Home
ಟೆಕ್ ನೌಕರಿ

ನಿಮ್ಮ ಫೋನ್ ನಿಧಾನವಾಗಿದೆಯಾ?..ಹೀಗೆ ಮಾಡಿ, ಆಮೇಲೆ ಸ್ಪೀಡ್ ನೋಡಿ!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿವೆ. ಸಂಪರ್ಕ, ಮನರಂಜನೆ, ಕಾರ್ಯಕ್ಷಮತೆ - ಒಂದು ಕ್ಷಣ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಕಷ್ಟ ಎನ್ನಿಸುವಷ್ಟು ಎಲ್ಲಕ್ಕೂ ಸ್ಮಾರ್ಟ್‌ಫೋನ್ ಅವಶ್ಯಕವಾಗಿದೆ. ಆದರೆ, ಕೆಲ ತಿಂಗಳುಗಳು ಅಥವಾ ವರ್ಷಗಳ ಬಳಕೆಯ ನಂತರ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಇದು ಹಲವರಿಗೆ ಕಿರಿಕಿರಿ ತರುತ್ತದೆ. ಮತ್ತು ಬೇಸರ ಮುಡಿಸುತ್ತದೆ.

ನೀವು ಅದೆಷ್ಟು ಮೌಲ್ಯದ ಫೋನ್ ಆಗಿದ್ರೂ ಈ ಸಮಸ್ಯೆ ಎದುರಾಗಬಹುದು. ಇದರಿಂದ ಅನೇಕ ಬಳಕೆದಾರರು ಚಿಂತೆಗೀಡಾಗುತ್ತಾರೆ. ಮತ್ತು ಬೇಲೆ ಫೋನ್ ಖರೀದಿಸಲು ಇಚ್ಚಿಸಬಹುದು. ಆದರೆ ಬೇಗ ಬದಲಾಯಿಸಲು ಅಷ್ಟೊಂದು ಅಗತ್ಯವಿಲ್ಲ - ನಿಮ್ಮ ಫೋನ್ ವೇಗವನ್ನೇ ಪುನಃ ಪಡೆಯಲು ಕೆಲ ಸರಳ ಉಪಾಯಗಳಿವೆ. ಬನ್ನಿ ಫೋನ್‌‌ನ ಕಾರ್ಯಕ್ಷಮತೆಯ ವೇಗವನ್ನು ಸುಧಾರಿಸುವುದು ಹೇಗೆ ಎಂಬುದನ್ನು ನೋಡೋಣ.

1. ಕ್ಯಾಶ್ ಡೇಟಾ ತೆರವುಗೊಳಿಸಿ: ಫೋನ್ ಬಳಸುವಾಗ ವಿವಿಧ ಅಪ್ಲಿಕೇಶನ್‌ಗಳು ತಾತ್ಕಾಲಿಕ ಡೇಟಾ (Cache) ಸಂಗ್ರಹಿಸುತ್ತವೆ. ಈ ಡೇಟಾ ಹೆಚ್ಚು ದಿನ ಉಳಿದರೆ, ಫೋನ್ ನಿಧಾನವಾಗಬಹುದು. ಹೆಚ್ಚಿನ ಕಾರ್ಯಕ್ಷಮತೆಗಾಗಿ, ಪ್ರತಿದಿನ ಅಥವಾ ವಾರದಲ್ಲಿ ಕ್ಯಾಶ್‌ ಡೇಟಾ ತೆರವುಗೊಳಿಸುವುದು ಉತ್ತಮ. ನೀವು ಸೆಟ್ಟಿಂಗ್‌ಗಳ ಮೂಲಕ ಪ್ರತಿ ಅಪ್ಲಿಕೇಶನ್‌ನ ಸಂಗ್ರಹವನ್ನು ಶುದ್ಧಗೊಳಿಸಬಹುದು.

ನಿಮ್ಮ ಸಾಧನದ ಸೆಟ್ಟಿಂಗ್‌ಗಳಿಗೆ ಹೋಗಿ, "ಅಪ್ಲಿಕೇಶನ್‌ಗಳು" ಅಥವಾ "ಅಪ್ಲಿಕೇಶನ್‌ಗಳು" ವಿಭಾಗವನ್ನು ಹುಡುಕಿ, ನೀವು ಸಂಗ್ರಹವನ್ನು ತೆರವುಗೊಳಿಸಲು ಬಯಸುವ ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿ, ತದನಂತರ "Storage" ಅಥವಾ "Storage & cache" ಟ್ಯಾಪ್ ಮಾಡಿ ನಂತರ "Clear cache" ಟ್ಯಾಪ್ ಮಾಡಿ. ಕನಿಷ್ಟ ಒಂದು ವಾರಕ್ಕೆ ಒಮ್ಮೆಯಾದರೂ ಈ ರೀತಿ ಮಾಡಿ.

ನಿಮ್ಮ ಫೋನ್ ನಿಧಾನವಾಗಿದೆಯಾ?..ಹೀಗೆ ಮಾಡಿ, ಆಮೇಲೆ ಸ್ಪೀಡ್ ನೋಡಿ!

2. ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಿ: ಬಹುತೇಕ ಅಪ್ಲಿಕೇಶನ್‌ಗಳು ಬಳಸದಿದ್ದರೂ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದ RAM ಹಾಗೂ ಬ್ಯಾಟರಿ ಮೇಲೆ ಒತ್ತಡ ಬೀರುತ್ತದೆ. ಈ ರೀತಿ, ನಿಮ್ಮ ಫೋನ್ ನಿಧಾನಗತಿಯಲ್ಲಿರಬಹುದು. ಹಿನ್ನಲೆಯಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ನಿಲ್ಲಿಸಿ ಮತ್ತು ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಅಳಿಸಿ. ಇದು ನಿಮ್ಮ ಫೋನ್‌ಗೆ ವಿಶ್ರಾಂತಿ ನೀಡಿದಂತಾಗುತ್ತದೆ.

3. ಫೋನ್ ನವೀಕರಿಸಿರಿ: ಸ್ಮಾರ್ಟ್‌ಫೋನ್ ತಯಾರಕರು ನಿಯಮಿತವಾಗಿ ಸಾಫ್ಟ್‌ವೇರ್ ನವೀಕರಣಗಳನ್ನು ಬಿಡುಗಡೆ ಮಾಡುತ್ತಾರೆ. ಈ ಅಪ್‌ಡೇಟ್‌ಗಳಲ್ಲಿ ಭದ್ರತಾ ಸುಧಾರಣೆಗಳ ಜೊತೆಗೆ, ಕಾರ್ಯಕ್ಷಮತೆಯ ಮತ್ತಷ್ಟು ಸುಧಾರಣೆಗಳೂ ಇರುತ್ತವೆ. ಕೆಲವೊಮ್ಮೆ ಸಣ್ಣ ದೋಷಗಳೇ ಫೋನ್ ನಿಧಾನಗತಿಗೆ ಕಾರಣವಾಗಬಹುದು. ನಿಮ್ಮ ಸೆಟ್ಟಿಂಗ್‌ಗಳಲ್ಲಿ "Software Update" ಆಯ್ಕೆಯನ್ನು ತೆರೆದು ನಿಯಮಿತವಾಗಿ ಪರಿಶೀಲಿಸಿ.

4. ಬ್ಯಾಟರಿ ಸೆಟ್ಟಿಂಗ್‌ಗಳನ್ನು ಪರಿಗಣಿಸಿ: ಅತಿಯಾದ Display Brightness ಅಥವಾ "Always On Display" ಫೀಚರ್ ಇಡೀ ಸಮಯದಲ್ಲೂ ಪ್ರೋಸೆಸರ್ ಬಳಸುತ್ತದೆ. ಇದು ಫೋನ್‌ನ ವೇಗದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಫೋನ್ ಹೆಚ್ಚು ಹೊತ್ತುವರೆಗೂ ಸ್ಮೂತ್‌ ಆಗಿ ಕಾರ್ಯನಿರ್ವಹಿಸಲು, ಈ ವೈಶಿಷ್ಟ್ಯಗಳನ್ನು ಅಗತ್ಯವಿಲ್ಲದ ಸಂದರ್ಭದಲ್ಲಿ ನಿಷ್ಕ್ರಿಯಗೊಳಿಸಿ.

ನಿಮ್ಮ ಫೋನ್ ನಿಧಾನವಾಗಿದೆಯಾ?..ಹೀಗೆ ಮಾಡಿ, ಆಮೇಲೆ ಸ್ಪೀಡ್ ನೋಡಿ!

5. ಸಂಗ್ರಹಣೆಯನ್ನು ಶುದ್ಧಗೊಳಿಸಿ: ಫೋನ್‌ನಲ್ಲಿ ಅನಗತ್ಯ ಫೈಲ್‌ಗಳು, ಚಿತ್ರಗಳು ಅಥವಾ ಅಪ್ಲಿಕೇಶನ್‌ಗಳನ್ನು ಸಂಗ್ರಹಿಸುವುದು ಇದರ ವೇಗವನ್ನು ಕಡಿಮೆ ಮಾಡುತ್ತದೆ. ಕಾಲಕಾಲಕ್ಕೆ ಫೋನ್‌ನ ಸ್ಟೋರೇಜ್ ಪರಿಶೀಲಿಸಿ ಮತ್ತು ಅಗತ್ಯವಿಲ್ಲದ ವಿಷಯಗಳನ್ನು ಅಳಿಸಿ. ಇದರಿಂದ ಫೋನ್‌ ನ RAM ಮತ್ತು ಸಂಗ್ರಹಣೆಯಲ್ಲಿ ಹೆಚ್ಚಿನ ಜಾಗ ಖಾಲಿಯಾಗುತ್ತದೆ.

ಈ ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ, ನೀವು ಹೊಸ ಫೋನ್ ಖರೀದಿಸದೇ ಇಂದಿನ ಫೋನ್‌‌ನ ಕಾರ್ಯಕ್ಷಮತೆಯನ್ನೇ ಸುಧಾರಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ವೇಗವಂತರಾಗಿ ಕೆಲಸಮಾಡಬೇಕೆಂದಿದ್ದರೆ, ಈ ಮೇಲಿನ ಎಲ್ಲಾ ಐದು ಅಂಶಗಳ ಪಾಲನೆ ಅವಶ್ಯಕವಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ನಿಮ್ಮ ಫೋನ್ ಕೂಡ ಸ್ಲೋ ಆಗಿದೆಯಾ?, ಈ ಮೇಲಿನ ಸಲಹೆಗಳಿಗಿಂತ ನಿಮಗೆ ತಿಳಿದಿರುವ ಹೆಚ್ಚುವರಿ ಸಲಹೆ ಯಾವುದಾದರೂ ಇದೆಯೇ?. ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ. ನಾವಿಲ್ಲಿ ಒಟ್ಟಾಗಿ ಚರ್ಚಿಸೋಣ.

Best Mobiles in India

English summary
Here are five strategies you can employ to enhance smartphone speed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+