ನಿಮ್ಮ ವಾಟ್ಸಾಪ್ ಚಾಟ್ ಸುರಕ್ಷಿತವಾಗಿರಿಸಲು ಈ ಕ್ರಮಗಳನ್ನು ಅನುಸರಿಸಿ!
ಫೇಸ್‌ಬುಕ್ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಹೊಂದಿರುವುದರಿಂದ ಬಳಕೆದಾರರ ಚಾಟ್‌ಗಳನ್ನು ವೇರೆಯವರು ಅನ್ಯಮಾರ್ಗದಿಂದ ನೋಡಲು ಸಾದ್ಯವಾಗುವುದಿಲ್ಲ. ಆದರೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಇದ್ದರೂ ಸಹ ಹ್ಯಾಕರ್‌ಗಳು ಬಳಕೆದಾರರ ಸಂದೇಶಗಳನ್ನು ನೆಟ್‌ವರ್ಕ್‌ನಲ್ಲಿ ಓದಲು ಪ್ರಯತ್ನಿಸುವುದರಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿದೆ. ಬಳಕೆದಾರರನ್ನು ಯಾಮಾರಿಸುವ ಮೂಲಕ ಹ್ಯಾಕರ್‌ಗಳು ತಮಗೆ ಬೇಕಾದ ಮಾಹಿತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಹೌದು, ವಾಟ್ಸಾಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿದೆ. ಆದರೂ ಸಹ ಬಳಖೆದಾರರ ಮಾಹಿತಿ ಕದಿಯಲು ಹ್ಯಾಕರ್‌ಗಳು ಯಶಸ್ವಿಯಾಗುತ್ತಿದ್ದಾರೆ. ಇನ್ನು ವಾಟ್ಸಾಪ್ ಬಳಕೆದಾರರ ಫೋನ್ ಸಂಖ್ಯೆಯನ್ನು ಆಧರಿಸಿ ದೃಡೀಕರಿಸುತ್ತದೆ, ಎಸ್ಎಂಎಸ್ ಮೂಲಕ ಪರಿಶೀಲನೆ ಕೋಡ್ ಕಳುಹಿಸುತ್ತದೆ. ಈ ಕೋಡ್‌ಗಳನ್ನು ಹ್ಯಾಕರ್‌ಗಳು ಬಳಕೆದಾರರಿಂದ ಪಡೆದುಕೊಳ್ಳುವ ಮೂಲಕ ವಾಟ್ಸಾಪ್ ಚಾಟ್ ಕದಿಯುತ್ತಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್ ಬಳಕೆದಾರರು ಹ್ಯಾಕರ್‌ಗಳಿಂದಸುರಕ್ಷಿತವಾಗಿರಲು ಯಾವ ಕ್ರಮಗಳನ್ನು ಅನುಸರಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಬಳಕೆದಾರರ ಖಾತೆಯನ್ನು "ಹ್ಯಾಕ್" ಮಾಡುವ ಯೋಜನೆಯ ಭಾಗವಾಗಿ, ಹ್ಯಾಕರ್‌ಗಳು ವಾಟ್ಸಾಪ್ ಬಳಕೆದಾರರಿಗೆ ಸ್ಕ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಈ "ಸಾಮಾಜಿಕ ಎಂಜಿನಿಯರಿಂಗ್" ಸಾಮಾನ್ಯವಾಗಿ " ನಿಮ್ಮ ಫೋನ್ ನೆಟ್ವರ್ಕ್ ಲಭ್ಯವಿಲ್ಲ" ಎಂಬಂತಹ ಮಾತುಗಳ ಮೂಲಕ ಬಳಕೆದಾರರ ವೆರಿಫಿಕೇಶನ್ ಕೋಡ್ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಬಳಕೆದಾರನು ಆರು-ಅಂಕಿಯ ಕೋಡ್ ಅನ್ನು ಹಂಚಿಕೊಂಡ ನಂತರ, ಹ್ಯಾಕರ್ ಸುಲಭವಾಗಿ ಅವರ ವಾಟ್ಸಾಪ್ ಖಾತೆಗೆ ಎಂಟ್ರಿ ನೀಡುತ್ತಾನೆ.

ಅನೇಕ ಬಳಕೆದಾರರು ಹ್ಯಾಕರ್‌ಗಳ ದಾಳಿಗೆ ಸುಲಭವಾಗಿ ಸಿಲುಕುವುದಿಲ್ಲ ನಿಜ. ಆದರೆ ವೆರಿಫಿಕೇಶನ್ ಕೋಡ್‌ಗಳು ಕೆಲಸ ಮಾಡುವ ವಿಧಾನವನ್ನು ಅರ್ಥಮಾಡಿಕೊಳ್ಳದ ಅನೇಕ ಜನರು,ಹ್ಯಾಕರ್‌ಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಈ ಮೂಲಕ ಹ್ಯಾಕರ್‌ಗಳ ಕೈಗೆ ತಮ್ಮ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಹಸ್ತಾಂತರಿಸುತ್ತಿದ್ದಾರೆ. ಹ್ಯಾಕರ್‌ಗಳು ಒಮ್ಮೆ ಪ್ರವೇಶಿಸಿದರೆ, ಅವರು ನಿಮ್ಮ ಸಂಖ್ಯೆಯನ್ನು ಇನ್ನೊಂದು ಸಂಖ್ಯೆಗೆ ವರ್ಗಾಯಿಸಬಹುದು ಮತ್ತು ನಿಮ್ಮ ಮೂಲ ಖಾತೆಯನ್ನು ಅಳಿಸಬಹುದು. ಇದೆಲ್ಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸಾಪ್ ಹಲವು ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ಹಾಗಾದ್ರೆ ವಾಟ್ಸಾಪ್ ಖಾತೆಯನ್ನು ಸುರಕ್ಷಿತವಾಗಿರಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಎರಡು ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿ
ಹ್ಯಾಕರ್‌ಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಯಲ್ಲಿ ಸಕ್ರಿಯಗೊಳಿಸಬೇಕಾದ ಅತ್ಯಂತ ಪ್ರಮುಖವಾದ ಸೆಟ್ಟಿಂಗ್ ಇದಾಗಿದೆ. ಇದು ನಿಮ್ಮ ಖಾತೆಯಲ್ಲಿ ಆರು ಅಂಕಿಯ ಪಿನ್ ಹೊಂದಿಸಲು ಸೆಟ್ಟಿಂಗ್ ನಿಮಗೆ ಅನುಮತಿಸುತ್ತದೆ. ನಿಮ್ಮ ಎಸ್‌ಎಂಎಸ್ ಪರಿಶೀಲನೆ ಕೋಡ್ ಅನ್ನು ಸ್ವೀಕರಿಸಿದ ನಂತರ ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು ಇದನ್ನು ಬಳಸಲಾಗುತ್ತದೆ. ಹ್ಯಾಕರ್ ನಿಮ್ಮ ಎಸ್‌ಎಂಎಸ್ ಕೋಡ್ ಅನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಸಹ, ಅವರು ಈ ಕೋಡ್ ಹೊಂದಿಲ್ಲದಿದ್ದರೆ ಅವರು ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ಸಾಧ್ಯವಾಗುವುದಿಲ್ಲ.
ಹಂತ:1 ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗಿ, ಖಾತೆಯ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಎರಡು-ಹಂತದ ಪರಿಶೀಲನೆಯನ್ನು ಟ್ಯಾಪ್ ಮಾಡಿ.
ಹಂತ:2 ಈಗ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ ಮತ್ತು ಪಿನ್ ನಮೂದಿಸಿ. ನೀವು ಅದನ್ನು ಸರಿಯಾಗಿ ನಮೂದಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನೀವು ಪಿನ್ ಅನ್ನು ರಿ ಎಂಟ್ರಿ ಮಾಡಬೇಕಾಗುತ್ತದೆ.
ಹಂತ:3 ಈ ಸಮಯದಲ್ಲಿ ವಾಟ್ಸಾಪ್ ನಿಮ್ಮ ಪಿನ್ ಅನ್ನು ಸೇವ್ ಮಾಡಲಿದೆ. ಆದರೆ ನೀವು ಅದನ್ನು ಮರೆಯದಿರಲು ಮತ್ತು ನಿಮ್ಮ ಸ್ವಂತ ಖಾತೆಯಿಂದ ಲಾಕ್ ಆಗುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಪಿನ್ ಅನ್ನು ಕಾಲಕಾಲಕ್ಕೆ ನಮೂದಿಸಲು ಅದು ನಿಮ್ಮನ್ನು ಕೇಳುತ್ತದೆ.

ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಎರಡು ಬಾರಿ ಪರಿಶೀಲಿಸಿ
ಈ ಸೆಟ್ಟಿಂಗ್‌ಗಳು ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ನಿಯಂತ್ರಿಸುವುದಕ್ಕೆ ನೇರವಾಗಿ ಸಂಬಂಧಿಸಿಲ್ಲವಾದರೂ, ಆಕ್ರಮಣಕಾರರಿಗೆ ನೀವು ಯಾರು ಮತ್ತು ನೀವು ಸಂಪರ್ಕದಲ್ಲಿರುವ ಜನರ ಬಗ್ಗೆ ಉತ್ತಮವಾದ ಕಲ್ಪನೆಯನ್ನು ನೀಡಬಹುದು. ಇದು ಸಂಭವಿಸದಂತೆ ತಡೆಯಲು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್‌ಗಳು ಮತ್ತು ನಿರ್ಲಜ್ಜ ಅಂಶಗಳ ಕೈಯಿಂದ ದೂರವಿರಿಸಲು ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಹೊಂದಿಸಬೇಕು.
ಹಂತ:1 ವಾಟ್ಸಾಪ್ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಖಾತೆಯ ಮೇಲೆ ಟ್ಯಾಪ್ ಮಾಡಿ ಮತ್ತು ಪ್ರೈವೆಸಿ ಮೇಲೆ ಟ್ಯಾಪ್ ಮಾಡಿ.
ಹಂತ:2 ಈಗ ಕೊನೆಯದಾಗಿ ನೋಡಿದ, ಕುರಿತು, ಪ್ರೊಫೈಲ್ ಫೋಟೋ ಮತ್ತು ಸ್ಥಿತಿಗಾಗಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ. ನಿಮಗೆ ತಿಳಿದಿಲ್ಲದ ಯಾರೂ ಈ ಮಾಹಿತಿಯನ್ನು ನೋಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇವೆಲ್ಲವನ್ನೂ "ನನ್ನ ಸಂಪರ್ಕಗಳಿಗೆ" ಹೊಂದಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಹಂತ:3 ವೈಯಕ್ತಿಕ ಮಾಹಿತಿಯನ್ನು ಕೇಳುವ ಅಪರಿಚಿತ ಕಳುಹಿಸುವವರ ಯಾವುದೇ ಸಂದೇಶಗಳನ್ನು ನೀವು ನಿರ್ಬಂಧಿಸುತ್ತೀರಿ ಮತ್ತು ಇನ್-ಚಾಟ್ ಮೆನು ಬಳಸಿ ಅವುಗಳನ್ನು ವಾಟ್ಸಾಪ್‌ಗೆ ವರದಿ ಮಾಡಿ.


Click it and Unblock the Notifications








