ಕಂಪ್ಯೂಟರ್ Slow ಆದರೆ ಏನು ಮಾಡಬೇಕು?

Posted By: Varun
ಕಂಪ್ಯೂಟರ್ Slow ಆದರೆ ಏನು ಮಾಡಬೇಕು?

ನಿಮ್ಮ ಮನೆಯಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇರುವ ಕಂಪ್ಯೂಟರ್ ಇದ್ದರೆ ಒಂದಿಲ್ಲೊಂದು ಬಾರಿ ನಿಮ್ಮ ಕಂಪ್ಯೂಟರ್ ನಿಧಾನವಾಗಿ ಕೆಲಸ ನಿರ್ವಹಿಸುವುದು, ಫೈಲುಗಳು ಲೇಟಾಗಿ ಓಪನ್ ಆಗುವುದು, ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ ಗಳು ಓಪನ್ ಮಾಡಲು ಪ್ರಯತ್ನ ಪಟ್ಟರೆ ಹ್ಯಾಂಗ್ ಆಗುವುದು, ಈ ರೀತಿ ತೊಂದರೆ ಆಗುತ್ತಿದ್ದರೆ ನಿಮ್ಮ ಅನ್ನು ಫಿಕ್ಸ್ ಮಾಡಲು ಸರಿಯಾದ ಸಮಯ ಎಂದರ್ಥ.

ಹಾಗಾಗಿ ಈ ಕೆಳಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ ನಿಮ್ಮ PC ಯನ್ನು ಫಿಕ್ಸ್ ಮಾಡಬಹುದು.

1) ಬೇಡದ ಪ್ರೋಗ್ರಾಮ್ (Programs)ಗಳನ್ನು ತೆಗೆಯಿರಿ- ಕೆಲವೊಮ್ಮೆ ಹಲವಾರು ಪ್ರೋಗ್ರಾಮ್ ಗಳನ್ನು ನಾವು ಕಂಪ್ಯೂಟರ್ ಗೆ install ಮಾಡಿಕೊಂಡಿರುತ್ತೀವಿ. ಅದು ನಮ್ಮ ಹಾರ್ಡ್ ಡ್ರೈವ್ ಸ್ಪೇಸ್ ಅನ್ನು ಆಕ್ರಮಿಸಿ ಕೊಂಡಿರುತ್ತೆ. ಹಾಗಾಗಿ ಅವುಗಳನ್ನು ನೋಡಿ uninstall ಮಾಡಿ.

2) ವೈರಸ್ ಹಾಗು ಕುಕೀ ತೆಗೆಯಿರಿ- ಕುಕೀ (cookies) ಹಾಗು ಇಂಟರ್ನೆಟ್ ಬ್ರೌಸ್ ಮಾಡಿದಾಗ ಶೇಖರಣೆಯಾಗುವ temporary internet file ಗಳನ್ನು ಡಿಲೀಟ್ ಮಾಡಬೇಕು. ಅದೇ ರೀತಿ ವೈರಸ್ ವಿರೋಧಿ ತಂತ್ರಾಂಶಗಳನ್ನು ಉಪಯೋಗಿಸಿ ಪ್ರತಿಯೊಂದು ಡ್ರೈವ್ ಅನ್ನು ಸ್ಕ್ಯಾನ್ ಮಾಡಿ ವೈರಸ್ ಗಳನ್ನು ತೆಗೆದುಹಾಕಿ.

3) ರೀಸೈಕಲ್ ಬಿನ್ ಅನ್ನು ಖಾಲಿ ಇಡಿ- ನೀವು ಡಿಲೀಟ್ ಮಾಡುವ ಎಲ್ಲ ಫೈಲ್ ಹಾಗು ಫೋಲ್ಡರ್ ಗಳು ರೀಸೈಕಲ್ ಬಿನ್ ನೊಳಗೆ ಹೋಗಿ ಸಂಗ್ರಹವಾಗುತ್ತವೆ. ಹಾಗಾಗಿ ಅದನ್ನೂ ಕೂಡ ಆಗಾಗ ಖಾಲಿ ಮಾಡಬೇಕು.

4) ಸ್ಟಾರ್ಟ್ ಅಪ್ ಪ್ರೋಗ್ರಾಮ್ ಗಳನ್ನ ಆದಷ್ಟು ಕಡಿಮೆ ಮಾಡಿ- ವಿಂಡೋಸ್ ಬೂಟ್ ಆದ ಮೇಲೆ ಕೆಲವು ಪ್ರೋಗ್ರಾಮ್ ಗಳು ಶುರು ಆಗುವುದನ್ನು ನೀವು ನೋಡಿರಬಹುದು. ಅದು ಚಾಟ್ ಆಪ್ ಇರಬಹುದು, ಮೀಡಿಯಾ ಪ್ಲೇಯರ್ ಇರಬಹುದು. ಹಾಗಾಗಿ ಆ ರೀತಿಯ ಸ್ಟಾರ್ಟ್ ಅಪ್ ಪ್ರೋಗ್ರಾಮ್ ಗಳು ರನ್(Run) ಆಗದಂತೆ ಕಡಿಮೆ ಮಾಡಿ.

5) ಅಪ್ಡೇಟ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ- ನಿಮ್ಮದು ಅಸಲಿ ವಿಂಡೋಸ್ ಆದರೆ ಮೈಕ್ರೋಸಾಫ್ಟ್ ಕಳಿಸುವ ವಿಂಡೋಸ್ ಅಪ್ಡೇಟ್ ಗಳನ್ನು ಲೋಡ್ ಮಾಡಿಕೊಳ್ಳಿ. ಇದು ನಿಮ್ಮ ಕಂಪ್ಯೂಟರ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot