#4

#4

ಬ್ಯಾಟರಿ ಹೊರತೆಗೆಯಿರಿ ನಿಮ್ಮ ಫೋನ್‌ನ ಬ್ಯಾಟರಿಯನ್ನು ಹೊರತೆಗೆದು ಕೂಡ ಫೋನ್ ಅನ್ನು ನಿಮಗೆ ರೀಸ್ಟಾರ್ಟ್ ಮಾಡಬಹುದಾಗಿದೆ.

#5

#5

ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರುವ ಅಪ್ಲಿಕೇಶನ್ ಅಳಿಸಿ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರಬಹುದು. ಇಂತಹ ಸಂದರ್ಭದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ಅಳಿಸುವುದು ಅತ್ಯವಶ್ಯಕವಾಗಿದೆ.

#6

#6

ಫೋನ್ ಹ್ಯಾಂಗ್ ಆದ ನಂತರ ಫೋನ್ ಆನ್ ಆಗುತ್ತಿಲ್ಲ ಎಂದಾದಲ್ಲಿ, ಫ್ಯಾಕ್ಟ್ರಿ ರೀಸೆಟ್ ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸಬಹುದು.

#7

#7

ಚಾರ್ಜರ್‌ಗೆ ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿ ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಇಲ್ಲದೇ ಫೋನ್ ಹ್ಯಾಂಗ್ ಸಮಸ್ಯೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಕೂಡ ಇದ್ದಿರಬಹುದು. ನಿಮ್ಮ ಫೋನ್ ಅನ್ನು ಕೆಲವು ನಿಮಿಷಗಳವರೆಗೆ ಪ್ಲಗಿನ್ ಮಾಡಿ.

#8

#8

ಅಪ್ಲಿಕೇಶನ್‌ಗಳ ಅಳಿಸುವಿಕೆ ನಿಮ್ಮ ಫೋನ್‌ನಲ್ಲಿ ಅನಗತ್ಯ ಅಪ್ಲಿಕೇಶನ್‌ಗಳು ಫೋನ್‌ನ ವೇಗದ ಮೇಲೆ ಪರಿಣಾಮವನ್ನು ಬೀರಿ ಹ್ಯಾಂಗ್ ಮಾಡುತ್ತಿರಬಹುದು. ಆದ್ದರಿಂದ ಫೋನ್‌ನಲ್ಲಿರುವ ಅಪರಿಮಿತ ಅಪ್ಲಿಕೇಶನ್‌ಗಳನ್ನು ನಿವಾರಿಸುವುದು ಅತೀ ಅಗತ್ಯವಾಗಿದೆ.

#9

#9

ನಿಮ್ಮ ಫೋನ್ ಆಫ್ ಮಾಡುವುದು "ಸ್ಲೈಡ್ ಟು ಪವರ್ ಆಫ್" ಸ್ಲೈಡರ್ ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿಹಿಡಿಯಿರಿ.

#10

#10

ಐಫೋನ್‌ನಲ್ಲಿ ಐಟ್ಯೂನ್ಸ್ ಬಳಸಿ ರೀಸ್ಟೋರ್ ಮಾಡಿ ನಿಮ್ಮ ಐಫೋನ್‌ನಲ್ಲಿ ಐಟ್ಯೂನ್ಸ್ ಅನ್ನು ಬಳಸಿ ರೀಸ್ಟೋರ್ ಮಾಡುವುದು ಅತೀ ಅಗತ್ಯವಾಗಿದೆ. ಇದರಿಂದ ಹ್ಯಾಂಗ್ ಆಗಿರುವ ಐಫೋನ್ ರೀಸ್ಟೋರ್ ಮಾಡಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್‌ಗೆ ಭೇಟಿ ನೀಡಿ

Best Mobiles in India

English summary
In this article we are giving you solid tips on how to solve smartphone hanging problem in better and efficient way.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+